ಬೆಳಗ್ಗೆ ಹಾಲು ಕುಡಿಯಲು ಹೊರೆ, ರಾತ್ರಿ ಅಲ್ಕೋಹಾಲ್ ಕುಡಿಯುವವರಿಗೆ ಬರೆ
ರಾಜ್ಯದಲ್ಲಿ ದಿನಕ್ಕೊಂದು ಆಹಾರ ಧಾನ್ಯಗಳ ಬೆಲೆ ಗಗನಕ್ಕೆ ಏರುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ ನೀತಿಯನ್ನು ವಿರೋಧಿಸಿ ವಿಪಕ್ಷ ನಾಯಕ ಆರ್ ಅಶೋಕ್ ಧ್ವನಿ ಎತ್ತಿದ್ದಾರೆ. ರಾಜ್ಯದಲ್ಲಿ ಗ್ಯಾರಂಟಿ ಹೆಸರಿನಲ್ಲಿ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ಬಡವರ ರಕ್ತವನ್ನು ಹೀರುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ ಕಿಡಿಕಾರಿದ್ದಾರೆ.
ಮಂಗಳವಾರ ಬೆಳಗಾವಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ಮೂಲಕ ಎಲ್ಲ ಚುನಾವಣೆಗಳಲ್ಲಿ ಗೆಲುವು ಸಾಧಿಸಬಹುದು ಎಂದು ಅವರು ಸಾಧಿಸಿದ್ದರು. ಆದರೆ ಅದು ಭ್ರಮೆ ಎನ್ನುವುದು ಅವರಿಗೆ ತಡವಾಗಿ ಅರಿವಾಗಿದೆ. ಈ ಗ್ಯಾರಂಟಿಗಳನ್ನು ನಂಬಿಕೊಂಡ ಜನ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಕೈ ಕೊಟ್ಟಿದ್ದಾರೆ. ಇನ್ನು ಮೇಲೆ ಬೆಲೆ ಏರಿಕೆ ರಾಜ್ಯದಲ್ಲಿ ಸಾಮಾನ್ಯ ಎಂದು ತಿಳಿಸಿದ್ದಾರೆ.

ವಿಧಾನಸಭೆಯ ಚುನಾವಣೆಗೂ ಮೊದಲು ಕಾಂಗ್ರೆಡ್ ಬೆಲೆ ಇಳಿಸುವ ಭರವಸೆ ನೀಡಿತ್ತು. ಈ ಸರ್ಕಾರ ಮಾತು ತಪ್ಪುತ್ತಿದೆ. ಕಾಫಿ ಹಾಗೂ ಟಿಗೆ ಸರ್ಕಾರ ಕಲ್ಲು ಹಾಕಿದೆ ಎಂದು ದೂರಿದರು. ಅಲ್ಲದೆ ಈ ಬೆಲೆ ಏರಿಕೆಯನ್ನು ಮಾಡುತ್ತಿರುವ ಉದ್ದೇಶವನ್ನು ಅಶೋಕ್ ಬಿಚ್ಚಿಟ್ಟರು. ಇನ್ನೇನು ಕೆಲವೇ ದಿನಗಳಲ್ಲಿ ನಾಲ್ಕು ರಾಜ್ಯಗಳ ಚುನಾವಣೆಗಳು ನಡೆಯಲಿವೆ. ಇದಕ್ಕಾಗಿ ಕಾಂಗ್ರೆಸ್ ಸರ್ಕಾರ ಕಪ್ಪು ಕಾಣಿಕೆ ನೀಡಲು ದರ ಏರಿಕೆ ಮಾಡಿದೆ. ಈ ಹಣವನ್ನು ಕ್ರೂಢಿ ಕರಿಸಿ ರಾಹುಲ್ ಗಾಂಧಿಗೆ ನೀಡಲಿದ್ದಾರೆ ಎಂದು ಆರೋಪಿಸಿದರು.
ಈ ರೀತಿ ಲೂಟಿ ಹೊಡೆಯುವ ಲೂಟಿ ಕೋರ ತಂಡಕ್ಕೆ ಮುಂಬರುವ ಜಿಪಂ, ಬೆಂಗಳೂರು ಪಾಲಿಕೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದ್ದಾರೆ ಎಂದರು. ಸಿಮೆಂಟ್, ಕಬ್ಬಣ ಸೇರಿ ಎಲ್ಲಾ ಬೆಲೆ ಏರಿಕೆ ಮಾಡಿದ್ದಲ್ಲದೆ, ಹಾಲಿನ ಬೆಲೆ 2 ರೂಪಾಯಿ ಏರಿಕೆ ಮಾಡಿದ್ದಾರೆ. ಕಳೆದ ವರ್ಷ ಮೂರು ರೂಪಾಯಿ ಜಾಸ್ತಿ ಮಾಡಿದ್ದರು. ಈಗ ಮತ್ತೆ ಬೆಲೆ ಏರಿಕೆ ಮಾಡಿದ್ದಾರೆ. ಬೆಳಗ್ಗೆ ಮಕ್ಕಳಿಗೆ ಹಾಲು ಕುಡಿಯಲು ಹೊರೆಯಾದರೆ, ಸಂಜೆ ಕೆಲಸ ಮಾಡಿ ಬರುವವರಿಗೆ ಆಲ್ಕೋಹಾಲ್ ಕುಡಿಯಲು ಹೊರೆಯಾಗಿದೆ. ಬಡವರನ್ನು ಸರ್ವನಾಶ ಮಾಡಲು ಬೆಲೆ ಏರಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ವಿಧಾನಸೌಧದಿಂದ ಸಿಎಂ ಮನೆಗೆ ಮುತ್ತಿಗೆ ಕಾರ್ಯಕ್ರಮ ಇದೆ. ಮನೆಯಿಂದ ಸಿಎಂ ಹೊರಬರದಂತೆ ದಿಗ್ಭಂದನ ಹಾಕುತ್ತೇವೆ. ಜುಲೈ 3ಅಥವಾ 4ರಂದು ಮುತ್ತಿಗೆ ಹಾಕಲು ತಿರ್ಮಾನಿಸಲಾಗುವುದು ಎಂದು ತಿಳಿಸಿದರು.

ಆರನೇ ಗ್ಯಾರಂಟಿ
ಇನ್ನು ರಾಜ್ಯದಲ್ಲಿ ಏರುತ್ತಿರುವ ಬೆಲೆ ಏರಿಕೆಯನ್ನು ಸಿಟಿ ರವಿ ಖಂಡಿಸಿದ್ದಾರೆ. ಅಲ್ಲದೆ ಇದು ರಾಜ್ಯ ಸರ್ಕಾರದ ಆರನೇ ಗ್ಯಾರಂಟಿ ಎಂದು ಅವರು ತಿಳಿಸಿದರು. ಗ್ಯಾರಂಟಿಗಳ ನೆಪದಲ್ಲಿ ಶಾಸಕರಿಗೆ ಅನುದಾನ ನೀಡುತ್ತಿಲ್ಲ ಎಂಬ ಆಕ್ಷೇಪ ಕೇಳಿ ಬರುತ್ತಿದೆ. ಗ್ಯಾರಂಟಿ ಹೆಸರು ಹೇಳಿ ನಮ್ಮ ಮೂಗಿಗೆ ತುಪ್ಪ ಸವರಿ ಅವರು ಭ್ರಷ್ಟಾಚಾರದಲ್ಲಿ ಮುಳಗಿದ್ದಾರೆ ಎಂದು ಹಲವು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.
ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ವಿಚಾರದಿಂದ ಎಲ್ಲವೂ ಸರಿಯಾಗಿಲ್ಲ ಎಂದು ತಿಳಿಯುತ್ತದೆ. ಈ ಮೂಲಕ ಡಿಕೆಶಿ ಅವರನ್ನು ದೂರ ಇಡುವ ಪ್ರಯತ್ನ ನಡೆದಿದೆ ಎಂದು ರವಿ ತಿಳಿಸಿದ್ದಾರೆ












Click it and Unblock the Notifications