BESCOM: ಬೆಸ್ಕಾಂನ ಎಲ್ಲ ಆನ್‌ಲೈನ್ ಸೇವೆ ಈ 3 ದಿನ ಬಂದ್, ಇಲ್ಲಿದೆ ಮಾಹಿತಿ
ಬೆಂಗಳೂರು, ನವೆಂಬರ್ 23: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (BESCOM) ಐಟಿ ವಿಭಾಗದಲ್ಲಿ ಮೂರು ದಿನ ತುರ್ತು ನಿರ್ವಹಣಾ ಕಾಮಗಾರಿ ಕೆಲಸಗಳನ್ನು ಕೈಗೊಳ್ಳುವುದರಿಂದ ಆನ್‌ಲೈನ್ ಸೇವೆಗಳು ಗ್ರಾಹಕರಿಗೆ ಲಭ್ಯವಿರುವುದಿಲ್ಲ ಎಂದು ತಿಳಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಬೆಸ್ಕಾಂ ಅಧಿಕಾರಿಗಳು, ಬೆಸ್ಕಾಂ ಉಪವಿಭಾಗದ ವ್ಯಾಪ್ತಿಯಲ್ಲಿ ಮುಂದಿನ ಮೂರು ದಿನ ವಿದ್ಯುತ್ ಬಿಲ್ ಪಾವತಿ, ಹೊಸ ಸಂಪರ್ಕಕ್ಕಾಗಿ ಆನ್‌ಲೈನ್ ಅರ್ಜಿ ಸಲ್ಲಿಕೆ ಸೇರಿದಂತೆ ಯಾವುದೇ ಆನ್‌ಲೈನ್ ಸೇವೆ ತಾತ್ಕಾಲಿಕವಾಗಿ ಲಭ್ಯವಿರುವುದಿಲ್ಲ ಎಂದು ಹೇಳಿದೆ. ಯಾವ ಉಪವಿಭಾಗ ದಿನಾಂಕ ಮತ್ತು ಸಮಯದ ವಿವರ ಇಲ್ಲಿದೆ.

ನವೆಂಬರ್ 24ರಂದು ಬೆಳಗ್ಗೆ 12 ಗಂಟೆಯಿಂದ ನವೆಂಬರ್ 26ರಂದು ರಾತ್ರಿ 11.59 ರವರೆಗೆ RAPDRP ಪಟ್ಟಣಗಳ ಅಡಿಯಲ್ಲಿ ಬರುವ ನಗರ ಪ್ರದೇಶಗಳಲ್ಲಿ ಎಲ್ಲ ಬಗೆಯ ಆನ್‌ಲೈನ್ ಸೇವೆಗಳು ಬಂದ್ ಆಗಿರುತ್ತವೆ.
ಈ ವೇಳೆ ಬೆಸ್ಕಾಂ ಗ್ರಾಹಕರಿಗೆ ವಿದ್ಯುತ್ ಬಿಲ್‌ಗಳ ಪಾವತಿ, ಹೊಸ ಸೇವಾ ಸಂಪರ್ಕ, ಹೆಸರು ಬದಲಾವಣೆ, ಸುಂಕ ಬದಲಾವಣೆ ಮುಂತಾದ ಯಾವ ಸೇವೆಗಳು ಸಿಗುವುದಿಲ್ಲ.
ಆನ್‌ಲೈನ್ ಸೇವೆಗಳು ಮಾತ್ರವೇ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುತ್ತವೆ ಹೊರತು ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಬದಲಾವಣೆ ಆಗಲಿ, ಕಡಿತವಾಗಲಿ ಮಾಡುವುದಿಲ್ಲ ಎಂದು ಪ್ರಕಟಣೆಯಲ್ಲಿ ಬೆಸ್ಕಾಂ ಪ್ರಧಾನ ವ್ಯವಸ್ಥಾಪಕರು ಮಾಹಿತಿ ನೀಡಿದ್ದಾರೆ.

ಬೆಸ್ಕಾಂ ಯಾವ ಉಪವಿಭಾಗಗಳಲ್ಲಿ ಸೇವೆ ಇರಲ್ಲ: ಪಟ್ಟಿ
* BESCOM (ಬೆಸ್ಕಾಂ): ಬೆಂಗಳೂರು, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕೋಲಾರ, ಚಿಂತಾಮಣಿ, ದಾವಣಗೆರೆ-1, ದಾವಣಗೆರೆ-2, , ಹರಪ್ಪನಹಳ್ಳಿ, ಹರಿಹರ, ಹಿರಿಯೂರು, ಕನಕಪುರ, ರಾಮನಗರ, ಚಿತ್ರದುರ್ಗ, ತುಮಕೂರು-1, ತುಮಕೂರು-2, ಆನೇಕಲ್, ಮುಳುಬಾಗಿಲು, ಬಂಗಾರಪೇಟೆ, ಹೊಡಬಳ್ಳಾಪುರ, ಕೆಜಿಎಫ್, ಕ್ಯಾತಸಂದ್ರ ಸಿರಾ, ಚನ್ನಪಟ್ಟಣ, ಚಳ್ಳಕೆರೆ, ಕುಣಿಗಲ್ ತಿಪಟೂರು, ಗೌರಿಬಿದನೂರು ಭಾಗಗಳಲ್ಲಿ ಆನ್‌ಲೈನ್ ಸೇವೆ ಲಭ್ಯವಿರುವುದಿಲ್ಲ.
* CESC (ಸೆಸ್ಕ್): ಮಂಡ್ಯ, ಮಳವಳ್ಳಿ, ನಂಜನಗೂಡು, ಮೈಸೂರು, ಚಾಮರಾಜನಗರ, ಕೆಆರ್ ನಗರ, ಹುಣಸೂರು, ಅರಸೀಕೆರೆ, ಮಡಿಕೇರಿ, ಕೊಳ್ಳೇಗಾಲ, ಚನ್ನರಾಯಪಟ್ಟಣ ಮತ್ತು ಹಾಸನ ವ್ಯಾಪ್ತಿಯಲ್ಲಿ ಸ್ಥಗಿತಗೊಳ್ಳಲಿದೆ.
* MESCOM (ಮೆಸ್ಕಾಂ): ಪುತ್ತೂರು, ಉಡುಪಿ, ಮಂಗಳೂರು, ಬಂಟ್ವಾಳ, ಕಡೂರು, ತರೀಕೆರೆ, ಶಿಕಾರಿಪುರ, ಸಾಗರ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಭದ್ರಾವತಿಯಲ್ಲಿ ಆನ್‌ಲೈನ್ ಸೇವೆ ಇರುವುದಿಲ್ಲ.
* GESCOM (ಗೆಸ್ಕಾಂ): ಬೀದರ್, ಗಂಗಾವತಿ, ಗುಲ್ಬರ್ಗ, ಸೇಡಂ, ಮಾನ್ವಿ, ಸಿಂಧನೂರು, ಬಸವಕಲ್ಯಾಣ, ವಾಡಿ, ಅಳನಾಡು, ಬಳ್ಳಾರಿ, ಕೊಪ್ಪಳ, ಶಹಾಪುರ, ಶೋರಾಪುರ, ಸಿರಗುಪ್ಪ, ಭಾಲ್ಕಿ, ಶಹಾಬಾದ, ಕಂಪ್ಲಿ, ಯಾದಗಿರಿ, ರಾಯಚೂರು, ಹುಮನಾಬಾದ್, ಹೊಸಪೇಟೆ ವ್ಯಾಪ್ತಿಯಲ್ಲಿ.
* HESCOM (ಹೆಸ್ಕಾಂ): ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಾರವಾರ, ಬೈಲಹೊಗಲ, ಲಕ್ಷ್ಮೇಶ್ವರ, ನಿಪ್ಪಾಣಿ, ಜಮಖಂಡಿ, ನರಗುಂದ, ರಾಮದುರ್ಗ, ಚಿಕ್ಕೋಡಿ, ಅಥಣಿ, ಬಟ್ಕಳ, ದಾಂಡೇಲಿ, ಇಂಡಿ, ಸೌಧಟ್ಟಿ, ಸವೆನ್ನೂರ, ಶಿರಸಿ, ಬಾಗಲ್‌ಬಹಟ್ಟಿ, ಕುಮಟಾ, ಗದಗ, ಗೋಕಾಕ, ಹಾವೇರಿ, ಇಳಕಲ್, ಮುಧೋಳ, ಗುಳೇದಗುಡ್ಡ, ಮಹಾಲಿಂಗಪುರ, ರಾಣೆಬೆನ್ನೂರು, ಬಿಜಾಪುರ ಭಾಗದಲ್ಲಿ ಆನ್‌ಲೈನ್ ಸೇವೆಗಳು ಮೂರು ದಿನ ಇರುವುದಿಲ್ಲ.












Click it and Unblock the Notifications