ಮಂಗಳೂರು ಟು ಬೆಂಗಳೂರು ರೈಲು ಪ್ರಯಾಣ ಸಮಯ 6 ಗಂಟೆ ಸಾಕು: ಫೇಸ್ಬುಕ್ನಲ್ಲಿ ಚರ್ಚೆ
ಕೃಷ್ಣ ಭಟ್ ಅವರ ಬರಹ: ಕರ್ನಾಟಕ ರಾಜ್ಯದಲ್ಲಿ ರೈಲು ಪ್ರಯಾಣಕ್ಕೆ ವ್ಯಾಪಕ ಬೇಡಿಕೆ ಇದ್ದು ಕೇಂದ್ರದಿಂದ ಹೆಚ್ಚುವರಿಯಾಗಿ ರೈಲು ಸೇವೆ ಸಿಗಬೇಕು ಎಂಬುದು ಕನ್ನಡಿಗರ ಆಗ್ರಹ. ಇತ್ತೀಚಿನ ವರ್ಷಗಳಲ್ಲಿ ಕನ್ನಡಿಗರ ಬೇಡಿಕೆ ಈಡೇರುತ್ತಿದ್ದು, ಕರ್ನಾಟಕದಲ್ಲಿ ಸಾಲು ಸಾಲು ಹೊಸ ಮಾರ್ಗಗಳು ಆರಂಭವಾಗುತ್ತಿವೆ. ಜೊತೆಗೆ ಹಳೆಯ ಮಾರ್ಗಗಳಲ್ಲಿ ಹೆಚ್ಚುವರಿ ರೈಲುಗಳ ಓಡಾಟ ಕೂಡ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಈ ಪೈಕಿ ಮಂಗಳೂರು-ಹಾಸನ-ಬೆಂಗಳೂರು ರೈಲು ಮಾರ್ಗ ವಿದ್ಯುದೀಕರಣ ಕೊನೆಯ ಹಂತಕ್ಕೆ ತಲುಪಿದ್ದು, ಪ್ರಯಾಣ ಸಮಯ 6 ಗಂಟೆಗೆ ಇಳಿಕೆ ಆಗಲಿದೆ ಎನ್ನುವ ಆಶಯ ಕೇಳಿ ಬರುತ್ತಿದೆ. ಅದು ಹೇಗೆ ಸಾಧ್ಯ ಎನ್ನುವ ಬಗ್ಗೆ ಕೃಷ್ಣ ಭಟ್ ಎನ್ನುವವರು ವಿಸ್ತೃತ ಪೋಸ್ಟ್ ಒಂದನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ. ಅದು ಹಲವರ ಗಮನ ಸೆಳೆದಿದೆ.
ಭಾರತೀಯ ರೈಲ್ವೆ ಜಗತ್ತಿನಲ್ಲೇ ಖ್ಯಾತಿ ಪಡೆದಿದ್ದು, ಪ್ರತಿನಿತ್ಯ ಕೋಟ್ಯಂತರ ಪ್ರಯಾಣಿಕರು ಇದೇ ಮೂಲ ಬಳಸಿ ತಮ್ಮ ಪ್ರಯಾಣ ಮುಂದುವರಿಸಿದ್ದಾರೆ. ಕರ್ನಾಟಕ ಕೂಡ ರೈಲು ಪ್ರಯಾಣಿಕರ ವಿಚಾರದಲ್ಲಿ ಮುಂಚೂಣಿಯಲ್ಲಿದೆ. ಈ ಪೈಕಿ ಮಂಗಳೂರು-ಹಾಸನ-ಬೆಂಗಳೂರು ರೈಲು ಮಾರ್ಗ ವಿದ್ಯುದೀಕರಣ ಕನಸು ನನಸಾಗುತ್ತಿದೆ. ಪ್ರಮುಖವಾಗಿ ಪರ್ವತ ಪ್ರದೇಶವಾಗಿರುವ, ಸುಬ್ರಹ್ಮಣ್ಯ ರೋಡ್ ಟು ಸಕಲೇಶಪುರ ಭಾಗ ಪೂರ್ತಿಯಾಗುತ್ತಾ ಬಂದಿದೆ ಹಾಗೂ ಶಿರಿಬಾಗಿಲು ಟು ದೋಣಿಗಲ್ ಮಧ್ಯೆ ಕಾಮಗಾರಿ ಪೂರ್ಣಗೊಂಡರೆ ಯೋಜನೆ ಶೇಕಡಾ 100 ರಷ್ಟು ಸಂಪೂರ್ಣವಾದಂತೆ. ಈ ಸಮಯದಲ್ಲೇ ಕೃಷ್ಣ ಭಟ್ ಅವರ ಬರಹ ಗಮನ ಸೆಳೆದಿದೆ.

ಬೆಂಗಳೂರು-ಮಂಗಳೂರು ವಂದೇ ಭಾರತ್ಗೆ ಬೇಡಿಕೆ
ಅಷ್ಟಕ್ಕೂ ಈಗಿನ ಪರಿಸ್ಥಿತಿಯಲ್ಲಿ ಬೆಂಗಳೂರು ಟು ಮಂಗಳೂರು ರೈಲು ಮಾರ್ಗಕ್ಕೆ ಆಧುನಿಕ ಸ್ಪರ್ಶ ಸಿಗುತ್ತಿರುವುದು ಪ್ರಯಾಣಿಕರಿಗೆ ಖುಷಿ ನೀಡಿದೆ. ಅದರಲ್ಲೂ ವಂದೇ ಭಾರತ್ ರೈಲುಗಳ ಸೇವೆಯು ಲಭ್ಯವಾದರೆ ಹೊಸ ಕ್ರಾಂತಿಯೇ ನಡೆದಂತೆ. ಈ ಕುರಿತು ಫೇಸ್ಬುಕ್ನಲ್ಲಿ ಬರೆದುಕೊಂಡಿರುವ, ಕೃಷ್ಣಭಟ್ ಅವರು ಫೆಬ್ರವರಿ ತಿಂಗಳಲ್ಲಿ ವಿದ್ಯುತ್ ರೈಲು ಪೂರ್ಣ ಪ್ರಮಾಣದಲ್ಲಿ ಈ ಮಾರ್ಗದಲ್ಲಿ ಓಡಾಡಲು ಸಾಧ್ಯ. ಮುಂದಿನ ಕೇಂದ್ರ ಬಜೆಟ್ನಲ್ಲಿ ಮಂಗಳೂರು-ಬೆಂಗಳೂರು 'ವಂದೇ ಭಾರತ್' ಎಕ್ಸ್ಪ್ರೆಸ್ ರೈಲು ಘೋಷಣೆ ಆಗುವ ನಿರೀಕ್ಷೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಈ ರೈಲು ಮಾರ್ಗದ ಅಭಿವೃದ್ಧಿಯಿಂದ ಪ್ರಯಾಣಿಕರಿಗೆ ಏನೆಲ್ಲಾ ಅನುಕೂಲ? ಎಂಬುದನ್ನು ಕೂಡ ತಿಳಿಸಿದ್ದಾರೆ.
ಪ್ರಯಾಣ ಅವಧಿ 6 ಗಂಟೆ ಸಾಕು
ದೇಶದಲ್ಲಿ ಹಂತ-ಹಂತವಾಗಿ ಅಭಿವೃದ್ಧಿ ಆಗುತ್ತಲೇ ಬಂದಿವೆ. ಯಾವುದೂ ಒಂದೆರಡು ವರ್ಷದಲ್ಲಿ ಒಬ್ಬ ರಾಜಕಾರಣಿಯಿಂದ ಅಥವಾ ಒಂದು ಪಕ್ಷದಿಂದ ಸಾಧ್ಯವಾದದ್ದಲ್ಲ. ಈ ಸಾಧನೆ ಕೂಡ ರೈಲ್ವೆ ಇಲಾಖೆಯ ತಂತ್ರಜ್ಞರ, ಅಧಿಕಾರಿಗಳ, ಕಾರ್ಮಿಕರ ಐದು ದಶಕಗಳ ಶ್ರಮದ ಫಲ. ಮುಖ್ಯವಾಗಿ ನಮ್ಮೆಲ್ಲರ ಹಣದಿಂದ ಸಾಧಿತವಾದದ್ದು. ಯಾರೇ ಪ್ರಧಾನಿ/ಮಂತ್ರಿ ಆಗಿದ್ದರೂ ಇಂತಹ ಅಭಿವೃದ್ಧಿ ಕಾರ್ಯಗಳು ಆಗುತ್ತಾ ಹೋಗುವುದು ಕಾಲ ಸಹಜ ಪ್ರಕ್ರಿಯೆ. ಆರಂಭದಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣದ ಅವಧಿ 8 ಗಂಟೆ ಬೇಕಾಗಿ ಬರಬಹುದು. ನಿಧಾನಕ್ಕೆ ಈ ಅವಧಿಯನ್ನು 6 ಗಂಟೆಗೆ ಇಳಿಸಲು 2026ರಲ್ಲೇ ಸಾಧ್ಯ ಎಂದು ತಮ್ಮ ಬರಹದಲ್ಲಿ ವಿವರಿಸಿದ್ದಾರೆ ಕೃಷ್ಣ ಭಟ್.
ಹಾಗೇ ಸುಬ್ರಹ್ಮಣ್ಯ ರೋಡ್ - ಸಕಲೇಶಪುರ ಸೆಕ್ಷನ್ ನಲ್ಲಿ ಮಾತ್ರ ನಿಧಾನ ಪ್ರಯಾಣ ಅನಿವಾರ್ಯ. ಯಾವಾಗ ಈ ಟ್ರೈನ್ 6 ಗಂಟೆಯೊಳಗೆ ಗುರಿ ಮುಟ್ಟುತ್ತದೋ, ಬಳಿಕ ಇದು ಒಂದು ಕ್ರಾಂತಿಕಾರಿ ಮಜಲು ಅನಿಸಿಕೊಳ್ಳುತ್ತದೆ. ಆದಾಯ ಕಡಿಮೆ ಎಂದು ಎಕ್ಸ್ಪ್ರೆಸ್ ಟ್ರೈನ್ ರದ್ದು ಆಗದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ನಮ್ಮ ರಾಜ್ಯದಿಂದ ಆಯ್ಕೆಯಾದ ಸಂಸದರು + ಸಚಿವರದ್ದು ಎಂದು ಕೃಷ್ಣ ಭಟ್ ಅವರು ವಿವರವಾಗಿ ಈ ರೈಲು ಮಾರ್ಗದ ಬಗ್ಗೆ ಬರೆದುಕೊಂಡಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪ್ರಯಾಣಿಕರು ಕೂಡ ಈ ಯೋಜನೆಯು ಫಲಪ್ರದವಾಗಲಿ ಎಂದು ಬಯಸುತ್ತಿದ್ದಾರೆ. ಅವರ ಸಂಪೂರ್ಣ ಬರಹ ಇಲ್ಲಿದೆ ಓದಿ.
ಕನ್ನಡಿಗರ ಬಹು ವರ್ಷಗಳ ಆಸೆ
ಒಟ್ನಲ್ಲಿ ಈ ಮೂಲಕ ಕನ್ನಡಿಗರ ಬಹು ವರ್ಷಗಳ ಆಸೆ ಈಡೇರುವ ಹಂತಕ್ಕೆ ಬಂದಿದ್ದು, ಲಕ್ಷ ಲಕ್ಷ ಪ್ರಯಾಣಿಕರಿಗೆ ಅನುಕೂಲ ಕೂಡ ಆಗಲಿದೆ. ಈ ಮಾರ್ಗದಲ್ಲಿ ಪ್ರಯಾಣ ಮಾಡಲು ರೈಲು ವ್ಯವಸ್ಥೆ ಅಚ್ಚುಕಟ್ಟಾಗಿ ಇದ್ದರೆ ಉತ್ತಮ ಎಂಬ ಅಭಿಪ್ರಾಯ ಪ್ರಯಾಣಿಕರಲ್ಲಿ ಇತ್ತು. ಹೀಗಿದ್ದಾಗ ರೈಲ್ವೆ ಇಲಾಖೆಯು ಕೂಡ ಪ್ರಯಾಣಿಕರಿಗೆ ಬಲ ತುಂಬುವ ಕೆಲಸ ಮಾಡುತ್ತಿದೆ. ಬೆಂಗಳೂರು ಟು ಮಂಗಳೂರು ಮಾರ್ಗದಲ್ಲಿ ವಂದೇ ಭಾರತ್ ರೈಲು ಓಡಾಡುವ ಕನಸು ಕೂಡ ನನಸಾಗುವ ದಿನ ಹತ್ತಿರದಲ್ಲೇ ಇದೆ ಎಂಬ ಚರ್ಚೆ ಶುರುವಾಗಿದೆ. ಭವಿಷ್ಯದಲ್ಲಿ ಈ ಮಾರ್ಗದಲ್ಲಿ ಓಡಾಡುವ ಜನ ಇದರ ಸದುಪಯೋಗ ಪಡೆದುಕೊಳ್ಳುವುದು ಗ್ಯಾರಂಟಿ.
-
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ












Click it and Unblock the Notifications