ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕ್ಸಲ್ ವಿರುದ್ಧದ ಕಾರ್ಯಾಚರಣೆಯಲ್ಲಿ ಬೀದರ್ ಯೋಧ ಸಾವು

By ಬೀದರ್ ಪ್ರತಿನಿಧಿ
|
Google Oneindia Kannada News

ಬೀದರ್, ಮಾರ್ಚ್ 3: ತೆಲಂಗಾಣ-ಛತ್ತೀಸ್ ಗಡ್ ಗಡಿಯಲ್ಲಿ ಶುಕ್ರವಾರ ಮುಂಜಾನೆ ನಡೆದ ನಕ್ಸಲ್ ವಿರುದ್ಧದ ಕಾರ್ಯಾಚರಣೆಯಲ್ಲಿ ತೆಲಂಗಾಣದ ಹೈದರಾಬಾದ್ ಗ್ರೌಂಡ್ಸ್ ಠಾಣೆಯ ಪೊಲೀಸ್ ಕಮಾಂಡೊ ಸುಶೀಲ್ ಕುಮಾರ್ (36) ಹುತಾತ್ಮರಾಗಿದ್ದಾರೆ.

ಸುಶೀಲ್ ಕುಮಾರ್ ಮೂಲಹ ಬೀದರ್ ನವರಾಗಿದ್ದು, ನಬೀದರ್ ನಗರದ ಎಸ್ಟಿ ನಿವಾಸದ ಹಿಂಭಾಗದ ಗ್ರೇಸ್ ಕಾಲೊನಿಯ ನಿವಸಿಯಾಗಿದ್ದರು.

ಗುವಾಹಟಿಯಲ್ಲಿ ಹಾವೇರಿಯ ಯೋಧ ಬಸಪ್ಪ ಚಂದ್ರು ಮರಣಗುವಾಹಟಿಯಲ್ಲಿ ಹಾವೇರಿಯ ಯೋಧ ಬಸಪ್ಪ ಚಂದ್ರು ಮರಣ

ಎನ್​ಕೌಂಟರ್​ನಲ್ಲಿ ಸುಶೀಲ್​ಕುಮಾರ್​ ಹುತಾತ್ಮರಾದ ವಿಷಯವನ್ನು ತೆಲಂಗಾಣ‌ ಪೊಲೀಸರು ಕುಟುಂಬವರ್ಗಕ್ಕೆ ಅಧಿಕೃತವಾಗಿ ತಿಳಿಸಿದ್ದಾರೆ. ‌ಹೈದರಾಬಾದ್ ಡಿವೈಎಸ್ಪಿ ನೇತೃತ್ವದ ತಂಡ‌ ಇಲ್ಲಿಗೆ ಆಗಮಿಸಿ ಮಾಹಿತಿ ನೀಡಿದೆ. 2004ರಲ್ಲಿ ಆಂಧ್ರ ಪ್ರದೇಶದ ಪೊಲೀಸ್ ಪೇದೆಯಾಗಿ ನೇಮಕವಾಗಿದ್ದರು. 2009ರಲ್ಲಿ ಮದುವೆಯಾಗಿದ್ದು ಓರ್ವ ಹೆಣ್ಣುಮಗಳಿದ್ದು, ಹೆಂಡತಿ ಈಗ ಗರ್ಭಿಣಿ.

Bidar Commando dies in Naxal operation

ಹುತಾತ್ಮ ಕಮಾಂಡೋ ಸುಶೀಲ್ ಕುಮಾರ್ ಅಂತಿಮ ದರ್ಶನ ಪಡೆಯಲು ತೆಲಂಗಾಣ ಡಿಐಜಿ ಮಹೇಂದ್ರ ರೆಡ್ಡಿ ಬೀದರ್ ಗೆ ಆಗಮಿಸಿದ್ದಾರೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಲಾಗುತ್ತಿದೆ. ಗ್ರೇ ಹೌಸ್ ನಿಂದ ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಗವಾನ್ ಚೌಕ್ ಮಾರ್ಗವಾಗಿ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಕೊಂಡೊಯ್ಯಲಾಗುತ್ತದೆ.

ನಕ್ಸಲರ ದಮನಕ್ಕೆ ನಡೆದ ಜಂಟಿ ಕೂಂಬಿಂಗ್ ಕಾರ್ಯಾಚರಣೆಯಲ್ಲಿ ಛತ್ತೀಸ್​ಗಡ ಹಾಗೂ ತೆಲಂಗಾಣ ಪೊಲೀಸರು 10 ನಕ್ಸಲರನ್ನು ಹತ್ಯೆ ಮಾಡಿದ್ದಾರೆ.

English summary
Sushilkumar from Bidar has been died in anti naxal operation in Chhattisgarh on Friday. He was a constable in ndhra Pradesh police and oppointed in 2004.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X