ಪಿಂಚಣಿ ಪಡೆಯುತ್ತಿದ್ದರಿಗೆ ಬಿಗ್ ಶಾಕ್ ; ಬರೋಬ್ಬರಿ 1 ಲಕ್ಷಕ್ಕೂ ಹೆಚ್ಚು ಜನರ ಪಿಂಚಣಿ ರದ್ದು!
ಬೆಂಗಳೂರು, ಆಗಸ್ಟ್ 20: ನಕಲಿ ದಾಖಲೆ ಸಲ್ಲಿಕೆ ಮಾಡಿದ, ಸೂಕ್ತ ದಾಖಲೆ ಇಲ್ಲದ, ಖಾತೆಗೆ ಆಧಾರ್ ಜೋಡಣೆ ಮಾಡದವರ ಪಿಂಚಣಿಯನ್ನು ರದ್ದು ಮಾಡಲಾಗಿದೆ. ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯುತ್ತಿದ್ದ ಅನರ್ಹರನ್ನು ಪತ್ತೆ ಮಾಡಿ ಪಾವತಿಯಾಗುತ್ತಿದ್ದ ಪಿಂಚಣಿ ಹಣಕ್ಕೆ ಕಂದಾಯ ಇಲಾಖೆ ತಡೆ ನೀಡಿದೆ.
ಹೌದು, ನಕಲಿ ಫಲಾನುಭವಿಗಳು ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ನವೋದಯ ಮೊಬೈಲ್ ಆಧಾರಿತ ಸಮಗ್ರ ವಾರ್ಷಿಕ ಪರಿಶೀಲನಾ ಕಾರ್ಯ ಕೈಗೊಳ್ಳಲಾಗಿದ್ದು, 83,565 ಜನರ ಪಿಂಚಣಿ ಸ್ಥಗಿತ ಮಾಡಲಾಗಿದೆ. ನಕಲಿ ದಾಖಲೆ ಸಲ್ಲಿಕೆ ಮಾಡಿದ, ಸೂಕ್ತ ದಾಖಲೆ ಇಲ್ಲದ, ಖಾತೆಗೆ ಆಧಾರ್ ಜೋಡಣೆ ಮಾಡದವರ ಪಿಂಚಣಿಯನ್ನು ರದ್ದು ಮಾಡಲಾಗಿದೆ. ಸುಮಾರು 3 ಕೋಟಿ ರೂ. ಹಣ ವಸೂಲಿ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಇನ್ನೂ ಆಧಾರ್ ಜೋಡಣೆ ಮಾಡದ 35,204 ಅನರ್ಹರ ಪಿಂಚಣಿಯನ್ನು ನಿಲ್ಲಿಸಲಾಗಿದೆ.

ಇನ್ನೂ ಪಿಂಚಣಿ ಕುರಿತು ಸಾಕಷ್ಟು ಲೋಕಗಳು ಕಂಡು ಬರುತ್ತಿದ್ದು, ಅನರ್ಹರು ಪಿಂಚಣಿ ಪಡೆಯುತ್ತಿರುವ ಬಗ್ಗೆ, ವ್ಯಾಪಕ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಕಳೆದ ಸೆಪ್ಟೆಂಬರ್ ನಿಂದಲೂ ಕಂದಾಯ ಇಲಾಖೆ ಪರಿಶೀಲನೆ ಕಾರ್ಯದಲ್ಲಿ ತೊಡಗಿತ್ತು. ಪಿಂಚಣಿ ಪಡೆಯುತ್ತಿದ್ದ ಜನರು ಆಧಾರ್ ಜೋಡಣೆ ಮಾಡದ ಫಲಾನುಭವಿಗಳ ಪಿಂಚಣಿ ತಡೆ ಹಿಡಿದಿದೆ. ಎಲ್ಲಾ ದಾಖಲೆಗಳನ್ನ ಸಲ್ಲಿಸಿದವರಿಗೆ ಮತ್ತೆ ಪಿಂಚಣಿ ನೀಡಲಾಗುತ್ತದೆ.
ಕಂದಾಯ ಇಲಾಖೆ ಹಲವು ದೂರುಗಳ ಆಧಾರದ ಮೇಲೆ ಪರಿಶೀಲನೆ ನಡೆಸಿದ್ದು, ಕೆಲವರು ಎರಡು ಪಿಂಚಣಿ ಪಡೆದು ಸರ್ಕಾರದ ಸೌಲಭ್ಯ ಪಡೆದುಕೊಂಡಿರುವುದು ಗೊತ್ತಾಗಿದೆ.ಇನ್ನೂ ಪರೀಶಿಲನೆಯಲ್ಲಿ 60 ವರ್ಷ ಆಗದವರು ಕೂಡ ವೃದ್ಧಾಪ್ಯ ವೇತನ ಪಡೆದುಕೊಂಡಿದ್ದರೆ, ಇನ್ನೂ ಕೆಲವರು ಸಂಧ್ಯಾ ಸುರಕ್ಷಾ ಯೋಜನೆಯ ಹಣವನ್ನು ಪಡೆದುಕೊಂಡಿದ್ದಾರೆ. ಅಲ್ಲದೇ 30,000 ಪ್ರಕರಣಗಳಲ್ಲಿ ಪಿಂಚಣಿ ಸ್ಥಗಿತ ಮಾಡಲಾಗಿದೆ ಎಂದು ತಿಳಿದು ಬಂದಿದೆ.












Click it and Unblock the Notifications