ಜೆಡಿಎಸ್​-ಬಿಜೆಪಿ ಸೀಟು ಹಂಚಿಕೆ ಫೈನಲ್: ಫೆಬ್ರವರಿ 10ರ ಬಳಿಕ ದೆಹಲಿಯತ್ತ ದಳಪತಿ - ಕ್ಷೇತ್ರಗಳು ಇಲ್ಲಿವೆ

ಬೆಂಗಳೂರು, ಫೆಬ್ರವರಿ 08: ಕರ್ನಾಟಕದಲ್ಲಿ ಲೋಕಸಮರಕ್ಕೆ ಸಜ್ಜಾಗಿರುವ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸಿವೆ. ಇತ್ತ ಆಡಳಿತರೂಢ ಕಾಂಗ್ರೆಸ್‌ ಗೆ ಲೋಕಸಭಾ ಚುನಾವಣೆಯಲ್ಲಿ ಸೋಲಿನ ರುಚಿ ತೋರಿಸಿಲು ಕಮಲ-ದಳ ನಾಯಕರು ಒಂದಾಗಿದ್ದು, ಜೆಡಿಎಸ್ ನಾಯಕರು ಇದೀಗ ಸೀಟು ಹಂಚಿಕೆ ವಿಚಾರದಲ್ಲಿ ಅಂತಿಮ ಹಂತಕ್ಕೆ ಬಂದಿದ್ದಾರೆ.

ಹೌದು, ಬಿಜೆಪಿ ಹೈಕಮಾಂಡ್‌ ನಾಯಕರ ಜೊತೆಗೆ ಈಗಾಗಲೇ ನಾಲ್ಕೈದು ಸುತ್ತಿನ ಮಾತುಕತೆ ನಡೆಸಿರುವ ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಅವರು ಫೆಬ್ರವರಿ 10 ರ ಬಳಿಕ ದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್‌ ನಾಯಕರಾದ ಅಮಿತ್‌ ಶಾ ಹಾಗೂ ಜೆ ಪಿ ನಡ್ಡಾ ಅವರನ್ನ ಭೇಟಿ ಮಾಡಲಿದ್ದಾರೆ. ಈ ವೇಳೆ 28 ಕ್ಷೇತ್ರಗಳ ಪೈಕಿ 24 ಕ್ಷೇತ್ರಗಳು ಬಿಜೆಪಿಗೆ ಹಾಗೂ 4 ಕ್ಷೇತ್ರಗಳು ಜೆಡಿಎಸ್‌ ಗೆ ಬರಲಿವೆ. ಆದರೆ, ಜೆಡಿಎಸ್‌ ನಾಯಕರು ಈಗಾಗಲೇ 4ರಿಂದ 5 ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದು ಇದೇ ವಿಚಾರವಾಗಿ ಸಮಾಲೋಚನೆ ನಡೆಸಲಿದ್ದಾರೆ.

BJP-JDS Lok Sabha Alliance 2024: JDS-BJP Alliance Seat Sharing Final

ಬಿಜೆಪಿ ಹೈಕಮಾಂಡ್‌ ಬಳಿ ಜೆಡಿಎಸ್‌ ನಾಯಕರು ಆರು ಲೋಕಸಭಾ ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿತ್ತು. ಹಾಸನ, ಮಂಡ್ಯ, ತುಮಕೂರು ಸೇರಿ 4 ರಿಂದ 5 ಸ್ಥಾನ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಹೈಕಮಾಂಡ್ ಸಮೀಕ್ಷಾ ವರದಿ ತರಿಸಿಕೊಳ್ಳಲಿದೆ. ಇನ್ನೂ ಮಂಡ್ಯ, ಹಾಸನ, ಚಿಕ್ಕಬಳ್ಲಾಪುರ, ಕೋಲಾರ, ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಜೆಡಿಎಸ್ ಪಟ್ಟು ಹಿಡಿದಿತ್ತು. ಆದರೆ, ಈ ಬಗ್ಗೆ ಬಿಜೆಪಿ ಹೈಕಮಾಂಡ್‌ ಆರು ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳನ್ನ ಬಿಟ್ಟುಕೊಡಲು ನಿರ್ಧರಿಸಿದೆ ಎನ್ನಲಾಗಿದೆ.

ಬಿಜೆಪಿ ಸ್ಪರ್ಧಿಸುವ ಕ್ಷೇತ್ರಗಳು ಇಲ್ಲಿವೆ?

ಬೆಂಗಳೂರು ಕೇಂದ್ರ

ತುಮಕೂರು

ಬೆಂಗಳೂರು ದಕ್ಷಿಣ

ಬೆಂಗಳೂರು ಉತ್ತರ

ಬೆಂಗಳೂರು ಗ್ರಾಮಾಂತರ

ಮೈಸೂರು

ಚಾಮರಾಜನಗರ

‌ಚಿಕ್ಕಮಗಳೂರು

ದಾವಣಗೆರೆ

ಶಿವಮೊಗ್ಗ

ಹಾವೇರಿ

ಉತ್ತರ ಕನ್ನಡ

ದಕ್ಷಿಣ ಕನ್ನಡ

ಹುಬ್ಬಳ್ಳಿ-ಧಾರವಾಡ

ಚಿತ್ರದುರ್ಗ

ಬಾಗಲಕೋಟೆ

ಬಳ್ಳಾರಿ

ಕೊಪ್ಪಳ

ವಿಜಯಪುರ

ಕಲಬುರ್ಗಿ

ಬೆಳಗಾವಿ

ಬೀದರ್

ಚಿಕ್ಕೋಡಿ

ರಾಯಚೂರು

BJP-JDS Lok Sabha Alliance 2024: JDS-BJP Alliance Seat Sharing Final

ಜೆಡಿಎಸ್‌ ಸ್ಪರ್ಧಿಸುವ ಕ್ಷೇತ್ರಗಳು ಇಲ್ಲಿವೆ?

ಹಾಸನ

ಮಂಡ್ಯ

ಕೋಲಾರ

ಚಿಕ್ಕಬಳ್ಳಾಪುರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+