ವಿಜಯಪುರ: ಪೊಲೀಸ್, ಭೀಮಾತೀರದ ಹಂತಕನ ಮಧ್ಯೆ ಗುಂಡಿನ ಕಾಳಗ

Posted By:
Subscribe to Oneindia Kannada

ವಿಜಯಾಪುರ, ಅಕ್ಟೋಬರ್ 30 : ಭೀಮಾತೀರದಲ್ಲಿ ಮತ್ತೆ ನೆತ್ತರು ಹರಿದಿದೆ. ಸೋಮವಾರ ಬೆಳ್ಳಂಬೆಳಗ್ಗೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಕೊಂಕಣಗಾಂವ್ ಗ್ರಾಮದಲ್ಲಿ ಪೊಲೀಸ್ ಹಾಗೂ ಭೀಮಾತೀರದ ಹಂತಕನ ಮಧ್ಯೆ ಪರಸ್ಟಪರ ಗುಂಡಿನ ದಾಳಿ ನಡೆದಿದೆ.

ಭೀಮಾತೀರದ ಹಂತಕ ಧರ್ಮರಾಜ್ ಚಡಚಣ ಎನ್ನುವಾತ ಏಕಾಏಕಿ ಪೊಲೀಸರ ಮೇಲೆ ಫೈರಿಂಗ್ ಮಾಡಿದ್ದಾನೆ. ಇದಕ್ಕೆ ಪ್ರತ್ಯುತ್ತರವಾಗಿ ಚಡಚಣದ ಪಿಎಸ್ ಐ ಗೋಪಾಲ್ ಫೈರಿಂಗ್ ಮಾಡಿದ್ದು, ಫೈರಿಂಗ್ ನಲ್ಲಿ ಧರ್ಮರಾಜ್ ಚಡಚಣ ಸಾವನ್ನಪ್ಪಿದ್ದಾನೆ. ಗುಂಡಿನ ಕಾಳಗದಲ್ಲಿ ಪಿಎಸ್ ಐ ಗೋಪಾಲ್ ಅವರಿಗೆ ಗುಂಡು ತಗುಲಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

Bhima river assailant Dharmaraj killed in police firing in Indi taluk

ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ (ಎಸ್ ಪಿ) ಕುಲದೀಪ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪುತ್ರಪ್ಪ ಹಾಗೂ ಫಯಾಜ್ ಮುಫ್ತಿಫ್ ಎನ್ನುವರ ಕೊಲೆಯಲ್ಲಿ ಭಾಗಿಯಾಗಿದ್ದ ಧರ್ಮರಾಜ್, ಕೆಲ ದಿನಗಳ ಹಿಂದಷ್ಟೇ ಜಾಮೀನಿನ ಮೇಲೆ ಹೊರ ಬಂದಿದ್ದ.

Bhima river assailant Dharmaraj killed in police firing in Indi taluk

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bhima river assailant Dharmaraj killed in police firing in Kokangaon village Indi taluk Vijayapura district on Monday (Oct 30).

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ