ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ವಿಮಾನ ನಿಲ್ದಾಣದಿಂದ ಪ್ರಯಾಣಿಕರಿಗೆ ಸಿಹಿಸುದ್ದಿ!

|
Google Oneindia Kannada News

ಬೆಂಗಳೂರು: ಹೈಟೆಕ್ ಸಿಟಿಯಾಗಿ, ಭಾರತದ ಐಟಿ & ಬಿಟಿ ತವರೂರು ಬೆಂಗಳೂರು ಈಗ ಭರ್ಜರಿಯಾಗಿ ಬೆಳೆಯುತ್ತಿದೆ. ಹೀಗಾಗಿ ಬೆಂಗಳೂರಿಂದ ವಿದೇಶಕ್ಕೆ ತೆರಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹೊತ್ತಲ್ಲಿ ಬೆಂಗಳೂರಿನ ವಿಮಾನ ಪ್ರಯಾಣಿಕರಿಗೆ ಸಿಹಿಸುದ್ದಿ ಕೊಟ್ಟಿದೆ 'ಕೆಐಎಬಿ', ಆ ಸಿಹಿಸುದ್ದಿ ಏನು ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ತಿಳಿಯಿರಿ.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್ 2 ನಿರ್ಮಿಸಲಾಗಿದೆ. ಈ ವಿಚಾರದಲ್ಲಿ ಜಗತ್ತೇ ಬೆಂಗಳೂರು ವಿಮಾನ ನಿಲ್ದಾಣದ ಕಡೆಗೆ ತಿರುಗು ನೋಡುತ್ತಿದೆ. ಸುಮಾರು 5,000 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ T2 ಅನ್ನು ನವೆಂಬರ್ 2022 ರಲ್ಲಿ ಉದ್ಘಾಟಿಸಲಾಗಿತ್ತು. ಈಗ ಟರ್ಮಿನಲ್ 2 ಪ್ರಯಾಣಿಕರ ಸೇವೆ ಲಭ್ಯವಾಗಲಿದ್ದು, ಅದರ ಡೇಟ್ ಕೂಡ ಫೈನಲ್ ಆಗಿದೆ. ಹೀಗೆ ಇನ್ನುಮುಂದೆ ಬೆಂಗಳೂರಿನಿಂದ ಅಂತಾರಾಷ್ಟ್ರೀಯ ವಿಮಾನದಲ್ಲಿ ಓಡಾಡುವವರಿಗೆ ಸ್ಪೆಷಲ್ ಸರ್ವಿಸ್ ಸಿಗಲಿದೆ. ಪ್ರಯಾಣಿಕರು ಕೂಡ ಹೊಸ ವಾತಾವರಣದಲ್ಲಿ ಖುಷ್ ಆಗಲಿದ್ದಾರೆ (Bengaluru International Airport).

Bengaluru international airport terminal 2 is ready for operations

ಟರ್ಮಿನಲ್ 2 ಅಂತಾರಾಷ್ಟ್ರೀಯ ಸೇವೆಗೆ ಮುಡಿಪು!

ಹೌದು, ಇಷ್ಟುದಿನ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ದೇಶಿಯ ವಿಮಾನ ಸೇವೆ ಮತ್ತು ಅಂತಾರಾಷ್ಟ್ರೀಯ ವಿಮಾನ ಸೇವೆ ಟರ್ಮಿನಲ್ 1 ಮೂಲಕ ಕಾರ್ಯಾಚರಣೆ ನಡೆಸಿತ್ತು. ಆದರೆ ಅದನ್ನ ಬದಲಾಯಿಸಿ ಸೆಪ್ಟೆಂಬರ್​ 1 ರಿಂದ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳು ಟರ್ಮಿನಲ್ 2 ಮೂಲಕವೇ ಕಾರ್ಯಾಚರಣೆ ನಡೆಸಲಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2ನ ಮೂಲಕ ಸ್ಪೆಷಲ್ ಸರ್ವಿಸ್ ಸಿಗಲಿದೆ. ಟರ್ಮಿನಲ್ 1 ದೇಶಿಯ ವಿಮಾನ ಸೇವೆ, ಅಂದರೆ ಡೊಮೆಸ್ಟಿಕ್ ಫ್ಲೈಟ್ ಸರ್ವಿಸ್‌ಗೆ ಮೀಸಲಾಗಿ ಇರಲಿದೆ (KIAB).

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2ಗೆ 'ಪ್ಲಾಟಿನಂ ರೇಟಿಂಗ್' ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2ಗೆ 'ಪ್ಲಾಟಿನಂ ರೇಟಿಂಗ್'

₹5,000 ಕೋಟಿ ವೆಚ್ಚದಲ್ಲಿ ನಿರ್ಮಾಣ!

ಇಡೀ ಜಗತ್ತಿನ ಗಮನ ಸೆಳೆದಿರುವ ಬೆಂಗಳೂರಲ್ಲಿ ಅಂತಾರಾಷ್ಟ್ರೀಯ ಏರ್ಪೋರ್ಟ್ ಕೂಡ ಐಕಾನ್. ಹೀಗಾಗಿಯೇ ಅಂತಾರಾಷ್ಟ್ರೀಯ ವಿಮಾನಗಳ ಕಾರ್ಯಾಚರಣೆಗೆ ಟರ್ಮಿನಲ್ 2 ಮೀಸಲಾಗಿ ಇಡಲು ನಿರ್ಧರಿಸಲಾಗಿತ್ತು. ಅದಕ್ಕಾಗಿ ಸುಮಾರು 5,000 ಕೋಟಿ ರೂಪಾಯಿ ವೆಚ್ಚ ಮಾಡಿ ಟರ್ಮಿನಲ್ 2 ನಿರ್ಮಿಸಲಾಗಿದೆ. ಅಲ್ಲದೆ ಅದ್ಧೂರಿಯಾಗಿ ಉದ್ಘಾಟನೆಯೂ ನೆರವೇರಿತ್ತು. ಪಿಎಂ ನರೇಂದ್ರ ಮೋದಿ ಅವರು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಉದ್ಘಾಟಿಸಿದ್ದರು. ಈಗ ಅಂತಾರಾಷ್ಟ್ರೀಯ ಸೇವೆ ಟರ್ಮಿನಲ್ 2 ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಇದೇ ಸೆಪ್ಟೆಂಬರ್​ 1 ರಿಂದ ಈ ಸೇವೆ ಲಭ್ಯವಾಗಲಿದೆ.

Bengaluru international airport terminal 2 is ready for operations

ಟರ್ಮಿನಲ್ 2ಗೆ ಹಲವು ಪ್ರಶಸ್ತಿ

ಮತ್ತೊಂದ್ಕಡೆ ಟರ್ಮಿನಲ್ 2 ವಿನ್ಯಾಸ ಮತ್ತು ನಿರ್ಮಾಣ ಪರಿಸರ ಪೂರಕವಾಗಿದೆ. ಸುಸ್ಥಿರ ವಾಸ್ತುಶಿಲ್ಪ ಮತ್ತು ವಿನ್ಯಾಸ, ನೀರಿನ ಸಂರಕ್ಷಣೆ, ಶಕ್ತಿ ದಕ್ಷತೆ, ಕಟ್ಟಡ ಸಾಮಗ್ರಿಗಳು ಮತ್ತು ಸಂಪನ್ಮೂಲಗಳು, ಒಳಾಂಗಣ ಪರಿಸರ ಗುಣಮಟ್ಟ, ನಾವೀನ್ಯತೆ & ಅಭಿವೃದ್ಧಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ನ ಪ್ರಮುಖ ಆಕರ್ಷಣೆ. ಹೀಗಾಗಿ ಹಲವು ಪ್ರಶಸ್ತಿಗಳನ್ನೂ ಬಾಚಿಕೊಂಡಿದೆ. ನೋಡಲು ಕೂಡ ಅತಿ ಸುಂದರ ಟರ್ಮಿನಲ್ ಎಂಬ ಹೆಗ್ಗಳಿಕೆ ಪಡೆದಿದೆ. ಅದರಲ್ಲೂ ವಿದೇಶಿ ಪ್ರಯಾಣಿಕರು ಟರ್ಮಿನಲ್ 2ಗೆ ಫಿದಾ ಆಗಿದ್ದಾರೆ. ಹೀಗೆ ಹಲವು ದಾಖಲೆಗಳಿಗೂ ಟರ್ಮಿನಲ್ 2 ಸಾಕ್ಷಿಯಾಗಿದೆ. ಇದೀಗ ಜನರ ಸೇವೆಗೂ ಲಭ್ಯವಾಗುತ್ತಿರುವುದು ಹೆಮ್ಮೆಯ ವಿಚಾರ.

ಅಂತೂ ಇಂತೂ ಬೆಂಗಳೂರಿನ ವಿಮಾನ ಪ್ರಯಾಣಿಕರು ಕಾಯುತ್ತಿದ್ದ ಸಮಯ ಬಂದಿದೆ. ಇನ್ನು ವಿದೇಶ ಪ್ರಯಾಣಿಕರಿಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 5 ಸ್ಟಾರ್ ಸೇವೆ ಗ್ಯಾರಂಟಿ. ಹಾಗೇ ಬೆಂಗಳೂರು ಮತ್ತು ರಾಜ್ಯದ ವಿವಿಧ ಭಾಗಗಳಿಂದ ಹೊರ ದೇಶಗಳಿಗೆ ತೆರಳುವ ಪ್ರಯಾಣಿಕರಿಗೆ ಇದರಿಂದ ಸಹಾಯ ಕೂಡ ಆಗಲಿದೆ. ಇದರ ಜೊತೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆದಾಯ ಹೆಚ್ಚಾಗುವ ನಿರೀಕ್ಷೆ ಕೂಡ ಇದೆ.

English summary
Bengaluru international airport terminal 2 is ready for operations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X