ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ಕಾರ್ಯಕರ್ತರ ಮೇಲೆ ದೌರ್ಜನ್ಯ?

ಬೆಂಗಳೂರು: ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಹಲವು ವಿಚಾರಗಳು ಚರ್ಚೆಯಾಗುತ್ತಿವೆ. ಈ ಮಧ್ಯೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಯುತ್ತಿದೆಯಾ? ಅನ್ನೋ ಡೌಟ್ ಮೂಡಿದೆ. ಅಷ್ಟಕ್ಕೂ ಈ ಅನುಮಾನಕ್ಕೆ ಕಾರಣವಾಗಿದ್ದು ಕೂಡ ಬಿಜೆಪಿಯೇ!

ಕಾಂಗ್ರೆಸ್ & ಬಿಜೆಪಿ ವಿರುದ್ಧ ಇಷ್ಟುದಿನ ಗ್ಯಾರಂಟಿ ವಿಚಾರಕ್ಕೆ ಯುದ್ಧ ನಡೆಯುತ್ತಿತ್ತು. ಆದ್ರೆ ಈಗ ಗ್ಯಾರಂಟಿ ವಿಚಾರ ಕೈಬಿಟ್ಟು ಎರಡೂ ಪಕ್ಷಗಳು ಬೇರೆದ್ದೇ ಕಾರಣಕ್ಕೆ ಪರಸ್ಪರ ಕಿತ್ತಾಟಕ್ಕೆ ನಿಂತಿವೆ. ಅದರಲ್ಲೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ ಅನ್ನೋ ಆರೋಪ ಕೇಳಿಬಂದಿದೆ. ಹಾಗಾದ್ರೆ ಬಿಜೆಪಿ ಮಾಡುತ್ತಿರುವ ಈ ಆರೋಪ ನಿಜನಾ? ಸತ್ಯವಾಗಿಯೂ ಬಿಜೆಪಿ ಪಕ್ಷದ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ದಬ್ಬಾಳಿಕೆ ನಡೆಸುತ್ತಿದೆಯಾ? ಆ ಕುರಿತು ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ.

BJP alleged that Congress targeting

ರೌಡಿಶೀಟರ್ ವಿಚಾರದಲ್ಲಿ ಗುದ್ದಾಟ?

ಮೊನ್ನೆ ಮೊನ್ನೆ ತಾನೆ ಬೆಂಗಳೂರಿನಲ್ಲಿ ಹಾಲಿ ಹಾಗೂ ಮಾಜಿ ರೌಡಿಶೀಟರ್ಸ್ ಮನೆಗಳ ಪೊಲೀಸರು ದಾಳಿ ನಡೆಸಿದ್ದರು. ಈ ವಿಚಾರವಾಗಿ ಕಾಂಗ್ರೆಸ್ ಕೂಡ ನಿನ್ನೆ ಟ್ವೀಟ್ ಮಾಡಿ 'ಬಿಜೆಪಿ ರೌಡಿ ಮೋರ್ಚಾವನ್ನು ಹೆಡೆಮುರಿ ಕಟ್ಟುತ್ತೇವೆ, ಬಿಜೆಪಿ ಅವಧಿಯಲ್ಲಿ ರೌಡಿಗಳ ರೌಡಿ ಶೀಟ್ ತೆಗೆದಿದ್ದರು, ನಮ್ಮ ಸರ್ಕಾರ ರೌಡಿ ಚಟುವಟಿಕೆ ಯಾವ ಕಾರಣಕ್ಕೂ ಸಹಿಸುವುದಿಲ್ಲ, ಬೆಂಗಳೂರು ಹಾಗೂ ಈ ರಾಜ್ಯದಲ್ಲಿ ಅಪರಾಧ ಚಟುವಟಿಕೆಗಳನ್ನು ನಿಗ್ರಹಿಸಿ ಕರ್ನಾಟಕವನ್ನು ಶಾಂತಿಯ ತೋಟವನ್ನಾಗಿಸಲು ಪಣ ತೊಟ್ಟಿದ್ದೇವೆ.' ಎಂದಿತ್ತು. ಇದೀಗ ದಿಢೀರ್ ಸಂಸದ ತೇಜಸ್ವಿ ಸೂರ್ಯ ಸುದ್ದಿಗೋಷ್ಠಿ ಕರೆದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಬಿಜೆಪಿ ಕಾರ್ಯಕರ್ತರ ಮೇಲೆ ದಬ್ಬಾಳಿಕೆ?

ರೌಡಿಶೀಟರ್ಸ್ ವಿಚಾರವಾಗಿ ಕಾಂಗ್ರೆಸ್ ಸರ್ಕಾರ ಕೈಗೊಂಡಿರುವ ಕ್ರಮದ ಬಗ್ಗೆ ಬಿಜೆಪಿಯು ಮಾಡಿರುವ ಆರೋಪದ ಪ್ರಕಾರ, 'ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ಕಾರ್ಯಕರ್ತರ ಮೇಲೆ ದಬ್ಬಾಳಿಕೆ, ದೌರ್ಜನ್ಯ, ಭಯಭೀತಿ ಉಂಟು ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಇದಕ್ಕೆ ಬಿಜೆಪಿ ಕಾರ್ಯಕರ್ತರು ಹೆದರುವ ಅಗತ್ಯವಿಲ್ಲ. ನಕಲಿ ಕೇಸ್‌ ದಾಖಲು, ದೌರ್ಜನ್ಯ, ದಬ್ಬಾಳಿಕೆ ನಡೆದಲ್ಲಿ ಕಾನೂನು ಸಹಾಯವಾಣಿಗೆ ಕರೆ ಮಾಡಿ, ನೆರವು ಪಡೆಯಬಹುದು ಮತ್ತು ಕಾರ್ಯಕರ್ತರ ಬೆಂಬಲಕ್ಕೆ ಧಾವಿಸಲು ಕಾನೂನು ತಜ್ಞರ ತಂಡ ಸದಾ ಸಿದ್ಧವಾಗಿರುತ್ತದೆ.' ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿಕೆ ಉಲ್ಲೇಖಿಸಿ ಟ್ವೀಟ್ ಮಾಡಿದೆ ರಾಜ್ಯ ಬಿಜೆಪಿ ಘಟಕ.

BJP alleged that Congress targeting

ಗ್ಯಾರಂಟಿ ಹೋಯ್ತು.. ರೌಡಿಶೀರ್ಸ್ ಬಂದ್ರು?

ಇಷ್ಟುದಿನ ಗ್ಯಾರಂಟಿ ವಿಚಾರಕ್ಕೆ ಟ್ವೀಟ್ ಯುದ್ಧ ನಡೆಸುತ್ತಿದ್ದ ಬಿಜೆಪಿ, ಕಾಂಗ್ರೆಸ್ ನಡುವೆ ಈಗ ರೌಡಿಶೀಟರ್ಸ್ ವಿಚಾರ ಎಂಟ್ರಿಯಾಗಿದೆ. ಇಷ್ಟುದಿನ ಬರೀ ಗ್ಯಾರಂಟಿ ವಿಚಾರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ನಡೆದಿದ್ದ ಚರ್ಚೆ, ಈಗ ರೌಡಿಗಳ ವಿಚಾರದಲ್ಲೂ ನಡೆಯುವ ನಿರೀಕ್ಷೆ ಇದೆ. ಆ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರಿಗೆ ಹೊಸ ವಿಷಯವೂ ಸಿಕ್ಕಂತಾಗಿದೆ. ಆದರೆ ರೌಡಿಗಳ ಮನೆ ಮೇಲೆ ದಾಳಿಯಾದ ಸಂದರ್ಭದಲ್ಲಿ ಮಾರಕಾಸ್ತ್ರ ಹಾಗೂ ಮಾದಕ ವಸ್ತು ಸಿಕ್ಕ ಬಗ್ಗೆ ಪೊಲೀಸ್ ದಾಖಲೆಗಳು ಸ್ಪಷ್ಟಪಡಿಸಿದ್ದವು. ಆದರೆ ಬಿಜೆಪಿ ಈಗ ಬೇರೆಯದ್ದೇ ಆರೋಪ ಮಾಡುತ್ತಿರುವುದು ಕುತೂಹಲ ಕೆರಳಿಸಿದೆ.

ಬಿಜೆಪಿ & ಕಾಂಗ್ರೆಸ್ ಕಿತ್ತಾಟದಲ್ಲಿ ಗೊಂದಲ!

ನೂತನ ಪೊಲೀಸ್‌ ಆಯಕ್ತ ಬಿ.ದಯಾನಂದ ಸೂಚನೆಯ ನಂತರ ಬೆಂಗಳೂರಿನ 8 ವಿಭಾಗದ ಕಾನೂನು & ಸುವ್ಯವಸ್ಥೆ ಪೊಲೀಸರು ಏಕಕಾಲದಲ್ಲಿ 1344 ರೌಡಿಶೀಟರ್ಸ್ ಮನೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ 9.1 ಕೆ.ಜಿ. ಗಾಂಜಾ, ಮಾರಕಾಸ್ತ್ರ ಪತ್ತೆ ಆಗಿವೆ. ಈ ಹಿನ್ನೆಲೆ ರಾಜ್ಯ ಬಿಜೆಪಿ ವಿರುದ್ಧ ಟ್ವೀಟ್ ಮಾಡಿದ್ದ ಕಾಂಗ್ರೆಸ್ ರಾಜ್ಯ ಘಟಕ ರೌಡಿಗಳ ಹೆಡೆಮುರಿ ಕಟ್ಟುವ ಬಗ್ಗೆ ಚಾಲೆಂಜ್ ಹಾಕಿತ್ತು. ಆದರೆ ಬಿಜೆಪಿ ಪ್ರತ್ಯೇಕ ಆರೋಪ ಮಾಡಿ, ನಮ್ಮ ಕಾರ್ಯಕರ್ತರನ್ನ ಟಾರ್ಗೆಟ್ ಮಾಡಿದ್ದಾರೆ ಎನ್ನುತ್ತಿದೆ. ಈ ಮೂಲಕ ಬಿಜೆಪಿ, ಕಾಂಗ್ರೆಸ್ ನಡುವೆ ರೌಡಿಶೀಟರ್ಸ್ ವಿಚಾರದಲ್ಲಿ ಕೂಡ ಕಿಚ್ಚು ಹೊತ್ತಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+