ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸ್ಲಿಂಮರ ಮತಗಳಿಗೆ ನಾವು ಕೈ ಹಾಕ್ತೀವಿ ಅನೋ ಭಯ ಕಾಂಗ್ರೆಸ್ ಗಿದೆ: ಈಶ್ವರಪ್ಪ

|
Google Oneindia Kannada News

ಶಿವಮೊಗ್ಗ, ಡಿಸೆಂಬರ್ 15: ಮುಸ್ಲಿಂಮರ ಮತಗಳಿಗೆ ನಾವು ಕೈ ಹಾಕ್ತೀವಿ ಅನೋ ಭಯ ಕಾಂಗ್ರೆಸ್ ಗಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮುಸಲ್ಮಾನರ ಮತಗಳು ನಮ್ಮದೇ ಆಸ್ತಿ ಎಂದು ಕಾಂಗ್ರೆಸ್ ಅಂದುಕೊಂಡಿತ್ತು. ಆ ಮುಸಲ್ಮಾನರ ಮತದ ಬುಟ್ಟಿಗೆ ಎಲ್ಲಿ ಕೈ ಹಾಕ್ತಾರೋ ಎನ್ನುವ ಭಯ ಶುರುವಾಗಿದೆ. ಅದಕ್ಕೆ ಒಂದು ಮೀಟಿಂಗ್ ಮಾಡಿದ್ದಾರೆ. ಅವರು ಮತ ಹೇಗಾದ್ರೂ ಹಂಚಿಕೊಳ್ಳಲಿ. ಹಿಂದುತ್ವದ ವಿಚಾರದಲ್ಲಿ ಬಿಜೆಪಿ ದೇಶದಲ್ಲಿ ಹೋರಾಟ ಮಾಡುತ್ತಿದೆ. ಕೇಂದ್ರದಲ್ಲಿ ಮೋದಿ ಸರ್ಕಾರ ಬಂದಿದೆ. ಗುಜರಾತ್‌ನಲ್ಲೂ ನಿರೀಕ್ಷೆಗೂ ಮೀರಿ ಬೆಂಬಲ ಕೊಟ್ಟಿದ್ದಾರೆ. ರಾಜ್ಯದಲ್ಲೂ ಕೂಡ ಹಿಂದುತ್ವದ ಆಧಾರದ ಮೇಲೆ ಚುನಾವಣೆ ಮಾಡ್ತೇವೆ. ಹಿಂದುತ್ವದ ವ್ಯವಸ್ಥೆಯಲ್ಲಿ ಎಲ್ಲರೂ ಬೆಂಬಲ ಕೊಡ್ತಾರೆ. 150 ಕ್ಕೂ ಹೆಚ್ಚು ಸ್ಥಾನ ಗೇಲ್ತೇವೆ. ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದು ಹೇಳಿದರು.

ಸಿದ್ದರಾಮಯ್ಯ ಒಂದು ಬಸ್‌ನಲ್ಲಿ, ಡಿಕೆ ಶಿವಕುಮಾರ್ ಒಂದು ಬಸ್‌ನಲ್ಲಿ ಹೋಗ್ತಿನಿ ಅಂತಾ ಇದ್ದರು. ಆದರೆ, ಈಗ ಹೈಕಮಾಂಡ್‌ ಹೇಳಿರುವುದರಿಂದ ಇಬ್ಬರು ಒಂದಾಗಿ ಯಾತ್ರೆ ಹೋಗ್ತೀನಿ ಅಂತಿದ್ದಾರೆ. ಮೇಲಿನವರ ಮಾತನ್ನು ಕೇಳ್ತಿವಿ ಎಂದು ತೀರ್ಮಾನ ಮಾಡಿಕೊಂಡು ಬಂದಿದ್ದಾರೆ. ಮಲ್ಲಿಕಾರ್ಜುನ್ ಖರ್ಗೆಯವರು ಒಂದೇ ಬಸ್‌ನಲ್ಲಿ ಹೋಗ್ಬೇಕು ಎಂದು ಹೇಳಿದ್ದಾರೆ. ಅದನ್ನು ಒಪ್ಪಿಕೊಂಡು ಬಂದಿದ್ದಾರೆ. ತುಂಬಾ ಸಂತೋಷ. ಮೇಲಿನವರು ಎಲ್ಲಾ ರಾಜಕೀಯ ಪಕ್ಷಕ್ಕೂ ಕಡಿವಾಣ ಹಾಕಿದಾಗ ಒಂದು ಶಿಸ್ತು ಬರುತ್ತೆ. ಆ ಶಿಸ್ತಿನ ರೂಪದ ಪ್ರಯತ್ನ ಕಾಂಗ್ರೆಸ್‌ನಲ್ಲಿ ನಡೆದಿರೋದು ನಿಜಕ್ಕೂ ಸಂತೋಷ ಎಂದರು.

BJP Leader Ks Eshwarappa Slams Congress Leaders Over Muslim Votes

ರಾಜಕಾರಣದಲ್ಲಿ ಇದೆಲ್ಲಾ ಇದ್ದಿದ್ದೆ . ಸ್ವಾಭಾವಿಕವಾಗಿ ಭಿನ್ನಾಭಿಪ್ರಾಯ ಇದ್ದೇ ಇರುತ್ತೆ‌. ಅದೇನು ವಿಶೇಷ ಅಲ್ಲ. ಎಲ್ಲಾ ಪಾರ್ಟಿಯಲ್ಲೂ ಇರುತ್ತೇ. ಬಿಜೆಪಿಯಲ್ಲೂ ಇದೆ. ನಾನು ಇಲ್ಲ ಅನ್ನಲ್ಲ ಎಂದು ಹೇಳಿದರು.

ಸಿದ್ದರಾಮಯ್ಯನವರಿಗೆ ಬೇರೆ ಬೇರೆ ಮಾಡೋದು ರಕ್ತಗತವಾಗಿ ಬಂದಿದೆ. ಬಹಳ ಹಿಂದಿನಿಂದಲೂ ಆ ಕೆಲಸ ಮಾಡ್ತಾ ಇದ್ದಾರೆ. ದೇವೆಗೌಡರ ಜೊತೆ ಇದ್ದಾಗಲೂ ಬೇರೆ ಅಹಿಂದ ಸಮಾವೇಶ ಮಾಡಬೇಡಿ ಅಂದಿದ್ದರು. ಸಮಾವೇಶ ಮಾಡಿದ್ದಕ್ಕೆ ಪಕ್ಷದಿಂದ ಕಿತ್ತಾಕ್ಕಿದ್ರೂ ರಾಜ್ಯದಲ್ಲಿ ಸಿಎಂ ಆಗಿದ್ದ ವ್ಯಕ್ತಿ ನೀವು. ನಿಮ್ಮ ಕಾರ್ಯಕರ್ತರು ಒಳ್ಳೆ ನಾಯಕರು ಅಂದುಕೊಂಡಿದ್ದಾರೆ ಎಂದರು.

BJP Leader Ks Eshwarappa Slams Congress Leaders Over Muslim Votes

ನಿಮ್ಮ ಕೇಂದ್ರದ ನಾಯಕರು ಹೇಳಿದ್ದನ್ನು ಪರಿಪಾಲನೆ ಮಾಡಿ, ನಿಮ್ಮ ಕಾಂಗ್ರೆಸ್ ಕಾರ್ಯಕರ್ತರು ಮೆಚ್ಚಿಕೊಳ್ತಾರೆ. ನೀವು ದೆಹಲಿಯಲ್ಲಿ ಒಪ್ಪಿಕೊಂಡು ಬಂದು, ಪ್ರತ್ಯೇಕ ಸಭೆ ಮಾಡಿದ್ರೇ ಹೇಗೆ? ಬೆಂಗಳೂರಿಗೆ ಬರುವ ಜಿಲ್ಲಾ ನಾಯಕರು ಅಲ್ಲಿ ನೀವು ಹೇಳಿದ್ದನ್ನು ಕೇಳಿಕೊಂಡು ಬರ್ತಾರೆ.‌ ಜಿಲ್ಲೆಗೆ ಬಂದ ಮೇಲೆ ಎರಡೆರಡು ಗುಂಪು ಮಾಡಿಕೊಳ್ತಾರೆ. ನಾನು ರಾಜಕೀಯಕ್ಕೆ ಮಾಡೋಕೆ ಇಷ್ಟಪಡಲ್ಲ. ಕೇಂದ್ರದ ನಾಯಕರ ಮಾತು ಕೇಳಿ. ನಿಮ್ಮ ಪಕ್ಷಕ್ಕೆ ಶಿಸ್ತು ಬರುತ್ತೆ. ಅದರಿಂದ ನಿಮಗೆ, ಕಾರ್ಯಕರ್ತರಿಗೆ ಅನುಕೂಲ ಆಗುತ್ತೆ ಎಂದರು.

ಇನ್ನೂ ಸಚಿವ ಸಂಪುಟ ವಿಚಾರವಾಗಿ ಮಾತನಾಡಿ, ಸಚಿವ ಸಂಪುಟಕ್ಕೆ ಸೇರೋದು ಬಿಡೋದು ನನ್ನ ಆಯ್ಕೆಯಲ್ಲ. ಕೇಂದ್ರದ ನಾಯಕರು ತೀರ್ಮಾನ ಮಾಡಿದರೇ ಮಂತ್ರಿ ಆಗ್ತೇನೆ. ಇಲ್ಲ ಅಂದ್ರೇ, ಶಾಸಕನಾಗಿ ಕೆಲಸ ಮಾಡ್ತೇನೆ ಎಂದು ಈಶ್ವರಪ್ಪ ಹೇಳಿದರು.

English summary
Congress is afraid that we will take the votes of Muslims says Eshwarappa,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X