ಸಾಮಾನ್ಯ ವ್ಯಕ್ತಿಗೆ ಕೀಳು ಶಬ್ದಗಳಿಂದ ನಿಂದನೆ: ರೇವಣ್ಣ, ಸೂರಜ್‌ ಕ್ಷಮೆ- ಅಪ್ಪಿತಪ್ಪಿಯೂ ಕ್ಷಮೆ ಯಾಚಿಸಲೇ ಇಲ್ಲ ಭವಾನಿ

ಹಾಸನ, ಡಿಸೆಂಬರ್‌ 05: ಮಾಜಿ ಜಿಲ್ಲಾ ಪಂಚಾಯತಿ ಸದಸ್ಯೆ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಕಾರಿಗೆ ಬೈಕ್ ಡಿಕ್ಕಿಯಾಗಿದ್ದು, ಈ ವೇಳೆ ಭವಾನಿ ರೇವಣ್ಣ ಬೈಕ್ ಸವಾರನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು, ಮಾಜಿ ಸಚಿವ ಹೆಚ್‌ ಡಿ ರೇವಣ್ಣ ಹಾಗೂ ವಿಧಾನ ಪರಿಷತ್‌ ಸದಸ್ಯ ಸೂರಜ್‌ ರೇವಣ್ಣ ಕ್ಷಮೆಯಾಚಿಸಿದ್ದು, ಭವಾನಿ ರೇವಣ್ಣ ಮೌನವಾಗಿದ್ದಾರೆ.

ಹೌದು, ಪತ್ನಿ ವರ್ತನೆಯ ಬಗ್ಗೆ ಯಾರಿಗಾದರೂ ನೋವಾದರೆ ಕ್ಷಮೆ ಕೋರುತ್ತೇನೆ. ಬೈಕ್ ಸವಾರ ಕುಡಿದು ಬೈಕ್ ಓಡಿಸಿದ್ದ. ನಾವೇನು ಅವರ ಬಳಿ ಡ್ಯಾಮೇಜ್ ಹಣ ಕೊಡಿ ಎಂದು ಕೇಳಲಿಲ್ಲ. ಏನಾದರೂ ಹೆಚ್ಚು ಕಮ್ಮಿ ಆಗಿದ್ರೆ ಯಾರು ಹೊಣೆ? ಬೇಕಾದರೆ ಭವಾನಿ ರೇವಣ್ಣ ಅವರಿಂದಲೂ ಕ್ಷಮೆ ಕೇಳಿಸುತ್ತೇನೆ. ಸಿಟ್ಟಾಗಿ ಭವಾನಿ ಮಾತನಾಡಿದ್ದಾರೆ ಎಂದು ಭವಾನಿ ರೇವಣ್ಣ ಹೇಳಿದ್ದಾರೆ.

Bhavani Revanna Did Not Apologize For Verbally Abusing A Person

ಬೈಕ್ ಅವನೇ ಬಂದು ಸೈಡ್‌ನಿಂದ ಕಾರಿಗೆ ಗುದ್ದಿದ್ದಾನೆ. ಹೆಚ್ಚು ಕಡಿಮೆ ಆಗಿದ್ದರೆ ಏನಾಗಾಗುತ್ತಿತ್ತು?, ಅವರು ಏನೂ ಅಹಂಕಾರ ಮಾಡಿಲ್ಲ. ಭವಾನಿ ಅವರು ಯಾರದ್ದೋ ಸ್ನೇಹಿತನ ಕಾರಿನಲ್ಲಿ ಹೋಗಿದ್ದರು.‌ ಅವರು ಸಿಟ್ಟಿನಲ್ಲಿ ಮಾತನಾಡಿದ್ದಾರೆ. ನಮ್ಮ‌ಕುಟುಂಬ ಯಾರಿಗೂ ನೋವು ಆಗುವ ಕೆಲಸ ಮಾಡಲ್ಲ.‌ ಏನಾದರೂ ಹೆಚ್ಚು ಕಡಿಮೆ ಆಗಿದ್ದರೆ ಏನಾಗುವುದು? ಅದನ್ನು ಬೇಕಂತಲೇ ಯಾರೋ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ ಎಂದು ಮಾಜಿ ಸಚಿವ ರೇವಣ್ಣ ಹೇಳಿದ್ದಾರೆ.

ಕಾರಿನಲ್ಲಿದ್ದವರ ಪ್ರಾಣಕ್ಕೆ ತೊಂದರೆ ಆಗಿದ್ದರೆ? ಎಷ್ಟೇ ನಿಧಾನವಾಗಿ ಹೋಗಿದ್ದರು ಬಂದು ಮಧ್ಯದಲ್ಲಿ ಗುದ್ದಿದ್ದಾನೆ. ಅದನ್ನು ದೊಡ್ಡ ವಿಚಾರ ಮಾಡಬೇಡಿ ಎಂದು ಮನವಿ ಮಾಡಿದರು. ಅವರ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ರೇವಣ್ಣ ಹೇಳಿದ್ದು, ತನ್ನ ಪತ್ನಿಯಿಂದಲೂ ಕ್ಷಮೆಯಾಚಿಸುತ್ತೇನೆ ಎಂದು ರೇವಣ್ಣ ಹೇಳಿದ್ದರು, ಆದರೆ ಇದುವರೆಗೂ ಸಹ ಮಾಜಿ ಸಚಿವ ಹೆಚ್‌ ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಕ್ಷಮೆಯಾಚಿಸಿಲ್ಲ.

Bhavani Revanna Did Not Apologize For Verbally Abusing A Person

ಇನ್ನೂ ಭವಾನಿ ರೇವಣ್ಣ ಅವರ ಪುತ್ರ ಹಾಗೂ ವಿಧಾನ ಪರಿಷತ್‌ ಸದಸ್ಯ ಸೂರಜ್‌ ರೇವಣ್ಣ ಅವರು ಮಾತನಾಡಿ, ಅಪಘಾತದಲ್ಲಿ ಬೈಕ್‌ ಸವಾರನದ್ದೇ ತಪ್ಪಿದೆ. ಇದೊಂದು ಆಕ್ಸಿಡೆಂಟ್.‌ ಇನ್ಸಿಡೆಂಟ್‌ ಅಲ್ಲ. ಇದನ್ನು ಯಾರೋ ಬೇಕೆಂದು ಮಾಡುವುದಿಲ್ಲ. ಈ ವೇಳೆ ನನ್ನ ತಾಯಿ ಬಳಕೆ ಮಾಡಿರುವ ಪದಗಳು ತಪ್ಪಾಗಿವೆ. ತಾಯಿ ಬಳಸಿರುವ ಪದಗಳಿಗಾಗಿ ನಾನು ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೇ ಬೈಕ್‌ ಸವಾರನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದೇವೆ. ಇದಕ್ಕಿಂತಲೂ ಹೆಚ್ಚು ಏನು ಮಾಡಬೇಕು? ಇದರಲ್ಲಿ ಬೈಕ್‌ ಸವಾರನದ್ದೇ ತಪ್ಪಿದೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+