ವೋಟ್ ಕೊಟ್ರೆ ಮಾತ್ರ ಕೆಲಸ ಮಾಡ್ತೀವಿ ಇಲ್ಲ ಅಂದರೆ ಕೆಲಸ ಮಾಡೋದೇ ಇಲ್ಲ
ಬೆಂಗಳೂರು, ಅಕ್ಟೋಬರ್ 11: ವೋಟ್ ಕೊಟ್ರೆ ಮಾತ್ರ ಕೆಲಸ ಮಾಡ್ತೀವಿ ಇಲ್ಲ ಅಂದರೆ ಕೆಲಸ ಮಾಡೋದೇ ಇಲ್ಲ ಎಂದು ಮಾಗಡಿಯ ಕಾಂಗ್ರೆಸ್ ಶಾಸಕ ಬಾಲಕೃಷ್ಣ ಅವರು ಕಾಂಗ್ರೆಸ್ಸಿನ ಅಂತರಾಳದ ಧಿಮಾಕು, ದರ್ಪವನ್ನು ತೋರಿದ್ದಾರೆ ಎಂದು ರಾಜ್ಯ ಬಿಜೆಪಿ ಕಿಡಿಕಾರಿದೆ.
ಈ ಕುರಿತು ರಾಜ್ಯ ಬಿಜೆಟ್ ಟ್ವೀಟ್ ನಲ್ಲಿ ಮಾಗಡಿ ಶಾಸಕ ಬಾಲಕೃಷ್ಣ ಅವರು ಹೇಳಿರುವ ವಿಡಿಯೋವನ್ನ ಹಂಚಿಕೊಂಡಿದ್ದು, ಕಿಡಿಕಾರಿದೆ. ರಾಜ್ಯದ ಜನತೆ ಈಗಾಗಲೇ ಕಾಂಗ್ರೆಸ್ ಗೆ 135 ಸ್ಥಾನಕೊಟ್ಟು ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಪಡುತ್ತಿರುವುದು ಅಲ್ಲದೆ, ಸಿದ್ದರಾಮಯ್ಯರವರ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಜನರಿಗೆ ಗ್ಯಾರಂಟಿಗಳು ಸರಿಯಾಗಿ ಸಿಗುತ್ತಿಲ್ಲ, ಅಭಿವೃದ್ಧಿಯೂ ಇಲ್ಲ. ನೆಮ್ಮದಿಯ ಬದುಕು ಅಂತೂ ಇಲ್ಲವೇ ಇಲ್ಲ..! ಎಂದು ರಾಜ್ಯ ಬಿಜೆಪಿ ವಾಗ್ದಾಳಿ ನಡೆಸಿದೆ.

ಇನ್ನೊಂದು ಟ್ವೀಟ್ ಮಾಡಿರುವ ಬಿಜೆಪಿ, ಬರದ ಬೇಗೆಯಲ್ಲಿ ಬಸವಳಿಯುತ್ತಿದ್ದ ರಾಜ್ಯದ ಜನತೆಗೆ, ಈಗ ಗಾಯದ ಮೇಲೆ ಉಪ್ಪು ಸುರಿದಂತೆ ಲೋಡ್ ಶೆಡ್ಡಿಂಗ್ ಹೊರೆಯನ್ನು ಹೊರೆಸಿದೆ. ಕಾಂಗ್ರೆಸ್ ಸರ್ಕಾರ ಗ್ರಾಮೀಣ ಪ್ರದೇಶದಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ದಿನಕ್ಕೆ ಒಂದು ಗಂಟೆ ಸಹ ಮೂರು ಫೇಸ್ ವಿದ್ಯುತ್ ಪೂರೈಸದೆ, ರೈತರ ಹೊಲದಲ್ಲಿನ ಬೆಳೆಗಳು ಒಣಗುತ್ತಿವೆ. ಅತ್ತ ಮೂರು ಫೇಸ್ ವಿದ್ಯುತ್ ಇಲ್ಲ, ಇತ್ತ ಗೃಹ ಬಳಕೆಗೆ ಸಿಂಗಲ್ ಫೇಸ್ ವಿದ್ಯುತ್ ಸಹ ಇಲ್ಲ. ಕರ್ನಾಟಕ ಈ ರೀತಿ ಕತ್ತಲಲ್ಲಿ ಮುಳುಗಿರುವುದು ರಾಜ್ಯದ ಇತಿಹಾಸದಲ್ಲಿಯೇ ಇದೇ ಮೊದಲು ಎಂದು ಹೇಳಿದರು.
ವೋಟ್ ಕೊಟ್ರೆ ಮಾತ್ರ ಕೆಲಸ ಮಾಡ್ತೀವಿ ಇಲ್ಲ ಅಂದರೆ ಕೆಲಸ ಮಾಡೋದೇ ಇಲ್ಲ ಎಂದು ಮಾಗಡಿಯ ಕಾಂಗ್ರೆಸ್ ಶಾಸಕ ಬಾಲಕೃಷ್ಣ ಅವರು ಕಾಂಗ್ರೆಸ್ಸಿನ ಅಂತರಾಳದ ಧಿಮಾಕು, ದರ್ಪವನ್ನು ತೋರಿದ್ದಾರೆ.
— BJP Karnataka (@BJP4Karnataka) October 11, 2023
ರಾಜ್ಯದ ಜನತೆ ಈಗಾಗಲೇ @INCKarnataka ಕ್ಕೆ 135 ಸ್ಥಾನಕೊಟ್ಟು ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಪಡುತ್ತಿರುವುದು ಅಲ್ಲದೆ, ಸಿದ್ದರಾಮಯ್ಯರವರ… pic.twitter.com/N3M7HZSegZ
ಶಾಸಕ ಬಾಲ ಕೃಷ್ಣ ಹೇಳಿದ್ದೇನು?
ಇನ್ನೂ ಲೋಕಸಭಾ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್‍ಗೆ ಅನುಕೂಲವಾಗಲಿದೆ. ಕಾಂಗ್ರೆಸ್ ಮತಗಳು ವಿಭಜನೆ ಆಗಲ್ಲ. ರಾಜ್ಯದಲ್ಲಿ ಮುಂದಿನ ಐದು ವರ್ಷ ನಮ್ಮ ಸರ್ಕಾರ ಇರುತ್ತೆ. ಬೂತ್ ಲೆಕ್ಕಾಚಾರದ ಮೇಲೆ ಎಲೆಕ್ಷನ್ ಆಗುತ್ತೆ. ಯಾವ್ ಬೂತ್ ನಲ್ಲಿ ಹೆಚ್ಚು ನಮಗೆ ವೋಟ್ ಬರುತ್ತೋ ಅಲ್ಲಿ ಕೆಲಸ ಮಾಡ್ತೀವಿ. ವೋಟ್ ಹಾಕದಿದ್ರೆ ಅಂತಹ ಬೂತ್ ಗಳ ಬಗ್ಗೆ ಆಲೋಚನೆ ಮಾಡ್ತೀವಿ. ಹಾಗಾಗಿ ಇದನ್ನ ಜನ ಯೋಚನೆ ಮಾಡಬೇಕು ಎಂದು ಶಾಸಕರು ಹೇಳಿದ್ದಾರೆ
2024 ರ ಲೋಕಸಭಾ ಚುನಾವಣೆ ಹಿನ್ನೆಲೆ ಮಾಗಡಿ ಶಾಸಕ ಬಾಲಕೃಷ್ಣ ಅವರು ಬಿಜೆಪಿ - ಜೆಡಿಎಸ್ ಮೈತ್ರಿ ವಿಚಾರವಾಗಿ ಮಾತನಾಡಿದ್ದು, ಮತದಾರರನ್ನ ಕುರಿತು ಬಾಲಕೃಷ್ಣ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಕಾಂಗ್ರೆಸ್ ಗೆ ಅನುಕೂಲ ಆಗಲಿದೆ, ನಮಗೆ ಇದರಿಂದ ಯಾವುದೇ ತೊಂದರೆ ಇಲ್ಲ. ನಮಗೆ ಈ ಮೈತ್ರಿಯಿಂದ ಸಮಸ್ಯೆ ಇಲ್ಲ, ಚನ್ನಪಟ್ಟಣದಲ್ಲಿ ನಾವು 3 ನೇ ಸ್ಥಾನದಲ್ಲಿದ್ದೇವೆ. ಆದರೆ ಲೋಕಸಭೆಗೆ 5 ಸಾವಿರ ವ್ಯತ್ಯಾಸ ಆಗಬಹುದು ಅಷ್ಟೇ ಎಂದು ಹೇಳಿದ್ದಾರೆ.












Click it and Unblock the Notifications