ಸಾರಿಗೆ ಸಿಬ್ಬಂದಿ ವಿಚಾರದಲ್ಲಿ ಕಾಂಗ್ರೆಸ್ & ಬಿಜೆಪಿ ಫುಲ್ ಫೈಟಿಂಗ್!
ಲೋಕಸಭೆ ಚುನಾವಣೆ ಸಮಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ತಿಕ್ಕಾಟ ಜೋರಾಗಿದ್ದು, ಕರ್ನಾಟಕದಲ್ಲಿ ಪರಸ್ಪರ ಕಿಚ್ಚು ಹೊತ್ತಿಕೊಂಡಿದೆ. ಅದ್ರಲ್ಲೂ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರದ ಯೋಜನೆಗಳ ವಿರುದ್ಧ ಬಿಜೆಪಿ ಮಾಡುತ್ತಿರುವ ಆರೋಪಕ್ಕೆ ಕಾಂಗ್ರೆಸ್ ಪ್ರತ್ಯುತ್ತರ ನೀಡುತ್ತಿದೆ. ಇದೇ ಸಮಯದಲ್ಲಿ ಸಾರಿಗೆ ಸಿಬ್ಬಂದಿ ವಿಚಾರದಲ್ಲೂ ಇಬ್ಬರ ನಡುವೆ ಹೊಸ ಕಿರಿಕ್ ಶುರುವಾಗಿದೆ.
ಸಾರಿಗೆ ಸಿಬ್ಬಂದಿ ಬಗ್ಗೆ ಬಿಜೆಪಿ ಮೊದಲು ಟ್ವೀಟ್ ಮಾಡಿ, 'ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಅದೆಷ್ಟು ಕುಲಗೆಟ್ಟು ಹೋಗಿದೆ ಎಂದರೆ, ಸಾರಿಗೆ ನೌಕರರು ಕೂಡ ನೆಮ್ಮದಿಯಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಮಜಾವಾದಿ @siddaramaiah ಅವರ #ಸ್ಲೀಪಿಂಗ್_ಸರ್ಕಾರ ಗಾಢ ನಿದ್ದೆಯಲ್ಲಿರುವುದರಿಂದ ಮೇಲಾಧಿಕಾರಿಗಳ ಕೈಗೆ ಅಡಳಿತ ಕೊಟ್ಟಿದೆ. ಪರಿಣಾಮ ಮಹಿಳೆಯರು, ವಿದ್ಯಾರ್ಥಿನಿಯರು, ದಲಿತರು, ಪೊಲೀಸರು, ನೌಕರರು ಯಾರಿಗೂ ರಕ್ಷಣೆಯೂ ಇಲ್ಲ, ಬದುಕುವುದಕ್ಕೂ ಬಿಡುತ್ತಿಲ್ಲ. ಸಾರಿಗೆ ಸಚಿವ @RLR_BTM ಅವರೇ, ದೇವಸ್ಥಾನದ ಹುಂಡಿ ಹಣ ಲೂಟಿ ಮಾಡುವುದರಲ್ಲೇ ಮುಳುಗಿ ಹೋಗಬೇಡಿ, ಸ್ವಲ್ಪ ಸಾರಿಗೆ ಇಲಾಖೆಯ ನೌಕರರ ಜೀವ ಉಳಿಸುವುದಕ್ಕಾದರೂ ಪ್ರಯತ್ನಿಸಿ!' ಎಂದಿತ್ತು. ಈಗ ಬಿಜೆಪಿಯ ಆರೋಪಕ್ಕೆ ಕಾಂಗ್ರೆಸ್ ಉತ್ತರ ನೀಡಿದೆ.

ಕಾಂಗ್ರೆಸ್ ನೀಡಿದ ಉತ್ತರ ಏನು?
ಬಿಜೆಪಿ ಆರೋಪಕ್ಕೆ ಉತ್ತರವನ್ನು ನೀಡಿರುವ ಕಾಂಗ್ರೆಸ್, 'Dear @BJP4Karnataka, ನಿಮ್ಮ ಆಡಳಿತದಲ್ಲಿ ವೇತನ ಸಿಗದೆ, ಸಂಸಾರ ನಡೆಸಲಾಗದೆ ಆತ್ಮಹತ್ಯೆ ಮಾಡಿಕೊಂಡ ಸಾರಿಗೆ ಸಿಬ್ಬಂದಿ ಲೆಕ್ಕವೆಷ್ಟು? ನಮ್ಮ ಸರ್ಕಾರ ಸಚಿವ @RLR_BTM ಅವರ ನೇತೃತ್ವದಲ್ಲಿ ಸಾರಿಗೆ ಸಿಬ್ಬಂದಿ ಮೇಲಾಧಿಕಾರಿಗಳ ಕಿರುಕುಳದಿಂದ ಮುಕ್ತರಾಗಿ ರಜೆ ಪಡೆಯಲು ಆನ್ಲೈನ್ ವ್ಯವಸ್ಥೆ ಮಾಡಿದೆ, ವಿಮೆ ಸೌಲಭ್ಯ, ಆರೋಗ್ಯ ತಪಾಸಣೆ, ಹೊಸ ಬಸ್ಸುಗಳ ಸೇರ್ಪಡೆ, ಹೊಸ ನೇಮಕಾತಿ, ಪಾರದರ್ಶಕ ವರ್ಗಾವಣೆ ವ್ಯವಸ್ಥೆ ಹಾಗೂ ಚಿಕಿತ್ಸೆಯ ಸೌಲಭ್ಯ ಮಾಡಿಕೊಟ್ಟು ಸಾರಿಗೆ ಸಿಬ್ಬಂದಿಯನ್ನು ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತಿದೆ ನಮ್ಮ ಸರ್ಕಾರ.'
ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಅದೆಷ್ಟು ಕುಲಗೆಟ್ಟು ಹೋಗಿದೆ ಎಂದರೆ, ಸಾರಿಗೆ ನೌಕರರು ಕೂಡ ನೆಮ್ಮದಿಯಾಗಿ ಕೆಲಸ ಮಾಡಲು ಸಾಧ್ಯವಿಲ್ಲ.
— BJP Karnataka (@BJP4Karnataka) March 24, 2024
ಮಜಾವಾದಿ @siddaramaiah ಅವರ #ಸ್ಲೀಪಿಂಗ್_ಸರ್ಕಾರ ಗಾಢ ನಿದ್ದೆಯಲ್ಲಿರುವುದರಿಂದ ಮೇಲಾಧಿಕಾರಿಗಳ ಕೈಗೆ ಅಡಳಿತ ಕೊಟ್ಟಿದೆ. ಪರಿಣಾಮ ಮಹಿಳೆಯರು, ವಿದ್ಯಾರ್ಥಿನಿಯರು, ದಲಿತರು, ಪೊಲೀಸರು, ನೌಕರರು ಯಾರಿಗೂ… pic.twitter.com/sMJUp91DjB
'ಬಸವರಾಜ ಹಾಗೂ ಮಹಿಳಾ ಸಿಬ್ಬಂದಿಯೋರ್ವರ ನಡುವಿನ ವೈಯುಕ್ತಿಕವಾದ ಕಿತ್ತಾಟದ ಕಾರಣ ಈ ಘಟನೆ ನಡೆದಿದೆ, ಸಾರಿಗೆ ಇಲಾಖೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಲಿದೆ. ಬಿಜೆಪಿ ತನ್ನ ನಕಲಿ ನಾಟಕಗಳನ್ನು ಬಿಟ್ಟು ತಮ್ಮ ಅಡಳಿತಾವಧಿಯಲ್ಲಿನ ವೈಫಲ್ಯಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ.' ಎಂದು ಬಿಜೆಪಿ ಆರೋಪಕ್ಕೆ ಉತ್ತರ ನೀಡಿದೆ ಕರ್ನಾಟಕ ಕಾಂಗ್ರೆಸ್.
Dear @BJP4Karnataka,
— Karnataka Congress (@INCKarnataka) March 25, 2024
ನಿಮ್ಮ ಆಡಳಿತದಲ್ಲಿ ವೇತನ ಸಿಗದೆ, ಸಂಸಾರ ನಡೆಸಲಾಗದೆ ಆತ್ಮಹತ್ಯೆ ಮಾಡಿಕೊಂಡ ಸಾರಿಗೆ ಸಿಬ್ಬಂದಿಯ ಲೆಕ್ಕವೆಷ್ಟು?
ನಮ್ಮ ಸರ್ಕಾರ ಸಚಿವ @RLR_BTM ಅವರ ನೇತೃತ್ವದಲ್ಲಿ
ಸಾರಿಗೆ ಸಿಬ್ಬಂದಿ ಮೇಲಾಧಿಕಾರಿಗಳ ಕಿರುಕುಳದಿಂದ ಮುಕ್ತರಾಗಿ ರಜೆ ಪಡೆಯಲು ಆನ್ಲೈನ್ ವ್ಯವಸ್ಥೆ ಮಾಡಿದೆ,
ವಿಮೆ ಸೌಲಭ್ಯ, ಆರೋಗ್ಯ ತಪಾಸಣೆ, ಹೊಸ… https://t.co/Cz9aHHGytl
ಚುನಾವಣೆ ಮುಗಿಯುವ ತನಕ ತಿಕ್ಕಾಟ?
ಹೀಗೆ ಬಿಜೆಪಿ ಮಾಡಿದ್ದ ಆರೋಪಕ್ಕೆ ಕರ್ನಾಟಕ ಕಾಂಗ್ರೆಸ್ ಈಗ ಉತ್ತರ ನೀಡಿದೆ. ಆದರೆ, ಈಗ ಕಾಂಗ್ರೆಸ್ ನೀಡಿರುವ ಹೇಳಿಕೆಗೆ ಬಿಜೆಪಿ ಮತ್ತೆ ಯಾವ ರೀತಿಯಲ್ಲಿ ರಿಯಾಕ್ಷನ್ ಅನ್ನು ಕೊಡಲಿದೆ? ಅನ್ನೋದನ್ನ ಕಾದು ನೋಡಬೇಕಿದೆ. ಈ ಮೂಲಕ ಲೋಕಸಭೆ ಚುನಾವಣೆ ಮುಗಿಯುವ ತನಕ ಭರ್ಜರಿ ಫೈಟಿಂಗ್ ನಿರೀಕ್ಷೆ ಮಾಡಲಾಗಿದೆ.












Click it and Unblock the Notifications