ಮಾಜಿ ಸಚಿವ, ರೆಬೆಲ್ ಸ್ಟಾರ್ ಅಂಬರೀಶ್ ನಾಪತ್ತೆ!

Subscribe to Oneindia Kannada

ಬೆಂಗಳೂರು, ಆಗಸ್ಟ್, 12: ಮಾಜಿ ಸಚಿವ, ಶಾಸಕ, ಕನ್ನಡ ಚಿತ್ರರಂಗದ ರೆಬೆಲ್ ಸ್ಟಾರ್ ಅಂಬರೀಶ್ ನಾಪತ್ತೆಯಾಗಿದ್ದಾರೆ! ಅರೇ, ಶುಕ್ರವಾರ ಗೋವಾದಲ್ಲಿ ನಡೆದ ಯಶ್ ಮತ್ತು ರಾಧಿಕಾ ಪಂಡಿತ್ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಅಂಬರೀಶ್ ಓಡಾಡಿಕೊಂಡು ಇದ್ದರಲ್ಲ ಅಂದುಕೊಂಡ್ರಾ? ಹೌದು ಅಂಬರೀಶ್ ಎಲ್ಲೂ ಹೋಗಿಲ್ಲ.

ಆದರೆ ಮಂಡ್ಯದ ಬಿಜೆಪಿ ಕಾರ್ಯಕರ್ತರು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗೆ ಇಂಥದ್ದೊಂದು ದೂರು ದಾಖಲು ಮಾಡಿದ್ದಾರೆ. ಹಿಂದೆ ಪಂಜಾಬ್ ನಲ್ಲಿ ಜನಪ್ರತಿನಿಧಿ ನವಜೋತ್ ಸಿಧು ನಾಪತ್ತೆಯಾಗಿದ್ದಾರೆ ಎಂದು ದೂರು ದಾಖಲಾಗಿತ್ತು.[ರಾಜಕೀಯ ಪತನ: ಅಂಬರೀಶ್ ಗೆ ಮುಳುವಾದ 5 ಅಂಶಗಳು]

ಬಿಜೆಪಿ ಕಾರ್ಯಕರ್ತ ಸಿದ್ದರಾಜು ಮತ್ತು ಬೆಂಬಲಿಗರು ಮಂಡ್ಯ ಎಸ್‌ಪಿ ಸುಧೀರ್‌ ಕುಮಾರ್‌ ರೆಡ್ಡಿ ಅವರಿಗೆ ಅಂಬರೀಶ್ ಅವರನ್ನು ಹುಡುಕಿಕೊಡಿ ಎಂದು ದೂರು ದಾಖಲು ಮಾಡಿದ್ದಾರೆ. ಜನರ ಕಷ್ಟ ಅರಿಯದೇ ಸ್ಥಳೀಯ ಜನಪ್ರತಿನಿಧಿ ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಸಚಿವ ಸ್ಥಾನ ಕಳೆದುಕೊಂಡ ನಂತರ

ಸಚಿವ ಸ್ಥಾನ ಕಳೆದುಕೊಂಡ ನಂತರ

ವಸತಿ ಸಚಿವ ಸ್ಥಾನ ಕಳೆದುಕೊಂಡ ನಂತರ ಅಂಬರೀಶ್ ರಾಜಕಾರಣಕ್ಕಿಂತ ಹೆಚ್ಚಾಗಿ ಸಿನಿಮಾ ವೇದಿಕೆಯಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲ ಅದ್ದೂರಿ ಸಿನಿಮಾಗಳ ಆಡಿಯೋ ಬಿಡುಗಡೆ ಸಮಾರಂಭಕ್ಕೂ ಹಾಜರಾಗುತ್ತಿದ್ದಾರೆ.

ಗೋವಾದಲ್ಲಿ ರೆಬೆಲ್

ಗೋವಾದಲ್ಲಿ ರೆಬೆಲ್

ಕನ್ನಡ ಚಿತ್ರರಂಗದ ಮಾದರಿ ಪ್ರೇಮಿಗಳಾದ ಯಶ್ ಮತ್ತು ರಾಧಿಕಾ ಪಂಡಿತ್ ನಿಶ್ಚಿತಾರ್ಥ ಗೋವಾದಲ್ಲಿ ವರಮಹಾಲಕ್ಷ್ಮೀ ಹಬ್ಬದಂದೇ ಜರುಗಿತು. ಅಂಬರೀಶ್ ಕುಟುಂಬ ಸಮೇತ ಹಾಜರಿ ಕೊಟ್ಟಿದ್ದರು.

ಟರ್ಫ್ ಕ್ಲಬ್

ಟರ್ಫ್ ಕ್ಲಬ್

ರಾಜಕೀಯದ ಜಂಜಾಟ ಮರೆತ ಅಂಬರೀಶ್ ಬೆಂಗಳೂರಿನ ಟರ್ಫ್ ಕ್ಲಬ್ ನಲ್ಲೂ ಕಾಣಿಸಿಕೊಂಡು ಉತ್ಸಾಹ ಇಮ್ಮಡಿ ಗೊಳಿಸುತ್ತಿದ್ದಾರೆ.

ಶಮನವಾದ ಭಿನ್ನಮತ

ಶಮನವಾದ ಭಿನ್ನಮತ

ಅಂಬರೀಶ್ ಮತ್ತು ಶ್ರೀನಿವಾಸ್ ಪ್ರಸಾದ್ ಅವರನ್ನು ಸಂಪುಟದಿಂದ ಕೈಬಿಟ್ಟಿದ್ದ ವೇಳೆ ಕರ್ನಾಟಕ ಕಾಂಗ್ರೆಸ್ ನಲ್ಲಿ ಭಿನ್ನಮತ ಭುಗಿಲೆದ್ದಿತ್ತು. ಆದರೆ ನಂತರ ಹಾಗೇ ತಣ್ಣಗಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rebel Star, Ex Minister Ambareesh is missing! BJP member Siddaraju has lodged a missing complaint to Mandya Superintendent of Police Sudhir Kumar Reddy on 12 August 2016.
Please Wait while comments are loading...