ರೌಡಿ ಕೊತ್ವಾಲನ ಶಿಷ್ಯನಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ, ಖುದ್ದು ರೌಡಿಗೆ ಕಾರ್ಯಾಧ್ಯಕ್ಷ ಪಟ್ಟ!

ಬೆಂಗಳೂರು, ಫೆ 9: ಕೆಪಿಸಿಸಿ ಯುವ ಘಟಕದ ಅಧ್ಯಕ್ಷ ಸ್ಥಾನದ ಹುದ್ದೆ ಮೊಹಮ್ಮದ್ ನಳಪಾಡ್ ಗೆ ತಪ್ಪಿದ್ದು ಪಕ್ಷದಲ್ಲಿ ಭಾರೀ ಸಂಚಲನ ಮೂಡಿಸುತ್ತಿದೆ. ಇದು ಎಐಸಿಸಿಯಲ್ಲೂ ದೊಡ್ಡ ಮಟ್ಟದ ಸುದ್ದಿಯಾಗುತ್ತಿದೆ.

Recommended Video

      ರಕ್ಷಾ vs ನಲ್ಪಾಡ್ ಕಾಂಗ್ರೆಸ್ ನಲ್ಲಿ ಕುತೂಹಲ! | Oneindia Kannada

      ಅಲ್ಪಸಂಖ್ಯಾತರನ್ನು ಕಾಂಗ್ರೆಸ್ಸಿನಲ್ಲಿ ಕಡೆಗಣಿಸಲಾಗುತ್ತಿದೆ ಎನ್ನುವ ಆಯಾಮ ಇದು ಪಡೆದುಕೊಳ್ಳುವ ಸಾಧ್ಯತೆ ಇರುವುದರಿಂದ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈ ವಿಚಾರಕ್ಕೆ ತಾರ್ಕಿಕ ಅಂತ್ಯ ಕಾಣಿಸಲು ಪ್ರಯತ್ನಿಸುತ್ತಿದ್ದಾರೆ.

      ಕಾಂಗ್ರೆಸ್ಸಿನ ಹಿರಿಯ ಮುಖಂಡ ಸಿ.ಎಂ.ಇಬ್ರಾಹಿಂ ಕೂಡಾ ಮುಸ್ಲಿಮರಿಗೆ ಪಕ್ಷದಲ್ಲಿ ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ ಎಂದು 'ಒನ್ ಇಂಡಿಯಾ'ಜೊತೆಗಿನ ಸಂದರ್ಶನದಲ್ಲಿ ಹೇಳಿದ್ದರು.

      ಇನ್ನು, ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ಸಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಉಲ್ಲೇಖಿಸಿ ಬಿಜೆಪಿ ಕರ್ನಾಟಕ ಘಟಕ ಖಡಕ್ ಟ್ವೀಟ್ ಮಾಡಿದೆ. ಕೆಪಿಸಿಸಿ ಅಧ್ಯಕ್ಷರನ್ನು ರೌಡಿಯ ಶಿಷ್ಯ ಎಂದು ಜರಿದಿದೆ.

      ಬಿಜೆಪಿ ಮಾಡಿರುವ ಟ್ವೀಟ್

      ಬಿಜೆಪಿ ಮಾಡಿರುವ ಟ್ವೀಟ್ ಹೀಗಿದೆ, "ರೌಡಿ ಕೊತ್ವಾಲನ ಶಿಷ್ಯನಿಗೆ @INCKarnataka ಪಟ್ಟ. ಸ್ವತಃ ರೌಡಿ ಆಗಿರುವವರಿಗೆ @IYCKarnataka ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ. ಹೆಚ್ಚು ಮತ ಪಡೆದರೂ ಆತನಿಗೆ ಸೋಲು, ಈಗ ಅದೇ ರೌಡಿ ನಾಯಕನಿಗೆ ಕಾರ್ಯಾಧ್ಯಕ್ಷ ಎಂಬ ಪಟ್ಟ ಕಟ್ಟಲು ಉತ್ಸಾಹ. ಕಾಂಗ್ರೆಸ್‌ ಪಕ್ಷದವರು ಸಮಾಜಕ್ಕೆ ಯಾವ ಸಂದೇಶ ರವಾನಿಸುತ್ತಿದ್ದಾರೆ?"

      ಕ್ರಿಮಿನಲ್ ಯೋಗಿಗೆ ಸಿಎಂ ಪಟ್ಟ, ಇದು ಬಿಜೆಪಿ ಯೋಗ್ಯತೆ

      ಕ್ರಿಮಿನಲ್ ಯೋಗಿಗೆ ಸಿಎಂ ಪಟ್ಟ, ಇದು ಬಿಜೆಪಿ ಯೋಗ್ಯತೆ

      "ಬಿಜೆಪಿಯ ಟ್ವೀಟ್ ಗೆ ಬಂದ ಕೆಲವು ಪ್ರತಿಕ್ರಿಯೆಗಳು ಹೀಗಿದೆ: "ಗಡಿಪಾರಾಗಿದ್ದ ತಡಿಪಾರ್‌ಗೆ ಅಧ್ಯಕ್ಷ ಪಟ್ಟ, ರಾಜ್ಯಕ್ಕೆ ಬೆಂಕಿ ಹಚ್ಚಿದ್ದ ಸಾವಿನ ವ್ಯಾಪಾರಿಗೆ ಪ್ರಧಾನಿ ಪಟ್ಟ, ಲೂಟಿ ಮಾಡಿ ಜೈಲಿಗೆ ಹೋದವರಿಗೆ ಸಿಎಂ ಪಟ್ಟ, ಗಣಿ ಲೂಟಿಕೊರರಿಗೆ ಮಂತ್ರಿ ಪಟ್ಟ, ಕುಡಿದು ಆಕ್ಸಿಡೆಂಟ್ ಮಾಡಿ ಕೊಂದವನಿಗೆ ಪಕ್ಷದ ಉನ್ನತ ಹುದ್ದೆ,, ಕ್ರಿಮಿನಲ್ ಯೋಗಿಗೆ ಸಿಎಂ ಪಟ್ಟ, ಇದು ಬಿಜೆಪಿ ಯೋಗ್ಯತೆ!".

      ಸಾವಿನ ವ್ಯಾಪಾರಿ ಎಂದವಳು ಬಾರ್ ಡ್ಯಾನ್ಸರ್

      ಸಾವಿನ ವ್ಯಾಪಾರಿ ಎಂದವಳು ಬಾರ್ ಡ್ಯಾನ್ಸರ್

      "ಭಯೋತ್ಪಾದಕರನ್ನು ಕೊಂದವನನ್ನೂ ಗಡಿಪಾರು ಮಾಡಿದ್ದು ಗುಲಾಮರ ಪಕ್ಷ, ಗೋದ್ರಾ ಹಿಂದೂಗಳ ಹತ್ಯೆಯ ಪ್ರತಿಭಟಿಸಿದ್ದಕ್ಕೆ ಸಾವಿನ ವ್ಯಾಪಾರಿ ಎಂದವಳು ಬಾರ್ ಡ್ಯಾನ್ಸರ್. ಹಿಂದೂ ಆತ್ಮಾಬಿಮಾನ ಜಾಗೃತಿ ಮಾಡಿದವನಿಗೆ ಕ್ರಿಮಿನಲ್ ಎಂದದ್ದು ಮಿಷನರಿ ಮಾಫಿಯಾ ಪಕ್ಷ. ತಿಹಾರ್ ಸೇರಿದ‌ ಮೊದಲ ಕನ್ನಡಿಗ ರಾಜಕಾರಣಿ ಹೇಳುವುದು ಗಣಿ ಬಗ್ಗೆ".

      ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದವರು

      ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದವರು

      "ಆ ಪಕ್ಷದವರೂ ಸಾಚಗಳಲ್ಲ, ನಿಮ್ಮ ಪಕ್ಷದವರುಗಳು ಏನ್ ಸಾಚಗಳಲ್ಲ ಬಿಡಿ, ತಾಕತ್ ಇದ್ರೆ ನಿಮ್ಮ ಪಕ್ಷದಲ್ಲಿ ಇರುವವರ ಬಗ್ಗೆನೂ ಹಾಕಿ ನೋಡೋಣ. ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದವರೇ ಉಪಮುಖ್ಯಮಂತ್ರಿಗಳಾಗಿರಬೇಕಾದರೇ ಇದ್ಯಾವ ಮಹಾ ಬಿಡಿ ಸ್ವಾಮಿ. ಕುಟುಂಬ ರಾಜಕಾರಣ ಅಭಿವೃದ್ಧಿಗೆ ಮಾರಕ ಎಂದ ಪಕ್ಷದಲ್ಲೇ ಪ್ರತ್ಯಕ್ಷವಾಗಿ ಮಂತ್ರಿಗಳ ಪುತ್ರರ ಒಡೆತನ ನಡೆಯುತ್ತಿದೆ".

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+