Priyank Kharge: ಬಿಜೆಪಿಯವರು ತಲ್ವಾರ್‌ನಲ್ಲಿ ಕೇಕ್ ಕತ್ತರಿಸುತ್ತಾರೆ- ಪ್ರಿಯಾಂಕ್ ಖರ್ಗೆ ವೀಡಿಯೋ ಹಂಚಿಕೆ
ಬೆಂಗಳೂರು ಡಿಸೆಂಬರ್ 30: ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿರುವ ಬಿಜೆಪಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು ಕೊಟ್ಟಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿರುವ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ. ಬಿಜೆಪಿಯ ಮಾಜಿ ಶಾಸಕ ರಾಜ್ ಕುಮಾರ್ ಪಾಟೀಲ್ ತೇಲ್ಕರ್ ಅವರ ಸಹೋದರ ಜಿಬಿ ಪಾಟೀಲ್ ಅವರು ತಲ್ವಾರ್‌ನಿಂದ ಕೇಕ್ ಕತ್ತರಿಸಿದ ವೀಡಿಯೋ ಹಂಚಿಕೊಂಡ ಖರ್ಗೆ ಅವರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಬಿಜೆಪಿಯ ಮಾಜಿ ಶಾಸಕ ರಾಜ್ ಕುಮಾರ್ ಪಾಟೀಲ್ ತೇಲ್ಕೂರ್ ಅವರ ಸಹೋದರ ಜಿಬಿ ಪಾಟೀಲ್ ಅವರು ತಲ್ವಾರ್‌ನಿಂದ ಕೇಕ್ ಕತ್ತರಿಸಿ ವಜೃಂಭಣೆ ನಡೆಸಿದ್ದಾರೆ. ಇದು ''ಕಲಬುರಗಿ ರಿಪಬ್ಲಿಕ್'' ಮಾಡುವ ಪ್ರಯತ್ನವೇ? ಬಿಜೆಪಿಗರ ಪ್ರಚಾರ ಇದು ಗೂಂಡಾಗಿರಿಯ ವ್ಯಾಪ್ತಿಗೆ ಬರುವುದಿಲ್ಲವೇ? ಎಂದು ಗ್ರಾಮೀಣಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಶ್ನೆ ಮಾಡಿದ್ದಾರೆ.

ಅಲ್ಲದೆ, 'ಕಲಬುರಗಿ ರಿಪಬ್ಲಿಕ್ ಎನ್ನುತ್ತಿದ್ದ ಬೆಂಗಳೂರಿನ ಬಿಜೆಪಿ ನಾಯಕರು ತಮ್ಮದೇ ಪಕ್ಷದವರು ಈ ಕುಕೃತ್ಯಕ್ಕೆ ಯಾವ ಸಮಜಾಯಿಸಿ ನೀಡುತ್ತಾರೆ? ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿತ್ರವನ್ನು ಕಾಲಿನ ಸಮದಲ್ಲಿಟ್ಟು ಅಂಬೇಡ್ಕರ್ ವಿರೋಧಿ ಅಮಿತ್ ಶಾ ಅವರನ್ನು ಮೆಚ್ಚಿಸುವ ಪ್ರಯತ್ನವೇ @BJP4Karnataka?' ಎಂದು ಕೇಳಿದ್ದಾರೆ.
'ಡಾ ಅಂಬೇಡ್ಕರ್ ಅವರ ಫೋಟೋ ಕಾಲ ಕೆಳಗಿಟ್ಟುಕೊಂಡು ತಲ್ವಾರ್ ಹಿಡಿದು ಕೇಕೆ ಹಾಕುತ್ತಿರುವ ಬಿಜೆಪಿಗರು ಗೂಂಡಾಗಿರಿ ಪ್ರದರ್ಶಿಸಿರುವುದಲ್ಲದೆ ಬಾಬಾ ಸಾಹೇಬರ ಘನತೆಗೆ ಚ್ಯುತಿ ತಂದಿದ್ದಾರೆ. ಈ ಕೃತ್ಯಕ್ಕೆ ಬಿಜೆಪಿಯವರು ಸಮರ್ಥನೆ ಮಾಡಿಕೊಳ್ಳುತ್ತಾರಾ ಅಥವಾ ಇಂತಹ ಘೋರ ಅಪರಾಧ ಮಾಡಿದವರ ವಿರುದ್ಧ ಕ್ರಮ ಜರುಗಿಸುತ್ತಾರಾ?' ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಸಿದ್ದಾರೆ.
'ಇದಕ್ಕಾಗಿ ಒಂದು ಸತ್ಯ ಶೋಧನ ಸಮಿತಿ ರಚಿಸಿಕೊಂಡು, ನಕಲಿ ಅಂಬೇಡ್ಕರ್ ವಾದಿಗಳಾದ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಕಯರ ಜೊತೆಗೆ ಯಾವಾಗ ಕಲಬುರ್ಗಿಗೆ ಬರುತ್ತೀರಿ @BYVijayendra ಅವರೇ?' ಎಂದು ವ್ಯಂಗ್ಯವಾಗಿ ಪ್ರಿಯಾಂಕ್ ಖರ್ಗೆ ಅವರು ಬಿವೈ ವಿಜಯೇಂದ್ರ ಅವರಿಗೆ ಪ್ರಶ್ನೆ ಮಾಡಿದ್ದಾರೆ.
ಪ್ರತಿಪಕ್ಷ ಬಿಜೆಪಿಯವರು ತಮ್ಮ ವಿರುದ್ಧ ಏನೇ ಹಾರಾಟ, ಚೀರಾಟ ಮಾಡಿ ಬಟ್ಟೆ ಹರಿದುಕೊಂಡರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಯಾರಿಗೇ ದೂರು ನೀಡಿದರೂ ಹೆದರುವ ಪ್ರಶ್ನೆಯೇ ಇಲ್ಲ' ಎಂದು ಗ್ರಾಮೀಣಭಿವೇದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಸೈದ್ಧಾಂತಿಕವಾಗಿ ಬಿಜೆಪಿಯವರನ್ನು ವಿರೋಧಿಸುತ್ತೇವೆ. ಜೀವ ವಿರೋಧಿ ಮನುಸ್ಕೃತಿ, ಆರೆಸೆಸ್ಸ್ ಚಿಂತನೆಗಳಿಗೆ ವಿರುದ್ಧ ಇದ್ದೇವೆ. ಆ ಕಾರಣಕ್ಕೆ ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದು ಇದಕ್ಕೆಲ್ಲ ನಾವು ಜಗ್ಗವುದಿಲ್ಲ. ಅವರು ಎಷ್ಟೇ ಬೆದರಿಕೆ ಹಾಕಿದರೂ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.












Click it and Unblock the Notifications