ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ

|
Google Oneindia Kannada News

ಬೆಂಗಳೂರು, ನವೆಂಬರ್ 19; ಕರ್ನಾಟಕ ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ಡಿಸೆಂಬರ್ 10ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 14 ರಂದು ಫಲಿತಾಂಶ ಪ್ರಕಟವಾಗಲಿದೆ.

ಬಿಜೆಪಿ ಶುಕ್ರವಾರ ರಾತ್ರಿ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಯುತ್ತಿದ್ದು, ರಾಜ್ಯದ ಆಡಳಿತ ಪಕ್ಷ ಬಿಜೆಪಿಗೆ ಚುನಾವಣೆ ಪ್ರತಿಷ್ಠೆಯಾಗಿದೆ.

ಪರಿಷತ್ ಚುನಾವಣೆ; ಬಿಜೆಪಿಗೆ 15 ಸೀಟು ಗುರಿ, 4 ತಂಡದಿಂದ ಯಾತ್ರೆ!ಪರಿಷತ್ ಚುನಾವಣೆ; ಬಿಜೆಪಿಗೆ 15 ಸೀಟು ಗುರಿ, 4 ತಂಡದಿಂದ ಯಾತ್ರೆ!

BJP Announces Candidates For Karnataka Legislative Council Elections

ಈಗಾಗಲೇ ಚುನಾವಣೆ ಅಧಿಸೂಚನೆ ಪ್ರಕಟವಾಗಿದ್ದು, ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ನವೆಂಬರ್ 23 ಕೊನೆ ದಿನ. ನವೆಂಬರ್ 24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನವೆಂಬರ್ 26 ನಾಮಪತ್ರ ವಾಪಸ್ ಪಡೆಯಲು ಕೊನೆ ದಿನ.

ಪರಿಷತ್ ಚುನಾವಣೆ; ಜೆಡಿಎಸ್ ಹೊಸ ಕಾರ್ಯತಂತ್ರ! ಪರಿಷತ್ ಚುನಾವಣೆ; ಜೆಡಿಎಸ್ ಹೊಸ ಕಾರ್ಯತಂತ್ರ!

ಅಭ್ಯರ್ಥಿಗಳು; ಕೊಡಗು (ಸುಜಾ ಕುಶಾಲಪ್ಪ), ದಕ್ಷಿಣ ಕನ್ನಡ (ಕೋಟಾ ಶ್ರೀನಿವಾಸ ಪೂಜಾರಿ), ಚಿಕ್ಕಮಗಳೂರು (ಎಂ. ಕೆ. ಪ್ರಾಣೇಶ್), ಶಿವಮೊಗ್ಗ (ಡಿ. ಎಸ್. ಅರುಣ್), ಧಾರವಾಡ (ಪ್ರದೀಪ್ ಶೆಟ್ಟರ್).

ಪರಿಷತ್; ಜಿಲ್ಲಾ, ತಾಲೂಕು ಪಂಚಾಯಿತಿ ಸದಸ್ಯರಿಗೆ ಮತದಾನದ ಹಕ್ಕಿಲ್ಲಪರಿಷತ್; ಜಿಲ್ಲಾ, ತಾಲೂಕು ಪಂಚಾಯಿತಿ ಸದಸ್ಯರಿಗೆ ಮತದಾನದ ಹಕ್ಕಿಲ್ಲ

ಬೆಳಗಾವಿ (ಮಹಾಂತೇಶ ಕವಟಗಿಮಠ), ಗುಲಬರ್ಗಾ (ಬಿ. ಜಿ. ಪಾಟೀಲ್), ಚಿತ್ರದುರ್ಗ (ಕೆ. ಎಸ್. ನವೀನ್), ಮೈಸೂರು (ರಘು ಕೌಟಿಲ್ಯ), ಹಾಸನ (ವಿಶ್ವನಾಥ್), ಉತ್ತರ ಕನ್ನಡ (ಗಣಪತಿ ಉಳ್ವೇಕರ್).

ಬೀದರ್ (ಪ್ರಕಾಶ್ ಖಂಡ್ರೆ), ಬೆಂಗಳೂರು (ಎಚ್. ಎಸ್. ಗೋಪಿನಾಥ ರೆಡ್ಡಿ), ಮಂಡ್ಯ (ಮಂಜು ಕೆ. ಆರ್. ಪೇಟೆ), ಕೋಲಾರ (ಡಾ. ಕೆ. ಎನ್. ವೇಣುಗೋಪಾಲ್), ರಾಯಚೂರು (ವಿಶ್ವನಾಥ್ ಎ. ಬನಹಟ್ಟಿ).

ಬೆಂಗಳೂರು ಗ್ರಾಮಾಂತರ (ಬಿ. ಎಂ. ನಾರಾಯಣಸ್ವಾಮಿ), ಬಳ್ಳಾರಿ (ವೈ. ಎಂ. ಸತೀಶ್), ತುಮಕೂರು (ಎನ್. ಲೋಕೇಶ್), ಬಿಜಾಪುರ (ಪಿ. ಎಚ್. ಪೂಜಾರ್).

ಒಟ್ಟು 25 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಬಿಜೆಪಿ 20 ಅಭ್ಯರ್ಥಗಳನ್ನು ಘೋಷಣೆ ಮಾಡಿದೆ. ಬೆಳಗಾವಿ 2, ಧಾರವಾಡ 2, ದಕ್ಷಿಣ ಕನ್ನಡ 2, ಮೈಸೂರು 2 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಇನ್ನೂ ಅಭ್ಯರ್ಥಿಗಳು ಘೋಷಣೆಯಾಗಬೇಕಿದೆ.

Recommended Video

ರೈತರ ಕಾಯ್ದೆಗಳನ್ನು ಹಿಂಪಡೆದ ನರೇಂದ್ರ ಮೋದಿ | Oneindia Kannada

English summary
The Bharatiya Janata Party (BJP) Central Election Committee (CEC) has announced candidate list for Karnataka legislative council elections on December 10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X