‘ರಾಜಧಾನಿಗೆ ಟ್ಯಾಂಕರ್‌ ಮಾಫಿಯಾ ಗಿಫ್ಟ್, ಕಾವೇರಿ ನಂಬಿದ್ದ ಜನರಿಗೆ ಖಾಲಿ ಚೆಂಬಿನ ಗಿಫ್ಟ್’

ಮಳೆರಾಯ ಕೈಕೊಟ್ಟು ಹೋಗಿದ್ದು, ಧೋ ಅಂತಾ ಮಳೆ ಸುರಿಯಬೇಕಿದ್ದ ಸಮಯದಲ್ಲಿಯೂ ಬಿಸಿಲು ಧಗಧಗಿಸಿದ್ದರಿಂದ 2023 ಕರ್ನಾಟಕದ ಪಾಲಿಗೆ ಬೇಸರದ ವರ್ಷವಾಗಿತ್ತು. ಹೀಗಾಗಿಯೇ ಕರ್ನಾಟಕದಲ್ಲಿ ಬರದ ಛಾಯೆ ಆವರಿಸಿದ್ದು ಬೇಸಿಗೆ ಆರಂಭಕ್ಕೆ ಮೊದಲೇ ನೀರಿಗೋಸ್ಕರ ಭಾರಿ ತಿಕ್ಕಾಟ ಶುರುವಾಗಿದೆ. ಪರಿಸ್ಥಿತಿ ಹೀಗಿದ್ದಾಗಲೇ ರಾಜ್ಯದಲ್ಲಿ ನೀರಿನ ಟ್ಯಾಂಕರ್ ಮಾಫಿಯಾ ತಲೆ ಎತ್ತಿದೆ ಎಂಬ ಆರೋಪವು ಕೇಳಿಬರುತ್ತಿದ್ದು, ಇದೀಗ ಬಿಜೆಪಿ ಈ ಬಗ್ಗೆ ಸಾಲು ಸಾಲಾಗಿ ಆರೋಪ ಮಾಡುತ್ತಿದೆ.

ರಾಜ್ಯದಲ್ಲಿ ಎಲ್ಲಾ ಕಡೆಯೂ ನೀರಿಲ್ಲ, ಹಳ್ಳಿಗಳನ್ನ ಬಿಡಿ ರಾಜ್ಯ ರಾಜಧಾನಿ ಬೆಂಗಳೂರು ಕೂಡ ಸಿಕ್ಕಾಪಟ್ಟೆ ನೀರಿನ ಸಮಸ್ಯೆ ಎದುರಿಸುತ್ತಿದೆ. ಮತ್ತೊಂದು ಕಡೆ ಕಾವೇರಿ & ಕೃಷ್ಣಾ ಸೇರಿ ದೊಡ್ಡ ದೊಡ್ಡ ನದಿಗಳೇ ಒಣಗಿ ಹೋಗಿವೆ. ತುಂಬಿ ಹರಿಯಬೇಕಿದ್ದ ಈ ನದಿಗಳು ಈಗ, ಬಾಯಿ ತೆರೆದು ಬರದ ಸೂಚನೆ ನೀಡಿವೆ. ಜನರು ಕೂಡ ಹನಿ ಹನಿ ನೀರಿಗೆ ಪರದಾಡುತ್ತಿದ್ದು, ಈ ಸಮಯವನ್ನ ನೀರಿನ ಟ್ಯಾಂಕರ್ ಮಾಲೀಕರು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡು ಕಾಸು ಮಾಡ್ತಿರುವ ಆರೋಪ ಕೇಳಿಬಂದಿದೆ. ಹೀಗಿದ್ದಾಗ ಬಿಜೆಪಿ ಗಂಭೀರವಾದ ಆರೋಪ ಒಂದನ್ನ ಮಾಡಿದೆ.

BJP Alleged That Karnataka Is Facing Water Problem Because Of The Congress Government

ಇಲ್ಲಿದೆ ನೋಡಿ ಆರೋಪ ಪಟ್ಟಿ!

ಬಿಜೆಪಿ ಈಗ ಮಾಡಿರುವ ಟ್ವೀಟ್ ಪ್ರಕಾರ, 'ಅಧಿಕಾರದ ದುರಾಸೆಯಿಂದ ಕನ್ನಡಿಗರ ಕಿವಿ ಮೇಲೆ ಹೂವಿಟ್ಟು ಗದ್ದುಗೆ ಹಿಡಿದ @INCKarnataka ಗಿಫ್ಟ್ :
💧ಸ್ಟಾಲಿನ್ ನಾಡಿಗೆ ಕಾವೇರಿ ಗಿಫ್ಟ್
💧ಕನ್ನಡಿಗರಿಗೆ ಕಲುಷಿತ ನೀರಿನ ಗಿಫ್ಟ್
💧ರಾಜಧಾನಿಗೆ ಟ್ಯಾಂಕರ್‌ ಮಾಫಿಯಾ ಗಿಫ್ಟ್
💧ಕಾವೇರಿ ನಂಬಿದ್ದ ಜನರಿಗೆ ಖಾಲಿ ಚೆಂಬಿನ ಗಿಫ್ಟ್
💧ಬರ ನಿರ್ವಹಣೆ ಮಾಡದೆ ನೀರಿನ ಹಾಹಾಕಾರದ ಗಿಫ್ಟ್
💧ಉತ್ತರ ಕರ್ನಾಟಕದಲ್ಲಿ ಬರ ಪರಿಸ್ಥಿತಿಯಿಂದ ಜನ ಗುಳೆ ಹೋಗುತ್ತಿದ್ದಾರೆ' ಎಂದು ಒಂದು ಪಟ್ಟಿ ಕೊಟ್ಟು ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದೆ ಬಿಜೆಪಿ.

ಇದರ ಜೊತೆಗೆ ಟ್ವೀಟ್‌ನಲ್ಲಿ ಆರೋಪ ಮುಂದುವರಿಸಿ, 'ಮಜಾವಾದಿ @siddaramaiah ಸರ್ಕಾರ, ಕನ್ನಡಿಗರ ತೆರಿಗೆ ಹಣದಲ್ಲಿ ಮೋಜು-ಮಸ್ತಿ ಮಾಡುತ್ತಾ ಕುಡಿಯುವ ಹನಿ ನೀರಿಗೂ ಕಂಟಕ ತಂದಿಟ್ಟಿದೆ. ಕಾವೇರಿಯನ್ನು ಕದ್ದು ಮುಚ್ಚಿ ಸ್ಟಾಲಿನ್‌ ನಾಡಿಗೆ ಬಿಡದಿದ್ದರೆ, ಇಂದು ಈ ದುಸ್ಥಿತಿ ಕರುನಾಡಿಗೆ, ಅದರಲ್ಲೂ ಬೆಂಗಳೂರಿಗೆ ಬರುತ್ತಿರಲಿಲ್ಲ!' ಎಂದಿದೆ ಬಿಜೆಪಿ.

BJP Alleged That Karnataka Is Facing Water Problem Because Of The Congress Government

'ಟ್ಯಾಂಕರ್‌ ಮಾಫಿಯಾ' ಆರೋಪ!

ಬೆಳಗ್ಗೆ ಕೂಡ ಕರ್ನಾಟಕದಲ್ಲಿ 'ಟ್ಯಾಂಕರ್‌ ಮಾಫಿಯಾ' ಅಂತಾ ಆರೋಪ ಮಾಡಿ ಟ್ವೀಟ್ ಮಾಡಿತ್ತು ಬಿಜೆಪಿ. 'ಬಡಾವಣೆಗಳಲ್ಲಷ್ಟೇ ಅಲ್ಲದೆ, ಕೈಗಾರಿಕಾ ಪ್ರದೇಶಗಳಲ್ಲೂ ಟ್ಯಾಂಕರ್‌ ಮಾಫಿಯಾಗೆ ವ್ಯವಹಾರ ಕುದುರಲಿ ಎಂಬ ಉದ್ದೇಶದಿಂದ ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಸರಬರಾಜು ಮಾಡುತ್ತಿದ್ದ ನೀರಿನ ಪ್ರಮಾಣದಲ್ಲಿ @INCKarnataka ಸರ್ಕಾರ ದಿಢೀರನೆ ಶೇ. 60ರಷ್ಟು ಕಡಿತ ಮಾಡಿದೆ.' ಎಂದು ಗಂಭೀರ ಆರೋಪ ಮಾಡಿತ್ತು ಕರ್ನಾಟಕ ಬಿಜೆಪಿ.

ಟ್ವೀಟ್ ಆರೋಪ ಮುಂದುವರಿಸಿ 'ಉತ್ಪಾದನೆಗೆ ನೀರು ಅಗತ್ಯವಿಲ್ಲದ ಗಾರ್ಮೆಂಟ್ಸ್‌ನಂಥಲ್ಲಿ ಯೂ ನೌಕರರಿಗೂ ನೀರಿಲ್ಲದೆ ಬೀಗ ಜಡಿಯುವ ಸ್ಥಿತಿ ನಿರ್ಮಾಣವಾಗಿ ಪೀಣ್ಯ ಕೈಗಾರಿಕಾ ಪ್ರದೇಶದ 12 ಲಕ್ಷ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. @siddaramaiah ಸರ್ಕಾರದ ಕಲೆಕ್ಷನ್‌ ದಾಹದಿಂದಾಗಿ ಪೀಣ್ಯ ಕೈಗಾರಿಕಾ ಪ್ರದೇಶವೊಂದರಲ್ಲೇ ಸುಮಾರು 4.5 ಲಕ್ಷ ಮಹಿಳೆಯರು ವೇತನ ಕಡಿತದ ತೂಗುಗತ್ತಿಯ ಅಡಿಯಲ್ಲಿ ದಿನದೂಡು ವಂತಾಗಿದೆ.' ಎಂದು ಗಂಭೀರ ಆರೋಪ ಮಾಡಿತ್ತು ಕರ್ನಾಟಕ ಬಿಜೆಪಿ.

ಹೀಗೆ ಕರ್ನಾಟಕದಲ್ಲಿ ಭೀಕರ ಬರ ಎದುರಾಗಿ ಕುಡಿಯುವ ನೀರಿಗೂ ಸಮಸ್ಯೆ ಬಂದಿರುವಾಗ ರಾಜಕೀಯ ತಿಕ್ಕಾಟ ಕೂಡ ಬಲು ಜೋರಾಗಿದೆ. ಜನ ಕೂಡ ಇದರಿಂದ ಬೇಸತ್ತು ಹೋಗಿ, ಕುಡಿಯುವ ನೀರಿಗಾಗಿ ಪ್ರತಿನಿತ್ಯ ಅಲೆದಾಡುವ ಪರಿಸ್ಥಿತಿ ಇದೆ. ಹೀಗಾಗಿ ಇದೆಲ್ಲವೂ ಎಲ್ಲಿಗೆ ಬಂದು ನಿಲ್ಲುತ್ತೆ? ಅನ್ನೋದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+