ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಭಾರತ್‌ ಜೋಡೋ, ರಾಹುಲ್ ಜೊತೆ ಹೆಜ್ಜೆ ಹಾಕಿದ ಮಕ್ಕಳು

|
Google Oneindia Kannada News

ಮಂಡ್ಯ, ಅಕ್ಟೋಬರ್ 07; ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್‌ ಜೋಡೋ ಯಾತ್ರೆ ಮಂಡ್ಯ ಜಿಲ್ಲೆಯಲ್ಲಿದೆ. ಶುಕ್ರವಾರ ಪಾದಯಾತ್ರೆಯಲ್ಲಿ ಮಕ್ಕಳು ಗಮನ ಸೆಳೆದರು.

ಶುಕ್ರವಾರ ಕೆ. ಮಲ್ಲೇನಹಳ್ಳಿ ಸರ್ಕಲ್‌ನಿಂದ ಬೆಳ್ಳೂರು ಟೌನ್‌ ಬಸ್ ನಿಲ್ದಾಣದ ತನಕ ಪಾದಯಾತ್ರೆ ನಡೆಯಲಿದೆ. ಇಂದಿನ ಪಾದಯಾತ್ರೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಭಾಗವಹಿಸಿಲ್ಲ.

ವಿಡಿಯೋ; ಭಾರತ್ ಜೋಡೋ ಯಾತ್ರೆಯಲ್ಲಿ ಸೋನಿಯಾ ಗಾಂಧಿ ಭಾಗಿವಿಡಿಯೋ; ಭಾರತ್ ಜೋಡೋ ಯಾತ್ರೆಯಲ್ಲಿ ಸೋನಿಯಾ ಗಾಂಧಿ ಭಾಗಿ

ಕೆ. ಮಲ್ಲೇನಹಳ್ಳಿಯಿಂದ ಆರಂಭವಾದ ಪಾದಯಾತ್ರೆ 11 ಕಿ. ಮೀ. ಸಾಗಿ ಚಿಟ್ಟನಹಳ್ಳಿ ಮೈದಾನ ತಲುಪಿದೆ. ಸಂಜೆ 4 ಗಂಟೆಯಿಂದ ಮತ್ತೆ ಪಾದಯಾತ್ರೆ ಆರಂಭವಾಗಲಿದ್ದು, ಬೆಳ್ಳೂರು ಟೌನ್‌ ಬಸ್‌ ನಿಲ್ದಾಣದ ತನಕ ನಡೆಯಲಿದೆ.

ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗುವಂತೆ ಮತ್ತೆ ಡಿಕೆ ಸಹೋದರರಿಗೆ ಸಮನ್ಸ್ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗುವಂತೆ ಮತ್ತೆ ಡಿಕೆ ಸಹೋದರರಿಗೆ ಸಮನ್ಸ್

Bharat Jodo Yatra From K Mallenahalli Mandya

ಪಾದಯಾತ್ರೆಯಲ್ಲಿ ಪಾಲ್ಗೊಂಡವರು ಆದಿಚುಂಚನಗಿರಿ ಮಠದ ಸ್ಟೇಡಿಯಂನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಮಾಜಿ ಶಾಸಕ ಚಲುವನಾರಾಯಣಸ್ವಾಮಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಸೇರಿದಂತೆ ಹಲವಾರು ನಾಯಕರು ಪಾಲ್ಗೊಂಡಿದ್ದಾರೆ.

Bharat Jodo Yatra From K Mallenahalli Mandya

ರಾಹುಲ್ ಗಾಂಧಿ ಜೊತೆ ಮಕ್ಕಳು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿ ಗಮನ ಸೆಳೆದರು. ಭಾರತ ಮಾತೆಯ ವೇಷ ಧರಿಸಿದ್ದ ಮಗು ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿತು. ಹಲವಾರು ಮಕ್ಕಳು ಪಾದಯಾತ್ರೆಯಲ್ಲಿ ಕಂಡು ಬಂದರು.

ಸೋನಿಯಾ ಶೂ ಲೇಸ್ ಕಟ್ಟಿದ ರಾಹುಲ್, ಟ್ವೀಟ್‌ನಲ್ಲಿ ಹಲವು ಕಮೆಂಟ್‌! ಸೋನಿಯಾ ಶೂ ಲೇಸ್ ಕಟ್ಟಿದ ರಾಹುಲ್, ಟ್ವೀಟ್‌ನಲ್ಲಿ ಹಲವು ಕಮೆಂಟ್‌!

ಇಡಿ ವಿಚಾರಣೆಗಾಗಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮತ್ತು ಸಂಸದ ಡಿ. ಕೆ. ಸುರೇಶ್ ದೆಹಲಿಯಲ್ಲಿದ್ದಾರೆ. ಆದ್ದರಿಂದ ರಾಹುಲ್ ಜೊತೆ ಪಾದಪಾತ್ರೆಯಲ್ಲಿ ಅವರು ಪಾಲ್ಗೊಂಡಿಲ್ಲ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೀಸಲಾತಿ ಹೆಚ್ಚಿಸಲು ರಚಿಸಿರುವ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ನೀಡಿರುವ ವರದಿ ಕುರಿತು ಚರ್ಚಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸರ್ವಪಕ್ಷಗಳ ಸಭೆ ನಡೆಯುತ್ತಿದೆ.

ಈ ಸಭೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪಾಲ್ಗೊಂಡಿದ್ದಾರೆ. ಆದ್ದರಿಂದ ಅವರು ಸಹ ಇಂದಿನ ಪಾದಯಾತ್ರೆಯಲ್ಲಿ ಪಾಳ್ಗೊಂಡಿಲ್ಲ. ಸಂಜೆ ಪಾದಯಾತ್ರೆ ಅಂತ್ಯಗೊಳ್ಳುತ್ತಿದ್ದಂತೆ ಆದಿಚುಂಚನಗಿರಿ ಮಠಕ್ಕೆ ರಾಹುಲ್ ಗಾಂಧಿ ಭೇಟಿ ನೀಡಲಿದ್ದಾರೆ.

English summary
Congress leader Rahul Gandhi lead Bharat Jodo Yatra from K. Mallenahalli, Mandya district, Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X