ಬಿಜೆಪಿ: ಚುನಾವಣೆಗೆ 20 ಮಂದಿ ಏಕವ್ಯಕ್ತಿ ಪಟ್ಟಿ ಬಿಡುಗಡೆ

ಬೆಂಗಳೂರು, ಫೆ.7: ಮುಂಬರುವ ಲೋಕಸಭಾ ಚುನಾವಣೆಗಾಗಿ ನವೋತ್ಸಾಹದಲ್ಲಿರುವ ಬಿಜೆಪಿ ಪಕ್ಷವು ರಾಜ್ಯದ 28 ಸಂದೀಯ ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಿಗೆ ಒಬ್ಬೊಬ್ಬೇ ಅಭ್ಯರ್ಥಿಯ ಹೆಸರನ್ನು ಆಖೈರುಗೊಳಿಸಿ, ಪಟ್ಟಿ ಬಿಡುಗಡೆ ಮಾಡಿದೆ.

ರಾಯಚೂರು, ಬೀದರ್, ಬಳ್ಳಾರಿ, ಹಾಸನ, ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಕೊಪ್ಪಳ ಕ್ಷೇತ್ರಗಳ ಅಭ್ಯರ್ಥಿಗಳನ್ನು ಇನ್ನೂ ಆಖೈರುಗೊಳಿಸಿಲ್ಲ. ಗುರುವಾರ ಸಂಸದ ಅನಂತಕುಮಾರ್ ಅವರ ನಿವಾಸದಲ್ಲಿ ನಡೆದ ರಾಜ್ಯ ಬಿಜೆಪಿ ಕೋರ್ ಕಮಿಟಿಯ ಅನೌಪಚಾರಿಕ ಸಭೆಯಲ್ಲಿ ಪಟ್ಟಿ ಸಿದ್ಧಪಡಿಸಲಾಗಿದೆ.

Karnataka BJP finalises 20 names for Lok Sabha Polls- 2014
ಪಕ್ಷದ ರಾಜ್ಯ ಚುನಾವಣಾ ಸಮಿತಿಯು ಮತ್ತೊಮ್ಮೆ ಈ ಪಟ್ಟಿಯ ಬಗ್ಗೆ ಚರ್ಚಿಸಿ, ಉಳಿದ 8 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಖೈರುಗೊಳಿಸಿ ಕೇಂದ್ರ ಚುನಾವಣಾ ಸಮಿತಿಗೆ ಸಲ್ಲಿಸಲಿದೆ. ನಂತರ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆದ ನಂತರ ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತವಾಗಿ ಘೋಷಣೆ ಮಾಡುತ್ತದೆ.

ಆದರೆ ರಾಜ್ಯ ಬಿಜೆಪಿ ಮಂದಿ ಪಟ್ಟಿಯನ್ನು ನೋಡಿ ಅಸಮಾಧಾನಗೊಂಡಿದ್ದಾರೆ. ಹಾಗಾಗಿ ರಾಜ್ಯ ಬಿಜೆಪಿ ನಾಯಕರು ಮತ್ತೊಮ್ಮೆ ದೆಹಲಿಗೆ ತೆರಳಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್‌ ಸಿಂಗ್‌ ಜತೆ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ್‌ ಶೆಟ್ಟರ್‌, ಅನಂತ ಕುಮಾರ್‌, ಪ್ರಹ್ಲಾದ್‌ ಜೋಶಿ, ಈಶ್ವರಪ್ಪ, ಆಶೋಕ್‌ ಅವರು ಒಟ್ಟಾಗಿ ರಾಜನಾಥ್‌ ಸಿಂಗ್‌ ಅವರನ್ನು ಅವರ ನಿವಾಸದಲ್ಲಿ ನಿನ್ನೆ ಭೇಟಿಯಾಗಿ ರಾಜ್ಯ ಬಿಜೆಪಿಯಲ್ಲಿನ ವಿದ್ಯಮಾನಗಳ ಬಗ್ಗೆ ಸುಮಾರು ಎರಡೂವರೆ ಗಂಟೆ ಕಾಲ ಚರ್ಚೆ ನಡೆಸಿದರು.

20 ಮಂದಿ ಏಕಾಂಗಿಗಳು
1 ಬೆಂಗಳೂರು ಉತ್ತರ- ಆರ್‌ ಅಶೋಕ್‌
2 ಉಡುಪಿ-ಚಿಕ್ಕಮಗಳೂರು- ಡಿವಿ ಸದಾನಂದಗೌಡ
3 ಗುಲ್ಬರ್ಗಾ- ರೇವೂನಾಯಕ್‌ ಬೆಳಮಗಿ
4 ಬಿಜಾಪುರ- ರಮೇಶ್‌ ಜಿಗಜಿಣಗಿ
5 ಬಾಗಲಕೋಟೆ- ಪಿ.ಸಿ.ಗದ್ದಿಗೌಡರ್‌
6 ಚಿಕ್ಕೋಡಿ- ರಮೇಶ್‌ ಕತ್ತಿ
7 ಬೆಳಗಾವಿ- ಸುರೇಶ್‌ ಅಂಗಡಿ
8 ಧಾರವಾಡ- ಪ್ರಹ್ಲಾದ್‌ ಜೋಶಿ
9 ಉತ್ತರ ಕನ್ನಡ- ಅನಂತಕುಮಾರ್‌ ಹೆಗಡೆ
10 ಹಾವೇರಿ- ಶಿವಕುಮಾರ್‌ ಉದಾಸಿ
11 ದಾವಣಗೆರೆ- ಜಿಎಂ ಸಿದ್ದೇಶ್
12 ಚಿತ್ರದುರ್ಗ- ಜನಾರ್ದನಸ್ವಾಮಿ
13 ಶಿವಮೊಗ್ಗ- ಬಿಎಸ್ ಯಡಿಯೂರಪ್ಪ
14 ದಕ್ಷಿಣ ಕನ್ನಡ- ನಳಿನ್‌ ಕುಮಾರ್‌ ಕಟೀಲು
15 ಕೋಲಾರ- ಬೇತಮಂಗಲ ನಾರಾಯಣಸ್ವಾಮಿ
16 ಬೆಂಗಳೂರು ಗ್ರಾಮಾಂತರ- ಪಿ ಮುನಿರಾಜು
17 ಬೆಂಗಳೂರು ಸೆಂಟ್ರಲ್‌- ಪಿ ಸಿ ಮೋಹನ್‌
18 ಬೆಂಗಳೂರು ದಕ್ಷಿಣ- ಅನಂತಕುಮಾರ್‌
19 ಮೈಸೂರು- ಶೋಭಾ ಕರಂದ್ಲಾಜೆ
20 ಚಾಮರಾಜನಗರ- ಎಆರ್‌ ಕೃಷ್ಣಮೂರ್ತಿ

ಇಬ್ಬರ ಹೆಸರುಳ್ಳ ಕ್ಷೇತ್ರಗಳು:
1 ಬೀದರ್‌- ಸೂರ್ಯಕಾಂತ್‌ ನಾಗಮಾರಪಲ್ಲಿ ಅಥವಾ ರಘುನಾಥ್‌ ಮಲ್ಕಾಪುರೆ
2 ರಾಯಚೂರು- ಶಿವನಗೌಡ ನಾಯಕ್‌ ಅಥವಾ ರಾಜೂಗೌಡ
3 ಬಳ್ಳಾರಿ- ಎಂಎಸ್ ಸೋಮಲಿಂಗಪ್ಪ ಅಥವಾ ಬಿಜೆಪಿಗೆ ವಾಪಸಾದಲ್ಲಿ ಬಿ ಶ್ರೀರಾಮುಲು
4 ಕೊಪ್ಪಳ- ಕರಡಿ ಸಂಗಣ್ಣ ಅಥವಾ ಶಿವರಾಮಗೌಡ
5 ತುಮಕೂರು- ಜಿಎಸ್‌ ಬಸವರಾಜು ಅಥವಾ ಸೊಗಡು ಶಿವಣ್ಣ
6 ಚಿಕ್ಕಬಳ್ಳಾಪುರ- ಬಿಎನ್ ಬಚ್ಚೇಗೌಡ ಅಥವಾ ವೈ ನಾರಾಯಣಸ್ವಾಮಿ
7 ಹಾಸನ- ಬಿಬಿ ಶಿವಪ್ಪ ಅಥವಾ ಬೇರೆ ಯಾರಾದರೂ
8 ಮಂಡ್ಯ- ಅಭ್ಯರ್ಥಿಗಳೇ ಇಲ್ಲ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+