ರಾಮನ ಮೂರ್ತಿಯ ಮೇಲೆ ಕಾಲಿಟ್ಟು ಫೋಟೊ ತೆಗೆಸಿಕೊಂಡ ಬಿಜೆಪಿ ಶಾಸಕ ಶರಣು ಸಲಗರ- ಭುಗಿಲೆದ್ದ ವಿವಾದ
ಬೆಂಗಳೂರು, ಮಾರ್ಚ್ 31: ರಾಮನ ಮೂರ್ತಿಯ ಮೇಲೆ ಕಾಲಿಟ್ಟು ಫೋಟೊಗೆ ಪೋಸ್ ನೀಡಿದ ಬಿಜೆಪಿ ( BJP ) ಶಾಸಕ ಶರಣು ಸಲಗರ ವಿರುದ್ಧ ಕರ್ನಾಟಕ ಕಾಂಗ್ರೆಸ್‌ನ ( Karnataka Congress ) ರಾಜ್ಯ ಘಟಕವು ವಾಗ್ದಾಳಿ ನಡೆಸಿದೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕೆಪಿಸಿಸಿ, ಬಿಜೆಪಿಯ ಹಲವು ನಾಯಕರನ್ನು ತರಾಟೆಗೆ ತೆಗೆದುಕೊಂಡಿದೆ. ರಾಮನ ಮೂರ್ತಿಯ ಮೇಲೆ ಕಾಲಿಟ್ಟಿರುವ ಶರಣು ಸಲಗರ ಅವರ ಫೋಟೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.
'ರಾಮ ಮೂರ್ತಿಯ ಮೇಲೆಯೇ ಕಾಲಿಟ್ಟ ಬಿಜೆಪಿ ಶಾಸಕ ಶರಣು ಸಲಗರ ಅವರ ರಾಮಭಕ್ತಿ ಹೀಗಿದೆ. ಬಿಜೆಪಿಗೆ 'ರಾಮ' ಎಂದರೆ ಚುನಾವಣಾ ರಾಜಕೀಯದ ಸರಕು ಹೊರತು ನೈಜ ಭಕ್ತಿಯಲ್ಲ. ಬಿಜೆಪಿಯ ಭಯಂಕರ ಧರ್ಮರಕ್ಷಕರಾದ ಸಿ ಟಿ ರವಿ, ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ, ನಳೀನ್ ಕುಮಾರ್ ಕಟೀಲ್ ಅವರುಗಳು ರಾಮನಿಗಾದ ಈ ಅಪಚಾರದ ಬಗ್ಗೆ ಬಾಯಿ ಬಿಡುತ್ತಿಲ್ಲವೇಕೆ?' ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

'ಮುರುಗೇಶ್ ನಿರಾಣಿ ದೇವತೆಗಳನ್ನು ಅವಮಾನಿಸಿದರು. ಸಿ ಟಿ ರವಿ ಮಾಂಸ ತಿಂದು ದೇವಸ್ಥಾನಕ್ಕೆ ಹೋದರು. ಆರ್ ಅಶೋಕ್, ಸಿ ಎನ್ ಅಶ್ವತ್ಥ್ ನಾರಾಯಣ ಅವರು ಭೂತ ಕೋಲವನ್ನು ಅವಮಾನಿಸಿದರು. ಆರಗ ಜ್ಞಾನೇಂದ್ರ ಅವರು ಗುಳಿಗ ದೈವದ ಅವಹೇಳನ ಮಾಡಿದರು. ಶರಣು ಸಲಗರ ರಾಮನ ಮೇಲೆ ಕಾಲಿಟ್ಟರು. ಇದೇನಾ ಬಿಜೆಪಿಯ ಧರ್ಮರಕ್ಷಣೆಯ ಕೈಂಕರ್ಯಗಳು' ಎಂದು ಕೆಪಿಸಿಸಿ ಕೇಳಿದೆ.
ನಿನ್ನೆ ರಾಮ ನವಮಿ ಪ್ರಯುಕ್ತ ಬಸವಕಲ್ಯಾಣದಲ್ಲಿ ಶೋಭಾ ಯಾತ್ರೆ ನಡೆದಿದೆ. ಇದದಲ್ಲಿ ಭಾಗವಹಿಸಿದ್ದ ಬಸವ ಕಲ್ಯಾಣದ ಬಿಜೆಪಿ ಶಾಸಕ ಶರಣು ಸಲಗರ ಅವರು ಎಡವಟ್ಟು ಮಾಡಿಕೊಂಡಿದ್ದಾರೆ. ಮಂದಿರ್ ಬನಾಯೆಂಗೇ ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಆ ನಂತರ ರಾಮನ ಮೂರ್ತಿಯ ಮೇಲೇರಿ ಫೋಟೊಗೆ ಪೋಸ್ ನೀಡಿದ್ದಾರೆ.
ಆ ನಂತರ ಈ ಫೋಟೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಇದು ಜನರ ಕೆಂಗಣ್ಣಿಗೆ ಗುರಿಯಾಗಿದೆ. ಬಿಜೆಪಿ ಶಾಸಕ ಶರಣು ಸಲಗರ ಅವರು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್‌ನ ಮುಖಂಡರು ಶರಣು ಸಲಗರ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಚುನಾವಣೆ ಹೊತ್ತಲ್ಲಿ ಶರಣು ಸಲಗರ ಅವರು ಮಾಡಿಕೊಂಡ ಈ ಎಡವಟ್ಟು ಭಾರೀ ಸದ್ದು ಮಾಡಿದೆ.
ಹಾಲು ಉತ್ಪಾದಕರಿಗೆ ಸಹಾಯಧನ ನೀಡಿಲ್ಲ
'ಸರ್ಕಾರ ಕಳೆದ ಐದಾರು ತಿಂಗಳಿಂದ ಹಾಲು ಉತ್ಪಾದಕರಿಗೆ ಸಹಾಯಧನ ನೀಡಿಲ್ಲ. ಹಾಲು ಉತ್ಪಾದನೆ ಗಣನೀಯ ಕುಸಿತ ಕಂಡಿದೆ. ಮೊಸರಿಗೆ 'ದಹಿ' ಎಂದು ನಾಮಕರಣ ಮಾಡಲು ಇರುವ ಆಸಕ್ತಿ ಹೈನುಗಾರರ ಕಷ್ಟಕ್ಕೆ ಸ್ಪಂದಿಸುವಲ್ಲಿ ಇಲ್ಲ. ಬಿಜೆಪಿ, ರೈತರಿಗೆ ಸಹಾಯಧನ ನೀಡಿ ಕ್ರೆಡಿಟ್ ಪಡೆಯುವ ಬದಲು 'ದಹಿ'ಗೆ ಕ್ರೆಡಿಟ್ ಪಡೆಯುವುದು ನಾಚಿಕೆಗೇಡು ಅಲ್ಲವೇ?' ಎಂದು ಕೆಪಿಸಿಸಿ ಪ್ರಶ್ನಿಸಿದೆ.
'ಇನ್ಯಾರದ್ದೋ ಕೂಸಿಗೆ ಕುಲಾವಿ ಹೊಲಿಸುವಂತಹ "ಬಂಡ ಬಾಳು" ಬದುಕಲು ಬಿಜೆಪಿಗೆ ಮಾತ್ರ ಸಾಧ್ಯ. "ದಹಿ" ಹೇರಿಕೆಯ ವಿರುದ್ಧ ಯಾವೊಬ್ಬ ಬಿಜೆಪಿಗರೂ ಬಾಯಿ ಬಿಡಲಿಲ್ಲ. ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯನ್ನು ಒಮ್ಮೆಯೂ ಪ್ರಶ್ನಿಸದೆ, ಗುಲಾಮರಂತೆ ಸಮರ್ಥಿಸುವ ಬಿಜೆಪಿ ಈಗ "ದಹಿ"ಯ ಕ್ರೆಡಿಟ್ ಪಡೆಯಲು ಹವಣಿಸುತ್ತಿರುವುದು ಪರಮಹಾಸ್ಯ' ಎಂದೂ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
-
ಸದನದಲ್ಲಿ ಬಜೆಟ್ ಚರ್ಚೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು












Click it and Unblock the Notifications