ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಗೆಲ್ಲಿಸಿದ ಕರ್ನಾಟಕದ ಜನತೆಗೆ ಬಿಜೆಪಿ ನಾಯಕರ ಧನ್ಯವಾದಗಳು

By Manjunatha
|
Google Oneindia Kannada News

ಬೆಂಗಳೂರು, ಮೇ 15: ಕರ್ನಾಟಕ ವಿಧಾನಸಭೆ ಚುನಾವಣೆ 2018ರಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ, ಇದಕ್ಕಾಗಿ ದುಡಿದ ಪಕ್ಷದ ಕಾರ್ಯಕರ್ತರಿಗೆ ನರೇಂದ್ರ ಮೋದಿ ಅವರು ಟ್ವಿಟ್ಟರ್ ಮೂಲಕ ಸಂದೇಶ ಕಳುಹಿಸಿದ್ದಾರೆ.

ಸಂಜೆ 6 ಗಂಟೆ ಸುಮಾರಿಗೆ ಟ್ವಿಟ್ಟರ್ ಮೂಲಕ ಧನ್ಯವಾದ ಅರ್ಪಿಸಿರುವ ನರೇಂದ್ರ ಮೋದಿ ಅವರು, ಬಿಜೆಪಿಯನ್ನು ಕರ್ನಾಟಕದ ಅತಿ ದೊಡ್ಡ ಪಕ್ಷವಾಗಿ ಗೆಲ್ಲಿಸಿರುವುದಕ್ಕೆ ಧನ್ಯವಾದಗಳು, ಇದಕ್ಕಾಗಿ ಹಗಲು ರಾತ್ರಿ ಒಂದು ಮಾಡಿ ದುಡಿದ ಕಾರ್ಯಕರ್ತರಿಗೆ ನನ್ನ ಪ್ರಣಾಮಗಳು ಎಂದಿದ್ದಾರೆ ಮೋದಿ.

ಕರ್ನಾಟಕದ ಗೆಲುವು ಅಸಾಮಾನ್ಯ: ನರೇಂದ್ರ ಮೋದಿಕರ್ನಾಟಕದ ಗೆಲುವು ಅಸಾಮಾನ್ಯ: ನರೇಂದ್ರ ಮೋದಿ

ಬಿಜೆಪಿಯು 103 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಕರ್ನಾಟಕದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ ಪಕ್ಷವನ್ನು 78 ಕ್ಷೇತ್ರಕ್ಕೆ ಕಟ್ಟಿಹಾಕುವಲ್ಲಿ ಅದು ಯಶಸ್ವಿ ಆಗಿದೆ. ಆದರೆ ಅತಂತ್ರ ವಿಧಾನಸಭೆ ಸೃಷ್ಠಿಯಾಗಿರುವ ಕಾರಣ ಕಾಂಗ್ರೆಸ್‌ ಬೆಂಬಲದ ಲಾಭ ಪಡೆದಿರುವ ಜೆಡಿಎಸ್ ಸರ್ಕಾರ ರಚಿಸಲು ಮುಂದಾಗಿದೆ.

ಕಾಂಗ್ರೆಸ್‌ ಪಕ್ಷವನ್ನು ತಿರಸ್ಕರಿಸಿದ್ದಾರೆ

ಮೋದಿ ಮಾತ್ರವಲ್ಲದೆ ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಕೂಡಾ ರಾಜ್ಯದಲ್ಲಿ ಬಿಜೆಪಿ ಸಾಧನೆ ಬಗ್ಗೆ ಟ್ವೀಟ್ ಮಾಡಿದ್ದು, ಕರ್ನಾಟಕದ ಜನ ಭ್ರಷ್ಟ ಹಾಗೂ ಕುಟುಂಬ ರಾಜಕಾರಣದ ಕಾಂಗ್ರೆಸ್‌ ಪಕ್ಷವನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ ಎಂದಿದ್ದಾರೆ. ಈ ಗೆಲುವು ಕರ್ನಾಟಕವು ಮೋದಿ ಅವರ ಸ್ವಚ್ಛ ಹಾಗೂ ಅಭಿವೃದ್ಧಿಪರ ಸರ್ಕಾರಕ್ಕೆ ನೀಡಿದ ಬೆಂಬಲ ಎಂದು ಅವರು ಟ್ವೀಟ್ ಮಾಡಿದ್ದಾರೆ.

Array

ಗೆಲುವು ಕರ್ನಾಟಕ ಜನರಿಗೆ ಅರ್ಪಣೆ

ಕರ್ನಾಟಕ ರಾಜ್ಯ ಫಲಿತಾಂಶದ ಬಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಪ್ರತಿಕ್ರಿಯೆ ನೀಡಿದ್ದು, ಈ ಗೆಲುವು ಕರ್ನಾಟಕದ ಬಿಜೆಪಿ ಕಾರ್ಯಕರ್ತರಿಗೆ ಅರ್ಪಣೆ ಹಾಗೂ ಬಿಜೆಪಿ ದೊಡ್ಡ ವಿಜಯ ತಂದೊಡ್ಡಿದ್ದಕ್ಕೆ ಜನರಿಗೆ ಅಭಿನಂದನೆ ಎಂದಿದ್ದಾರೆ.

ಕರ್ನಾಟಕ ಚುನಾವಣಾ ಫಲಿತಾಂಶ 2018: ಬಿಜೆಪಿ ಗೆದ್ದವರ ಪಟ್ಟಿಕರ್ನಾಟಕ ಚುನಾವಣಾ ಫಲಿತಾಂಶ 2018: ಬಿಜೆಪಿ ಗೆದ್ದವರ ಪಟ್ಟಿ

ಸ್ಮೃತಿ ಇರಾನಿ ಪ್ರತಿಕ್ರಿಯೆ

ಅಮಿತ್ ಶಾ ಅವರ ಹಗಲು ರಾತ್ರಿಯ ಶ್ರಮ ಫಲ ನೀಡಿದೆ, ಅವರು ಬೂತ್‌ನಿಂದ ಬೂತ್‌ಗೆ ಜಿಲ್ಲೆಯಿಂದ ಜಿಲ್ಲೆಗೆ ಓಡಾಡಿ ಪಟ್ಟ ಶ್ರಮ ಸಾರ್ಥಕವಾಗಿದೆ. ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಮ್ಮ ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರು ಹೊಸ ಇತಿಹಾಸವನ್ನು ಕರ್ನಾಟಕದಲ್ಲಿ ಸೃಷ್ಠಿಸಿದ್ದಾರೆ ಎಂದಿದ್ದಾರೆ ಸ್ಮೃತಿ ಇರಾನಿ.

ನಿತಿನ್ ಗಡ್ಕರಿ ಪ್ರತಿಕ್ರಿಯೆ

ಕರ್ನಾಟಕದಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್‌ ಸರ್ಕಾರದ ಅಭಿವೃದ್ಧಿಹೀನ ಸರ್ಕಾರಕ್ಕೆ ಜನ ಕೊಟ್ಟಿರುವ ತೀರ್ಪು ಇದು, ಕಾಂಗ್ರೆಸ್‌ನ ಭ್ರಷ್ಟ ಸರ್ಕಾರವನ್ನು ಕರ್ನಾಟಕದ ಜನ ನಿರಾಕರಿಸಿದ್ದಾರೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

English summary
BJP national leaders gave statements about Karnataka election results. all the main leaders thanks the karnataka people for rejecting congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X