ಕುಮಾರಸ್ವಾಮಿ ಗೌರವ ಉಳಿಯಬೇಕು ಅಂದ್ರೆ ಸುಮ್ನಿರಲಿ: ಸಿಟಿ ರವಿ
ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಬಿಜೆಪಿ ನಾಯಕರು ದಲಿತರ ಮನೆಗೆ ಹೋಗಿ ಹೋಟೆಲ್ ಊಟ ಮಾಡಿದ್ದಾರೆ ಎಂದು ಮಾಡಿರುವ ಟೀಕೆಗೆ ಚಿಕ್ಕಮಗಳೂರು ಶಾಸಕ ಸಿಟಿ ರವಿ ಎಚ್ಚರಿಕೆ ನೀಡಿದ್ದಾರೆ
ಚಿಕ್ಕಮಗಳೂರು, ಮೇ 23: ಬಿಜೆಪಿ ನಾಯಕರು ದಲಿತರ ಮನೆಗಳಿಗೆ ಹೋಗಿ ಹೋಟೆಲ್ ನಿಂದ ಊಟ ತರಿಸಿ, ಮಾಡಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ಸಿಟ್ಟಾಗಿರುವ ಶಾಸಕ ಸಿಟಿ ರವಿ, ಅವರು ಸುಮ್ಮನಿದ್ದರೆ ಒಳ್ಳೆಯದು ಎಂದು ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ನಾಯಕರ ಬಗ್ಗೆ ಮಾತನಾಡಿ, ಕುಮಾರಸ್ವಾಮಿ ಚರ್ಚೆಯನ್ನು ಹುಟ್ಟು ಹಾಕಿದ್ದಾರೆ. ಅವರು ಬೆಳವಾಡಿಯಲ್ಲಿ ಗ್ರಾಮ ವಾಸ್ತವ್ಯ ಮಾಡಿದಾಗ ರಾತ್ರಿ ಹನ್ನೆರಡು ಗಂಟೆವರೆಗೆ ಯಾರ ಮನೆಯಲ್ಲಿದ್ದರು, ಯಾವ ಬೆಡ್ ಶೀಟ್ ಹೊದ್ದುಕೊಂಡಿದ್ದರು ಎಲ್ಲವೂ ನನಗೆ ಗೊತ್ತು. ಅದನ್ನೆಲ್ಲ ಬಯಲು ಮಾಡಿದರೆ ಕುಮಾರಸ್ವಾಮಿ ಅವರ ಗೌರವ ಉಳಿಯುವುದಿಲ್ಲ ಎಂದು ಹೇಳಿದ್ದಾರೆ.[ಬಿಜೆಪಿಯವರಿಗೆ ಈಗ ದಲಿತರು, ಅಲ್ಪಸಂಖ್ಯಾತರ ನೆನಪು: ಎಚ್ ಡಿಕೆ ವ್ಯಂಗ್ಯ]

ನಾವು ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳುವ ವೇಳೆ ಆಯಾ ಮನೆಯವರು ಎಲ್ಲಿಂದ ಊಟ ತಂದುಕೊಟ್ಟರೂ ಅದನ್ನು ಮಾಡ್ತೀವಿ ಎಂದಿರುವ ಸಿಟಿ ರವಿ, ಕುಮಾರಸ್ವಾಮಿ ಅವರ ಟೀಕೆಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಈಚೆಗೆ ರಾಜ್ಯ ಪ್ರವಾಸ ಆರಂಭಿಸಿರುವ ಬಿಜೆಪಿ ನಾಯಕರು ದಲಿತ ಮನೆಗೆ ಹೋಗಿ, ಹೋಟೆಲ್ ಊಟ-ತಿಂಡಿ ತರಿಸಿಕೊಂಡು ತಿಂದಿದ್ದಾರೆ ಎಂದು ಕುಮಾರಸ್ವಾಮಿ ಟೀಕಿಸಿದ್ದರು.












Click it and Unblock the Notifications