ಲೋಕಸಭಾ ಚುಣಾವಣೆ: ಕ್ಷೇತ್ರ ಹಂಚಿಕೆ ಬಹುತೇಕ ಫೈನಲ್: ಈ 3 ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧೆ ಫಿಕ್ಸ್? ಇಲ್ಲಿದೆ ಪಟ್ಟಿ
ಬೆಂಗಳೂರು, ಫೆಬ್ರವರಿ 22: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ರಾಜಕೀಯ ರಣತಂತ್ರವನ್ನು ಹೆಣೆಯುತ್ತಿದೆ. ಆದರೆ, ಕಮಲ-ದಳ ನಾಯಕರಿಗೆ ಕ್ಷೇತ್ರ ಹಂಚಿಕೆ ದೊಡ್ಡ ಸವಾಲಗಿದ್ದು, ಬಿಜೆಪಿ ಹೈಕಮಾಂಡ್ ನಾಯಕರ ಸೂಚನೆ ಮೇರೆಗೆ ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ದಿಢೀರ್ ದೆಹಲಿ ಪ್ರವಾಸ ಮಾಡಿದ್ದಾರೆ.
ಹೌದು, ಕೇಂದ್ರ ಸಚಿವ ಅಮಿಶ್ ಶಾ ಅವರೊಂದಿಗೆ ಸುಮಾರು 20 ನಿಮಿಷಗಳ ಕಾಲ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಮಾತುಕತೆ ನಡೆಸಿದ್ದಾರೆ. ಈಗಾಗಲೇ ಸೋತ ಮಂಡ್ಯ ಕ್ಷೇತ್ರವನ್ನ ಮರಳಿ ಪಡೆಯುವ ನಿಟ್ಟಿನಲ್ಲಿ ಪಟ್ಟು ಹಿಡಿದಿದ್ದ ದಳಪತಿಗಳು ಮಂಡ್ಯ ವಿಚಾರದಲ್ಲಿ ಮೇಲುಗೈ ಸಾಧಿಸಿದ್ದಾರೆ. ಮಂಡ್ಯ, ಹಾಸನ, ಕೋಲಾರ ಟಿಕೆಟ್ ಜೆಡಿಎಸ್ಗೆ ನೀಡುವುದು ಫಿಕ್ಸ್ ಎಂದು ತಿಳಿದು ಬಂದಿದೆ.

ಇತ್ತ ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಯ ಬಗ್ಗೆ ಮತ್ತೊಮ್ಮೆ ಚರ್ಚೆ ಮಾಡೋಣಾ ಎಂದು ಹೈಕಮಾಂಡ್ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರಿಗೆಸಲಹೆ ನೀಡಿದ್ದಾರೆ ಎಂದು ಹೇಳಲಾಗಿದ್ದು, ರಾಜ್ಯದಲ್ಲಿ ಒಟ್ಟು 28 ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಮೂರು ಕ್ಷೇತ್ರಗಳು ಜೆಡಿಎಸ್ ಗೆ ಸಿಗಲಿದೆ ಎಂದು ಹೇಳಲಾಗಿದೆ. ಇನ್ನೂ ಕ್ಷೇತ್ರ ಹಂಚಿಕೆ ಕುರಿತು ಎರಡು ಪಕ್ಷದ ನಾಯಕರ ಜೊತೆಗೆ ಮಾತುಕತೆ ನಡೆಸಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಎಂದು ಹೇಳಲಾಗುತ್ತಿದೆ.
ನಾವು ಎನ್ಡಿಎ ಮೈತ್ರಿಕೂಟ ಸೇರಿರೋದು ಕಾಂಗ್ರೆಸ್ನ ಸೋಲಿಸಬೇಕಂತಾ. ಆದರೆ ಮಂಡ್ಯ ಮತ್ತು ಹಾಸನದಲ್ಲಿ ನಿಮ್ಮ ಪಕ್ಷದ ಶಾಸಕರೇ ಭಿನ್ನಾಭಿಪ್ರಾಯ ವ್ಯಕ್ತಪಡಿಸ್ತಿದ್ದಾರೆ ಎಂದು ಹೆಚ್‍ಡಿ ಕುಮಾರಸ್ವಾಮಿ ಅವರು ಅಮಿತ್ ಶಾ ಬಲಿ ದೂರು ಹೇಳಿದ್ದಾರೆ. ಇನ್ನು ಮಂಡ್ಯ, ಹಾಸನ, ಕೋಲಾರ ಜೆಡಿಎಸ್ಗೆ ಸಿಗಲಿದ್ದು, ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಪೈಕಿ ಇನ್ನೊಂದು ಕ್ಷೇತ್ರ ಜೆಡಿಎಸ್ ಗೆ ಸಿಗಲಿದೆ ಎನ್ನಲಾಗಿದೆ.
ಬಿಜೆಪಿ ಸ್ಪರ್ಧಿಸುವ ಕ್ಷೇತ್ರಗಳು ಇಲ್ಲಿವೆ?
ಬೆಂಗಳೂರು ಕೇಂದ್ರ
ತುಮಕೂರು
ಬೆಂಗಳೂರು ದಕ್ಷಿಣ
ಬೆಂಗಳೂರು ಉತ್ತರ
ಬೆಂಗಳೂರು ಗ್ರಾಮಾಂತರ
ಮೈಸೂರು
ಚಾಮರಾಜನಗರ
ಚಿಕ್ಕಮಗಳೂರು
ದಾವಣಗೆರೆ
ಶಿವಮೊಗ್ಗ
ಹಾವೇರಿ
ಉತ್ತರ ಕನ್ನಡ
ದಕ್ಷಿಣ ಕನ್ನಡ
ಹುಬ್ಬಳ್ಳಿ-ಧಾರವಾಡ
ಚಿತ್ರದುರ್ಗ
ಬಾಗಲಕೋಟೆ
ಬಳ್ಳಾರಿ
ಕೊಪ್ಪಳ
ವಿಜಯಪುರ
ಕಲಬುರ್ಗಿ
ಬೆಳಗಾವಿ
ಬೀದರ್
ಚಿಕ್ಕೋಡಿ
ರಾಯಚೂರು
ಚಿಕ್ಕಬಳ್ಳಾಪುರ

ಜೆಡಿಎಸ್ ಸ್ಪರ್ಧಿಸುವ ಕ್ಷೇತ್ರಗಳು ಇಲ್ಲಿವೆ?
ಹಾಸನ
ಮಂಡ್ಯ
ಕೋಲಾರ












Click it and Unblock the Notifications