Lawyer Jagadish: 'ನಿನಗೆ ಬಟ್ಟೆ ಬಿಚ್ಚಿ ಹೊಡಿತಿನಿ' ಸಿಟಿ ರವಿಗೆ ಉಗಿದ ಲಾಯರ್ ಜಗದೀಶ್

ರಾಜ್ಯದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ ಪ್ರಕರಣ ಭಾರೀ ಆಕ್ರೋಶಕ್ಕೆ ಗುರಿಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ವಿಧಾನಪರಿಷತ್‌ ಸದಸ್ಯ ಸಿಟಿ ರವಿ ಅವರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಲಾಯರ್ ಜಗದೀಶ್, ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಕೆಟ್ಟ ಪದ ಬಳಕೆ ಮಾಡಿದ ಆರೋಪ ಹೊತ್ತ ಸಿಟಿ ರವಿಗೆ ತರಾಟೆ ತೆಗೆದುಕೊಂಡಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ವೈರಲ್ ವಿಡಿಯೋದಲ್ಲಿ ಜಗದೀಶ್ ಸಿಟಿ ರವಿ ಅವರಿಗೆ ಹಿಗ್ಗಾಮುಗ್ಗಾ ಉಗಿದಿದ್ದಾರೆ. ಜೊತೆಗೆ ಸಿಟಿ ರವಿ ಇರುವ ಜೈಲಿಗೆ ಹೋಗಿ ಹೊಡೆಯುವುದಾಗಿ ಹೇಳಿದ್ದಾರೆ. ಮಹಿಳೆ ಬಗ್ಗೆ ಇಂಥಹ ಕೆಟ್ಟ ಪದ ಬಳಕೆಯನ್ನು ಲಾಯರ್‌ ಜಗದೀಶ್ ಖಂಡಿಸಿದ್ದಾರೆ. ಮಹಿಳೆ ಬಗ್ಗೆ ಮಾತನಾಡಲು ಸಿಟಿ ರವಿಗೆ ಯಾವ ಯೋಗ್ಯತೆ ಕೂಡ ಇಲ್ಲ ಎಂದು ತುಂಬಾ ಕೆಟ್ಟ ಪದಗಳಿಂದ ಜಗದೀಶ್ ಅವರು ಸಿಟಿ ರವಿ ಅವರನ್ನು ನಿಂದಿಸಿದ್ದಾರೆ.

bigg boss lawyer jagadish lashes out at ct ravi- I will undress and beat you

ದೇಶದಲ್ಲಿ ಅದಾನಿ ಅನ್ನು ಬಚಾವ್ ಮಾಡಲಿಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅಂಬೇಡ್ಕರ್‌ ಅವರನ್ನು ಅವಮಾನ ಮಾಡುತ್ತಾನೆ. ಈಗ ಕರ್ನಾಟಕದ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಅದೇ ಬಿಜೆಪಿಯ ಸಿಟಿ ರವಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರನ್ನು ವೇಶ್ಯೆ ಎಂದು ಕರೆಯುತ್ತಾನೆ. ಇಂತಹ ಹಲ್ಕಟ್‌ಗಳಿಗೆ ಬಿಜೆಪಿ ಟಿಕೆಟ್ ಕೊಟ್ಟು, ಎಂಎಲ್‌ಸಿ ಮಾಡೋದು ಸುಸಂಸ್ಕೃತಿನಾ ಎಂದು ಜಗದೀಶ್ ಪ್ರಶ್ನೆ ಮಾಡಿದ್ದಾರೆ.

ಒಂದು ಕಡೆ ನೀವು ಅಂಬೇಡ್ಕರ್‌ ಅವರನ್ನು ಅವಮಾನ ಮಾಡ್ತೀತಿ. ಅಂಬೇಡ್ಕರ್‌ ಅವರ ಹೆಸರು ಹೇಳಿದರೆ ಆರ್‌ಎಸ್‌ಎಸ್- ಬಿಜೆಪಿ ಅವರಿಗೆ ತಿ... ಉರಿ. ಆರ್‌ಎಸ್‌ಎಸ್‌ 1949 ನೆಹರು ಹಾಗೂ ಅಂಬೇಡ್ಕರ್‌ ಅವರ ಪ್ರತಿಕೃತಿ ಧ್ವಂಸ ಮಾಡಿತ್ತು. ಅಂಬೇಡ್ಕರ್‌ ಅವರು ಬರೆದಿರುವುದನ್ನು ಬಸವಣ್ಣ ಅವರು ಹನ್ನೆರಡನೇ ಶತಮಾನದಲ್ಲಿ ಹೇಳಿದ್ದರು. ಈ ಬಿಜೆಪಿ ಅವರು ಗುಂಡಾಗಳನ್ನು ಇಟ್ಟುಕೊಂಡು ಮಾಡಬಾರದ ಕೆಲಸ ಮಾಡಿಸುತ್ತಿದ್ದಾರೆ ಎಂದು ಜಗದೀಶ್ ಅಮಿತ್‌ ಶಾ ವಿರುದ್ಧ ಕಿಡಿ ಕಾರಿದ್ದಾರೆ.

bigg boss lawyer jagadish lashes out at ct ravi- I will undress and beat you

ಸಿಟಿ ರವಿಗೆ ಶೂ ತೋರಿಸಿದ ಜಗದೀಶ್

ಬಿಜೆಪಿಯಲ್ಲಿ ಇರುವವರು ಎಂಥವರು ಎಂದು ಲಾಯರ್‌ ಜಗದೀಶ್ ವಿವರಿಸಿದ್ದಾರೆ. ''ಲೇ.. ಸಿಟಿ ರವಿ ನಿನಗೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೆ ವೇಶ್ಯೆ ಎಂದು ಹೇಳಲು ಯಾರು ಹೇಳಿಕೊಟ್ಟಿದ್ದು? ರಮೇಶ್ ಜಾರಕಿಹೊಳಿ ಹೇಳಿಕೊಟ್ಟನಾ? ಅಥವಾ ದೇವೇಗೌಡ ಮೊಮ್ಮಗ ಪ್ರಜ್ವಲ್ ರೇವಣ್ಣ ಹೇಳಿ ಕೊಟ್ಟನಾ? ಯಾವ ಸೀಮೆ ಒಕ್ಕಲಿಗ ನೀನು? ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಸಚಿವೆಗೆ ಅದರಲ್ಲೂ ಒಬ್ಬ ಹೆಣ್ಣುಮಗಳಿಗೆ ಅಂತಹ ಪದ ಬಳಕೆ ಮಾಡಲು ನೀನ್ ಹೊಟ್ಟೆಗೆ ಏನು ತಿಂತಿಯೋ ಲೇ ನೀನು..?'' ಎಂದು ಜಗದೀಶ್ ಕಾಲಿಗೆ ಹಾಕಿದ್ದ ಶೂ ತೋರಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

''ದೇವೇಗೌಡನ ಮೊಮ್ಮಗ ಹಲವಾರು ಹೆಣ್ಮಕ್ಕಳ ಜೀವನ ಹಾಳು ಮಾಡಿದ್ದಾನೆ. ಭೇಟಿ ಮಾಡಲು ಬಂದ ಹೆಣ್ಣು ಮಗಳ ಜೊತೆ ಸಂಪರ್ಕ ಹೊಂದಿರುವ ರಮೇಶ್, ಯಡಿಯೂರಪ್ಪ, ಮುನಿರತ್ನ ಏನಂತ ನಿಮ್ಮಂಥವರನ್ನು ಪಕ್ಷದಲ್ಲಿ ಇಟ್ಟುಕೊಂಡಿದ್ದಾರೋ..'' ಎಂದು ಜಗದೀಶ್ ವಾಗ್ದಾಳಿ ಮಾಡಿದರು.

'ನಿನಗೆ ಬಟ್ಟೆ ಬಿಚ್ಚಿ ಹೊಡಿತಿನಿ' ಎಂದ ಲಾಯರ್

''ಲೇ ಸಿಟಿ ರವಿ ನಿನಗೆ ಚಪ್ಪಲಿಯಲ್ಲಿ ಹೊಡೆಯಬೇಕಿತ್ತು. ಹೇಗೆ ನೀನು ವೇಶ್ಯೆಗೆ ಹೋಲಿಸಿದೆ ಆ ಮಹಿಳೆಯನ್ನು? ನಾನು ಇದ್ದಿದ್ದರೆ ನಿನಗೆ ಎಕ್ಕಡ ತಗೊಂಡು ಹೊಡೆಯುತ್ತಿದ್ದೆ. ಅಮಾಯಕರ ಮೇಲೆ ಗಾಡಿ ಹತ್ತಿಸಿದ ಕುಡಕ ನೀನು. ಏನೋ ಯೋಗ್ಯತೆ ಇದೆ ನಿನಗೆ ಮತ್ತೊಬ್ಬರ ಬಗ್ಗೆ ಮಾತನಾಡಲು'' ಎಂದು ಜಗದೀಶ್ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದು ವೀಡಿಯೋದಲ್ಲಿ ಕಂಡು ಬಂದಿದೆ.

''ನಾನು ನೀನಿರುವ ಜೈಲಿಗೆ ಬಂದು ಹೊಡೆಯುತ್ತೇನೆ''

''ಎಫ್‌ಐಆರ್‌ ಹಾಕಿಸಿಕೊಂಡು ನಾನು ಜೈಲಿಗೆ ಬಂದು ನಿನಗೆ ಬಟ್ಟೆ ಬಿಚ್ಚಿ ಹೊಡಿತಿನಿ. ಹೆಣ್ಮಕ್ಕಳ ಕಷ್ಟ ಗೊತ್ತಾ ನಿನಗೆ? ನಿನ್ ಯೋಗ್ಯತೆ ಎಕ್ಕಡ ಹಾಕಾ. ನಾನು ಬೆಳಗಾವಿಯಲ್ಲಿ ಇದ್ದಿದ್ದರೆ ಅಲ್ಲೇ ಎಕ್ಕಡ ತಗೊಂಡು ಹೊಡೆಯುತ್ತಿದ್ದೆ. ಕರ್ನಾಟಕದಲ್ಲಿ ಇಂಥವರನ್ನು ಬೆಳೆಸಬಾರದು'' ಎಂದು ಜಗದೀಶ್ ಅವರು ಸಿಟಿ ರವಿ ಅವರಿಗೆ ಬೀಪ್... ಬೀಪ್.... ಮಾತನಾಡಿದ್ದಾರೆ.

ಒಟ್ಟಿನಲ್ಲಿ ಸಿಟಿ ರವಿ ಅವರು ಲಕ್ಷ್ಮೀ ಅವರ ಬಗ್ಗೆ ಅವಾಚ್ಯ ಪದ ಬಳಕೆ ಮಾತನಾಡಿದ್ದಾರೆಂದು ದೂರು ದಾಖಲಾಗಿದೆ. ಅವರನ್ನೀಗ ಬಂಧಿಸಲಾಗಿದೆ. ಬೆಳಗಾವಿಯಲ್ಲಿ ಜಾಮೀನು ಅರ್ಜಿ ವಿಚಾರಣೆ ಬಳಿಕ ನ್ಯಾಯಾಧೀಶರು ವಿಚಾರಣೆಯನ್ನು ಬೆಂಗಳೂರಿನ ಜನಪ್ರತಿನಿಧಿ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+