ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂ-ಮಂಗಳೂರು ರೈಲು ಸಂಚಾರದಲ್ಲಿ ಭಾರಿ ಬದಲಾವಣೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 04: ನೈಋತ್ಯ ರೈಲ್ವೆ ಬೆಂಗಳೂರು-ಮಂಗಳೂರು ಸೆಂಟ್ರಲ್ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಕರಾವಳಿಯನ್ನು ರಾಜಧಾನಿ ಬೆಂಗಳೂರಿಗೆ ಈ ರೈಲು ಸಂಪರ್ಕಸುತ್ತಿತ್ತು.

ಪ್ರಯಾಣಿಕರ ಕೊರತೆ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ರೈಲು ಸಂಚಾರವನ್ನು ಸ್ಥಗಿತಗೊಳಿಸುವುದಾಗಿ ರೈಲ್ವೆ ಹೇಳಿದೆ. ಬೆಂಗಳೂರು ಮತ್ತು ಮಂಗಳೂರು ನಡುವೆ ವಾರದಲ್ಲಿ 4 ದಿನಗಳ ಕಾಲ ಈ ರೈಲು ಸಂಚಾರ ನಡೆಸುತ್ತಿತ್ತು.

ಮಂಗಳೂರು-ಹೈದರಾಬಾದ್ ನಡುವೆ ಅಂಬಾರಿ ಬಸ್; ವೇಳಾಪಟ್ಟಿ ಮಂಗಳೂರು-ಹೈದರಾಬಾದ್ ನಡುವೆ ಅಂಬಾರಿ ಬಸ್; ವೇಳಾಪಟ್ಟಿ

ಅಕ್ಟೋಬರ್ 7ರಿಂದ ಬೆಂಗಳೂರು-ಮಂಗಳೂರು ನಡುವಿನ ಸಂಚಾರ ಸ್ಥಗಿತಗೊಳ್ಳಲಿದೆ. ಮಂಗಳೂರು ಸೆಂಟ್ರಲ್-ಬೆಂಗಳೂರು ನಡುವಿನ ಸಂಚಾರ ಅಕ್ಟೋಬರ್ 11ರಿಂದ ಸ್ಥಗಿತಗೊಳ್ಳಲಿದೆ ಎಂದು ರೈಲ್ವೆ ಹೇಳಿದೆ.

ಮಂಗಳೂರು-ಮುಂಬೈ ಕೆಎಸ್ಆರ್‌ಟಿಸಿ ಬಸ್ ಸಂಚಾರ ಆರಂಭ ಮಂಗಳೂರು-ಮುಂಬೈ ಕೆಎಸ್ಆರ್‌ಟಿಸಿ ಬಸ್ ಸಂಚಾರ ಆರಂಭ

ವಿಶೇಷ ರೈಲಿನ ಜೊತೆಗೆ ವಾರಕ್ಕೆ ಮೂರು ಬಾರಿ ಸಂಚಾರ ನಡೆಸುವ ಕೆಎಸ್ಆರ್ ಬೆಂಗಳೂರು-ಮಂಗಳೂರು ಸೆಂಟ್ರಲ್ (via ಮೈಸೂರು) ರೈಲಿನ ವೇಳಾಪಟ್ಟಿಯನ್ನು ಬದಲಾವಣೆ ಮಾಡಿ ನೈಋತ್ಯ ರೈಲ್ವೆ ಆದೇಶ ಹೊರಡಿಸಿದೆ.

ಕರ್ನಾಟಕದಿಂದ 3 ವಿಶೇಷ ರೈಲು ಸಂಚಾರ; ವೇಳಾಪಟ್ಟಿ ಕರ್ನಾಟಕದಿಂದ 3 ವಿಶೇಷ ರೈಲು ಸಂಚಾರ; ವೇಳಾಪಟ್ಟಿ

ಬೆಂಗಳೂರು-ಮಂಗಳೂರು ರೈಲು

ಬೆಂಗಳೂರು-ಮಂಗಳೂರು ರೈಲು

ರೈಲು ನಂಬರ್ 06517 ಕೆಎಸ್ಆರ್ ಬೆಂಗಳೂರು-ಮಂಗಳೂರು ಸೆಂಟ್ರಲ್ ವಾರದಲ್ಲಿ ಮೂರು ಬಾರಿ ಸಂಚಾರ ನಡೆಸಲಿದೆ. ಕೆಎಸ್‌ಆರ್‌ ಬೆಂಗಳೂರು ರೈಲು ಬುಧವಾರ, ಶುಕ್ರವಾರ ಮತ್ತು ಭಾನುವಾರ ಸಂಚಾರ ನಡೆಸಲಿದೆ ಅಕ್ಟೋಬರ್ 7ರಿಂದ ಹೊಸ ವೇಳಾಪಟ್ಟಿ ಜಾರಿಗೆ ಬರಲಿದೆ. ಭಾನುವಾರ, ಸೋಮವಾರ ಮತ್ತು ಮಂಗಳವಾರ ಮೊದಲು ಸಂಚಾರ ನಡೆಸುತ್ತಿತ್ತು.

ರೈಲುಗಳ ವೇಳಾಪಟ್ಟಿ

ರೈಲುಗಳ ವೇಳಾಪಟ್ಟಿ

ರೈಲು ನಂಬರ್ 06518 ಮಂಗಳೂರು ಸೆಂಟ್ರಲ್-ಕೆಎಸ್ಆರ್‌ ಬೆಂಗಳೂರು ವಾರದಲ್ಲಿ ಮೂರು ದಿನಗಳ ಕಾಲ ಗುರುವಾರ, ಶನಿವಾರ ಮತ್ತು ಸೋಮವಾರ ಸಂಚಾರ ನಡೆಸಲಿದೆ. ಅಕ್ಟೋಬರ್ 8ರಿಂದ ಈ ವೇಳಾಪಟ್ಟಿ ಜಾರಿಗೆ ಬರಲಿದೆ. ಗುರುವಾರ, ಶುಕ್ರವಾರ ಮತ್ತು ಶನಿವಾರ ಮೊದಲು ಸಂಚಾರ ನಡೆಸುತ್ತಿತ್ತು.

ಒಂದು ತಿಂಗಳ ಬಳಿಕ ವೇಳಾಪಟ್ಟಿ ಬದಲು

ಒಂದು ತಿಂಗಳ ಬಳಿಕ ವೇಳಾಪಟ್ಟಿ ಬದಲು

ಕೋವಿಡ್ ಘೋಷಣೆ ಬಳಿಕ ಮಂಗಳೂರು-ಬೆಂಗಳೂರು ರೈಲು ಸಂಚಾರ ಸ್ಥಗಿತಗೊಂಡಿತ್ತು. ಒಂದು ತಿಂಗಳ ಹಿಂದೆ ರೈಲು ಸಂಚಾರ ಪುನಃ ಆರಂಭಗೊಂಡಿತ್ತು. ಈಗ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದ್ದು, ಕೆಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

ರಸ್ತೆ ಪ್ರಯಾಣ ತ್ರಾಸದಾಯಕ

ರಸ್ತೆ ಪ್ರಯಾಣ ತ್ರಾಸದಾಯಕ

ಬೆಂಗಳೂರು-ಮಂಗಳೂರು ಸಂಪರ್ಕಿಸುವ ರಸ್ತೆ ಮಾರ್ಗದ ಪ್ರಯಾಣ ಹೆಚ್ಚು ಸಮಯ ಹಿಡಿಯುತ್ತದೆ. ಮಳೆಗಾಲದಲ್ಲಿ ರಸ್ತೆ ಪ್ರಯಾಣದ ಬದಲು ಜನರು ರೈಲು ಸಂಚಾರ ಬಯಸುತ್ತಾರೆ. ಆದರೆ, ರೈಲು ಪ್ರಯಾಣಣದ ಅವಧಿಯೂ ಹೆಚ್ಚಿದೆ.

Recommended Video

H. Vishwanath : ಇದೆಲ್ಲಾ DKಗೆ ಮಾಮೂಲಿ , ಆರಾಮಾಗಿ ವಾಪಸ್ ಬರ್ತಾರೆ | Oneindia Kannada

English summary
South western railway suspended the Bengaluru - Mangaluru Central special express train. Train operates four days a week between Karavali and Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X