Namma Metro: ತುಮಕೂರಿಗೆ ಮೆಟ್ರೋ ವಿಸ್ತರಣೆ: ಮಹತ್ವದ ಮಾಹಿತಿ, ವಿವರ ತಿಳಿಯಿರಿ
ತುಮಕೂರು, ಜುಲೈ 12: ರಾಜಧಾನಿ ಬೆಂಗಳೂರಿನ ಟ್ರಾಫಿಕ್ ಕಿರಿಕಿರಿ ಕಡಿಮೆಗೊಳಿಸಿ, ತ್ವರಿತ ಓಡಾಟಕ್ಕೆ ಸಹಕಾರಿಯಾಗಿರುವ ನಮ್ಮ ಮೆಟ್ರೋ, ಇನ್ನು ಮುಂದೆ ತುಮಕೂರುವರೆಗೂ ಓಡಲಿದೆ. ಇದಕ್ಕಾಗಿ ಡಿಪಿಆರ್ ಸಿದ್ಧವಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.
ಈ ಕುರಿತು ಬುಧವಾರ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯ ನೂತನ ಕಟ್ಟಡದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಗೃಹ ಸಚಿವ ಜಿ ಪರಮೇಶ್ವರ್ ಅವರು, ತುಮಕೂರಿನ ಅಭಿವೃದ್ಧಿಗಾಗಿ ಎಲ್ಲಾ ಪ್ರಯತ್ನ ಮಾಡಲಾಗುವುದು ಎಂದ ಅವರು, ಅಭಿವೃದ್ಧಿಗೆ ಹಿಂಜರಿಯುವುದಿಲ್ಲ ಎಂದಿದ್ದಾರೆ. ದೇಶದಲ್ಲೆ ಕರ್ನಾಟಕ ಪೊಲೀಸ್‌ಗೆ ನಂ 1 ಎಂಬ ಹೆಗ್ಗಳಿಕೆ ಇದೆ. ತುಮಕೂರಿನ ಅಭಿವೃದ್ಧಿಗೆ ಎಂದೂ ಹಿಂಜರಿಯುವುದಿಲ್ಲ. ರಾಜಧಾನಿ ಬೆಂಗಳೂರು ಸಮೀಪದಲ್ಲಿರುವ ತುಮಕೂರಿಗೆ ಬೆಂಗಳೂರು ಮೆಟ್ರೋ ತರಲು ಚಿಂತನೆ ನಡೆಸಿದ್ದು, ಈಗಾಗಲೇ ಡಿಪಿಆರ್ ಕಾರ್ಯ ಮುಗಿದಿದೆ ಎಂದು ಡಾ ಜಿ ಪರಮೇಶ್ವರ್ ಹೇಳಿದ್ದಾರೆ.

ತುಮಕೂರಿಗೆ ಬೆಂಗಳೂರು ಮೆಟ್ರೋ ತರಲು ಚಿಂತನೆ ನಡೆಸಿದ್ದು, ಈಗಾಗಲೇ ಡಿಪಿಆರ್ ಕಾರ್ಯ ಮುಗಿದಿದೆ . 1944ರಲ್ಲಿ ಸ್ಥಾಪಿತವಾದ ಕೊಡಿಗೇನಹಳ್ಳಿ ಪೊಲೀಸ್ ಠಾಣೆ ಕಟ್ಟಡ ದುಸ್ಥಿತಿಯ ಬಗ್ಗೆ ಕೆ.ಎನ್. ರಾಜಣ್ಣ ಚರ್ಚಿಸಿದ್ದ ಪರಿಣಾಮ ಈ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ತುಮಕೂರಿನ ಅಭಿವೃದ್ಧಿಗೆ ಎಂದೂ ಹಿಂಜರಿಯುವುದಿಲ್ಲ. ಬಹುದಿನಗಳ ಬೇಡಿಕೆಯ ಪೊಲೀಸ್ ಕಟ್ಟಡವನ್ನು ಇಲಾಖೆಯ ಉಳಿತದ 1.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು 8 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಉಸ್ತುವಾರಿ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಗುತ್ತಿಗೆದಾರರಿಗೆ ಸೂಚಿಸಿದರು.
ಈ ಹಿಂದೆ ಗೃಹ ಸಚಿವನಾಗಿದ್ದಾಗಲೂ ಒಂದೇ ಪತ್ರದ ಮುಖೇನ ಒಂದು ದಿನದಲ್ಲಿಯೇ ಪೆಂಡಿಂಗ್ ಇದ್ದ 12 ಸಾವಿರ ಪೊಲೀಸರಿಗೆ ಪದೋನ್ನತಿ ಕೊಡಿಸುವ ಕೆಲಸ ಮಾಡಿದ್ದೇನೆ. ರಾಜ್ಯದಲ್ಲಿ 25 ಸಾವಿರ ವಸತಿ ಗೃಹಗಳ ಬೇಡಿಕೆ ಇದೆ. ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಬಳಿ 1,562 ಕೋಟಿ ರೂ. ಬೇಡಿಕೆ ಇಟ್ಟಾಗ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ರಾಜ್ಯ ಪೊಲೀಸರು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದು, ದೇಶದಲ್ಲಿ ಕರ್ನಾಟಕ ಪೊಲೀಸ್‌ಗೆ ನಂ.1 ಎಂಬ ಹೆಸರಿದೆ ಎಂದು ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್, ಹೇಳಿದ್ದಾರೆ.
ರಾಜಣ್ಣ ನೇರ ನುಡಿಯ ರಾಜಕಾರಣಿ. ಕೋಪ ಅವರ ಹುಟ್ಟು ಗುಣ ಆದರೂ ಕ್ರಿಯಾಶೀಲ ವ್ಯಕ್ತಿ. ಸಹಕಾರಿ ಕ್ಷೇತ್ರದಲ್ಲಿ ರಾಜಣ್ಣನಷ್ಟು ಅನುಭವಿ ಯಾರೂ ಇಲ್ಲ. ಆದ್ದರಿಂದ ಅವರಿಗೆ ಸಹಕಾರಿ ರತ್ನ ಪ್ರಶಸ್ತಿ ದೊರೆತಿದ್ದಲ್ಲದೇ ಸಹಕಾರಿ ಸಚಿವ ಸ್ಥಾನವೂ ಸಿಕ್ಕಿದೆ. 2013ರಲ್ಲಿ ನಮ್ಮ ಸರಕಾರ ಅಧಿಕಾರದಲ್ಲಿದ್ದಾಗ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾವಗಡಕ್ಕೆ 2300 ಕೋಟಿ ರೂ. ವೆಚ್ಚದಲ್ಲಿತುಂಗಭದ್ರಾ ಕುಡಿಯುವ ನೀರಿನ ಯೋಜನೆ ಮಾಡಿದ ಪರಿಣಾಮ ಇಂದು ಬರದ ಊರಿಗೆ ನೀರಾವರಿ ಯೋಜನೆ ಬಂದಿದೆ ಎಂದು ಪರಮೇಶ್ವರ್ ಹೇಳಿದರು.
ಇನ್ನೂ ಈ ವೇಳೆ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಅವರು, ಮಾತನಾಡಿ, ನಮ್ಮ ಹಿಂದಿನ ಸರಕಾರದ ಅವಧಿಯಲ್ಲಿಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಇಮ್ಮಡಗೊಂಡನಹಳ್ಳಿ ಚೆಕ್ ಡ್ಯಾಮ್ ಮಾಡಿದ ಕಾರಣ ಮಳೆ ಬಂದರೆ ದೊಡ್ಡ ಮಾಲೂರು ಕೆರೆ ಸಂಪೂರ್ಣ ತುಂಬುತ್ತಿದೆ. ನಮ್ಮ ಸರಕಾರದ ಪ್ರಣಾಳಿಕೆಯನ್ನು ಡಾ. ಜಿ. ಪರಮೇಶ್ವರ್ ತಯಾರಿ ಮಾಡಿದ್ದು ನಿಮ್ಮೆಲ್ಲರ ಆಶೀರ್ವಾದದಿಂದ ನಮ್ಮ ಸರಕಾರ ಅಧಿಕಾರಕ್ಕೆ ಬಂದಿದೆ ಎಂದರು.












Click it and Unblock the Notifications