ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ, ಕಾಂಗ್ರೆಸ್ ನಡುವೆ ಏನಿದು 'ಬ್ಲೂಫಿಲಂ ಮೋರ್ಚಾ' ಕಿತ್ತಾಟ!

|
Google Oneindia Kannada News

ಪ್ರಭಾವೀ ಸಾಮಾಜಿಕ ಜಾಲತಾಣವನ್ನು ಉತ್ತಮವಾಗಿ ಬಳಸಿಕೊಳ್ಳುತ್ತಿರುವ ಬಿಜೆಪಿಗೆ ಕಾಂಗ್ರೆಸ್ ಕೂಡಾ ಸಡ್ಡು ಹೊಡೆಯಲಾರಂಭಿಸಿದೆ. ಎರಡು ರಾಷ್ಟ್ರೀಯ ಪಕ್ಷಗಳ ನಡುವಿನ ಟ್ವೀಟ್ ಸಮರ ಇತ್ತೀಚಿನ ದಿನಗಳಲ್ಲಿ ಜೋರಾಗಿ ನಡೆಯುತ್ತಿದೆ.

ಬಿಜೆಪಿಯಲ್ಲಿದ್ದು ಪಕ್ಷಕ್ಕೆ ಮುಜುಗರ ತರುವ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪನವರ ಕಟ್ಟಾ ವಿರೋಧಿ ಯತ್ನಾಳ್ ಅವರನ್ನು ಇಟ್ಟುಕೊಂಡು, ಕಾಂಗ್ರೆಸ್ಸಿನ ಸಾಮಾಜಿಕ ಜಾಲತಾಣ ಘಟಕ, ಬಿಜೆಪಿಯನ್ನು ಅಣಕವಾಡಿತ್ತು.

ಕಾಂಗ್ರೆಸ್ ಏಜೆಂಟ್ ಅನ್ನುವುದಕ್ಕೂ ಯತ್ನಾಳ್ ಆಡುತ್ತಿರುವುದಕ್ಕೂ ಸರೀ ಇದೆ..ಕಾಂಗ್ರೆಸ್ ಏಜೆಂಟ್ ಅನ್ನುವುದಕ್ಕೂ ಯತ್ನಾಳ್ ಆಡುತ್ತಿರುವುದಕ್ಕೂ ಸರೀ ಇದೆ..

ಇದಕ್ಕೆ ಸೂಕ್ತ ಉತ್ತರವನ್ನು ನೀಡಿರುವ ಬಿಜೆಪಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗಾದ ಹೀನಾಯ ಸೋಲನ್ನು ಉಲ್ಲೇಖಿಸಿ, ಕೈಪಕ್ಷವನ್ನು ಲೇವಡಿ ಮಾಡಿದೆ. ಇನ್ನು, ಕಾಂಗ್ರೆಸ್ ಪಕ್ಷ ಜಾರಕಿಹೊಳಿ ಪ್ರಕರಣವನ್ನು ಎಳೆದು ತಂದಿದೆ.

ಸಿಡಿ ಹಗರಣದಿಂದ ಮನನೊಂದ ರಮೇಶ್ ಜಾರಕಿಹೊಳಿ ಸಕ್ರಿಯ ರಾಜಕಾರಣದಿಂದ ದೂರ?ಸಿಡಿ ಹಗರಣದಿಂದ ಮನನೊಂದ ರಮೇಶ್ ಜಾರಕಿಹೊಳಿ ಸಕ್ರಿಯ ರಾಜಕಾರಣದಿಂದ ದೂರ?

ಬಿಜೆಪಿಯನ್ನು ಬ್ಲ್ಯಾಕ್ ಮೇಲೆ ಜನತಾ ಪಾರ್ಟಿ ಎಂದು ಅಣಕವಾಡಿರುವ ಕಾಂಗ್ರೆಸ್, ಆ ಪಕ್ಷದಲ್ಲಿ ಬ್ಲೂಫಿಲಂ ಮೋರ್ಚಾದ ಮೂಲಕ ಕಿತ್ತಾಟ ಆರಂಭವಾಗಿದೆ ಎಂದು ಟ್ವೀಟ್ ಮಾಡಿದೆ.

ಬ್ಲಾಕ್ಮೇಲ್ ಜನತಾ ಪಾರ್ಟಿಯಲ್ಲಿ ಬ್ಲೂಫಿಲಂ ಮೋರ್ಚಾ

ಕೆಪಿಸಿಸಿ ಮಾಡಿರುವ ಟ್ವೀಟ್ ಹೀಗಿದೆ, "ಯತ್ನಾಳ್ vs ಸಿಎಂ, ಯತ್ನಾಳ್ vs ಬೊಮ್ಮಾಯಿ, @mla_sudhakar vs ಆಯನೂರು, @BSYBJP vs @blsanthosh.. @BJP4Karnataka ಒಡೆದು ಛಿದ್ರವಾಗಿರುವ ಪಕ್ಷ ಯಾವುದೆಂದು ಸದನದಲ್ಲಿ ಜಗಜ್ಜಾಹೀರಾಗಿದೆ. ಬ್ಲಾಕ್ಮೇಲ್ ಜನತಾ ಪಾರ್ಟಿಯಲ್ಲಿ ಬ್ಲೂಫಿಲಂ ಮೋರ್ಚಾ ಮೂಲಕ ಒಬ್ಬರನ್ನೊಬ್ಬರು ಹಣಿಯಲು ಯತ್ನಿಸುವುದನ್ನೂ ಯತ್ನಾಳ್ ತಿಳಿಸಿದ್ದಾರೆ" ಇದು ಕೆಪಿಸಿಸಿ ಮಾಡಿರುವ ಟ್ವೀಟ್.

 ನಾವು ಒಗ್ಗಟ್ಟಾಗಿರುವುದರಿಂದಲೇ ನೀವು ಛಿದ್ರವಾಗಿರುವುದು

ನಾವು ಒಗ್ಗಟ್ಟಾಗಿರುವುದರಿಂದಲೇ ನೀವು ಛಿದ್ರವಾಗಿರುವುದು

ಕೆಪಿಸಿಸಿ ಟ್ವೀಟ್ ಗೆ ಬಿಜೆಪಿ ತಿರುಗೇಟು ನೀಡಿದ್ದು ಹೀಗೆ, "ನಾವು ಒಗ್ಗಟ್ಟಾಗಿರುವುದರಿಂದಲೇ ನೀವು ಛಿದ್ರವಾಗಿರುವುದು. ಕಾಂಗ್ರೆಸ್‌ ಸರ್ವನಾಶವಾಗುತ್ತಿರುವುದಕ್ಕೆ ಇಲ್ಲಿದೆ ಉದಾಹರಣೆ, √ ಲೋಕಸಭೆಯಲ್ಲಿ 27 ಕ್ಷೇತ್ರಗಳಲ್ಲಿ ಸೋಲು, √ ಉಪಚುನಾವಣೆಗಳಲ್ಲಿ ಸೋಲು, √ ಪರಿಷತ್‌ ಚುನಾವಣೆಯಲ್ಲಿ ಸೋಲು, ಕಾಂಗ್ರೆಸ್ ಕಳೆಯನ್ನು ಜನತೆ ಬುಡಸಮೇತ ಕಿತ್ತೆಸೆಯುತ್ತಿದ್ದಾರೆ" ಎಂದು ಬಿಜೆಪಿ ಪ್ರತಿಕ್ರಿಯೆ ನೀಡಿದೆ.

 ಪಿಎಂ ಕೇರ್ಸ್‌ನ ಹಣವಿಲ್ಲ, GST ತೆರಿಗೆ ಪಾಲಿಲ್ಲ

ಪಿಎಂ ಕೇರ್ಸ್‌ನ ಹಣವಿಲ್ಲ, GST ತೆರಿಗೆ ಪಾಲಿಲ್ಲ

ಇದಕ್ಕೆ ಮತ್ತೆ ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದ್ದು ಹೀಗೆ, "@BJP4Karnataka ನೀವು ಗೆಲ್ಲುವುದು, ನಾಯಿ ಮೊಲೆಯಲ್ಲಿ ಹಾಲಿರುವುದು ಎರೆಡೂ ಒಂದೇ ಎಂದು ರಾಜ್ಯದ ಜನತೆಗೆ ಅರಿವಾಗಿದೆ. 25 ಸಂಸದರಿದ್ದರೂ ರಾಜ್ಯಕ್ಕೆ ನೆರೆ ಪರಿಹಾರವಿಲ್ಲ, ಪಿಎಂ ಕೇರ್ಸ್‌ನ ಹಣವಿಲ್ಲ, GST ತೆರಿಗೆ ಪಾಲಿಲ್ಲ, 15ನೇ ಹಣಕಾಸು ಆಯೋಗದ ಅನುದಾನವಿಲ್ಲ. ಕೇಂದ್ರದೆದುರು ರಾಜ್ಯಕ್ಕಾಗಿ ಧ್ವನಿ ಎತ್ತುವ ತಾಕತ್ತಿಲ್ಲದ ಅಯೋಗ್ಯರು"ಎಂದು ಕಾಂಗ್ರೆಸ್ ದೂರಿದೆ.

Recommended Video

ಚಾಮುಂಡೇಶ್ವರಿ, ನಂಜುಡೇಶ್ವರನ ದರ್ಶನ ಪಡೆದ ಹೆಚ್ಡಿಕೆ | Oneindia Kannada
 ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರತ್ನಗಂಬಳಿ ಹಾಸಿ ಭ್ರಷ್ಟಾಚಾರಕ್ಕೆ ಅನುವು

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರತ್ನಗಂಬಳಿ ಹಾಸಿ ಭ್ರಷ್ಟಾಚಾರಕ್ಕೆ ಅನುವು

ಈ ಟ್ವೀಟ್ ಸರಣಿಯನ್ನು ಮತ್ತೆ ಮುಂದುವರಿಸಿದ ಬಿಜೆಪಿ ಮರು ಉತ್ತರ ಕೊಟ್ಟಿದ್ದು ಹೀಗೆ, "ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರತ್ನಗಂಬಳಿ ಹಾಸಿ ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಟ್ಟಿತ್ತು. ದೆಹಲಿಯ 1 ರೂಪಾಯಿ, ಹಳ್ಳಿಗಳಿಗೆ ತಲುಪುವ ವೇಳೆಗೆ 15 ಪೈಸೆ ಆಗುತ್ತದೆ ಎಂದು ರಾಜೀವ್‌ ಗಾಂಧಿ ಹೇಳಿದ್ದರು. 85 ಪೈಸೆ ಕಾಂಗ್ರೆಸ್‌ ಜೇಬಿನೊಳಗೆ ಹೋಗುತ್ತಿದ್ದ ಪರಿಣಾಮ ಕಾಂಗ್ರೆಸ್‌ ನಾಯಕರು ಇಂದು ಜಾಮೀನಿನ ಮೇಲೆ ತಿರುಗಾಡುತ್ತಿದ್ದಾರೆ"ಎಂದು ಬಿಜೆಪಿ ಪ್ರತಿಕ್ರಿಯೆ ನೀಡಿದೆ.

English summary
BJP And Congress (Karnataka Unit) Tweet Exchange Over Government Failure And Loksabha Election Result
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X