ಬೀದರ್ ಅಶ್ಲೀಲ ವಿಡಿಯೋ : ಅಸಲಿಯೋ ನಕಲಿಯೋ?

Bidar obscene video : Real or fake?
ಬೆಂಗಳೂರು, ಅ. 4 : "ಬೀದರ್ ನಲ್ಲಿ ನಡೆದಿದೆ ಎನ್ನಲಾದ ಅಶ್ಲೀಲ ಪಾರ್ಟಿ, ಅದರ ವಿಡಿಯೋ ತುಣುಕಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಆ ವಿಡಿಯೋದಲ್ಲಿ ಇದ್ದಾರೆನ್ನಲಾದ ಬಾಬು ವಾಲಿ ಬಿಜೆಪಿ ಪದಾಧಿಕಾರಿಯೂ ಅಲ್ಲ. ಬಾಬು ವಾಲಿಗೂ ಬಿಜೆಪಿಗೂ ತಳಕುಹಾಕಬೇಡಿ" ಎಂದು ರಾಜ್ಯ ಬಿಜೆಪಿ ಬಿಜೆಪಿ ಅಶ್ಲೀಲ ವಿಡಿಯೋ ಕುರಿತು ಸ್ಪಷ್ಟೀಕರಣ ನೀಡಿದೆ.

ಈ ಘಟನೆಯಿಂದಾಗಿ ಕರ್ನಾಟಕ ಬಿಜೆಪಿ ಇಮೇಜಿಗೆ ಧಕ್ಕೆ ಬಂದಿದೆ. ಬಾಲು ವಾಲಿ ಬಿಜೆಪಿಯಲ್ಲಿ ಯಾವು ಹುದ್ದೆಯನ್ನೂ ಹೊಂದಿಲ್ಲ. ಈ ಘಟನೆಯ ಸಂಪೂರ್ಣ ತನಿಖೆ ನಡೆಯಬೇಕು. ಈ ಪ್ರಕರಣದ ವಿರುದ್ಧ ಅಗತ್ಯ ಬಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿಯೂ ರಾಜ್ಯ ಬಿಜೆಪಿ ಹೇಳಿಕೆ ನೀಡಿದೆ.

ಇದೇ ಸಂದರ್ಭದಲ್ಲಿ ಬೀದರ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿರುವ ಬಾಬು ವಾಲಿ ಅವರು, "ಈ ಘಟನೆಯ ಹಿಂದೆ ಅನೇಕರ ಷಡ್ಯಂತ್ರ ಇದೆ. ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿದವರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇನೆ. ಪಾಕಿಸ್ತಾನದ ಮುಜ್ರಾ ದೃಶ್ಯವನ್ನು ಬೀದರ್ ದೃಶ್ಯವೆಂದು ಬಿಂಬಿಸಲಾಗಿದೆ. ಕೆಜೆಪಿಯ ನಾಯಕಿ ಶೋಭಾ ಕರಂದ್ಲಾಜೆ ಆ ರೀತಿ ಹೇಳಿಕೆ ನೀಡಬಾರದಿತ್ತು. ಅವರು ಕ್ಷಮೆ ಕೇಳಬೇಕು" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಯ ಗಾಳಿಪಟ : ಬೀದರ್ ನಲ್ಲಿ ರಾಜಕೀಯ ನಾಯಕರು, ಮಹಿಳೆಯರ ಸಮ್ಮುಖದಲ್ಲಿ ಅಶ್ಲೀಲ ನಂಗಾನಾಚ್! ಆ ಘಟನೆ ನಡೆದದ್ದು ಬೀದರ್ ನಲ್ಲಿ ಅಲ್ಲ, ಹೈದರಾಬಾದ್ ನಲ್ಲಿ! ಅಲ್ಲ ಅಲ್ಲ, ಇದು ನಡೆದದ್ದು ಇದೇ ವರ್ಷ ಜನವರಿಯಲ್ಲಿ ಅಲ್ಲ, ನಾಲ್ಕು ವರ್ಷಗಳ ಹಿಂದೆ! ಈ ಅಶ್ಲೀಲ ಘಟನೆ ನಡೆದದ್ದು ಬೀದರಲ್ಲೂ ಅಲ್ಲ, ಹೈದರಾಬಾದಲ್ಲೂ ಅಲ್ಲ, ಪಾಕಿಸ್ತಾನದಲ್ಲಿ!

ಶುಕ್ರವಾರ ಬೆಳಗಿನಿಂದ ತಲೆಕೆಟ್ಟುಹೋಗುವಷ್ಟು ಎಲ್ಲ ಮಾಧ್ಯಮಗಳಲ್ಲಿ ಈ ಘಟನೆಯದೇ ಚರ್ಚೆ. ಆರೋಪಿ ಸ್ಥಾನದಲ್ಲಿ ನಿಂತ ವ್ಯಕ್ತಿ, ಈ ವಿಡಿಯೋದಲ್ಲಿ ಇದ್ದದ್ದು ನಾನಲ್ಲವೇ ಇಲ್ಲ, ಇದು ಇಂಟರ್ನೆಟ್ ಜಮಾನಾ, ಯಾರೋ ಮಾರ್ಫ್ ಮಾಡಿ ನನ್ನ ತೇಜೋವಧೆ ಮಾಡಿದ್ದಾರೆ, ಅವರನ್ನು ಕೋರ್ಟಿಗೆಳೆಯದೆ ಬಿಡುವುದಿಲ್ಲ... ಇತ್ಯಾದಿ ಇತ್ಯಾದಿ ಸ್ಪಷ್ಟೀಕರಣ ಕೊಟ್ಟರೂ ಮಾಧ್ಯಮಗಳಿಗೆ ತೃಪ್ತಿಯಿಲ್ಲ.

ಇಂಥ ಹಗರಣ ಮಾಡಿಕೊಂಡ ರಾಜಕೀಯ ನಾಯಕರಿಗೆ ನಾಚಿಕೆಯಾಗಬೇಕು, ಬೆತ್ತಲೆ ಪಾರ್ಟಿಯಲ್ಲಿ ಭಾಗಿಯಾದವರಿಗೆ ಧಿಕ್ಕಾರ, ಇಂಥ ಪಾರ್ಟಿಯಲ್ಲಿ ಭಾಗಿಯಾದ ಮಹಿಳೆಯರಿಗಾದರೂ ನಾಚಿಕೆಯಾಗಬೇಡವೆ, ಇದು ಫೇಕ್ ವಿಡಿಯೋ, ಇದರ ಮೂಲ ವಿಡಿಯೋ ನನ್ನ ಬಳಿ ಇದೆ... ಇತ್ಯಾದಿ ಇತ್ಯಾದಿ ಟ್ವೀಟ್ ಗಳು ಟ್ವಿಟ್ಟರಲ್ಲಿ ಓದುಗರಿಗೆ ರಸಗವಳ ಒದಗಿಸಿವೆ.


ಈ ಘಟನೆಯಿಂದಾಗಿ ಬಿಜೆಪಿಯ ಜುಟ್ಟು ಇತರ ರಾಜಕೀಯ ಪಕ್ಷಗಳ ಕೈಗೆ ಸಿಕ್ಕಂತಾಗಿದೆ. ಹಲವಾರು ರಾಜಕೀಯ ನಾಯಕರು ಈ ಘಟನೆಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹರತಾಳು ಹಾಲಪ್ಪನವರ ಅತ್ಯಾಚಾರ, ರೇಣುಕಾಚಾರ್ಯ ಅವರ ಕಿಸ್ಸಿಂಗ್ ಪ್ರಕರಣ, ಸದನದಲ್ಲಿ ಅಶ್ಲೀಲ ಸಿಡಿ ವೀಕ್ಷಣೆಗಳನ್ನು ನೋಡಿರುವ ವಿರೋಧಿ ನಾಯಕರು, ಇದೇ ಬಿಜೆಪಿಯ ಸಂಸ್ಕೃತಿ ಎಂದು ಜರಿಯುತ್ತಿದ್ದಾರೆ.

ಒಟ್ಟಿನಲ್ಲಿ ಇಡೀ ಘಟನೆಯೇ ಗೊಂದಲಮಯವಾಗಿದೆ. ಇದಕ್ಕೆ ಕಾರಣೀಭೂತರು ಇವರೇ ಎಂದು ತೀರ್ಪು ನೀಡುವ ಮೊದಲು ವಿಡಿಯೋದ ಸತ್ಯಾಸತ್ಯತೆಗಳ ಬಗ್ಗೆ ತನಿಖೆಯಾಗಬೇಕಾಗಿದೆ. ವಿಡಿಯೋ ಅಸಲಿಯೋ ನಕಲಿಯೋ ಎಂಬುದು ಸೈಬರ್ ಕ್ರೈಂ ಬ್ರಾಂಚ್ ನಿಂದ ದೃಢೀಕರಣವಾಗಬೇಕಾಗಿದೆ. ಯಾರೂ ದೂರು ನೀಡದೇ ಇದ್ದರೂ ಬೀದರ್ ಪೊಲೀಸರು ತಾವೇ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದರಲ್ಲಿ ಬಿಜೆಪಿ ಬೀದರ್ ಘಟಕದ ಉಪಾಧ್ಯಕ್ಷ ಬಾಲು ವಾಲಿ ಅವರ ಹೆಸರು ಮಾತ್ರವಲ್ಲ, ಬ್ಯಾಂಕ್ ನಿವೃತ್ತ ಮ್ಯಾನೇಜರ್ ಮತ್ತು ಇನ್ನೂ ಹಲವಾರು ಜನರ ಹೆಸರುಗಳನ್ನು ತಳಕುಹಾಕಲಾಗಿದೆ. ಲೋಕಸಭೆ ಚುನಾವಣೆ ಹತ್ತಿರದಲ್ಲೇ ಇರುವ ಹಿನ್ನೆಲೆಯಲ್ಲಿ ಇಂಥ ಇನ್ನೂ ಅನೇಕ ವಿಡಿಯೋಗಳು ಇಂಟರ್ನೆಟ್ಟಿನಲ್ಲಿ ಹಾರಾಟ ನಡೆಸಿದರೂ ಅಚ್ಚರಿಯಿಲ್ಲ. ಆದರೆ, ಯಾವುದೇ ತೀರ್ಮಾನಕ್ಕೆ ಧುಮುಕುವುದಕ್ಕಿಂತ ಮತ್ತು ದುಡುಕುವುದಕ್ಕಿಂತ ಮೊದಲು ತೀರ್ಮಾನವನ್ನು ಪೊಲೀಸರಿಗೆ ಮತ್ತು ತನಿಖಾ ಸಂಸ್ಥೆಗಳಿಗೆ ಬಿಡುವುದು ಒಳಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+