ಸೋದರ ಲಿಂಗರಾಜು ಬಂಧನ, ಸಿದ್ದೇಶ್ವರರಿಗೆ ಡವ ಡವ

Posted By:
Subscribe to Oneindia Kannada

ಬೆಂಗಳೂರು, ಏ.20: ಬೇಲೇಕೇರಿ ಅದಿರು ಅಕ್ರಮ ರಫ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಜಿ.ಎಂ ಸಿದ್ದೇಶ್ವರ ಅವರ ಕಿರಿಯ ಸೋದರ ಜಿಎಂ ಲಿಂಗರಾಜು ಅವರನ್ನು ಶನಿವಾರ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಲಿಂಗರಾಜು ಅವರನ್ನು ಈಗ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದು ಏ.28ರ ತನಕ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಾಲದೂಡಬೇಕಿದೆ.

ಸಿದ್ದೇಶ್ವರ ಅವರ ಫ್ಯಾಮಿಲಿಗೆ ಸೇರಿರುವ ಲಿಂಗರಾಜು ಒಡೆತನದ ಜಿಎಂ ಗ್ರೂಪ್ ಆಫ್ ಕಂಪನೀಸ್ ಬೇಲೇಕೇರಿ ಬಂದರಿನಿಂದ ಸುಮಾರು 12,500 ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ರಫ್ತು ಮಾಡಿದೆ. ಅದರೆ, ಇದಕ್ಕೆ ಪೂರಕ ದಾಖಲೆಗಳನ್ನು ಒದಗಿಸಿಲ್ಲ. ಈ ಕಾರಣಕ್ಕೆ ಜಿಎಂ ಲಿಂಗರಾಜು ಅವರನ್ನು ಲೋಕಾಯುಕ್ತ ಪೊಲೀಸರ ವಿಶೇಷ ತನಿಖಾ ತಂಡ ಬಂಧಿಸಿತ್ತು.

ಬಂಧಿತ ಲಿಂಗರಾಜು ಅವರನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನಂತರ ಏ.28ರ ತನಕ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು. [ಕೊನೆ ಕ್ಷಣದಲ್ಲಿ ಮಲ್ಲಿಕಾರ್ಜುನ ಕೈ ತಪ್ಪಿದ ಗೆಲುವು]

Belekere ore expost case : Minister GM Siddeshwara's Brother Lingaraju judicial custody

ಜಿಎಂ ಸಿದ್ದೇಶ್ವರ ಅವರಿಗೇ ಏಕೆ ಭಯ: ಜಿಎಂ ಗ್ರೂಪ್ ಆಫ್ ಕಂಪನಿಯಲ್ಲಿ ಸಚಿವ ಸಿದ್ದೇಶ್ವರ ಅವರ ಷೇರುಗಳಿವೆ. ಇದನ್ನು ವಿಚಾರಣೆ ಸಂದರ್ಭದಲ್ಲಿ ಲಿಂಗರಾಜು ಅವರೇ ಹೇಳಿದ್ದಾರೆ. ಸುಮಾರು 9,645ಕ್ಕೂ ಅಧಿಕ ಷೇರುಗಳಿದ್ದು ಸುಮಾರು 9.5 ಕೋಟಿ ರು ಬೆಲೆ ಬಾಳುತ್ತದೆ. [ದಾವಣಗೆರೆ ಲೋಕಸಭೆ ಕ್ಷೇತ್ರದ ಪರಿಚಯ]

ಈ ಬಗ್ಗೆ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಸಿದ್ದೇಶ್ವರ ಅವರು ಆಸ್ತಿ ಘೋಷಣಾ ಪತ್ರದಲ್ಲೂ ನಮೂದಿಸಿದ್ದಾರೆ. 6 ಕೋಟಿ ರು ಆಸ್ತಿ ಜೊತೆಗೆ 1 ಕೋಟಿ ರು ಸಾಲ ಇದೆ ಎಂದು ಘೋಷಿಸಿದ್ದರು. ಅದರೆ, ಷೇರು, ಬಾಂಡುಗಳ ಮೊತ್ತ 35 ಲಕ್ಷ ರು ದಾಟುವುದಿಲ್ಲ. ಇಲ್ಲಿ ನೋಡಿದರೆ 9 ಕೋಟಿ ರು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆದರೆ ಸತ್ಯಾಂಶ ಹೊರಬೀಳಬಹುದು.

ಅದಿರು ರಫ್ತಿಗೂ ಮುನ್ನ ಷೇರು ಹೊಂದಿರುವುದು ನಿಜವಾದರೆ ಸಿದ್ದೇಶ್ವರ ಅವರನ್ನು ವಿಚಾರಣೆಗೆ ಒಳಪಡಿಸಬಹುದು. 2010-11ರ ನಂತರ ಷೇರು ಸಿದ್ದೇಶ್ವರ ಅವರ ಹೆಸರಿಗೆ ಬಂದಿದ್ದರೆ ಯಾವುದೇ ಭಯ ಪಡಬೇಕಾಗಿಲ್ಲ.

ಸದ್ಯ ಲಿಂಗರಾಜು ಅವರ ಜಿಎಂ ಲ್ಯಾಬೊರೇಟರೀಸ್ ಕಂಪನಿ 2009-10ರ ಅವಧಿಯಲ್ಲಿ 12,500 ಮೆಟ್ರಿಕ್ ಟನ್ ಅದಿರನ್ನು ಯಾವುದೇ ದಾಖಲೆಗಳಿಲ್ಲದೆ ರಫ್ತು ಮಾಡಿರುವ ಆರೋಪವಿದೆ. (ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Special Investigation Team (SIT) of the Lokayukta, probing the illegal export of iron ore from Belekeri port, arrested G.M. Lingaraju, younger brother of Union Minister of State for Heavy Industries and Davangere MP G.M. Siddeshwar on Saturday. He has been sent judicial custody till Apr.28.
Please Wait while comments are loading...