• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯಡಿಯೂರಪ್ಪ ದೆಹಲಿಯಿಂದ ವಾಪಸ್, ಲಿಂಬಾವಳಿಗೆ ಹೈಕಮಾಂಡ್ ಬುಲಾವ್

|

ಬೆಂಗಳೂರು, ಆಗಸ್ಟ್ 24: ಬಿಜೆಪಿ ನಂಬಿಕೊಂಡು ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಸೆಡ್ಡು ಹೊಡೆದು ರಾಜೀನಾಮೆ ನೀಡಿದ ಅನರ್ಹ ಶಾಸಕರು ಈಗ ಬಿಜೆಪಿ ವಿರುದ್ಧವೂ ಅಸಮಾಧಾನ ಹೊರಹಾಕುತ್ತಿದ್ದಾರೆ. ಅವರನ್ನು ಸಮಾಧಾನಪಡಿಸುವ ಬಿಜೆಪಿ ನಾಯಕರ ಪ್ರಯತ್ನ ಫಲಕೊಡುತ್ತಿಲ್ಲ.

ರಾಜೀನಾಮೆ ನಾಟಕದ ಬೆಳವಣಿಗೆ ಸಂದರ್ಭದಲ್ಲಿ ಬಿಜೆಪಿಯ ಹೈಕಮಾಂಡ್ ಮತ್ತು ತಮ್ಮ ನಡುವೆ ಸಂಪರ್ಕವಾಗಿ ಸಂವಹನ ನಡೆಸುತ್ತಿದ್ದ ರಾಜ್ಯ ಬಿಜೆಪಿ ನಾಯಕರೇ ಬೇರೆ, ಈಗ ನಮ್ಮೊಂದಿಗೆ ಮಧ್ಯಸ್ಥಿಕೆ ನಡೆಸುತ್ತಿರುವ ನಾಯಕರೇ ಬೇರೆ. ಈಗ ಬಂದಿರುವವರೊಂದಿಗೆ ಮಾತುಕತೆ ನಡೆಸಲು ನಾವು ಸಿದ್ಧರಿಲ್ಲ. ನಮ್ಮ ಬೇಡಿಕೆಗಳನ್ನು, ಅಭಿಪ್ರಾಯಗಳನ್ನು ಮುಂಚೆಯೇ ತಿಳಿಸಿದ್ದೇವೆ. ಹೀಗಾಗಿ ಆ ನಾಯಕರೇ ನಮ್ಮ ಜತೆ ಮಾತುಕತೆ ನಡೆಸಲಿ ಎಂದು ಅನರ್ಹ ಶಾಸಕರು ಕಡ್ಡಿಮುರಿದಂತೆ ಹೇಳಿದ್ದಾರೆ.

ಇದರಿಂದ ಉಂಟಾಗಿರುವ ಸಂಕಷ್ಟವನ್ನು ಬಗೆಹರಿಸಲು ಬಿಜೆಪಿ ಮುಂದಾಗಿದೆ. ಅದರ ಪ್ರಯತ್ನವಾಗಿ ಅನರ್ಹ ಶಾಸಕರೊಂದಿಗೆ ಮಾತುಕತೆ, ಅವರಿಗೆ ಅಗತ್ಯ ಸೌಲಭ್ಯಗಳ ಪೂರೈಕೆಯಂತಹ ಚಟುವಟಿಕೆಗಳನ್ನು ನಡೆಸಿದ್ದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಅವರನ್ನೇ ಮುಂದೆ ಬಿಡಲು ತೀರ್ಮಾನಿಸಲಾಗಿದೆ.

ಅನರ್ಹ ಶಾಸಕರ ವಿಚಾರದಲ್ಲಿ ಯಡಿಯೂರಪ್ಪ ಕೈಬಿಟ್ಟ ಹೈಕಮಾಂಡ್?

   ಮೋದಿ ಬಗ್ಗೆ ಕೇಜ್ರಿವಾಲ್ ಹೇಳಿದ ಮಾತು ಕೇಳಿ ಎಲ್ಲರೂ ಶಾಕ್..? | arvind kejriwal

   ಖಾತೆ ಹಂಚಿಕೆ ವಿಚಾರದಲ್ಲಿ ಹೈಕಮಾಂಡ್ ಸಲಹೆ ಪಡೆದುಕೊಳ್ಳಲು ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಶುಕ್ರವಾರ ರಾತ್ರಿ ವಾಪಸಾದ ಬೆನ್ನಲ್ಲೇ ಅರವಿಂದ ಲಿಂಬಾವಳಿ ಅವರಿಗೆ ಹೈಕಮಾಂಡ್ ಬುಲಾವ್ ನೀಡಿದೆ. ಲಿಂಬಾವಳಿ ಅವರು ಕೂಡಲೇ ದೆಹಲಿಗೆ ತೆರಳಿದ್ದಾರೆ.

   ಬೇರೆ ನಾಯಕರ ಜತೆ ಮಾತುಕತೆಗೆ ನಕಾರ

   ಬೇರೆ ನಾಯಕರ ಜತೆ ಮಾತುಕತೆಗೆ ನಕಾರ

   ಅನರ್ಹ ಶಾಸಕರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗಲು ಬಯಸಿದ್ದರು. ಆದರೆ, ಅಮಿತ್ ಶಾ ಬಿಜಿಯಾಗಿರುವ ಕಾರಣ ಅವರಿಗೆ ಸಮಯ ನೀಡಲು ಸಾಧ್ಯವಾಗಿಲ್ಲ. ಹೈಕಮಾಂಡ್‌ಗೆ ಅನರ್ಹ ಶಾಸಕರ ಬೇಡಿಕೆಗಳನ್ನು ತಿಳಿಸಲು ಅವರೊಂದಿಗೆ ಸಂವಹನ ನಡೆಸಲು ಬಿವೈ ವಿಜಯೇಂದ್ರ ಮತ್ತು ಅಶ್ವತ್ಥ ನಾರಾಯಣ ಅವರನ್ನು ಕಳುಹಿಸಲಾಗಿತ್ತು. ಆದರೆ, ಇವರೊಂದಿಗೆ ತಾವು ಮಾತನಾಡುವುದಿಲ್ಲ ಎಂದು ಅನರ್ಹ ಶಾಸಕರು ಪಟ್ಟುಹಿಡಿದಿದ್ದರು. ನಾವು ರಾಜೀನಾಮೆ ನೀಡುವ ಸಂದರ್ಭದಲ್ಲಿ ಮಾತನಾಡಿದ್ದು ಬೇರೆಯವರೊಂದಿಗೆ, ಈಗ ಇವರ ಜತೆ ಮಾತನಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರು.

   ಸಂಪುಟ ವಿಸ್ತರಣೆ ಆಗುತ್ತಿದ್ದಂತೆ ದೆಹಲಿಗೆ ಅನರ್ಹ ಶಾಸಕರು!

   ಲಿಂಬಾವಳಿಗೆ ಹೈಕಮಾಂಡ್‌ ಬುಲಾವ್

   ಲಿಂಬಾವಳಿಗೆ ಹೈಕಮಾಂಡ್‌ ಬುಲಾವ್

   ಅರವಿಂದ ಲಿಂಬಾವಳಿ ಅವರೇ ಅನರ್ಹ ಶಾಸಕರೊಂದಿಗೆ ಮಾತುಕತೆ ನಡೆಸಿ ಎಲ್ಲ ವಿಚಾರಗಳನ್ನು ಹೈಕಮಾಂಡ್ ಜತೆ ಹಂಚಿಕೊಳ್ಳುತ್ತಿದ್ದರು. ಈಗಲೂ ಅವರೇ ಮಧ್ಯಸ್ಥಿಕೆ ವಹಿಸುವ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಈ ಗೊಂದಲ ಬಗೆಹರಿಸುವ ಸಲುವಾಗಿ ಬರುವಂತೆ ಲಿಂಬಾವಳಿ ಅವರನ್ನು ಕರೆಯಿಸಿಕೊಳ್ಳಲಾಗಿದೆ.

   ಯಡಿಯೂರಪ್ಪಗೆ ಅಮಿತ್ ಶಾ ಸೂಚನೆ

   ಯಡಿಯೂರಪ್ಪಗೆ ಅಮಿತ್ ಶಾ ಸೂಚನೆ

   ನೀವು ರಾಜ್ಯದಲ್ಲಿ ತೆಗೆದುಕೊಳ್ಳುವ ಪ್ರಮುಖ ನಿರ್ಧಾರಗಳನ್ನು ನಮಗೆ ತಿಳಿಸಿದರೆ ಸಾಕು. ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಿ. ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರ ಆಗುವಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ನೀವು ದೆಹಲಿಗೆ ಪದೇ ಪದೇ ಬರುವುದು ಬೇಡ. ಇದರಿಂದ ನಿಮಗೆ ಮತ್ತು ನಮಗೆ ಇಬ್ಬರಿಗೂ ಕೆಟ್ಟ ಹೆಸರು ಬರುತ್ತದೆ. ಸರ್ಕಾರದ ಬಗ್ಗೆ ನಕಾರಾತ್ಮಕ ಸಂದೇಶ ರವಾನೆಯಾಗುತ್ತದೆ. ನಿಮ್ಮ ಜತೆ ನಾವಿದ್ದೇವೆ, ಭಯಪಡುವ ಅಗತ್ಯವಿಲ್ಲ. ಅನರ್ಹ ಶಾಸಕರ ವಿಚಾರ ದೆಹಲಿಗೆ ತರಬೇಡಿ. ಅವರಿಗೆ ನೀಡಿರುವ ಭರವಸೆ ಈಡೇರಿಸುವ ಬಗ್ಗೆ ನೀವೇ ನಿರ್ಧಾರ ತೆಗೆದುಕೊಳ್ಳಿ. ಸಂಪುಟ ವಿಸ್ತರಣೆಯಲ್ಲಿನ ಗೊಂದಲ ನಾವೇ ಬಗೆಹರಿಸುತ್ತೇವೆ. ನಾವೇ ಬಗೆಹರಿಸುತ್ತೇವೆ ಎಂದು ಬಿಜೆಪಿ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಮೂಲಕ ಅಮಿತ್ ಶಾ ಅವರು ಯಡಿಯೂರಪ್ಪ ಅವರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

   ಅತೃಪ್ತರ ಕಾಲೆಳೆದ ದೆಹಲಿ ವಾರ್ತೆ ಜಾಹೀರಾತು, ಏನಿದರ ಹಕೀಕತ್ತು

   ವಿಚಾರಣೆಗೆ ಬಾರದ ಅರ್ಜಿ

   ವಿಚಾರಣೆಗೆ ಬಾರದ ಅರ್ಜಿ

   ದೆಹಲಿಯಲ್ಲಿ ಬೀಡುಬಿಟ್ಟಿರುವ ಅನರ್ಹ ಶಾಸಕರ ಪೈಕಿ ಕೆಲವರು ಶನಿವಾರ ಬೆಂಗಳೂರಿಗೆ ಮರಳುವ ಸಾಧ್ಯತೆಯಿದೆ. ಸುಪ್ರೀಂಕೋರ್ಟ್‌ನಲ್ಲಿ ಅನರ್ಹ ಶಾಸಕರು ಸಲ್ಲಿಸಿರುವ ಅರ್ಜಿಗಳು ವಿಚಾರಣೆಗೆ ಬರುತ್ತಿಲ್ಲ. ವಿಚಾರಣೆ ವಿಳಂಬವಾಗುತ್ತಿರುವುದರಿಂದ ಅವರು ಆತಂಕಕ್ಕೆ ಒಳಗಾಗಿದ್ದಾರೆ. ಶುಕ್ರವಾರ ರಾತ್ರಿ ವಕೀಲರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಅವರ ಅರ್ಜಿ ಸೋಮವಾರ ವಿಚಾರಣೆಗೆ ಬರುವ ನಿರೀಕ್ಷೆಯಿದೆ. ಹೀಗಾಗಿ ಬಹುತೇಕ ಅನರ್ಹ ಶಾಸಕರು ಶನಿವಾರವೇ ಬೆಂಗಳೂರಿಗೆ ವಾಪಸಾಗಲಿದ್ದಾರೆ. ಉಳಿದವರು ಭಾನುವಾರ ಬೆಳಿಗ್ಗೆ ಮರಳುವ ಸಾಧ್ಯತೆ ಇದೆ.

   English summary
   BJP high command called state general secretary Arvind Limbavali to mediate with disqualified MLAs.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X