ಕರ್ನಾಟಕದಲ್ಲಿ 17 ಸಾವಿರ ಕೋಟಿ ಬೇನಾಮಿ ಮೊತ್ತ ಜಮೆ!

By: ಅನುಶಾ ರವಿ
Subscribe to Oneindia Kannada

ಬೆಂಗಳೂರು, ಜನವರಿ 20: ನೋಟ್ ನಿಷೇಧದ ನಂತರ ದೇಶಾದ್ಯಂತ ಬ್ಯಾಂಕಿಗೆ ಡಿಪಾಸಿಟ್ ಆಗಿರುವ ಕೋಟ್ಯಂತರ ಹಣದ ಬೆನ್ನತ್ತಿದೆ. ಭಟ್ಕಳದ ಬ್ರದರ್ಸ್ ಖಾತೆ ಹೊಂದಿರುವ ಕೋ-ಆಪ್ ಬ್ಯಾಂಕಿನಲ್ಲಿ 300 ಕೋಟಿ ರು ಸೇರಿದಂತೆ 17 ಸಾವಿರ ಕೋಟಿ ರು ಬೇನಾಮಿ ಮೊತ್ತ ಕರ್ನಾಟಕ ರಾಜ್ಯವೊಂದರಲ್ಲೇ ಪತ್ತೆಯಾಗಿದೆ ಎಂದು ಐಟಿ ಇಲಾಖೆ ಮೂಲಗಳಿಂದ ತಿಳಿದು ಬಂದಿದೆ.

ಆದರೆ, ಕೋಪರೇಟೀವ್ ಬ್ಯಾಂಕ್ ಗಳಿಂದ ಐಟಿ ಇಲಾಖೆಗೆ ಸರಿಯಾದ ಮಾಹಿತಿ ಸಿಕ್ಕಿಲ್ಲ. ರಾಜ್ಯದಲ್ಲಿರುವ 260 ಕೋಪರೇಟೀವ್ ಬ್ಯಾಂಕ್ ಗಳಲ್ಲಿ 60 ಬ್ಯಾಂಕ್ ಗಳು ಹಲವು ವರ್ಷಗಳಿಂದ ಐಟಿ ಇಲಾಖೆಗೆ ಯಾವುದೇ ಮಾಹಿತಿ ನೀಡಿಲ್ಲ. ಮಾಹಿತಿ ನೀಡದ ಬ್ಯಾಂಕ್ ಗಳಿಗೆ ನೋಟಿಸ್ ನೀಡಲಾಗಿದೆ

ಆದಾಯ ತೆರಿಗೆ ಇಲಾಖೆಯಿಂದ ಸಿಕ್ಕಿರುವ ಮಾಹಿತಿಯ ಮುಖ್ಯಾಂಶಗಳು:

Bhatkal's co-op banks get Rs 300 crores in deposits

* 7.32 ಲಕ್ಷ ಕೋಟಿ ಡೆಪಾಸಿಟ್ ಆದ ಹಣದ ಮೂಲ ಪತ್ತೆ ಹಚ್ಚಲು ಮುಂದಾದ ಐಟಿ ಇಲಾಖೆ

* 1.34 ಲಕ್ಷ ಅಕೌಂಟ್ ಗಳಲ್ಲಿ 7.32 ಲಕ್ಷ ಕೋಟಿ ಹಣ ಜಮೆಯಾಗಿದೆ

* ದೇಶದಲ್ಲಿ, 90 ಸಾವಿರ ಕೋಟಿ ಹಣ ಜನ್ ಧನ್ ಖಾತೆ ಮತ್ತು ಬಳಕೆಯಾಗದ ಖಾತೆಗಳಿಗೆ ಡಿಪಾಸಿಟ್ ಆಗಿದೆ

* ಕರ್ನಾಟಕದಲ್ಲಿ 17 ಸಾವಿರ ಕೋಟಿ ಹಣ ಜನ್ ಧನ್ ಮತ್ತು ಬಳಕೆಯಾಗದ ಖಾತೆಗಳಿಗೆ ಜಮೆಯಾಗಿದೆ

* ಈ ಬ್ಯಾಂಕ್ ವಹಿವಾಟುಗಳ ಮೂಲ ಪತ್ತೆ ಹಚ್ಚಲು ಮುಂದಾದ ಐಟಿ ಅಧಿಕಾರಿಗಳು

* ಕರ್ನಾಟಕದಲ್ಲಿ ಒಂದೇ ಜನಧನ್ ಅಕೌಂಟ್ ಗೆ 35 ಕೋಟಿ ಹಣ ಜಮೆಯಾಗಿದೆ

* ಎಲ್ಲ ಬ್ಯಾಂಕ್ ಗಳೂ ತಮ್ಮ ವಹಿವಾಟಿನ ಮಾಹಿತಿಯನ್ನು ಜನವರಿ 31 ರ ಒಳಗೆ ಐಟಿ ಇಲಾಖೆಗೆ ಸಲ್ಲಿಸಬೇಕು.

* ರಾಷ್ಟ್ರೀಕೃತ ಬ್ಯಾಂಕ್ ಗಳು, ಖಾಸಗಿ ಬ್ಯಾಂಕ್ ಗಳು ಮತ್ತು ಕೋ ಆಪರೇಟೀವ್ ಬ್ಯಾಂಕ್ ಗಳಿಗೆ ಈ ನಿಯಮ ಅನ್ವಯವಾಗುತ್ತದೆ

* ಬೆಂಗಳೂರಿನಲ್ಲಿ ಒಂದು ಕೋಟಿಗೂ ಹೆಚ್ಚು ವಹಿವಾಟು ನಡೆಸಿದ 2300 ಅಕೌಂಟ್ ಗಳ ಬಗ್ಗೆ ತನಿಖೆ ನಡೆಸುತ್ತಿರುವ ಐಟಿ ಅಧಿಕಾರಿಗಳು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Close to Rs 300 crores have been deposited into co-operative bank accounts, Jan Dhan accounts and inactive accounts in infamous Bhatkal according to sources from the Income Tax department. Many of these deposits, sources claim, do not have proper documentation and the banks have been asked to provide more det
Please Wait while comments are loading...