Bengaluru-Chennai Expressway: ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಕಾಮಗಾರಿ ಯಾವ ಹಂತದಲ್ಲಿದೆ?
Bengaluru-Chennai Expressway: ಈಗಾಗಲೇ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ನಿರ್ಮಾಣವಾಗಿದ್ದು, ಇದರಿಂದ ಎರಡು ನಗರಗಳ ನಡುವಿನ ಪ್ರಯಾಣದ ಸಮಯ ಕಡಿಮೆಯಾದಂತಾಗಿದೆ. ಮತ್ತೊಂದೆಡೆ ಕರ್ನಾಟಕ ಸೇರಿದಂತೆ ಮೂರು ರಾಜ್ಯಗಳ ನಡುವೆ ಹಾದು ಹೋಗಲಿರುವ ಬಹುನಿರೀಕ್ಷಿತ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ಕಾಮಗಾರಿ ಯಾವ ಹಂತಕ್ಕೆ ಬಂದು ತಲುಪಿದೆ. ಯಾವ್ಯಾವ ರಾಜ್ಯಗಳಲ್ಲಿ ಎಷ್ಟು ಪ್ರಮಾಣದ ಕಾಮಾಗಾರಿ ಮುಗಿದಿದೆ ಹಾಗೂ ವೆಚ್ಚದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಮೂಲಕ ಹಾದುಹೋಗುವ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಯೋಜನೆಯ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, 10 ಪ್ಯಾಕೇಜ್‌ಗಳ ಕಾಮಗಾರಿಗಳ ಪ್ರಸ್ತುತ ಕಾಮಗಾರಿಯನ್ನು ನೋಡುವುದಾದರೆ, ಈ ಯೋಜನೆಯು 2025ರ ಜೂನ್ ವೇಳೆಗೆ ಮುಗಿಯುವುದು ಅನುಮಾನವಾಗಿದೆ.

ಯಾವ್ಯಾವ ರಾಜ್ಯದಲ್ಲಿ ಎಷ್ಟು ಕಾಮಗಾರಿ ಮುಗಿದಿದೆ?
* ಕರ್ನಾಟಕದ ಬೆಂಗಳೂರು-ಮಾಲೂರು ನಡುವೆ ಶೇಕಡ 85ರಷ್ಟು ಭೌತಿಕ ಪ್ರಗತಿಯಾಗಿದ್ದು, ವೆಚ್ಚ 2,761 ಕೋಟಿ ಆಗಿದೆ.
* ಕರ್ನಾಟಕದ ಮಾಲೂರು-ಬಂಗಾರಪೇಟೆ ನಡುವೆ ಶೇಕಡ 82ರಷ್ಟು ಭೌತಿಕ ಪ್ರಗತಿಯಾಗಿದ್ದು, ವೆಚ್ಚ 1,496 ಕೋಟಿ ರೂಪಾಯಿ ಆಗಿದೆ.
* ಕರ್ನಾಟಕದ ಬಂಗಾರಪೇಟೆ-ಬೇತಮಂಗಲ ನಡುವೆ ಶೇಕಡ 80ರಷ್ಟು ಭೌತಿಕ ಪ್ರಗತಿಯಾಗಿದ್ದು, 1,047 ಕೋಟಿ ರೂಪಾಯಿ ಆಗಿದೆ.
* ತಮಿಳುನಾಡಿನ ಗುಡಿಪಾಲ-ವಾಲಾಜಪೇಟೆ ನಡುವೆ ಶೇಕಡ 48ರಷ್ಟು ಭೌತಿಕ ಪ್ರಗತಿಯಾಗಿದ್ದು, ವೆಚ್ಚ 1,028 ಕೋಟಿ ರೂಪಾಯಿ ಆಗಿದೆ.
* ತಮಿಳುನಾಡಿನ ವಾಲಾಜಪೇಟೆ-ಅರಕ್ಕೋಣಂ ನಡುವೆ ಶೇಕಡ 55ರಷ್ಟು ಭೌತಿಕ ಪ್ರಗತಿಯಾಗಿದ್ದು, ವೆಚ್ಚ 843 ಕೋಟಿ ರೂಪಾಯಿ ಆಗಿದೆ.
* ತಮಿಳುನಾಡಿನ ಅರಕ್ಕೋಣಂ-ಕಾಂಚಿಪುರಂ ನಡುವೆ ಶೇಕಡ 42ರಷ್ಟು ಭೌತಿಕ ಪ್ರಗತಿಯಾಗಿದ್ದು, ವೆಚ್ಚ 1,155 ಕೋಟಿ ರೂಪಾಯಿ ಆಗಿದೆ.
* ತಮಿಳುನಾಡಿನ ಕಾಂಚಿಪುರಂ-ಪರಂಬದೂರು ನಡುವೆ ಶೇಕಡ 47ರಷ್ಟು ಭೌತಿಕ ಪ್ರಗತಿಯಾಗಿದ್ದು, ವೆಚ್ಚ 2,948 ಕೋಟಿ ರೂಪಾಯಿ ಆಗಿದೆ.
* ಆಂಧ್ರಪ್ರದೇಶದ ಬೇತಮಂಗಲ-ಬೈರೆಡ್ಡಿಪಲ್ಲಿ ನಡುವೆ ಶೇಕಡ 42ರಷ್ಟು ಭೌತಿಕ ಪ್ರಗತಿಯಾಗಿದ್ದು, ವೆಚ್ಚ 1,306 ಕೋಟಿ ರೂಪಾಯಿ ಆಗಿದೆ.
* ಆಂಧ್ರಪ್ರದೇಶದ ಬೈರೆಡ್ಡಿಪಲ್ಲಿ-ಬಂಗಾರರುಪಾಲೆಂ ನಡುವೆ ಶೇಕಡ 15ರಷ್ಟು ಭೌತಿಕ ಪ್ರಗತಿಯಾಗಿದ್ದು, ವೆಚ್ಚ 2,171 ಕೋಟಿ ರೂಪಾಯಿ ಆಗಿದೆ.
* ಆಂಧ್ರಪ್ರದೇಶದ ಬಂಗಾರರುಪಾಲೆಂ-ಗುಡುಪಾಲ ನಡುವೆ ಶೇಕಡ 48ರಷ್ಟು ಭೌತಿಕ ಪ್ರಗತಿಯಾಗಿದ್ದು, ವೆಚ್ಚ 1,288 ಕೋಟಿ ರೂಪಾಯಿ ಆಗಿದೆ.
ಈ ಎಕ್ಸ್‌ಪ್ರೆಸ್‌ವೇ ಬೆಂಗಳೂರು-ಚೆನ್ನೈ ಕೈಗಾರಿಕಾ ಕಾರಿಡಾರ್‌ನ ಭಾಗವಾಗಿದ್ದು, ಕಾಮಗಾರಿ ಪೂರ್ಣಗೊಂಡ ನಂತರ ಎರಡು ನಗರಗಳ ನಡುವಿನ ಪ್ರಯಾಣದ ಅವಧಿ ಎರಡೂವರೆ ಗಂಟೆಗಳಿಗೆ ಇಳಿಕೆ ಆಗಲಿದೆ. ಈ ಯೋಜನೆಯು 2024ರ ಆರಂಭದಲ್ಲಿ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದ್ದರು.
ಇನ್ನು 2024ರ ಫೆಬ್ರವರಿಯಲ್ಲಿ ನಡೆದ ಲೋಕಸಭಾ ಅಧಿವೇಶನದಲ್ಲಿ ನಿತಿನ್ ಗಡ್ಕರಿ ಅವರು, ಈ ಕಾಮಗಾರಿ ಡಿಸೆಂಬರ್‌ಗೆ ಮುಗಿಯಲಿದೆ ಎಂದು ಭರವಸೆ ನೀಡಿದ್ದರು. ಈ ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ರಾಜ್ಯ ಸರ್ಕಾರಗಳ ಸಹಕಾರ ಅಗತ್ಯವಾಗಿದ್ದು, ಆಯಾ ರಾಜ್ಯಗಳ ವ್ಯಾಪ್ತಿಯಲ್ಲಿ ಯೋಜನೆಗೆ ನಿರ್ಮಾಣ ಸಾಮಗ್ರಿ ಒದಗಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಈ ಸರ್ಕಾರಗಳು ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದರು.
ಕರ್ನಾಟಕದಲ್ಲಿ 5,465 ಕೋಟಿ ರೂಪಾಯಿ ವೆಚ್ಚದಲ್ಲಿ ಮೂರು ಪ್ಯಾಕೇಜ್‌ಗಳಲ್ಲಿ ಕಾಮಗಾರಿ ನಡೆಯುತ್ತಿದ್ದು, ಈವರೆಗೆ ಶೇಕಡ 85ರಷ್ಟು ಕಾಮಗಾರಿಗಳು ಮುಗಿದಿವೆ. ಈ ಭಾಗದಲ್ಲಿ ನಾಲ್ಕು ಗ್ರೇಡ್ ಅಪರೇಟರ್‌ಗಳು, 15 ಪ್ರಮುಖ ಸೇತುವೆಗಳು, 47 ಸಣ್ಣ ಸೇತುವೆಗಳು, 63 ಅಂಡರ್‌ಪಾಸ್‌ಗಳು, ನಾಲ್ಕು ಟೋಲ್ ಪ್ಲಾಜಾಗಳು ಇರಲಿವೆ.
ರಾಜ್ಯದ ಮೂರು ಪ್ಯಾಕೇಜ್‌ಗಳು 2024ರ ಮಾರ್ಚ್ ತಿಂಗಳೊಳಗೆ ಮುಗಿಯಲಿದೆ ಎಂದು ಸಚಿವರು ಈ ಹಿಂದೆ ಭರವಸೆ ನೀಡಿದ್ದರು. ರಾಜ್ಯದ ಮೂರು ಪ್ಯಾಕೇಜ್‌ಗಳ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿವೆ. ಸ್ವಲ್ಪ ಮಟ್ಟಿಗೆ ಕಾಮಗಾರಿಗಳಷ್ಟೇ ಇನ್ನೂ ಬಾಕಿಯಿವೆ. ಒಂದೂವರೆ ತಿಂಗಳಿನೊಳಗೆ ಸಂಪೂರ್ಣ ಕಾಮಗರಿಯನ್ನು ಮುಕ್ತಾಯಗೊಳಿಸಲಾಗುತ್ತದೆ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬರು ನೀಡಿದ್ದಾರೆ.
ತಮಿಳುನಾಡಿನಲ್ಲಿ ನಾಲ್ಕು ಪ್ಯಾಕೇಜ್‌ಗಳಲ್ಲಿ ನಡೆಯುತ್ತಿರುವ ಕಾಮಗಾರಿಯು ಶೇಕಡ 42ರಿಂದ 55ರಷ್ಟು ಮುಕ್ತಾಯವಾಗಿವೆ. ಆಂಧ್ರಪ್ರದೇಶದಲ್ಲಿ ಮೂರು ಪ್ಯಾಕೇಜ್‌ಗಳಲ್ಲಿ ಕಾಮಗಾರಿ ನಡೆಯುತ್ತಿದ್ದು, ಆಂಧ್ರ ಪ್ರದೇಶದ ಮೂರು ಪ್ಯಾಕೇಜ್‌ಗಳ ಕಾಮಗಾರಿ ಮುಗಿಸಲು 2025ರಜೂನ್‌ನ ಗಡುವು ತೆಗೆದುಕೊಳ್ಳಲಾಗಿದೆ. ಆದರೆ, ಭೂಸದ್ವಾಧೀನ ಕಗ್ಗಂಟು, ಸಮನ್ವಯ ಕೊರತೆ ಹಾಗೂ ಗುತ್ತಿಗೆದಾರರ ವಿಳಂಬ ಧೋರಣೆಯಿಂದಾಗಿ ಈ ಗಡುವಿನೊಳಗೆ ಕೆಲಸ ಪೂರ್ಣಗೊಳ್ಳವ ಕಷ್ಟಸಾಧ್ಯ ಎನ್ನುವ ಮಾತುಗಳು ಕೇಳಿಬರುತ್ತಿವೆ.












Click it and Unblock the Notifications