ರಾಜ್ಯದಲ್ಲಿ ಭ್ರಷ್ಟಾಚಾರ, ಬರಗಾಲ, ನಿರುದ್ಯೋಗ, ಅರಾಜಕತೆ ತಾಂಡವವಾಡುತ್ತಿದೆ: ಬಿಜೆಪಿ ಕಿಡಿ
ಬೆಂಗಳೂರು, ಅಕ್ಟೋಬರ್ 21: ಸಿಎಂ ಸಿದ್ದರಾಮಯ್ಯ ಅವರ ಕೈಯಲ್ಲಿ ಚಕ್ಕಡಿ, ಡಿಸಿಎಂ ಡಿಕೆ ಶಿವಕುಮಾರ್ ಅವರ ಕೈಯಲ್ಲಿ ಬಾರ್ಕೋಲು, ಇದು ರಾಜ್ಯದ ನಾಲ್ಕೂವರೆ ತಿಂಗಳ ಕಾಂಗ್ರೆಸ್ ಸರ್ಕಾರದ ಗಾಡಿ ಸಾಗುತ್ತಿರುವ ಪರಿ. ನಾಯಕರ ವೈಯುಕ್ತಿಕ ಪ್ರತಿಷ್ಠೆ, ಬಣಗಳ ಮೇಲಾಟ, ಒಣ ದರ್ಪ, ನಾನೇ ಸರಿ ಎಂಬ ಅಹಂಕಾರದಿಂದ ಅಕ್ಷರಶಃ ನಲುಗುತ್ತಿರುವುದು ಮಾತ್ರ ಕರ್ನಾಟಕದ ಮಹಾಜನತೆ ಎಂದು ಬಿಜೆಪಿ ಕಿಡಿಕಾರಿದೆ.
ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಸರ್ಕಾರ ಆರಂಭವಾದ ದಿನದಿಂದಲೂ ಒಂದಲ್ಲಾ ಒಂದು ರೀತಿ ಕಿತ್ತಾಟ ನಡೆಸುತ್ತಲೇ ರಾಜ್ಯದ ಆಡಳಿತವನ್ನು ಹಳ್ಳ ಹಿಡಿಸಿಯಾಗಿದೆ. ರಾಜ್ಯದಲ್ಲಿ ಭ್ರಷ್ಟಾಚಾರ, ಬರಗಾಲ, ನಿರುದ್ಯೋಗ, ಅರಾಜಕತೆ ತಾಂಡವವಾಡುತ್ತಿದೆ. ಕಾವೇರಿ ವಿವಾದ ಸೇರಿದಂತೆ ರಾಜ್ಯದ ಅಸ್ಮಿತೆಗೆ ಧಕ್ಕೆ ತರುವ ಎಲ್ಲಾ ವಿಷಯಗಳಲ್ಲಿಯೂ ಕಾಂಗ್ರೆಸ್ ಮುಖಂಡರು ಒಳಜಗಳದಲ್ಲಿ ನಿರತರಾಗಿದ್ದರೇ ಹೊರತು, ರಾಜ್ಯದ ಹಿತ ಕಾಪಾಡಲಿಲ್ಲ. ಅಸಲಿಗೆ ಕಾಂಗ್ರೆಸ್‌ನ ಸಿಎಂ ಮತ್ತು ಡಿಸಿಎಂ ಬಣ ಒಗ್ಗಟ್ಟಾಗಿದ್ದು ರಾಜ್ಯವನ್ನು ಲೂಟಿ ಹೊಡೆಯುವ ವಿಷಯದಲ್ಲಿ ಮಾತ್ರ!!

ಸಿಎಂ ಮತ್ತು ಡಿಸಿಎಂ ಬಣ ರಾಜ್ಯವನ್ನು ಹೈಕಮಾಂಡ್‌ನ #ATM ಆಗಿ ಮಾಡುವಲ್ಲಿ ತೋರುತ್ತಿರುವ ಒಗ್ಗಟ್ಟನ್ನು ರಾಜ್ಯದ ಅಭಿವೃದ್ಧಿಯ ಬಗ್ಗೆ ಕಡೆಗೆ ಎಳ್ಳಷ್ಟು ತೋರುತ್ತಿಲ್ಲ. ಯಾರು ಹೆಚ್ಚು ಕಲೆಕ್ಷನ್ ಮಾಡುತ್ತಾರೆ ಎಂಬ ಪೈಪೋಟಿಗೆ ಬಿದ್ದಿರುವುದಕ್ಕೆ ಕಳೆದ ವಾರ ಅಕ್ರಮವಾಗಿ ದೊರೆತ ₹100 ಕೋಟಿಗೂ ಅಧಿಕ ಹಣವೇ ಪುರಾವೆ.
ದಿನ ಕಳೆದಂತೆ ಸಿಎಂ ಸಿದ್ದರಾಮಯ್ಯರವರ ಕುರ್ಚಿಯ ವ್ಯಾಲಿಡಿಟಿ ಸಹ ಕಡಿಮೆ ಆಗುತ್ತಿದೆ. ಹೀಗಾಗಿ ಎಷ್ಟು ದಿನ ಇರುತ್ತಾರೋ ಅಷ್ಟು ದಿನ ಭರಫೂರ ಲೂಟಿಗೆ ಅಖಾಡ ಸಿದ್ಧವಾದಂತಿದೆ. ಇದಕ್ಕೆ ಪ್ರಮುಖ ಸಾಕ್ಷಿ ಐಟಿ ದಾಳಿಗೆ ಒಳಗಾದ ಗುತ್ತಿಗೆದಾರ ಅಂಬಿಕಾಪತಿ ಜೊತೆ, ಸಿಎಂ ಸಿದ್ದರಾಮಯ್ಯರವರ ಆಪ್ತ ಸಚಿವ ಬೈರತಿ ಸುರೇಶ್ ಹೊಂದಿರುವ ಗಳಸ್ಯ-ಕಂಠಸ್ಯ ಗೆಳೆತನ ಎಂದು ಬಿಜೆಪಿ ಹೇಳಿದೆ.
ಸಿದ್ದರಾಮಯ್ಯರವರ ಸಿಎಂ ಕುರ್ಚಿಗೆ ಮಗ್ಗುಲ ಮುಳ್ಳಾಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಹಣಿಯಲು ಸಿಎಂ ಸಿದ್ದರಾಮಯ್ಯರವರ ಬಣ ಸರ್ಕಾರದ ಆರಂಭದಿಂದಲೇ ಪ್ರಯತ್ನ ಪಟ್ಟಿತ್ತು. ಆದರೆ ಡಿ.ಕೆ. ಶಿವಕುಮಾರ್ ಅವರ ಸಹೋದರ ಡಿ ಕೆ ಸುರೇಶ್ ಅವರ ಗೂಂಡಾಗಿರಿಗೆ ಬೆದರಿ ಸುಮ್ಮನಾಗಿತ್ತು.ಆದರೆ ಈಗ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ಮೇಲಿನ ತನಿಖೆಗೆ ತಂದಿದ್ದ ತಡೆಯಾಜ್ಞೆಯನ್ನು ನ್ಯಾಯಾಲಯ ಹಿಂಪಡೆದುದ್ದಕ್ಕೆ ಅತಿ ಹೆಚ್ಚು ಸಂಭ್ರಮಿಸಿದವರೆಂದರೆ, ಅದು ಸಿಎಂ ಸಿದ್ದರಾಮಯ್ಯ ಮತ್ತವರ ಪಟಾಲಂ.

ಈ ಹಿಂದೆ 2017 ರಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಮೇಲೆ ಐಟಿ ದಾಳಿ ನಡೆದು ಅಪಾರ ಪ್ರಮಾಣದ ಹಣ ದೊರೆತಾಗ, ನನ್ನ ಮಗನ ಮೇಲೆ ಐಟಿ ದಾಳಿ ನಡೆದುದ್ದಕ್ಕೆ ನೇರ ಕಾರಣ ಸಿದ್ದರಾಮಯ್ಯರವರು ಎಂದು ಡಿ.ಕೆ.ಶಿವಕುಮಾರ್ ಅವರ ತಾಯಿಯವರಾದ ಗೌರಮ್ಮರವರು ಬಹಿರಂಗವಾಗಿಯೇ ಆರೋಪಿಸಿದ್ದರು.
ಪ್ರಸ್ತುತ ಬೂದಿ ಮುಚ್ಚಿದ ಕೆಂಡದಂತಿರುವ ಗೌರಮ್ಮರವರ ಆ ಆರೋಪ ಮತ್ತೊಮ್ಮೆ ಬೆಂಕಿಯಾಗಿ ಹೊತ್ತಿಕೊಂಡು ಸರ್ಕಾರವನ್ನೇ ಬಲಿ ಪಡೆದರೂ ಸಹ ಅಚ್ಚರಿಯಿಲ್ಲ!!ಲೋಕಸಭಾ ಚುನಾವಣೆ ಬಳಿಕ ಸಿಎಂ ಸಿದ್ದರಾಮಯ್ಯರವರನ್ನು ಶತಾಯಗತಾಯ ಕುರ್ಚಿಯಿಂದ ಇಳಿಸಲು ಪಣ ತೊಟ್ಟಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಸೈಲೆಂಟಾಗಿ ಇಲಾಖೆಯ ಪ್ರವಾಸದ ನೆಪದಲ್ಲಿ ಸಿದ್ದರಾಮಯ್ಯ ಬಣದ ಶಾಸಕರನ್ನು ಸೆಳೆಯುವ ಕೆಲಸಕ್ಕೆ ಮುಂದಾಗಿದ್ದಾರೆ. ಇದನ್ನು ಗ್ರಹಿಸಿಯೇ ಸಿಎಂ ಸಿದ್ದರಾಮಯ್ಯರವರು, ಬೆಳಗಾವಿಗೆ ಹೋಗಿದ್ದ ಡಿ.ಕೆ. ಶಿವಕುಮಾರ್ ಅವರನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ತಮ್ಮ ಬಣದ ಶಾಸಕರು ಹೋಗಬಾರದೆಂದು ಕಟ್ಟಪ್ಪಣೆ ಹೊರಡಿಸಿದ್ದರು.
“ಕೈ” ಸರ್ಕಾರದ ಆರಂಭದಲ್ಲಿ ನಮ್ಮ ಟಗರೇ ಮುಂದಿನ ಸಿಎಂ ಎಂದು ಅಬ್ಬರಿಸಿದ್ದ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಈಗ ಡಿ.ಕೆ.ಶಿವಕುಮಾರ್ ಸಿಎಂ ಆದರೆ ಒಳ್ಳೆಯದು ಎಂದು ಹೇಳಿರುವುದು ಡಿ.ಕೆ. ಶಿವಕುಮಾರ್ ಪಕ್ಷದೊಳಗೆ ನಡೆಸುತ್ತಿರುವ “ಅಂದರ್ ಕೀ ಆಪರೇಷನ್” ನ ಸಣ್ಣ ಝಲಕ್.
— BJP Karnataka (@BJP4Karnataka) October 21, 2023
ಇಷ್ಟು ದಿನ ಸಂಪೂರ್ಣ ಹಳ್ಳ ಹಿಡಿದಿರುವ ಕರ್ನಾಟಕದ ಆಡಳಿತ…
ಕೈ" ಸರ್ಕಾರದ ಆರಂಭದಲ್ಲಿ ನಮ್ಮ ಟಗರೇ ಮುಂದಿನ ಸಿಎಂ ಎಂದು ಅಬ್ಬರಿಸಿದ್ದ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಈಗ ಡಿ.ಕೆ.ಶಿವಕುಮಾರ್ ಸಿಎಂ ಆದರೆ ಒಳ್ಳೆಯದು ಎಂದು ಹೇಳಿರುವುದು ಡಿ.ಕೆ. ಶಿವಕುಮಾರ್ ಪಕ್ಷದೊಳಗೆ ನಡೆಸುತ್ತಿರುವ "ಅಂದರ್ ಕೀ ಆಪರೇಷನ್" ನ ಸಣ್ಣ ಝಲಕ್.
ಇಷ್ಟು ದಿನ ಸಂಪೂರ್ಣ ಹಳ್ಳ ಹಿಡಿದಿರುವ ಕರ್ನಾಟಕದ ಆಡಳಿತ ಇನ್ನು ಮುಂದೆ ಸಹ ಟೇಕಾಫ್ ಆಗುವುದು ಡೌಟ್. ಬಣಗಳ ಹೊಯ್ದಾಟ, ಬಡಿದಾಟ ಮತ್ತಷ್ಟು ಜೋರಾಗಲಿದೆ. ಮತ ಹಾಕಿದ ಕನ್ನಡಿಗರು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುವುದು ಖಚಿತ-ನಿಶ್ಚಿತ-ಖಂಡಿತ ಎಂದು ಬಿಜೆಪಿ ಕಿಡಿಕಾರಿದೆ.











Click it and Unblock the Notifications