ಕುಮಾರಸ್ವಾಮಿ-ಯಡಿಯೂರಪ್ಪ ಕ್ಷಮಾಪಣೆ ಕಿತ್ತಾಟ, ಕಲಾಪ ಬಲಿ

ಬೆಳಗಾವಿ, ಡಿಸೆಂಬರ್ 21: ಬೆಳಗಾವಿ ಅಧಿವೇಶನ ಇಂದಿಗೆ ಮುಕ್ತಾಯವಾಗಿದೆ. ಕೊನೆಯ ಎರಡು ದಿನಗಳ ಕೇವಲ ಪ್ರತಿಭಟನೆ, ಆರೋಪ ಪ್ರತ್ಯಾರೋಪಗಳಲ್ಲಿಯೇ ಕಳೆದಿದೆ. ಕುಮಾರಸ್ವಾಮಿ-ಬಿಎಸ್‌ವೈ ಕೊನೆಯ ಎರಡು ದಿನಗಳು ಒಬ್ಬರಮೇಲೋಬ್ಬರು ಭಾರಿ ಟೀಕೆಗಳನ್ನೇ ಮಾಡಿಕೊಂಡಿದ್ದಾರೆ.

ಸಾಲಮನ್ನಾ ಬಗ್ಗೆ ಬಿಎಸ್‌ವೈ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, 'ರಾಷ್ಟ್ರೀಯ ಬ್ಯಾಂಕುಗಳಿಗೂ ಯಡಿಯೂರಪ್ಪ ಅವರಿಗೂ ಇರುವ ಸಂಬಂಧ ಎಂತದ್ದು ಎಂದು ಗೊತ್ತಿದೆ' ಎಂದು ಸಿಎಂ ಹೇಳಿದ್ದು ಬಿಜೆಪಿಯವರನ್ನು ಕೆರಳಿಸಿದೆ. ಅವರು ಕುಮಾರಸ್ವಾಮಿ ಕ್ಷಮೆ ಕೇಳುವಂತೆ ಪಟ್ಟು ಹಿಡಿದಿದ್ದಾರೆ.

ಕುಮಾರಸ್ವಾಮಿ ದುರಹಂಕಾರದಿಂದ ಮಾತನಾಡುತ್ತಾರೆ. ಅವರಿಗೆ ದುರಹಂಕಾರ ಇಳಿದಿಲ್ಲ ಎಂದು ಬಿಎಸ್‌ವೈ ಸಹ ಕಠಿಣ ಶಬ್ದಗಳಲ್ಲಿಯೇ ಕುಮಾರಸ್ವಾಮಿ ವಿರುದ್ಧ ಕೂಗಾಡಿದ್ದಾರೆ. ಇಂದು ಕೊನೆ ದಿನ ಸಹ ಕುಮಾರಸ್ವಾಮಿ ಕ್ಷಮಾಪಣೆ ಕೇಳುವ ಅವಕಾಶ ಇಲ್ಲ ಆದರೆ ಅವರು ಅಹಂಕಾರ ಮೆರೆದಿದ್ದಾರೆ ಎಂದು ಯಡಿಯೂರಪ್ಪ ದೂರಿದ್ದಾರೆ.

BJP demanding apology from Kumaraswamy

ನಾನು ಸುಳ್ಳು ಹೇಳಿಲ್ಲ ಹಾಗಾಗಿ ನಾನು ಯಡಿಯೂರಪ್ಪ ಅವರನ್ನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ನಾನು ಕ್ಷಮೆ ಕೇಳುವುದಿಲ್ಲ ಎಂದು ಕುಮಾರಸ್ವಾಮಿ ಪಟ್ಟು ಹಿಡಿದಿದ್ದಾರೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲಮನ್ನಾ ಮಾಡಲು ಬಿಜೆಪಿ ನಾಯಕರೇ ಅಡ್ಡಿಪಡಿಸುತ್ತಿದ್ದಾರೆ ಇದು ಸತ್ಯ ಎಂದು ಅವರು ಪುನರ್‌ ಉಚ್ಛರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+