• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಒಬ್ಬ ಕಾಮಿಡಿ ಆಕ್ಟರ್

|

ಬೆಂಗಳೂರು, ಸೆ 29: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಕಾಮಿಡಿ ಆಕ್ಟರ್ ಎಂದು ಕರ್ನಾಟಕ ಕಾಂಗ್ರೆಸ್ ಘಟಕ ಲೇವಡಿ ಮಾಡಿದೆ. ಈ ಬಗ್ಗೆ ಕೆಪಿಸಿಸಿ ಟ್ವೀಟ್ ಮಾಡಿದ್ದು ಹೀಗೆ:

"@BJP4Karnatakaದ ಕಾಮಿಡಿ ಆಕ್ಟರ್ @nalinkateel ಅವರೇ, ಅಕ್ರಮ ಡಿನೋಟಿಫಿಕೇಷನ್'ನಂತಹ ಭೂ ಹಗರಣದವರು, ಅಕ್ರಮ ಗಣಿ ಹಗರಣದವರು, ಜೈಲಿಗೆ ಹೋಗಿ ಬಂದವರು ನಿಮ್ಮಲ್ಲೇ ಇದ್ದಾರೆ. "ಒಂದು ಡಾಲರ್'ಗೆ 15 ರೂಪಾಯಿ" ಮಾಡುತ್ತೇವೆಂದು ಅಮಾಯಕರ ದಾರಿ ತಪ್ಪಿಸುವ ಕಲೆ ನಿಮಗಿಂತ ಚೆನ್ನಾಗಿ ಇನ್ಯಾರಿಗೆ ತಿಳಿದಿರಲು ಸಾಧ್ಯ ಹೇಳಿ"ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಶಿರಾ ಹಾಗೂ ರಾಜರಾಜೇಶ್ವರಿ ನಗರ ಉಪ ಚುನಾವಣೆಗೆ ಬಿಜೆಪಿ ಸಿದ್ಧ: ಕಟೀಲ್ಶಿರಾ ಹಾಗೂ ರಾಜರಾಜೇಶ್ವರಿ ನಗರ ಉಪ ಚುನಾವಣೆಗೆ ಬಿಜೆಪಿ ಸಿದ್ಧ: ಕಟೀಲ್

"ಮುಖ್ಯಮಂತ್ರಿಗಳಾದ ಶ್ರೀ @bsybjp ರವರು ರೈತನ ಮಗನಾಗಿ, ರೈತಪರ ಹೋರಾಟಗಳಿಂದ ಜನಮನ ಗೆದ್ದವರು. ಆದರೆ @siddaramaiah & @DKShivakumar ಅವರು, ರೈತರ ಭೂಮಿಯನ್ನು ಕಬಳಿಸಿ ಈಗ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಅಮಾಯಕ ರೈತರನ್ನು ದಾರಿ ತಪ್ಪಿಸಿ ಮೋಸಗೊಳಿಸುತ್ತಿದ್ದಾರೆ. ಅವರ ಕಪಟ ಹೋರಾಟವನ್ನು ನೈಜ ರೈತ ನಂಬುವುದಿಲ್ಲ"ಎಂದು ನಳಿನ್ ಕಟೀಲ್ ಟ್ವೀಟ್ ಮಾಡಿದ್ದರು.

ಕಾಮಿಡಿ ಆಕ್ಟರ್ ಟ್ವೀಟ್ ಗೆ ಭರ್ಜರಿ ತಿರುಗೇಟು ನೀಡಿರುವ ಕಟೀಲ್, "ಕಾಮಿಡಿ ಮಾಡುವ ವ್ಯಕ್ತಿ ಯಾರು ಮತ್ತು ಕಾಮಿಡಿಯಾದ ಪಕ್ಷ ಯಾವುದು ಎಂದು ದೇಶದ ಜನತೆಗೆ ಸರಿಯಾಗಿ ತಿಳಿದಿದೆ. ಜೈಲಿಗೆ ಹೋಗಿ ಬಂದವರೆಲ್ಲಾ ಬಿಜೆಪಿಯಲ್ಲೇ ಇರುವುದು ಎಂದಾದರೇ ತಿಹಾರ್ ಜೈಲು @INCKarnataka ಕ್ಕೆ ಜೈಲಿನ ಹಾಗೆ ಕಾಣಲಿಲ್ಲವೇ?"

"ಜಾಮೀನಿನ ಮೇಲೆ ಹೊರಗೆ ಇರುವುದೇ ಪಕ್ಷದ ಅಧ್ಯಕ್ಷರಾಗಲು ಇರುವ ಮಾನದಂಡವೇ"ಎಂದು ನಳಿನ್ ಕಟೀಲ್, ಡಿ.ಕೆ.ಶಿವಕುಮಾರ್ ಅವರ ಹೆಸರನ್ನು ಉಲ್ಲೇಖಿಸದೇ ಟ್ವೀಟ್ ಮಾಡಿದ್ದಾರೆ.

ಶಿರಾ ಹಾಗೂ ರಾಜರಾಜೇಶ್ವರಿ ನಗರ ಉಪ ಚುನಾವಣೆಗೆ ಬಿಜೆಪಿ ಪಕ್ಷದಲ್ಲಿ ಐದಾರು ಜನ ಆಕಾಂಕ್ಷಿಗಳಿದ್ದಾರೆ. ಬೂತ್ ಮಟ್ಟದಲ್ಲಿ ಪೂರ್ವ ತಯಾರಿ ನಡೆದಿದೆ. ಸೂಕ್ತ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು ಎಂದು ಕಟೀಲ್ ಹೇಳಿದ್ದಾರೆ.

   Y.S.V Datta : ನನ್ boss ದೇವೇಗೌಡ್ರು | Oneindia Kannada

   English summary
   BJP Karnataka Unit President Is A Comedy Actor: KPCC Tweet, Kateel Counter For This.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X