ಕರ್ನಾಟಕದ ಪ್ರಮುಖ ನಗರಕ್ಕೆ ಭರ್ಜರಿ ಬಂಪರ್, ಎಲ್ಲಿ ವಿವರ ಇಲ್ಲಿದೆ!
ಕರ್ನಾಟಕದ ಪ್ರಮುಖ ನಗರಗಳಲ್ಲಿ ಒಂದಾಗಿರುವ ಹಾಗೂ ಇತ್ತೀಚೆಗೆ ವಿಧಾನಸಭೆಯಲ್ಲಿ ಈ ಭಾಗದ ಉದ್ಯಮಗಳ ಬಗ್ಗೆಯೂ ಚರ್ಚೆಯಾಗಿದ್ದ ಮಂಗಳೂರು ನಗರಕ್ಕೆ ಬಂಪರ್ ಬಂದಿದೆ. ಈ ಭಾಗದಲ್ಲಿ ಹೊಸ ಉದ್ಯಮಗಳು ಪ್ರಾರಂಭವಾಗಿದ್ದು, ಮಂಗಳೂರಿಗೆ ಮಹತ್ವದ ಉದ್ಯಮ ಬಂದಿರುವ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ಬೋಸ್ (Bose) ತನ್ನ ಪ್ರಧಾನ ಕಚೇರಿಯ ಹೊರಗೆ ತನ್ನ ಮೊದಲ ಮೀಸಲಾದ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಕ್ಕಾಗಿ ಮಂಗಳೂರನ್ನು ಆಯ್ಕೆ ಮಾಡಿಕೊಂಡಿದೆ. ಇದು ನಗರದ ಹೊಸ ಆವಿಷ್ಕಾರದ ಕೇಂದ್ರವಾಗಿ ಬೆಳೆಯುತ್ತಿರುವ ಪ್ರಾಮುಖ್ಯತೆಯ ಬಲವಾದ ಸಂಕೇತವಾಗಿದೆ. ಹೊಸ ಸೌಲಭ್ಯವು ಎಂಬೆಡೆಡ್ ಸಾಫ್ಟ್‌ವೇರ್, ಅಪ್ಲಿಕೇಶನ್‌ಗಳು ಮತ್ತು ಕ್ಲೌಡ್ ತಂತ್ರಜ್ಞಾನಗಳ ಮೇಲೆ ಕೇಂದ್ರೀಕರಿಸುತ್ತದೆ, ಮಾರಾಟ, ವಹಿವಾಟು ಮತ್ತು ಹಣಕಾಸು ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಅದರ ಜಾಗತಿಕ ವ್ಯವಹಾರಕ್ಕೆ ಸಮಗ್ರ ಬೆಂಬಲ ನೆಲೆಯನ್ನು ಸೃಷ್ಟಿಸುತ್ತದೆ.

ಇದು ಕರ್ನಾಟಕದಾದ್ಯಂತ ತಂತ್ರಜ್ಞಾನ ಬೆಳವಣಿಗೆಯನ್ನು ವಿಕೇಂದ್ರೀಕರಿಸುವ ನಮ್ಮ #BeyondBengaluru ಬೆಳವಣಿಗೆಯನ್ನು ನಾವು ಉತ್ತೇಜಿಸುತ್ತೇವೆ. ಇಂದು, ಮಂಗಳೂರು ಬಲವಾದ ನೆಲೆಯನ್ನು ಹೊಂದಿದೆ ಎಂದಿದ್ದಾರೆ.
- 20+ ಎಂಜಿನಿಯರಿಂಗ್ ಕಾಲೇಜುಗಳು, 80,000+ ವಿದ್ಯಾರ್ಥಿಗಳು
- 15,000 ಐಟಿ ವೃತ್ತಿಪರರು
- 3.35 ಲಕ್ಷ ಚದರ ಅಡಿ ಪ್ಲಗ್-ಅಂಡ್-ಪ್ಲೇ ಇನ್ಫ್ರಾಸ್ಟ್ರಕ್ಚರ್
- 500+ ಸಹ-ಕೆಲಸದ ಕೇಂದ್ರಗಳು
- ನಿರ್ಮಾಣ ಹಂತದಲ್ಲಿರುವ 4.5 ಲಕ್ಷ ಚದರ ಅಡಿ ಐಟಿ ಪಾರ್ಕ್‌ಗಳು ಸೇರಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.
BASF ನಂತಹ ಜಾಗತಿಕ ಹೆಸರುಗಳಿಂದ ಹಿಡಿದು ಇನ್ಫೋಸಿಸ್ ನಂತಹ ಸ್ಥಳೀಯ ಮಟ್ಟದ ಪ್ರತಿಷ್ಠಿತ ಕಂಪನಿಗಳ ವರೆಗೆ, ಮಂಗಳೂರು ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನ ಕ್ಲಸ್ಟರ್ ಆಗಿ ಪ್ರಬುದ್ಧವಾಗಿದೆ. ಭಾರತದ ಸಿಲಿಕಾನ್ ಬೀಚ್ ಎಂದು ಗುರುತಿಸಲ್ಪಟ್ಟ ಇದು, ಉದ್ಯಮಗಳು ಆತ್ಮವಿಶ್ವಾಸದಿಂದ ಸ್ಥಾಪಿಸಬಹುದಾದ, ಹೊಸ ಮತ್ತು ಅಭಿವೃದ್ಧಿ ಮಾಡಬಹುದಾದ ತಾಣವಾಗಿ ವೇಗವಾಗಿ ಹೊರಹೊಮ್ಮುತ್ತಿದೆ ಎಂದು ಅವರು ಟ್ವೀಟ್‌ನಲ್ಲಿ ವಿವರಿಸಿದ್ದಾರೆ.
ಮಂಗಳೂರಿನ ಬಗ್ಗೆ ಭಾರೀ ಚರ್ಚೆ: ಇನ್ನು ಈಚೆಗೆ ಮಂಗಳೂರಿನ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಮಂಗಳೂರು ನಗರದಲ್ಲಿ 7 - 8 ಗಂಟೆಯ ನಂತರ ವ್ಯಾಪಾರ ಹಾಗೂ ವಾಣಿಜ್ಯ ಚಟುವಟಿಕೆಗಳು ನಡೆಯುವುದು ವಿರಳವಾಗಿದೆ. ಅಲ್ಲದೇ ಈ ಭಾಗದಲ್ಲಿ ಫೈ ಸ್ಟಾರ್ ಹೋಟಲ್‌ಗಳು ಇಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಈಚೆಗೆ ಹೇಳಿದ್ದರು. ಮಂಗಳೂರು ವಲಸೆ ಪ್ರಕ್ರಿಯೆಯನ್ನು ನಿಲ್ಲಿಸಬೇಕು ಹಾಗೂ ಗೋವಾ ಮತ್ತು ಬೆಂಗಳೂರು ಸೇರಿದಂತೆ ವಿವಿಧ ಪ್ರದೇಶಗಳಿಗೆ ಜನ ಇಲ್ಲಿಂದ ಹೋಗುವುದನ್ನು ತಪ್ಪಿಸುವ ಅವಶ್ಯಕತೆ ಇದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಈಚೆಗೆ ಅಭಿಪ್ರಾಯಪಟ್ಟಿದ್ದರು.












Click it and Unblock the Notifications