Bengaluru Rains: ಬೆಳ್ಳಂಬೆಳಗ್ಗೆಯೇ ಬೆಂಗಳೂರಿನಲ್ಲಿ ಮಳೆರಾಯನ ಅಬ್ಬರ: ಎಲ್ಲೆಲ್ಲಿ ಮಳೆ?
ಬೆಂಗಳೂರು, ಮೇ 17: ಬೆಳ್ಳಂಬೆಳಗ್ಗೆಯೇ ಬೆಂಗಳೂರಿನಲ್ಲಿ ವರುಣ ತಂಪೆರೆದಿದ್ದಾನೆ. ಮೆಜೆಸ್ಟಿಕ್, ಜಯನಗರ, ಬನಶಂಕರಿ ಸೇರಿದಂತೆ ಬೆಂಗಳೂರು ನಗರದ ಹಲವು ಕಡೆಗಳಲ್ಲಿ ಬೆಳಗ್ಗೆ ಭಾರಿ ಮಳೆಯಾಗಿದೆ. ಮುಂದಿನ ಮೂರು ದಿನಗಳ ಕಾಲ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೈಸೂರು ಮತ್ತು ಬೆಂಗಳೂರು ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಹೌದು, ಬೆಂಗಳೂರಿನ ನಗರದ ಬಹುತೇಕ ಭಾಗಗಲ್ಲಿ ಇಂದು( ಶುಕ್ರವಾರ) ಬೆಳ್ಳಂಬೆಳಗ್ಗೆಯೇ ಮಳೆಯಾಗಿದೆ. ಮೆಜೆಸ್ಟಿಕ್, ಜಯನಗರ, ಬನಶಂಕರಿ, ಕೆಆರ್ ಮಾರ್ಕೆಟ್, ಶಿವಾಜಿನಗರ, ವಿಧಾನಸೌಧ ಪ್ರದೇಶ ಸೇರಿದಂತೆ ರಾಮಕೃಷ್ಣ ಆಶ್ರಮ, ಜೆಸಿ ರಸ್ತೆ, ನ್ಯಾಷನಲ್ ಕಾಲೇಜು ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿದು ವಾಹನ ಸವಾರರ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ, ಇನ್ನೂ . ನ್ಯಾಷನಲ್ ಕಾಲೇಜು ಹಾಗೂ ಲಾಲ್ ಬಾಗ್ ಮಧ್ಯೆ ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ಅಡಚಣೆಯಾಯಿತು. ಇತ್ತ ಕೆಲ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.

ಬೆಂಗಳೂರಿನಲ್ಲಿ ಎಲ್ಲೆಲ್ಲಿ ಮಳೆ?
ಬೆಳ್ಳಂಬೆಳಗ್ಗೆಯೇ ಬೆಂಗಳೂರಿನಲ್ಲಿ ವರುಣ ತಂಪೆರೆದಿದ್ದು, ಬೆಳಗ್ಗೆ 5 ಗಂಟೆಯಿಂದಲೇ ಕೆಲವೆಡೆ ಸಾಧಾರಣ ಮಳೆಯಾದರೆ ಇನ್ನು ಕೆಲವೆಡೆ ಧಾರಾಕಾರವಾಗಿ ಮಳೆ ಸುರಿದಿದೆ. ಶಾಂತಿನಗರ, ಕೋರಮಂಗಲ, ರಿಚ್ಮಂಡ್ ಸರ್ಕಲ್, ಕಾರ್ಪೊರೇಷನ್, ಕೆಆರ್ ಮಾರ್ಕೆಟ್, ಮೆಜೆಸ್ಟಿಕ್, ಶಿವಾಜಿನಗರ, ವಿಧಾನಸೌಧ, ವಸಂತನಗರ, ಎಂಜಿ ರಸ್ತೆ, ಕಬ್ಬನ್ಪಾರ್ಕ್, ಟ್ಯಾನಿರೋಡ್, ರಾಮಕೃಷ್ಣ ಆಶ್ರಮ, ಬಸವನಗುಡಿ, ಗಿರಿನಗರ, ಶ್ರೀನಿವಾಸ ನಗರ, ಕತ್ರಿಗುಪ್ಪೆ, ಜಯನಗರ, ಬನಶಂಕರಿ ಸೇರಿದಂತೆ ಹಲವೆಡೆ ಮಳೆಯಾಗಿದೆ.












Click it and Unblock the Notifications