ಭಾರತದ ಇತಿಹಾಸದಲ್ಲೇ ಭ್ರಷ್ಟ ಸರ್ಕಾರ ಬಿಜೆಪಿ: ಕಾಂಗ್ರೆಸ್ ಆರೋಪ
ಬೆಂಗಳೂರು, ಮೇ 6: ಆಡಳಿತರೂಢ ಬಿಜೆಪಿ ಸರ್ಕಾರದ ಮೇಲೆ 40% ಭ್ರಷ್ಟಾಚಾರದ ನಿರಂತರ ಆರೋಪ ಮಾಡುತ್ತಿರುವ ಕಾಂಗ್ರೆಸ್ ಈಗ ಪಕ್ಷವನ್ನು ಭಾರತದ ಇತಿಹಾಸದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ ಎಂದು ಜರೆದಿದೆ.
40% ಭ್ರಷ್ಟ ಬಿಜೆಪಿ ಸರ್ಕಾರ ಕರ್ನಾಟಕದ ಜನರಿಂದ 1,50,000 ಕೋಟಿ ರೂಪಾಯಿ ಲೂಟಿ ಮಾಡುವುದರ ಮೂಲಕ ಇತಿಹಾಸದಲ್ಲಿ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ. ಟೆಂಡರ್‌ಗಳನ್ನು ನೀಡಲು ಮತ್ತು ಬಿಲ್ ಬಿಡುಗಡೆಗೊಳಿಸಲು ಸಚಿವರು 40% ಕಮಿಷನ್ ಕೇಳಲು ಪ್ರಾರಂಭಿಸಿದ ನಂತರ ಗುತ್ತಿಗೆದಾರರ ಸಂಘವು ಕ್ರಮಕ್ಕಾಗಿ ಪ್ರಧಾನಿ ಅವರಿಗೆ ಪತ್ರ ಬರೆದರು ಎಂದು ಕಾಂಗ್ರೆಸ್ ಆರೋಪಿಸಿದೆ.

ಬಿಜೆಪಿ ಸಚಿವರೊಬ್ಬರು 40% ಕಮಿಷನ್ ಕೇಳಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದರು. 18,000 ಶಾಲೆಗಳು ಸರ್ಕಾರದ ಮೇಲೆ ತೀವ್ರ ಭ್ರಷ್ಟಾಚಾರದ ಆರೋಪ ಮಾಡಿವೆ. ದೇವಸ್ಥಾನ, ಮಠಗಳಿಗೆ ಹಣ ಬಿಡುಗಡೆ ಮಾಡಲು ಸರ್ಕಾರ 30% ಕಮಿಷನ್ ಕೇಳುತ್ತಿದೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಆರೋಪ ಮಾಡಿದ್ದಾರೆ ಎಂದು ಹೇಳಿದೆ.
40% ಭ್ರಷ್ಟ ಬಿಜೆಪಿ ಸರ್ಕಾರ ಕರ್ನಾಟಕದ ಜನರಿಂದ ₹ 1,50,000 ಕೋಟಿ ಲೂಟಿ ಮಾಡುವುದರ ಮೂಲಕ ಇತಿಹಾಸದಲ್ಲಿ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ.
— IYC Karnataka (@IYCKarnataka) May 6, 2023
- ಟೆಂಡರ್‌ಗಳನ್ನು ನೀಡಲು ಮತ್ತು ಬಿಲ್ ಬಿಡುಗಡೆಗೊಳಿಸಲು ಸಚಿವರು 40% ಕಮಿಷನ್ ಕೇಳಲು ಪ್ರಾರಂಭಿಸಿದ ನಂತರ ಗುತ್ತಿಗೆದಾರರ ಸಂಘವು ಕ್ರಮಕ್ಕಾಗಿ ಪ್ರಧಾನಿ ಅವರಿಗೆ ಪತ್ರ ಬರೆದರು.
- ಬಿಜೆಪಿ… pic.twitter.com/p2AsMoikwn
ಬಿಜೆಪಿ ಶಾಸಕ ಮತ್ತು ಅವರ ಪುತ್ರನಿಂದ 8 ಕೋಟಿ ರೂಪಾಯಿ ನಗದನ್ನು ಲೋಕಾಯುಕ್ತರು ವಶಪಡಿಸಿಕೊಂಡಿದ್ದಾರೆ. ಸಿಎಂ ಆಗಲು 2,500 ಕೋಟಿ ರೂಪಾಯಿ ಕೊಡುವಂತೆ ಕೇಳಲಾಗಿತ್ತು ಎಂದು ಬಿಜೆಪಿ ಶಾಸಕರೊಬ್ಬರು ಹೇಳಿದ್ದಾರೆ. ಪೊಲೀಸ್ ನೇಮಕಾತಿ ಹಗರಣದಲ್ಲಿ ಸಚಿವರಿಗೆ ಕೋಟಿಗಟ್ಟಲೆ ಸಂದಾಯವಾಗಿದೆ ಎಂದು ಟೀಕಿಸಲಾಗಿದೆ.

COVID ಸಾಮಗ್ರಿಗಳ ಖರೀದಿಯಲ್ಲಿ 70% ಕಮಿಷನ್ ಪಡೆಯಲಾಗಿದೆ. ಉದ್ಯೋಗಕ್ಕಾಗಿ ಸೆಕ್ಸ್ ಹಗರಣದಲ್ಲಿ ಸಚಿವ ಸ್ಥಾನದಿಂದ ರಮೇಶ್ ಜಾರಕಿಹೊಳಿ ಬಲವಂತದಿಂದ ಕೆಳಗಿಳಿಯಬೇಕಾಯಿತು. ಬೆಂಗಳೂರಿನ ಬಿಬಿಎಂಪಿಯಲ್ಲಿ ಸಾವಿರಾರು ಕೋಟಿ ಲೂಟಿ ಮಾಡಲಾಗಿದೆ. ಬಿಜೆಪಿ ಹಗರಣಗಳ ಪಟ್ಟಿಗೆ ಅಂತ್ಯವಿಲ್ಲ. ಈ 40% ವಂಚಕರು ಕರ್ನಾಟಕದಲ್ಲಿ ಅಭಿವೃದ್ಧಿಯನ್ನು ಸ್ಥಗಿತಗೊಳಿಸಿದ್ದಾರೆ ಮತ್ತು ಹಾಳು ಮಾಡಿದ್ದಾರೆ. ಮೇ 10 ರಂದು ಕರ್ನಾಟಕದ ಜನರು ಈ ಅಸಮರ್ಥ ಭ್ರಷ್ಟರನ್ನು ಆಡಳಿತದಿಂದ ಕೆಳಗಿಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶುಕ್ರವಾರವಷ್ಟೇ ಬಿಜೆಪಿ ಸರ್ಕಾರದ ರೇಟ್ ಕಾರ್ಡ್ ಬಿಡುಗಡೆ ಮಾಡಿದ್ದ ಕಾಂಗ್ರೆಸ್ ಶನಿವಾರ ಬಿಜೆಪಿ ಸರ್ಕಾರದ ಮೇಲೆ ದಾಳಿ ಮುಂದುವರೆಸಿದೆ. ಈ ಬಾರಿ ವಿಧಾನಸಭಾ ಚುನಾವಣೆ ಗೆಲ್ಲಲು ಸತತ ಪ್ರಯತ್ನ ಮಾಡುತ್ತಿರುವ ಪಕ್ಷ ಬಿಜೆಪಿ ಸರ್ಕಾರ ಲೋಪಗಳನ್ನು ಜನರ ಮುಂದಿಟ್ಟು ಮತಯಾಚನೆ ಮಾಡುತ್ತಿದೆ. ಇದರೊಂದಿಗೆ ಜನರಿಗೆ ಪ್ರಮುಖ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ.

ನಿನ್ನೆ ಕಾಂಗ್ರೆಸ್, ಸಂವಹನ, ಪ್ರಧಾನ ಕಾರ್ಯದರ್ಶಿ ಬಿಡುಗಡೆ ಮಾಡಿರುವ ಭ್ರಷ್ಟಾಚಾರದ ಪೋಸ್ಟರ್‌ನ ಫೋಟೋವನ್ನು ಪೋಸ್ಟ್ ಮಾಡಿದ ಜೈರಾಮ್ ರಮೇಶ್, "ಕರ್ನಾಟಕದಲ್ಲಿ ಬಿಜೆಪಿ ಆಡಳಿತವನ್ನು ಮಾರಾಟ ಮಾಡಿದ ದರ. ಇದು ದೆಹಲಿ ಜೂಟ್' ಮತ್ತು ಬೆಂಗಳೂರು ಲೂಟ್" ಬಿಜೆಪಿ ಡಬಲ್ ಎಂಜಿನ್ ಆಗಿದೆ ಎಂದು ಆರೋಪಿಸಿದ್ದಾರೆ.
ಕರ್ನಾಟಕ ಉಸ್ತುವಾರಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಟ್ವೀಟ್ ಮಾಡಿ, "ಬಿಜೆಪಿಯಲ್ಲಿ '40' ಅಂಕಿ ಬೇರೂರಿದೆ! ಇಂದು ಬೆಂಗಳೂರಿನಲ್ಲಿ ಪ್ರಧಾನಿ ನಡೆಸಿದ 40 ಕಿಮೀ ರೋಡ್‌ಶೋ 40 ಪ್ರತಿಶತ ಬಿಜೆಪಿ ಸರ್ಕಾರದ ಸಂಕೇತವನ್ನು ಬಿಂಬಿಸುವಂತಿದೆ. ಮಣಿಪುರ ಹೊತ್ತಿ ಉರಿಯುತ್ತಿದ್ದರೂ ಪ್ರಧಾನಿ ಮೋದಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇದು ಪ್ರಧಾನಿ ರಾಜಧರ್ಮವನ್ನು ಅನುಸರಿಸುತ್ತಿದೆಯೇ?" ಎಂದು ಪ್ರಶ್ನಿಸಿದ್ದಾರೆ.












Click it and Unblock the Notifications