‘ಮತಾಂಧ ಪಿಎಫ್‌ಐ ಸಂಘಟನೆಯನ್ನು ಕೇಂದ್ರದ ಬಿಜೆಪಿ ಸರ್ಕಾರ ನಿಷೇಧಿಸಿದ ನಂತರ ಜಿಹಾದಿ ಮನಸ್ಥಿತಿಗೆ ಕರ್ನಾಟಕದಲ್ಲಿ...’

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 100 ದಿನ ಪೂರೈಸಿದ್ದು, ಒಂದು ವರ್ಷದ ಕಡೆಗೆ ಹೆಜ್ಜೆ ಇಡುತ್ತಿದೆ. ಆದ್ರೆ ಕಮಲ ಪಾಳಯ & ಜೆಡಿಎಸ್ ನಾಯಕರು ಮಾತ್ರ ಪದೇ ಪದೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸುತ್ತಿದ್ದಾರೆ. ಇದೇ ರೀತಿ ಈಗ 'ಜಿಹಾದಿ ಮನಸ್ಥಿತಿಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ನೀರೆರೆದು ಪೋಷಿಸಲಾಗುತ್ತಿದೆ' ಎಂದು ಆರೋಪಿಸಿದೆ ಕಮಲ ಪಾಳಯ.

ಹೌದು, ಬಿಜೆಪಿ & ಕಾಂಗ್ರೆಸ್ ಫೈಟ್ ನಡುವೆ ಜೆಡಿಎಸ್ ಕೂಡ ಆಗಾಗ ಎಂಟ್ರಿ ಹಾಕುತ್ತಾ ಇರುತ್ತೆ. ಆದರೆ ಕಾಂಗ್ರೆಸ್ & ಬಿಜೆಪಿ ನಡುವೆ ನಡೆಯುವ ನೇರ ಯುದ್ಧ ಸಾಕಷ್ಟು ಗಮನ ಸೆಳೆದು, ಭಾರಿ ಚರ್ಚೆಗೆ ಕೂಡ ಕಾರಣವಾಗುತ್ತಿದೆ. ಇದೇ ರೀತಿ ಈಗ ಮತ್ತೊಂದು ಗಂಭೀರ ಆರೋಪವನ್ನ ಬಿಜೆಪಿ ಕಾಂಗ್ರೆಸ್ ವಿರುದ್ಧ ಹೊರಿಸಿದೆ. ಹಾಗಾದರೆ ಏನು ಅದು ಆರೋಪ? ಕಾಂಗ್ರೆಸ್ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ನೇತೃತ್ವದ ಆಡಳಿತದ ಕುರಿತು ಬಿಜೆಪಿ ಮಾಡುತ್ತಿರುವ ಆರೋಪ ಏನು?

BJP Alleged That The Karnataka Congress Government Is Not Protecting The Society

'ಮತಾಂಧ ಪಿಎಫ್‌ಐ ಸಂಘಟನೆಯನ್ನು...'

ಕರ್ನಾಟಕ ಬಿಜೆಪಿ ಇದೀಗ ಕಾಂಗ್ರೆಸ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿ ಒಂದು ಟ್ವೀಟ್ ಮಾಡಿದ್ದು, 'ಮತಾಂಧ ಪಿಎಫ್‌ಐ ಸಂಘಟನೆಯನ್ನು ಕೇಂದ್ರದ ಬಿಜೆಪಿ ಸರ್ಕಾರ ನಿಷೇಧಿಸಿದ ನಂತರ ಜಿಹಾದಿ ಮನಸ್ಥಿತಿಗೆ ಕರ್ನಾಟಕದಲ್ಲಿ @INCKarnataka ನೀರೆರೆದು ಪೋಷಿಸುತ್ತಿದೆ. ಪೊಲೀಸರಿಗೇ ಭಯದ ವಾತಾವರಣ ಉಂಟು ಮಾಡಿದ ಕಾಂಗ್ರೆಸ್‌ನ ನಿಜಗುಣದ ಪ್ರತಿಬಿಂಬ ಈ ವಿಡಿಯೋದಲ್ಲಿ ನೋಡಿ.' ಎಂದು ಆರೋಪಿಸಿ ವಿಡಿಯೋ ಒಂದನ್ನ ಪೋಸ್ಟ್ ಮಾಡಿದೆ. ಅಲ್ಲದೆ ಈ ವಿಡಿಯೋದಲ್ಲಿ ರಾಜ್ಯದಲ್ಲಿ ನಡೆದಿರುವ ಹಲವು ಘಟನೆ ಆಧಾರದಲ್ಲಿ ಗಂಭೀರ ಆರೋಪ ಹೊರಿಸಿದೆ.

'ಸಮೃದ್ಧಿಯ ಬೀಡಾಗಿದ್ದ ಕರ್ನಾಟಕದಲ್ಲಿ...'

ಹಾಗೇ ನಿನ್ನೆ ಕೂಡ ಇದೇ ರೀತಿಯಾಗಿ ಆರೋಪ ಮಾಡಿದ್ದ ಬಿಜೆಪಿ, 'ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿಯ ಬೀಡಾಗಿದ್ದ ಕರ್ನಾಟಕದಲ್ಲಿ ಅರಾಜಕತೆ, ಅಶಾಂತಿ ಹಾಗೂ ಭಯದ ವಾತಾವರಣವನ್ನು ನಿರ್ಮಿಸಿದ್ದು ಹಾಗೂ ರಾಜ್ಯದ ಕಾನೂನು-ಸುವ್ಯವಸ್ಥೆಯನ್ನು ಹಳ್ಳ ಹಿಡಿಸಿದ್ದೇ @INCKarnataka ಸರ್ಕಾರದ ಐದು ತಿಂಗಳ ಸಾಧನೆ!! ಅಧಿಕಾರಕ್ಕೆ ಬಂದ ದಿನದಿಂದ ಹಿಡಿದು ಇಲ್ಲಿಯವರೆಗೂ ಜಿಹಾದಿಗಳನ್ನು ಓಲೈಸುವಲ್ಲಿ ಪೈಪೋಟಿಗೆ ಬಿದ್ದಿರುವ ಸಿಎಂ @siddaramaiah ಅವರು ಮತ್ತು ಡಿಸಿಎಂ @DKShivakumar ಅವರ ಅತಿಯಾದ ತುಷ್ಟೀಕರಣದ ರಾಜಕೀಯದಿಂದ ಕರ್ನಾಟಕದಲ್ಲಿ ಜಿಹಾದಿಗಳ ಸೊಕ್ಕು ಮಿತಿ ಮೀರಿದೆ.' ಎಂದು ಆರೋಪಿಸಿತ್ತು.


'ಕೋಮುಗಲಭೆ, ಕೊಲೆ-ಸುಲಿಗೆ, ಅಶಾಂತಿಗಳದ್ದೇ ಸದ್ದು!'

ಅಲ್ಲದೆ ಸರಣಿ ಟ್ವೀಟ್ ಮೂಲಕ ಬಿಜೆಪಿ ಆರೋಪ ಮಾಡಿ, 'ತಾವೆಂತಹ ಸಮಾಜಘಾತುಕ ಕೃತ್ಯಗಳಲ್ಲಿ ಭಾಗಿಯಾದರೂ, ಗರಿಷ್ಟ ಮಟ್ಟದಲ್ಲಿ ಈ ದೇಶದ ಕಾನೂನನ್ನು ಉಲ್ಲಂಘಿಸಿದರೂ, ಕಾಂಗ್ರೆಸ್‌ ಪಕ್ಷ ಹಾಗೂ ಅದರ ಮುಖಂಡರು ತಮ್ಮ ಬೆನ್ನಿಗೆ ನಿಲ್ಲುತ್ತಾರೆ, ತಮಗೆ "ಅಮಾಯಕರು" ಎಂಬ ಪಟ್ಟ ಕಟ್ಟುತ್ತಾರೆ ಎಂಬುದು ಜಿಹಾದಿಗಳಿಗೆ ಚೆನ್ನಾಗಿ ತಿಳಿದಿದೆ. ಹೀಗಾಗಿ ಕಾಂಗ್ರೆಸ್‌ ಸರ್ಕಾರದ ಐದು ತಿಂಗಳ ಆಡಳಿತದಲ್ಲಿ ರಾಜ್ಯದಲ್ಲಿ ಕೇವಲ ಅರಾಜಕತೆ, ಕೋಮುಗಲಭೆ, ಕೊಲೆ-ಸುಲಿಗೆ, ಅಶಾಂತಿಗಳದ್ದೇ ಸದ್ದು!! ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದೆ ಎಂಬ ಏಕೈಕ ಕಾರಣಕ್ಕೆ ಜಿಹಾದಿಗಳು ಪೊಲೀಸರ ಮೇಲೆ ಹಲ್ಲೆ ನಡೆಸುವಷ್ಟರ ಮಟ್ಟಿಗೆ ಪುಂಡಾಟ ಮೆರೆಯುತ್ತಿದ್ದಾರೆ.' ಅಂತ ಹೇಳುವ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಹೊರಿಸಿತ್ತು. ಅದೇ ರೀತಿ ಇಂದು ಕೂಡ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಮಲ ಪಾಳಯ ವಾಗ್ದಾಳಿ ಆರಂಭಿಸಿದೆ.

'ಜಿಹಾದಿ ಪುಂಡರು ನಿಯಮ ಉಲ್ಲಂಘಿಸಿದರು...'

ಅಲ್ಲದೆ, 'ಬೆಂಗಳೂರಿನಲ್ಲಿ ಟ್ರಾಫಿಕ್‌ ನಿಯಂತ್ರಿಸುತ್ತಿದ್ದ ಪೊಲೀಸ್‌ ಪೇದೆಯೊಬ್ಬರು, ಕೆಲವು ಜಿಹಾದಿ ಪುಂಡರು ನಿಯಮ ಉಲ್ಲಂಘಿಸಿದರು ಎಂಬ ಕಾರಣಕ್ಕೆ ಅವರ ಮೇಲೆ ಕ್ರಮ ಕೈಗೊಳ್ಳಲು ಮುಂದಾದರೆ, ಹಾಡುಹಗಲೇ ಸಮವಸ್ತ್ರ ಧರಿಸಿದ ಪೊಲೀಸ್‌ ಮೇಲೆ ಗುಂಪು ಹಲ್ಲೆ ನಡೆಸುವಷ್ಟರ ಮಟ್ಟಿಗೆ ಜಿಹಾದಿಗಳು ಸೊಕ್ಕಿದ್ದಾರೆ. ರಾಜ್ಯವನ್ನು ಜಿಹಾದಿಗಳ ತವರೂರನ್ನಾಗಿಸಿ, ಗೂಂಡಾ ರಾಜ್ಯವನ್ನಾಗಿ ಮಾಡುವುದೇ ಕಾಂಗ್ರೆಸ್‌ನ ಕರ್ನಾಟಕ ಮಾಡೆಲ್‌.' ಎಂದು ಆರೋಪಿಸಿತ್ತು ಬಿಜೆಪಿ.

ಹಾಗೇ ತನ್ನ ಆರೋಪದ ಪಟ್ಟಿ ಮುಂದುವರಿಸಿ, 'ಇನ್ನು ಕಾಂಗ್ರೆಸ್‌ ಒಂದು ಕಡು ಹಿಂದೂ ವಿರೋಧಿ ಪಕ್ಷ ಎಂಬ ಸತ್ಯ ಜಗತ್ತಿಗೆ ತಿಳಿದಿರುವಂತಹದ್ದು, ಈ ಸತ್ಯ ಅರಿತಿರುವ ಜಿಹಾದಿಗಳು ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ದಿನದಿಂದಲೂ ಸದಾ ಶಾಂತಿಪ್ರಿಯ ಹಿಂದೂಗಳನ್ನು ಕೆಣಕುತ್ತಿದ್ದಾರೆ. ಇದಕ್ಕೆ ಪ್ರಮುಖ ಸಾಕ್ಷಿ ಕೋಲಾರ ಮತ್ತು ಶಿವಮೊಗ್ಗದಲ್ಲಿ ಹಾಕಿದ್ದ ತಲ್ವಾರ್‌ ರೀತಿಯ ಕಮಾನುಗಳು!! ಹಿಂದೂಗಳನ್ನು ಪ್ರಚೋದಿಸುವ ರೀತಿ ಫ್ಲೆಕ್ಸ್‌ ಮತ್ತು ಬ್ಯಾನರ್‌ಗಳನ್ನು ಅಳವಡಿಸಿ, ಹಿಂದೂಗಳ ಮನೆಗೆ ಕಲ್ಲೆಸೆದರೂ, ಅವರನ್ನು ಬಂಧಿಸದೇ ಅವರಿಗೆ ಶ್ರೀರಕ್ಷೆಯಾಗಿ ನಿಂತಿರುವುದು ಕಾಂಗ್ರೆಸ್‌ನ ಸೋಗಲಾಡಿ ರಾಜಕೀಯಕ್ಕೆ ಸ್ಪಷ್ಟ ನಿದರ್ಶನ.' ಎಂದಿತ್ತು ಬಿಜೆಪಿ.

ಮತ್ತೊಂದು ಕಡೆ, 'ವಿಜಯಪುರದ ಆಲಮಟ್ಟಿಯಲ್ಲಿ ಹಿಂದೂಗಳು ದೇವಸ್ಥಾನದ ಪ್ರತಿಷ್ಠಾಪನೆಗೆಂದು ಶ್ರದ್ಧಾ-ಭಕ್ತಿಯಿಂದ ತಂದಿದ್ದ ದೇವರ ಮೂರ್ತಿಗಳನ್ನು ಜಿಹಾದಿಗಳು ಧ್ವಂಸಗೊಳಿಸಿ ಕ್ರೌರ್ಯ ಮೆರೆದಿದ್ದರು. ಇಂಡಿಯ ಹಿರೆಬೇವನೂರಿನಲ್ಲಿ ನವರಾತ್ರಿಗೆಂದು ಪ್ರತಿಷ್ಠಾಪಿಸಿದ್ದ ದೇವಿಯ ಮೂರ್ತಿಯನ್ನು ಅತ್ಯಂತ ಕೀಳಾಗಿ ವಿವಸ್ತ್ರಗೊಳಿಸಿದ್ದು ಸಹ ಜಿಹಾದಿಗಳೇ. ಕಲ್ಬುರ್ಗಿಯ ಚಿತ್ತಾಪುರದಲ್ಲಿ ವಿಶ್ವಗುರು ಬಸವೇಶ್ವರವರ ಭಾವಚಿತ್ರವನ್ನು ಅತ್ಯಂತ ಹೇಯವಾಗಿ ವಿರೂಪಗೊಳಿಸಿದ್ದು ಸಹ ಮತ್ತದೇ ಜಿಹಾದಿಗಳು. ಹಾನಗಲ್‌ನಲ್ಲಿ ಐತಿಹಾಸಿಕ ತಾರಕೇಶ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವಕ್ಕೆ ಅಡ್ಡಿಪಡಿಸಿದ್ದು ಸಹ ಇದೇ ಜಿಹಾದಿಗಳು.' ಎಂದು ಬಿಜೆಪಿ ಆರೋಪ ಮಾಡಿತ್ತು.

ಅಂತಿಮವಾಗಿ ಬಿಜೆಪಿ, 'ಜಿಹಾದಿಗಳು ಇಷ್ಟೆಲ್ಲಾ ಸಮಾಜಘಾತುಕ ಕೃತ್ಯ ನಡೆಸುತ್ತಿದ್ದರೂ, ಕಾಂಗ್ರೆಸ್‌ ಸರ್ಕಾರ ಮಾತ್ರ ಕುರುಡ-ಕಿವುಡ-ಮೂಗನಂತೆ ವರ್ತಿಸುತ್ತಿರುವುದನ್ನು ಗಮನಿಸಿದರೆ, ಕಾಂಗ್ರೆಸ್‌ ಸರ್ಕಾರವೇ ಜಿಹಾದಿಗಳ ಮಾಸ್ಟರ್‌ ಮೈಂಡ್‌ ಇರಬಹುದಾ ಅಥವಾ ಚುನಾವಣೆಯಲ್ಲಿ ತಮ್ಮ ಗೆಲುವಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದ್ದ ಪಿ.ಎಫ್.ಐ. ನ ಋಣವನ್ನು ತೀರಿಸುತ್ತಿದೆಯಾ ಎಂಬ ಅನುಮಾನ ಮೂಡುವುದಂತೂ ಸತ್ಯ!!' ಅಂತಾ ಆರೋಪವನ್ನು ಮಾಡಿತ್ತು.

ಹಾಗೇ ಆರೋಪ ಮುಂದುವರಿಸಿದ್ದ ಬಿಜೆಪಿ, 'ಜಿಹಾದಿಗಳನ್ನು ಮಟ್ಟ ಹಾಕಬೇಕಿದ್ದ ಕಾಂಗ್ರೆಸ್‌ ಸರ್ಕಾರ ಅವರಿಗೆ ಬೆಂಬಲವಾಗಿ ನಿಂತಿರುವುದು ಅಕ್ಷಮ್ಯ ಅಪರಾಧ ಹಾಗೂ ಆರು ಕೋಟಿ ಕನ್ನಡಿಗರಿಗೆ ಮಾಡುತ್ತಿರುವ ಮಹಾದ್ರೋಹ. ಕಾಂಗ್ರೆಸ್‌ ಸರ್ಕಾರ ತನ್ನ ಓಲೈಕೆ ರಾಜಕೀಯಕ್ಕೋಸ್ಕರ, ಜಿಹಾದಿಗಳ ಸಮಾಜಘಾತುಕ ಕೃತ್ಯಗಳಿಗೆ ಕಡಿವಾಣ ಹಾಕದಿದ್ದಲ್ಲಿ, ಕರ್ನಾಟಕ ಮತ್ತೊಮ್ಮೆ ಪಿ.ಎಫ್.ಐ. ಪುಂಡರ ಭದ್ರಕೋಟೆ ಆಗುವುದು ಖಚಿತ-ನಿಶ್ಚಿತ-ಖಂಡಿತ!!' ಎನ್ನುವ ಮೂಲಕ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿತ್ತು.

ಒಟ್ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಫೈಟ್ ಜೋರಾಗಿದೆ. ಅದ್ರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ಇಬ್ಬರ ಜಗಳ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ & ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಆರೋಪ & ಪ್ರತ್ಯಾರೋಪ ಮಾಡುತ್ತಿದ್ದಾರೆ. ಮುಂದಿನ ಲೋಕಸಭೆ ಚುನಾವಣೆ ತನಕ ಈ ವಾರ್ ದಿನದಿಂದ ದಿನಕ್ಕೆ ಮತ್ತಷ್ಟು ಜೋರಾಗುವ ಸಾಧ್ಯತೆ ದಟ್ಟವಾಗಿದೆ ಅಂತಿದ್ದಾರೆ ಸೋಷಿಯಲ್ ಮೀಡಿಯಾದ ಮಂದಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+