ರಾಜ್ಯದಲ್ಲಿ ಏಕಪಕ್ಷೀಯ ಫಲಿತಾಂಶ: ಬಿರುಸುಗೊಂಡ ರಾಜಕೀಯ
ಬೆಂಗಳೂರು, ಮೇ 23: ಲೋಕಸಭಾ ಚುನಾವಣೆ ಹೊರಬಿದ್ದಿದ್ದು, ರಾಜ್ಯದಲ್ಲಿ ಗದ್ದುಗೆ ಹಿಡಿದಿರುವ ಎರಡೂ ಪಕ್ಷಗಳನ್ನು ಚುನಾಣೆಯಲ್ಲಿ ಜನ ತಿರಸ್ಕರಿಸುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ.
ಚುನಾವಣೆ ಫಲಿತಾಂಶ ಚಿತ್ರಣ ದೊರಕುತ್ತಿದ್ದಂತೆ ರಾಜ್ಯದಲ್ಲಿ ರಾಜಕಾರಣ ಬಿರುಸುಗೊಂಡಿದ್ದು, ಸಿಎಂ ಕುಮಾರಸ್ವಾಮಿ ಅವರು ತಂದೆ ದೇವೇಗೌಡ ಅವರನ್ನು ಭೇಟಿ ಆಗಿದ್ದಾರೆ.
ಸ್ವತಃ ದೇವೇಗೌಡ ಅವರೇ ಇಂದಿನ ಚುನಾವಣೆಯಲ್ಲಿ ಸೋಲನ್ನುಂಡಿದ್ದಾರೆ. ಕುಮಾರಸ್ವಾಮಿ ಮಗ ನಿಖಿಲ್ ಕುಮಾರಸ್ವಾಮಿ ಸಹ ಸೋಲುಂಡಿದ್ದಾರೆ.

ಬಿಜೆಪಿಗೆ 24 ಕ್ಷೇತ್ರಗಳಲ್ಲಿ ಜಯದೊರೆತಿದೆ. ಈವರೆಗಿನ ಫಲಿತಾಂಶದ ಪ್ರಕಾರ ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರವೇ ಜೆಡಿಎಸ್ ಗೆ ಜಯದೊರೆತಿದೆ. ಜೆಡಿಎಸ್-ಕಾಂಗ್ರೆಸ್ ಪಕ್ಷವನ್ನು ರಾಜ್ಯದ ಜನರು ತಿರಸ್ಕರಿಸಿರುವುದು ಸ್ಪಷ್ಟವಾಗಿದೆ. ಹಾಗಾಗಿ ಮೈತ್ರಿ ಮುಂದುವರೆಸುವ ಬಗ್ಗೆ ಸ್ವತಃ ಕುಮಾರಸ್ವಾಮಿ ಅವರೇ ಅನುಮಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಹಾಗಾಗಿಯೇ ದೇವೇಗೌಡ ಅವರೊಂದಿಗೆ ಕುಮಾರಸ್ವಾಮಿ ಅವರು ಸುದೀರ್ಘ ಮಾತುಕತೆ ನಡೆದಿದ್ದು, ರಾಜ್ಯ ರಾಜಕಾರಣದ ಜೊತೆಗೆ ನಿಖಿಲ್ ಕುಮಾರಸ್ವಾಮಿ ರಾಜಕೀಯ ಭವಿಷ್ಯದ ಕುರಿತೂ ಸಹ ಚರ್ಚೆ ನಡೆಸುತ್ತಿದ್ದಾರೆ.











Click it and Unblock the Notifications