• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇವೇಗೌಡ್ರ ಬಯೋಗ್ರಾಫಿ ಬಿಡುಗಡೆಗೆ ಮಹೂರ್ತ ನಿಗದಿ: ಕುತೂಹಲಕಾರಿ ಅಂಶಗಳು?

|
Google Oneindia Kannada News

ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ್ರ ಬಹು ನಿರೀಕ್ಷಿತ ಜೀವನಚರಿತ್ರೆ 'ಫರೋಸ್ ಇನ್ ಎ ಫೀಲ್ಡ್'( Furrows In A Field) ನವೆಂಬರ್ 29ರಂದು ಬಿಡುಗಡೆಯಾಗಲಿದೆ. ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಮುನ್ನ ಪುಸ್ತಕ ಬಿಡುಗಡೆಯಾಗುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ನವೆಂಬರ್ 29 ರಿಂದ ಡಿಸೆಂಬರ್ 23ರವರೆಗೆ ಅಧಿವೇಶನ ನಡೆಯಲಿದೆ.

ಸುಮಾರು ಆರು ನೂರು ಪುಟದ ಪುಸ್ತಕ ಇದಾಗಿದ್ದು, ನವೆಂಬರ್ 29ರಿಂದ ಎಲ್ಲಾ ಪುಸ್ತಕ ಮಳಿಗೆಗಳಲ್ಲಿ ಗೌಡ್ರ ಜೀವನಚರಿತ್ರೆ ಲಭ್ಯವಾಗಲಿದೆ. ಅಂತಾರಾಷ್ಟ್ರೀಯ ಪ್ರಕಾಶನ ಸಂಸ್ಥೆ ಪೆಂಗ್ವಿನ್ ಈ ಪುಸ್ತಕದ ಎಲ್ಲಾ ಭಾಷೆಯ, ಎಲ್ಲಾ ದೇಶದ ಹಕ್ಕನ್ನು ತನ್ನಲ್ಲಿ ಇಟ್ಟುಕೊಂಡಿದೆ. ದೆಹಲಿಯಲ್ಲಿ ಈ ಪುಸ್ತಕವನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗುವುದು.

ಅಂದು ನೆಹರೂ ಬದಲು ಇಂದಿರಾಗಾಂಧಿ ಪ್ರಧಾನಿಯಾಗಿದ್ದರೆ, ನೇಪಾಳ ಭಾರತದ ಭಾಗವಾಗುತ್ತಿತ್ತು: ಪ್ರಣಬ್ ಮುಖರ್ಜಿಅಂದು ನೆಹರೂ ಬದಲು ಇಂದಿರಾಗಾಂಧಿ ಪ್ರಧಾನಿಯಾಗಿದ್ದರೆ, ನೇಪಾಳ ಭಾರತದ ಭಾಗವಾಗುತ್ತಿತ್ತು: ಪ್ರಣಬ್ ಮುಖರ್ಜಿ

ಹಿರಿಯ ಪತ್ರಕರ್ತರಾದ ಸುಗತ ಶ್ರೀನಿವಾಸರಾಜು ಬರೆದಿರುವ ಬಯೋಗ್ರಾಫಿ ಇದಾಗಿದ್ದು, ದೇವೇಗೌಡ್ರ, ರಾಜ್ಯ ಮತ್ತು ದೇಶದ ರಾಜಕಾರಣದ ಹಲವು ಏರಿಳಿತಗಳ ಅಂಶಗಳು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇಂಗ್ಲಿಷ್ ನಲ್ಲಿ ಈ ಪುಸ್ತಕ ಹೊರಬರುತ್ತಿದ್ದು ಇದರ ಬೆಲೆ 799 ರೂಪಾಯಿ.

 ಸಂಕ್ರಾಂತಿ ನಂತರ ರಾಜಕೀಯ ಬಿರುಗಾಳಿ ಎಬ್ಬಿಸಲಿದೆ ದೇವೇಗೌಡರ ಆತ್ಮಚರಿತ್ರೆ ಸಂಕ್ರಾಂತಿ ನಂತರ ರಾಜಕೀಯ ಬಿರುಗಾಳಿ ಎಬ್ಬಿಸಲಿದೆ ದೇವೇಗೌಡರ ಆತ್ಮಚರಿತ್ರೆ

ಪ್ರಧಾನಿಯಾಗಿದ್ದಾಗ ತೆಗೆದುಕೊಂಡ ನಿರ್ಧಾರಗಳು, ನೀರಾವರಿ ವಿಚಾರದಲ್ಲಿ ದೇವೇಗೌಡ್ರಿಗೆ ಇರುವ ಅಪಾರ ಅನುಭವಗಳ ಅಂಶವೂ ಪುಸ್ತಕದಲ್ಲಿದೆ. ಸ್ವಾತಂತ್ರ್ಯಾನಂತರದ ದೇಶದ ರಾಜಕೀಯದ ಹಲವು ಅಂಶಗಳು ಪುಸ್ತಕದಲ್ಲಿವೆ.

 ಪೆಂಗ್ವಿನ್ ಪ್ರಕಾಶನ ಸಂಸ್ಥೆ ಇದರ ಜಾಗತಿಕ ರೈಟ್ಸ್ ಅನ್ನು ಹೊಂದಿದೆ

ಪೆಂಗ್ವಿನ್ ಪ್ರಕಾಶನ ಸಂಸ್ಥೆ ಇದರ ಜಾಗತಿಕ ರೈಟ್ಸ್ ಅನ್ನು ಹೊಂದಿದೆ

ದೇವೇಗೌಡರ ರಾಜಕೀಯ ಜೀವನದ ಒಳಚಿತ್ರಣ ಈ ಪುಸ್ತಕದಲ್ಲಿ ಇರಲಿದ್ದು, ಹಲವು ಆಸಕ್ತಿದಾಯಕ ಅಂಶಗಳು, ವಿವಿಧ ರಾಜಕೀಯ ನಾಯಕರ ನಡುವಿನ ಒಡನಾಟ, ಇದುವರೆಗೆ ಯಾರಿಗೂ ಗೊತ್ತಿಲ್ಲದ ವಿಷಯಗಳು, ಐದು ದಶಕಗಳ ರಾಜಕೀಯ ಮಜಲುಗಳ ವಿಶ್ಲೇಷಣೆಯನ್ನು ಪುಸ್ತಕದಲ್ಲಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಪೆಂಗ್ವಿನ್ ಪ್ರಕಾಶನ ಸಂಸ್ಥೆ ಇದರ ಜಾಗತಿಕ ರೈಟ್ಸ್ ಅನ್ನು ಹೊಂದಿದೆ.

ಹಿರಿಯ ಪತ್ರಕರ್ತರಾದ ಸುಗತ ಶ್ರೀನಿವಾಸರಾಜು ಟ್ವೀಟ್ ಮೂಲಕ ಮಾಹಿತಿ

"ಬೇರೆ ಬೇರೆ ದೇಶದಲ್ಲಿ, ಆಯಾಯ ಭಾಷೆಗಳಲ್ಲಿ ಪ್ರಕಟಿಸುವ ರೈಟ್ಸ್ ಅನ್ನು ಪೆಂಗ್ವಿನ್ ಸಂಸ್ಥೆ ಹೊಂದಿದ್ದು, ಸದ್ಯ ಭಾರತದಲ್ಲಿ ಮಾತ್ರ ಲೋಕಾರ್ಪಣೆ ಮಾಡಲಾಗುತ್ತಿದೆ. ಆರು ನೂರು ಪುಟಗಳ ಈ ಪುಸ್ತಕದಲ್ಲಿ 23 ಅಧ್ಯಾಯಗಳಿವೆ, ಎರಡು ಭಾಗದಲ್ಲಿ ಪುಸ್ತಕವನ್ನು ಹೊರತರಲಾಗಿದೆ. ಮೊದಲನೇ ಭಾಗದಲ್ಲಿ ದೇವೇಗೌಡ್ರ ಕರ್ನಾಟಕದ ರಾಜಕೀಯ ಪ್ರಯಾಣದ ಬಗ್ಗೆ, ಎರಡನೇ ಭಾಗದಲ್ಲಿ ಪ್ರಧಾನಿಯಾದ ನಂತರದ ವಿದ್ಯಮಾನಗಳನ್ನು ಪುಸ್ತಕದಲ್ಲಿ ಬರೆಯಲಾಗಿದೆ"ಎಂದು ಪತ್ರಕರ್ತರಾದ ಸುಗತ ಶ್ರೀನಿವಾಸರಾಜು ಹೇಳಿದ್ದಾರೆ.

 ಮನಮೋಹನ್ ಪ್ರಧಾನಿಯಾಗಿದ್ದು, ವಾಜಪೇಯಿಯವರು ಪ್ರಧಾನಿ ಪಟ್ಟ ಕಳೆದುಕೊಂಡಿದ್ದು

ಮನಮೋಹನ್ ಪ್ರಧಾನಿಯಾಗಿದ್ದು, ವಾಜಪೇಯಿಯವರು ಪ್ರಧಾನಿ ಪಟ್ಟ ಕಳೆದುಕೊಂಡಿದ್ದು

2004ರವರೆಗಿನ ದೇವೇಗೌಡ್ರ ಪಯಣದ ವರೆಗೆ ಮಾತ್ರ ಪುಸ್ತಕದಲ್ಲಿ ಉಲ್ಲೇಖವಾಗಿದೆ, ಈ ಇಸವಿಯ ನಂತರದ ಅಂಶಗಳನ್ನು ಇನ್ನೊಂದು ಪುಸ್ತಕದ ಮೂಲಕ ತಿಳಿಸಲು ಸುಗತ ಶ್ರೀನಿವಾಸ ರಾಜು ನಿರ್ಧರಿಸಿದ್ದಾರೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದು, ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿ ಪಟ್ಟ ಕಳೆದುಕೊಂಡಿದ್ದು, ಹಣಕಾಸು ತಜ್ಞ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ, ಪಿ.ಚಿದಂಬರಂ ಜೊತೆಗಿನ ಒಡನಾಟ, ಗೌಡ್ರ ಜೊತೆಗೆ ಕೆಲಸ ಮಾಡಿದ ವಿವಿಧ ಅಧಿಕಾರಿಗಳ ಪ್ರತಿಕ್ರಿಯೆ ಮುಂತಾದ ಅಂಶವೂ ಪುಸ್ತಕದಲ್ಲಿ ಇರಲಿದೆ.

  ನನಿಗೆ ಅವಮಾನ ಮಾಡಿದವರಿಗೆ ನಾನು ಬುದ್ದಿ ಕಲಿಸುತ್ತೆನೆ! | Oneindia Kannada
   ಬ್ರೆರಿಗಳಲ್ಲಿ ಸಿಕ್ಕ ಅಂಶಗಳನ್ನು ಇಟ್ಟುಕೊಂಡು ಈ ಪುಸ್ತಕವನ್ನು ಹೊರತರಲಾಗುತ್ತಿದೆ

  ಬ್ರೆರಿಗಳಲ್ಲಿ ಸಿಕ್ಕ ಅಂಶಗಳನ್ನು ಇಟ್ಟುಕೊಂಡು ಈ ಪುಸ್ತಕವನ್ನು ಹೊರತರಲಾಗುತ್ತಿದೆ

  "ಪಾರ್ಲಿಮೆಂಟಿನಲ್ಲಿ ಸಿಕ್ಕ ಮಾಹಿತಿ, ವಿವಿಧ ಲೈಬ್ರೆರಿಗಳಲ್ಲಿ ಸಿಕ್ಕ ಅಂಶಗಳನ್ನು ಇಟ್ಟುಕೊಂಡು ಈ ಪುಸ್ತಕವನ್ನು ಹೊರತರಲಾಗುತ್ತಿದೆ. ಪ್ರೀಆರ್ಡರ್ ರಿಲೀಸ್ ಅಮೆಜಾನ್, ಫ್ಲಿಪ್ ಕಾರ್ಟ್ ನಲ್ಲೂ ಈ ಪುಸ್ತಕ ಸಿಗಲಿದೆ. ಕರ್ನಾಟಕದಲ್ಲಿ ದೇವೇಗೌಡ್ರನ್ನು 'ಮಣ್ಣಿನ ಮಗ' ಎಂದು ಕರೆಯಲಾಗುತ್ತಿದೆ, ವ್ಯವಸಾಯ ಜೊತೆಗೆ ಗೌಡ್ರಿಗೆ ನಿಕಟ ಸಂಬಂಧ ಇರುವುದರಿಂದ 'ಫರೋಸ್ ಇನ್ ಎ ಫೀಲ್ಡ್' ಎಂದು ಹೆಸರಿಡಲಾಗಿದೆ. ಗೌಡ್ರ ಬಗ್ಗೆ ತಿಳಿಯದ ಹಲವು ಅಂಶಗಳನ್ನು ಪುಸ್ತಕದಲ್ಲಿ ಕಟ್ಟಿಕೊಡಲಾಗಿದೆ"ಎಂದು ಸುಗತ ಶ್ರೀನಿವಾಸರಾಜು ಹೇಳಿದ್ದಾರೆ.

  English summary
  A biography on former Prime Minister of India HD Deve Gowda, written by senior journalist Sugata Srinivasaraju, will be released on November 29. To reveal more interesting things.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X