ಮಂಡ್ಯ: ವರದಕ್ಷಿಣೆ ಹಿಂಸೆ, ಹಸೆಮಣೆ ಏರುವ ಮೊದಲೇ ಆತ್ಮಹತ್ಯೆ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮಂಡ್ಯ,ಮಾರ್ಚ್,22: ಉಪನ್ಯಾಸಕಿಯೊಬ್ಬರು ಭಾವಿ ಪತಿಯ ವರದಕ್ಷಿಣೆ ಕಿರುಕುಳ ತಾಳಲಾರದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದ ಬಸವೇಶ್ವರನಗರ ಬಡಾವಣೆಯಲ್ಲಿ ನಡೆದಿದೆ.

ವೆಂಕಟರಾಮೇಗೌಡ ಅವರ ಪುತ್ರಿ ಶೃತಿ(26) ಆತ್ಮಹತ್ಯೆ ಮಾಡಿಕೊಂಡ ಉಪನ್ಯಾಸಕಿ. ಈಕೆ ನಾಗಮಂಗಲ ತಾಲೂಕಿನ ಬೆಳ್ಳೂರು ಕ್ರಾಸಿನಲ್ಲಿರುವ ಬಿಜಿಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.[ಪ್ರಿಯಕರನ ಹಿಂಸೆಗೆ ಬೇಸತ್ತ 15 ವರ್ಷದ ಹುಡುಗಿ ಆತ್ಮಹತ್ಯೆ]

BGS Engineering college lecturer commits suicide by dowry harassment in Mandya

ನಿಶ್ಚಿತಾರ್ಥವಾದ ಶೃತಿ ವಿಷ ಸೇವಿಸಿದ್ಯಾಕೆ?

ಚನ್ನರಾಯಪಟ್ಟಣದ ಗಾಂಧಿನಗರ ಬಡಾವಣೆಯ ತಿಮ್ಮೇಗೌಡ ಅವರ ಮಗ ಕೆ.ಟಿ.ಹುತ್ತೇಶ್ ಎಂಬಾತನೊಂದಿಗೆ ನವೆಂಬರ್ ಆರನೇ ತಾರೀಖಿನಂದು ಶೃತಿಯ ನಿಶ್ಚಿತಾರ್ಥ ನಡೆದಿತ್ತು. ಇದೇ ತಿಂಗಳು (ಮಾ. 27) ರಂದು ಪಟ್ಟಣದ ಶ್ರೀಮತಿ ನಂಜಮ್ಮ ಮುದ್ದೇಗೌಡ ಸಮುದಾಯ ಭವನದಲ್ಲಿ ವಿವಾಹ ಕಾರ್ಯಕ್ರಮ ನಡೆಯಬೇಕಾಗಿತ್ತು.[ಸಮೀಕ್ಷೆ: ಆತ್ಮಹತ್ಯೆ ಪ್ರಕರಣಗಳಲ್ಲಿ ಕರ್ನಾಟಕಕ್ಕೆ 4ನೇ ಸ್ಥಾನ]

ವಿವಾಹದ ಅಂಗವಾಗಿ ವರನ ಮನೆಯವರಿಗೆ ಈಗಾಗಲೇ 150ಗ್ರಾಂ ಚಿನ್ನಾಭರಣ ನೀಡಲಾಗಿತ್ತು. ವಿವಾಹದ ದಿನ ಹತ್ತಿರವಾಗುತ್ತಿದ್ದಂತೆ ವರ ಮತ್ತು ಆತನ ಪೋಷಕರು ಶೃತಿಗೆ ಕರೆ ಮಾಡಿ ವಿವಾಹದ ನಂತರ ನೀನು ಸುಖವಾಗಿರಬೇಕಾದರೆ ನಿಮ್ಮ ಮನೆಯಿಂದ ನನಗೆ ಈಗ ನೀಡಿರುವ ವರದಕ್ಷಿಣೆ ಜೊತೆಗೆ 1 ಕಾರು, ಬೆಂಗಳೂರಿನಲ್ಲಿ ಒಂದು ನಿವೇಶನ ಅಥವಾ ಮನೆ ಅಲ್ಲದೆ 5ಲಕ್ಷ ರೂ ವರದಕ್ಷಿಣೆ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.[ನಿರೋಶಾ ಭಾವಿ ಪತಿ ಜತೆ ಚಾಟ್ ಕಾಲ್ ಮಾಡುತ್ತಾ ನೇಣಿಗೆ ಶರಣು]

ಈ ಹಿನ್ನೆಲೆಯಲ್ಲಿ ಮನನೊಂದ ಶೃತಿ 12 ಪುಟಗಳ ಡೆತ್‍ನೋಟ್ ಬರೆದಿಟ್ಟು ಮಾ.17ರಂದು ಪಟ್ಟಣದ ಬಸವೇಶ್ವರ ನಗರದ ತನ್ನ ನಿವಾಸದಲ್ಲಿ ವಿಷ ಸೇವಿಸಿದ್ದಳು. ಅಸ್ವಸ್ಥಗೊಂಡಿದ್ದ ಆಕೆಯನ್ನು ಮೈಸೂರಿನ ಜೆಎಸ್ ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.[ಅಂದು ಸುರೇಶ್ ರೈನಾ ಆತ್ಮಹತ್ಯೆಗೆ ಯೋಚಿಸಿದ್ದು ಏಕೆ?]

ಚಿಕಿತ್ಸೆ ಫಲಕಾರಿಯಾಗದೆ ಶೃತಿ ಮಾರ್ಚ್ 21 ರ ಸೋಮವಾರ ರಾತ್ರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತ ಉಪನ್ಯಾಸಕಿಯ ತಂದೆ ವೆಂಕಟರಾಮೇಗೌಡ ಘಟನೆ ಕುರಿತು ಕೆ.ಆರ್.ಪೇಟೆ ಪಟ್ಟಣ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BGS Engineering college lecturer Shruthi committed suicide by dowry harassment in Mandya, on Monday, March 22nd.
Please Wait while comments are loading...