ಕರ್ನಾಟಕ ಕಾಂಗ್ರೆಸ್‌ನಲ್ಲಿ ‘ಬಣ’ ಜಗಳ: ‘ಕಮಲ’ ಹೇಳಿದ್ದೇನು?
ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು 100 ದಿನ ಕಳೆದಿದೆ ಅಷ್ಟೇ, ಅಷ್ಟರಲ್ಲೇ ಡಿಸಿಎಂ ಸ್ಥಾನಕ್ಕೆ ಪೈಪೋಟಿ ಜೋರಾಗಿದೆ. ಒಂದು ಕಡೆ ಡಿಸಿಎಂ ಡಿ.ಕೆ.ಶಿವಕುಮಾರ್ ಬಣ ಮತ್ತೊಂದು ಕಡೆ ಸಿಎಂ ಸಿದ್ದರಾಮಯ್ಯ ಬಣದ ಫೈಟ್ ಇದು ಎಂದು ಬಿಜೆಪಿ ಆರೋಪ ಮಾಡುವಾಗಲೇ, ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಹಾಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಆಸೆ ಇರೋದು ತಪ್ಪಲ್ಲ ಎಂದಿದ್ದರು. ಆದರೆ ಇದೀಗ ಬಿಜೆಪಿ ಮತ್ತೊಂದು ಬಾಂಬ್ ಸಿಡಿಸಿದೆ.
ಕರ್ನಾಟಕ ಕಾಂಗ್ರೆಸ್ ನಾಯಕರು ಪ್ರಮುಖವಾಗಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡ ನಾಯಕರೇ ಡಿಸಿಎಂ ಪಟ್ಟಕ್ಕೆ ಬೇಡಿಕೆ ಇಡುತ್ತಿದ್ದಾರೆ. ಹೀಗಾಗಿ ಇತ್ತೀಚೆಗಷ್ಟೆ ಡಿ.ಕೆ. ಶಿವಕುಮಾರ್ ಖಡಕ್ ಉತ್ತರ ಕೊಟ್ಟು ಎಲ್ಲರಿಗು ಆಸೆ ಇರುತ್ತೆ. ಅವರಿಗೆ ಸ್ಪಂದಿಸಲು ಜನರಿದ್ದಾರೆ ಎಂದಿದ್ದರು. 1985 ರಿಂದಲೂ ನಾನು ರಾಜಕೀಯದಲ್ಲಿ ಇದ್ದು, ಹೋರಾಟದ ಹಿನ್ನೆಲೆ ಕಾರಣ ಪಕ್ಷ ನನ್ನ ಈ ಸ್ಥಾನದಲ್ಲಿ ಕೂರುವಂತೆ ಮಾಡಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದರು. ಇಷ್ಟೆಲ್ಲಾ ಬೆಳವಣಿಗೆ ನಡುವೆ ಮತ್ತೊಮ್ಮೆ ಡಿಸಿಎಂ ಸ್ಥಾನದ ವಿಚಾರವನ್ನು ಬಿಜೆಪಿ ಪ್ರಸ್ತಾಪಿಸಿ, ಹೊಸ ಬಾಂಬ್ ಸಿಡಿಸಿದೆ.

'ಸ್ವತಃ ಕಲೆಕ್ಷನ್ ಏಜೆಂಟ್...'
ಸಚಿವ ಸ್ಥಾನದ ಪೈಪೋಟಿ ಬಳಿಕ ಕಾಂಗ್ರೆಸ್ ನಾಯಕರಿಗೆ ಡಿಸಿಎಂ ಸ್ಥಾನದ ಬೇಡಿಕೆ ಭಾರಿ ಒತ್ತಡ ತರುತ್ತಿದೆ. ಬಿಜೆಪಿ ಇದೇ ವಿಚಾರ ಅಸ್ತ್ರ ಮಾಡಿಕೊಂಡು ವಾಗ್ದಾಳಿ ನಡೆಸುತ್ತಿದ್ದು, 'ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳಾದ್ರೂ ಬಣಗಳ ಒಳ ಜಗಳ ಅಂತ್ಯ ಕಾಣುತ್ತಿಲ್ಲ. ಸರ್ಕಾರ ರಚನೆಯ ಆರಂಭದ ದಿನಗಳಲ್ಲೇ ಸ್ವತಃ ಕಲೆಕ್ಷನ್ ಏಜೆಂಟ್ ಸುರ್ಜೇವಾಲಾ ಸರ್ಕಾರಿ ಅಧಿಕಾರಿಗಳೊಟ್ಟಿಗೆ ಸಭೆ ನಡೆಸಿ ಆಡಳಿತಾತ್ಮಕ ವಿಚಾರದಲ್ಲಿ ಮೂಗು ತೂರಿಸಿದ್ದರು' ಎಂದು ಟ್ವೀಟ್ ಮೂಲಕ ಆರೋಪ ಮಾಡಿದೆ.
ರಾಜ್ಯದಲ್ಲಿ @INCKarnataka ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳಾದರೂ ಬಣಗಳ ಒಳ ಜಗಳ ಅಂತ್ಯ ಕಾಣುತ್ತಿಲ್ಲ.
— BJP Karnataka (@BJP4Karnataka) September 25, 2023
ಸರ್ಕಾರ ರಚನೆಯ ಆರಂಭದ ದಿನಗಳಲ್ಲೇ ಸ್ವತಃ ಕಲೆಕ್ಷನ್ ಏಜೆಂಟ್ ಸುರ್ಜೇವಾಲಾ ಸರ್ಕಾರಿ ಅಧಿಕಾರಿಗಳೊಟ್ಟಿಗೆ ಸಭೆ ನಡೆಸಿ ಆಡಳಿತಾತ್ಮಕ ವಿಚಾರದಲ್ಲಿ ಮೂಗು ತೂರಿಸಿದ್ದರು.
ಸಿಎಂ, ಡಿಸಿಎಂ ನಾಮಕಾವಸ್ತೆಗೆ ಅಷ್ಟೇ ಸೀಮಿತವಾಗಿದ್ದು… pic.twitter.com/Bnp16LA1Zf
'ಸರ್ಕಾರವನ್ನು ಹೈಜಾಕ್ ಮಾಡಿ ಸುರ್ಜೇವಾಲಾ...'
ಹಾಗೇ ತನ್ನ ಆರೋಪವನ್ನು ಟ್ವೀಟ್ ಮೂಲಕ ಮುಂದುವರಿಸಿರುವ ಕರ್ನಾಟಕ ಬಿಜೆಪಿ, 'ಸಿಎಂ, ಡಿಸಿಎಂ ನಾಮಕಾವಸ್ತೆಗೆ ಅಷ್ಟೇ ಸೀಮಿತವಾಗಿದ್ದು ಶ್ಯಾಡೋ ಸಿಎಂ ಸೇರಿ ಮೂರನೇ ವ್ಯಕ್ತಿಯ ಕೈಗಳೇ #ATMSarkaraದಲ್ಲಿ ಓಡಾಡುತ್ತಿವೆ. ಹೀಗಾಗಿ ರಾಜ್ಯದ ಸಮಸ್ಯೆ ಬಗೆಹರಿಸಲು ರಾಜ್ಯದ ಕಾಂಗ್ರೆಸ್ ನಾಯಕರಿಗೆ ಸಾಧ್ಯವಾಗುತ್ತಿಲ್ಲ. ಕಾವೇರಿ ತಮಿಳುನಾಡಿಗೆ ಹರಿಯಲು ಕಾಂಗ್ರೆಸ್ ಹೈಕಮಾಂಡ್ ಕಾರಣವಾದರೆ ಅದನ್ನು ತಡೆಯುವ ತಾಕತ್ತು @siddaramaiah ಅವರ ಸರ್ಕಾರಕ್ಕಿಲ್ಲ. ಒಳ ಜಗಳ ಮಿತಿ ಮೀರಿದ ಹಿನ್ನಲೆ ಇದೀಗ ಸ್ವತಃ ಕರ್ನಾಟಕ ಸರ್ಕಾರ ಹೈಜಾಕ್ ಮಾಡಿ ಸುರ್ಜೇವಾಲಾ, ಕೆ.ಸಿ. ವೇಣುಗೋಪಾಲ್ ಅವರುಗಳನ್ನು ಆಡಳಿತ ನಡೆಸಲು ಬಿಟ್ಟಂತಿದೆ..!' ಎಂದು ಆರೋಪಿಸಿದೆ.
ಒಟ್ನಲ್ಲಿ ಕಾಂಗ್ರೆಸ್‌ನಲ್ಲಿ ಡಿಸಿಎಂ ಸ್ಥಾನಕ್ಕೆ ಫೈಟಿಂಗ್ ಜೊರಾಗಿರುವ ಸಂದರ್ಭದಲ್ಲೇ ಬಿಜೆಪಿ ನಾಯಕರು ಇದನ್ನೇ ಮತ್ತೊಂದು ಅಸ್ತ್ರ ಮಾಡಿಕೊಂಡಿದ್ದಾರೆ. ಈ ಮೂಲಕ ಲೋಕಸಭೆ ಚುನಾವಣೆ ಕಾವು ಏರುತ್ತಿದ್ದಂತೆ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಫೈಟಿಂಗ್ ಜೋರಾಗಿದೆ ಎನ್ನಬಹುದು. ಅದರಲ್ಲೂ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳ ಗೆಲ್ಲುವ ಗುರಿ ಹೊಂದಿರುವ ಕಾಂಗ್ರೆಸ್ ನಾಯಕರಿಗೆ ಪಕ್ಷದ ಒಳಗಿನ ಅಸಮಾಧಾನ ಹಿಡಿತಕ್ಕೆ ತರುವುದು ಸವಾಲಿನ ಕೆಲಸವಾಗುತ್ತಿದೆ.












Click it and Unblock the Notifications