Chicken: ಹಕ್ಕಿಜ್ವರ ಆತಂಕ: ಚಿಕನ್ - ಮೊಟ್ಟೆ ತಿನ್ನಬಹುದೇ, ಮುಂಜಾಗ್ರತಾ ಕ್ರಮವೇನು ?
Chicken: ಕರ್ನಾಟಕದಲ್ಲಿ ಇದೀಗ ಹಕ್ಕಿ ಜ್ವರದ ಆತಂಕ ಎದುರಾಗಿದೆ. ರಾಜ್ಯದ ಮೂರು ಜಿಲ್ಲೆಗಳಲ್ಲಿ ಈಗಾಗಲೇ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು ಈ ಬೆಳವಣಿಗೆ ನಾನ್‌ವೆಜ್ ಪ್ರಿಯರಲ್ಲಿ ಆತಂಕ ಮೂಡಿಸಿದೆ. ಕೋಳಿ ಹಾಗೂ ಮೊಟ್ಟೆಯನ್ನು ತಿನ್ನಬಹುದೇ. ಹಕ್ಕಿಜ್ವರ ಕಾಣಿಸಿಕೊಂಡಿರುವುದರಿಂದ ಮಾಂಸ ಸೇವನೆ ಮಾಡುವುದು ಸುರಕ್ಷಿತವೇ ಎನ್ನುವ ಪ್ರಶ್ನೆ ಜನರಲ್ಲಿ ಇದೆ. ಅಲ್ಲದೆ ಹಕ್ಕಿಜ್ವರ ಯಾವ ರೀತಿ ಹರಡುತ್ತದೆ ಈ ಸಂದರ್ಭದಲ್ಲಿ ಯಾವೆಲ್ಲ ಮಾದರಿಯ ಸುರಕ್ಷಿತ ಕ್ರಮಗಳನ್ನು ಅನುಸರಿಸಬಹುದು ಎನ್ನುವ ವಿವರ ಇಲ್ಲಿದೆ.
ರಾಜ್ಯದ ಮೂರು ಜಿಲ್ಲೆಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು. ಚಿಕನ್ ಪ್ರಿಯರು ಹಾಗೂ ನಾನ್‌ವೆಜ್ ಸೇವನೆ ಮಾಡುವವರಲ್ಲಿ ಆತಂಕ ಸೃಷ್ಟಿಯಾಗಿದೆ. ಅಲ್ಲದೆ ಇದೇ ಸಮಯದಲ್ಲಿ ಕುಕ್ಕುಟೋದ್ಯಮ (ಕೋಳಿ ಸಾಕಾಣಿಕೆ ಹಾಗೂ ವ್ಯಾಪಾರ) ಮಾಡುವವರಲ್ಲೂ ಆತಂಕ ಸೃಷ್ಟಿಯಾಗಿದೆ. ಹಕ್ಕಿಜ್ವರ ಕಾಣಿಸಿಕೊಳ್ಳುವ ಸಂದರ್ಭದಲ್ಲಿ ಕುಕ್ಕುಟೋದ್ಯಮಕ್ಕೆ ಹೊಡೆತ ಬಿದ್ದಿರುವುದೇ ಜಾಸ್ತಿ. ಈ ರೀತಿ ಆದಾಗ ಚಿಕನ್ ಬೆಲೆ ದಿಢೀರ್ ಕುಸಿಯುತ್ತದೆ. ಚಿಕನ್ ಹಾಗೂ ಮೊಟ್ಟೆಯನ್ನು ಖರೀದಿ ಮಾಡುವವರ ಸಂಖ್ಯೆ ಇಳಿಕೆಯಾಗುತ್ತದೆ. ಈ ಬಾರಿಯೂ ಅಂತಹದ್ದೇ ಆತಂಕ ಶುರುವಾಗಿದೆ.

ನಾನ್‌ವೆಜ್ ತಿಂದರೆ ಹಕ್ಕಿಜ್ವರ ಬರುತ್ತದೆಯೇ ?
ಹಕ್ಕಿಜ್ವರದ ವಿಷಯ ಕೇಳಿದ ಕೂಡಲೇ ಜನರಲ್ಲಿ ಮೂಡುವ ಮೊದಲ ಪ್ರಶ್ನೆ ಈ ಸಮಯದಲ್ಲಿ ಕೋಳಿ ಮಾಂಸ ಹಾಗೂ ಕೋಳಿ ಮೊಟ್ಟೆ ತಿನ್ನಬಹುದೇ. ಈ ರೀತಿ ತಿನ್ನುವುದರಿಂದ ಹಕ್ಕಿಜ್ವರ ಕಾಣಿಸಿಕೊಳ್ಳುತ್ತದೆಯೇ ಎನ್ನುವ ಪ್ರಶ್ನೆ ಎದುರಾಗುತ್ತದೆ. ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆಯು ಸ್ಪಷ್ಟನೆ ನೀಡಿದ್ದು. ಕೋಳಿ ಮಾಂಸವನ್ನಾಗಲಿ ಇಲ್ಲವೇ ಮೊಟ್ಟೆಯನ್ನು ತಿನ್ನುವುದರಿಂದ ಜನರಲ್ಲಿ ಹಕ್ಕಿಜ್ವರ ಕಾಣಿಸಿಕೊಳ್ಳಲ್ಲ. ಹೀಗಾಗಿ ಈ ಬಗ್ಗೆ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದೆ. ಇದೇ ಸಂದರ್ಭದಲ್ಲಿ ಮಾಂಸ ಸೇವನೆಯ ಬಗ್ಗೆ ಕೆಲವೊಂದು ಮುನ್ಸೂಚನೆಗಳಿವೆ ಅದೇನು ಎನ್ನುವ ನೋಡೋಣ.
ಹಕ್ಕಿಜ್ವರ ಈ ತಪ್ಪುಗಳನ್ನು ಮಾಡಬೇಡಿ...
* ಹಕ್ಕಿಜ್ವರ ಸೋಂಕು ತಗುಲಿದ ಕೋಳಿಯ ಮಾಂಸವನ್ನು ಚೆನ್ನಾಗಿ ಬೇಯಿಸದೆ ಇಲ್ಲವೇ ಅದರ ಹಸಿ ಮೊಟ್ಟೆಯನ್ನು ತಿನ್ನುವುದರಿಂದ ರೋಗ ಬರುವ ಸಾಧ್ಯತೆ ಇರುತ್ತದೆ.
* ಈ ಸಂದರ್ಭದಲ್ಲಿ ಕೋಳಿ ಮಾಂಸ ಹಾಗೂ ಮೊಟ್ಟೆಯನ್ನು ಚೆನ್ನಾಗಿ ಬೇಯಿಸಬೇಕು. 70 ಡಿ.ಸೆಂಗೂ ಹೆಚ್ಚು ಉಷ್ಣಾಂಶದಲ್ಲಿ ಬೇಯಿಸಬೇಕು. ಅಂದರೆ ಚೆನ್ನಾಗಿ ಕೊತ ಕೊತ ಎನ್ನುವಷ್ಟು ಕುದಿಸಿ ಸೇವನೆ ಮಾಡಬೇಕು.
* ಸೋಂಕಿತ ಕೋಳಿಯ ಹಸಿ ಮೊಟ್ಟೆಯನ್ನು ತಿನ್ನಬಾರದು.
* ತೆರೆದ ಮಾರುಕಟ್ಟೆ ಅಥವಾ ಹೊರಗಡೆ ಚಿಕನ್ ಸೇವಿಸುವಾಗ ಎಚ್ಚರಿಕೆ ವಹಿಸಿ. ಚೆನ್ನಾಗಿ ಬೇಯಿಸಿದ ನಾನ್‌ವೆಜ್ ಮಾತ್ರ ಸೇವನೆ ಮಾಡಿ.

* ರೋಗಪೀಡಿತ ಕೋಳಿಗಳೊಂದಿಗೆ ಬೇರೆಯ ಕೋಳಿಗಳನ್ನು ಸೇರದಂತೆ ನೋಡಿಕೊಳ್ಳಿ.
* ನಾನ್‌ವೆಬ್ ಬಳಸುವವರು ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಚಿಕನ್ ಅನ್ನು ಚೆನ್ನಾಗಿ ತೊಳೆದು ಬಳಸಬೇಕು.
* ಕೋಳಿ ಮಾಂಸ ಹಾಗೂ ಕೋಳಿ ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ತಿನ್ನುವುದರಿಂದ ಯಾವುದೇ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ.












Click it and Unblock the Notifications