ಕಮಿಷನ್‌ ಹಗರಣದ ಫಲಾನುಭವಿಗಳು: ಇಲ್ಲಿದೆ ಬಿಜೆಪಿ ನಾಯಕರ ಪಟ್ಟಿ- ಯಾರು ಹೆಸರು ನೋಡಿ

ಕಮಿಷನ್‌ ಹಗರಣದ ಫಲಾನುಭವಿಗಳ ಪಟ್ಟಿಯನ್ನು ಕಾಂಗ್ರೆಸ್‌ ನೀಡಿದೆ. ಈ ವಿಚಾರವಾಗಿ ಟ್ವಿಟರ್‌ ಅಭಿಯಾನವನ್ನು ಕಾಂಗ್ರೆಸ್‌ ಆರಂಭಿಸಿದೆ. ಸರಣಿ ಟ್ವೀಟ್‌ಗಳ ಮೂಲಕ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದೆ.

ಬೆಂಗಳೂರು, ಮಾರ್ಚ್‌ 04: ಕಮಿಷನ್‌ ಹಗರಣದ ಫಲಾನುಭವಿಗಳ ಪಟ್ಟಿಯನ್ನು ಕಾಂಗ್ರೆಸ್‌ ನೀಡಿದೆ. ಈ ವಿಚಾರವಾಗಿ ಟ್ವಿಟರ್‌ ಅಭಿಯಾನವನ್ನು ಕಾಂಗ್ರೆಸ್‌ ಆರಂಭಿಸಿದೆ. ಸರಣಿ ಟ್ವೀಟ್‌ಗಳ ಮೂಲಕ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದೆ. ಕಾಂಗ್ರೆಸ್‌ ಹೆಸರಿಸಿರುವ ಪಟ್ಟಿಯಲ್ಲಿ ಯಾರ ಹೆಸರುಗಳಿವೆ ತಿಳಿಯಿರಿ.

'ಸರ್ಕಾರದ ಹಣದಲ್ಲಿ ಚುನಾವಣೆ ಪ್ರಚಾರದ ಸಮಾವೇಶ ಆಯೋಜಿಸಿದ ಬಿಜೆಪಿ ನೈತಿಕ ಅಧಃಪತನಕ್ಕೆ ಇಳಿದಿದೆ. #40PercentSarkara ದಲ್ಲಿ ಭ್ರಷ್ಟಾಚಾರದ ಫಲಾನುಭವಿಗಳಿದ್ದಾರೆಯೇ ಹೊರತು ಯೋಜನೆಗಳ ಫಲಾನುಭವಿಗಳಲ್ಲ. ಬಿಜೆಪಿಯ 40 ಪರ್ಸೆಂಟ್‌ ಕಮಿಷನ್ ಫಲಾನುಭವಿಗಳಿಂದ ರಾಜ್ಯ ನಲುಗುತ್ತಿದೆ. ಜನರಿಗೆ ಯಾವ ಫಲವೂ ಇಲ್ಲದಿರುವಾಗ ಫಲಾನುಭವಿಗಳಾಗುವುದು ಹೇಗೆ?' ಎಂದು ಕಾಂಗ್ರೆಸ್‌ ಕೇಳಿದೆ.

Beneficiaries of commission scam: Here is the list of Karnataka BJP leaders

'#40PercentSarkara ದ ನಿಜವಾದ ಫಲಾನುಭವಿಗಳು ಬಿಜೆಪಿಯವರೇ. ಜನತೆ - ಸಂತ್ರಸ್ತರು ಮಾತ್ರ. ಬಿಟ್ ಕಾಯಿನ್ ಹಗರಣದ ಫಲಾನುಭವಿ ನಳೀನ್‌ ಕುಮಾರ್‌ ಕಟೀಲ್‌ ಅವರೇ, ಹೇಳಿ, ತಾವು ಈ ಹಗರಣದಲ್ಲಿ ಎಷ್ಟು ಫಲ ಪಡೆದಿದ್ದೀರಿ? ಶ್ರೀಕಿ ಎಲ್ಲಿ ಹೋದ? ಬಿಟ್ ಕಾಯಿನ್ ತನಿಖೆ ಹಳ್ಳ ಹಿಡಿದಿದ್ದೇಕೆ? ಹಗರಣವನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಿದ್ದೇಕೆ?' ಎಂದು ಕೆಪಿಸಿಸಿ ಪ್ರಶ್ನಿಸಿದೆ.

'#40PercentSarkara ದ ಮುಖ್ಯ ಫಲಾನುಭವಿ ಸನ್ಮಾನ್ಯ #PayCM ಬಸವರಾಜ ಬೊಮ್ಮಾಯಿ ಅವರು. ಹಗರಣಗಳಿಗೆ ಶ್ರೀರಕ್ಷೆ ನೀಡುವುದೇ ಇವರ ಕೆಲಸ. ಬಿಟ್ ಕಾಯಿನ್ ಹಗರಣ, PSI ಹಗರಣ, 40% ಕಮಿಷನ್ ಹಗರಣ, ನೇಮಕಾತಿ ಅಕ್ರಮಗಳು, ಮಾಡಾಳ್ ಹಗರಣ, ಗಂಗಾ ಕಲ್ಯಾಣ ಹಗರಣ, ನೀರಾವರಿ ಹಗರಣ, ಕಾಕಂಬಿ ಹಗರಣ, ಟೂಲ್ ಕಿಟ್ ಹಗರಣ ಎಲ್ಲವೂ ಇವರದ್ದೇ ಸಾಧನೆಗಳು' ಎಂದೂ ಕಾಂಗ್ರೆಸ್‌ ಆರೋಪಿಸಿದೆ.

Beneficiaries of commission scam: Here is the list of Karnataka BJP leaders

'PSI ಹಗರಣದಲ್ಲಿ ನಂ1 ಫಲಾನುಭವಿ - ಡಾ. ಸಿ ಎನ್‌ ಅಶ್ವತ್ಥನಾರಾಯಣ. ಸಂತ್ರಸ್ತರು - 56 ಸಾವಿರ ಅಭ್ಯರ್ಥಿಗಳು. #40PercentSarkara ಕ್ಕೆ ತಾಕತ್ತಿದ್ದರೆ ನೇಮಕಾತಿ ಹಗರಣಗಳ ಸಂತ್ರಸ್ತರ ಸಮಾವೇಶ ಮಾಡಲಿ, ಒಂದೇ ಒಂದು ಕುರ್ಚಿಯೂ ಖಾಲಿ ಇರುವುದಿಲ್ಲ, ಕುರ್ಚಿ ತುಂಬಿಸಲು ಶ್ರಮಪಡಬೇಕಾಗಿಲ್ಲ, ₹500 ಹಣ ನೀಡಬೇಕಾಗಿಯೂ ಇಲ್ಲ' ಎಂದು ಟೀಕಿಸಿದೆ.

#40PercentSarkara ದ ಮತ್ತೊಬ್ಬ ಫಲಾನುಭವಿ ಕೆಎಸ್‌ ಈಶ್ವರಪ್ಪ ಅವರು. ಸಂತ್ರಸ್ತ - ಗುತ್ತಿಗೆದಾರ ಸಂತೋಷ್ ಪಾಟೀಲ್. ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನೇ ನಡೆಸದೆ ಕ್ಲೀನ್ ಚಿಟ್ ನೀಡುವ ಮೂಲಕ ಭ್ರಷ್ಟಾಚಾರದ ರಕ್ಷಣೆಗೆ ತಾನು ಕಟಿಬದ್ದ ಎಂಬುದನ್ನು ಬಸವರಾಜ ಬೊಮ್ಮಾಯಿ ಅವರು ತೋರಿಸಿಕೊಟ್ಟಿದ್ದಾರೆ ಎಂದು ಕೆಪಿಸಿಸಿ ಟ್ವೀಟ್‌ ಮಾಡಿದೆ.

Beneficiaries of commission scam: Here is the list of Karnataka BJP leaders

'ಕರೋನಾದಿಂದ ಜನರೆಲ್ಲರೂ ಸಂತ್ರಸ್ತರು. ಆದರೆ ಫಲಾನುಭವಿ ಮಾತ್ರ - ಎಂಎಲ್‌ಎ ಸುಧಾಕರ್‌. ಕೋವಿಡ್ ಪರಿಕರಗಳ ಖರೀದಿ ಹಗರಣದಲ್ಲಿ ಭರ್ಜರಿ ಲೂಟಿ ಮಾಡಿದ ಆರೋಗ್ಯ ಸಚಿವರು ಬಳಕೆಯನ್ನೇ ಮಾಡದ ಕೋವಿಡ್ ಸೆಂಟರ್ ಹೆಸರಲ್ಲಿ ಮಾಡಿದ ಲೂಟಿ ಲೆಕ್ಕಕ್ಕೆ ಸಿಕ್ಕಿಲ್ಲ. #40PercentSarkara ದಲ್ಲಿ ಅತಿ ಹೆಚ್ಚು "ಫಲ" ಉಂಡಿರುವ ಫಲಾನುಭವಿ ಇವರು' ಎಂದು ಕೆಪಿಸಿಸಿ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+