ಧರ್ಮ-ಅಧರ್ಮ ಸಂಕಷ್ಟವಾಯಿತು, ಸರ್ವರು ಎಚ್ಚರದಿಂದರಬೇಕು ಪರಾಕ್: ಮೈಲಾರ ಲಿಂಗೇಶ್ವರ ಕಾರ್ಣಿಕ
ಚಿಕ್ಕಮಗಳೂರು, ಅಕ್ಟೋಬರ್ 03: ಇಟ್ಟ ರಾಮರ ಬಾಣ ಹುಸಿಯಿಲ್ಲ, ಧರ್ಮ-ಅಧರ್ಮ ಸಂಕಷ್ಟವಾಯಿತು. ವಿಶ್ವಕ್ಕೆ ಶಾಂತಿಯ ಭಂಗವಾಯಿತು, ಎಲ್ಲರೂ ಎಚ್ಚರದಿಂದರಬೇಕು ಎಂದು ಬೀರೂರು ಪಟ್ಟಣದ ಮಹಾನವಮಿ ಬಯಲಿನಲ್ಲಿ ಮೈಲಾರ ಲಿಂಗೇಶ್ವರ ದೇವರ ಗೊರವಯ್ಯ ದಶರಥ ಪೂಜಾರಿ ಕಾರ್ಣಿಕ ನುಡಿದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಪಟ್ಟಣದ ಮಹಾನವಮಿ ಬಯಲಿನಲ್ಲಿ ಕಾರ್ಣಿಕ ನುಡಿದಿದ್ದಾರೆ. ಮೈಲಾರ ಲಿಂಗೇಶ್ವರ ದೇವರ ಗೊರವಯ್ಯ ದಶರಥ ಪೂಜಾರಿ ಕಳೆದ 15 ವರ್ಷಗಳಿಂದ ದಶರಥ ಪೂಜಾರಿ ಕಾರ್ಣಿಕ ನುಡಿಯುತ್ತಿದ್ದಾರೆ. ವಿಶ್ವಕ್ಕೆ ಶಾಂತಿ ಭಂಗ, ಸರ್ವರೂ ಎಚ್ಚರದಿಂದಿರಬೇಕು. ವಿಶ್ವಕ್ಕೆ ಶಾಂತಿಯ ಭಂಗವಾಯಿತು, ಧರೆಗೆ ವರುಣನ ಆಗಮನವಾಯಿತು, ಸರ್ವರೂ ಎಚ್ಚರದಿಂದಿರಬೇಕು ಪರಾಕ್' ಎಂದು ಮೈಲಾರ ಲಿಂಗೇಶ್ವರ ದೇವರ ಗೊರವಯ್ಯ ದಶರಥ ಪೂಜಾರಿ ಮಾರ್ಮಿಕವಾಗಿ ಕಾರ್ಣಿಕ ನುಡಿದಿದ್ದಾರೆ.

ವಿಶ್ವಕ್ಕೆ ಶಾಂತಿ ಭಂಗ, ಸರ್ವರೂ ಎಚ್ಚರದಿಂದಿರಬೇಕು ಎಂಬುದನ್ನ ಉತ್ತರ ಕರ್ನಾಟಕ ಪ್ರವಾಹ, ರಾಜಕೀಯ ತಲ್ಲಣಗಳ ಹಿನ್ನೆಲೆಯಲ್ಲಿ ಇದೀಗ ಭಕ್ತರು ಗೊರವಯ್ಯನ ಕಾರ್ಣಿಕವನ್ನು ವಿವಿಧ ರೀತಿಯಲ್ಲಿ ವಿಶ್ಲೇಷಿಸುತ್ತಿದ್ದಾರೆ. ಇಟ್ಟ ರಾಮರ ಬಾಣ ಹುಸಿಯಿಲ್ಲ, ಧರ್ಮ-ಅಧರ್ಮ ಸಂಕಷ್ಟವಾಯಿತು, ವಿಶ್ವಕ್ಕೆ ಶಾಂತಿಯ ಭಂಗವಾಯಿತು, ಧರೆಗೆ ವರುಣನ ಆಗಮನವಾಯಿತು. ಆದರೆ, ಸರ್ವರು ಎಚ್ಚರದಿಂದರಬೇಕು ಪರಾಕ್ ಎಂದು ಮೈಲಾರ ಲಿಂಗೇಶ್ವರ ದೇವರ ಗೊರವಯ್ಯ ದಶರಥ ಪೂಜಾರಿ ಕಾರ್ಣಿಕ ನುಡಿದಿದ್ದಾರೆ.
ಗೊರವಯ್ಯ ಕಾರ್ಣಿಕ ಹೇಳಿದ್ದೇನು?
ನಾಡು ಬಂಗಾರದ ಗಿಂಡಿಲೇ ನಾಡು ಸಿರಿಯಾತಲೇ ಪರಾಕ್ ಎಂದು ನುಡಿದಿದ್ದಾನೆ. ಗೊರವಯ್ಯ ಕಾರ್ಣಿಕ ನುಡಿಯುತ್ತಿದ್ದಂತೆ ಸೇರಿದ್ದ ಭಕ್ತರು ವಿಶ್ಲೇಷಣೆ ಆರಂಭಿಸಿದರು. ಐತಿಹಾಸಿಕ ದೇವರಗುಡ್ಡ ಮಾಲತೇಶ ಸ್ವಾಮಿಯ ಕಾರ್ಣಿಕ ಅನ್ನದಾತರಿಗೆ ಶುಭ ಸೂಚನೆ ನೀಡಿದೆ ಎಂದು ಭಕ್ತರು ವಿಶ್ಲೇಷಣೆ ಮಾಡಿದರು. ಈ ನುಡಿ ಅನ್ನದಾತರ ಪಾಲಿಗೆ ಹರ್ಷ ತಂದಿದೆ. ಮುಂಗಾರು ಮಳೆ ಹಾನಿತಂದಿದೆ ಆದರೆ ಹಿಂಗಾರು ಮಳೆ ಬೆಳೆ ಉತ್ತಮವಾಗುತ್ತದೆ. ರೈತರಿಗೆ ಒಳ್ಳೆ ಫಸಲು ಬರುತ್ತೆ. ಮಳೆ ಚೆನ್ನಾಗಿ ಆಗುತ್ತದೆ. ಸಮೃದ್ದ ಬೆಳೆಯಿಂದ ರೈತರು ಸಂತುಷ್ಟಗೊಳ್ಳಲಿದ್ದಾರೆ ಎಂಬರ್ಥದಲ್ಲಿ ವಿಶ್ಲೇಷಣೆ ಮಾಡಿದರು.
ಶ್ರೀಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿರೋ ದೇವರಗುಡ್ಡದ ಕಾರ್ಣಿಕ ವರ್ಷದ ಭವಿಷ್ಯವಾಣಿ ಅಂತಾನೆ ಪ್ರಸಿದ್ದ. ಸಾಕ್ಷಾತ್ ದೇವರಗುಡ್ಡದ ದೇವರೆ ಗೊರವಪ್ಪನ ಮೈಮೇಲೆ ಅವತರಿಸಿ ವರ್ಷದ ಭವಿಷ್ಯವಾಣಿ ನುಡಿಸುತ್ತಾನೆ ಅನ್ನೋದು ಕಾರ್ಣಿಕವಾಣಿಯ ವಿಶಿಷ್ಟತೆಗೆ ಸಾಕ್ಷಿಯಾಗಿದೆ. ವಿಜಯನಗರ ಜಿಲ್ಲೆ ಮೈಲಾರದ ಮಾಲತೇಶ್ ಕಾರ್ಣಿಕೋತ್ಸವ ಮುಂಗಾರು ಮಳೆಯ ಭವಿಷ್ಯ ನುಡಿದರೇ ದೇವರಗುಡ್ಡದ ಕಾರ್ಣಿಕ ಹಿಂಗಾರು ಮಳೆಯ ಭವಿಷ್ಯ ನುಡಿಯುತ್ತೆ ಎನ್ನುವ ನಂಬಿಕೆ ಸಹ ಇಲ್ಲಿಯ ಭಕ್ತರಲ್ಲಿ ಮನೆ ಮಾಡಿದೆ.
ಈ ಕಾರ್ಣಿಕವನ್ನು ರಾಜಕೀಯವಾಗಿವಾಗಿ ಸಹ ಹಲವು ದೃಷ್ಟಿಕೋನದಲ್ಲಿ ವಿಶ್ಲೇಷಣೆ ಮಾಡಲಾಗುತ್ತದೆ. ಕೇಂದ್ರ ಮತ್ತು ರಾಜ್ಯ ನಾಯಕತ್ವ ಬದಲಾವಣೆಯಾಗುವದಿಲ್ಲ. ನಾಯಕತ್ವವನ್ನು ಕಾನೂನಿನ ಅಡೆತಡೆಯನ್ನೂ ಮೀರಿ ಎಲ್ಲರೂ ಒಪ್ಪಿಕೊಳ್ಳಬಹುದು ಎಂಬರ್ಥದಲ್ಲಿ ವಿಶ್ಲೇಷಣೆ ಮಾಡಲಾಗ್ತಿದೆ. ಸದ್ಯ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿರುವ ಸಿಎಂ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ ಎಂಬ ವಿಶ್ಲೇಷಣೆಯನ್ನ ಭಕ್ತರು ವ್ಯಕ್ತಪಡಿಸಿದರು.












Click it and Unblock the Notifications