ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮದುರ್ಗದಲ್ಲಿ ರಾಹುಲ್ ಗಾಂಧಿ ಭಾಷಣದ ಮುಖ್ಯಾಂಶ

|
Google Oneindia Kannada News

ಬೆಳಗಾವಿ, ಫೆಬ್ರವರಿ 26: ಕರ್ನಾಟಕ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಇಂದು(ಫೆ.26) ಬೆಳಗಾವಿಯ ರಾಮದುರ್ಗದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಶನಿವಾರ(ಫೆ.24) ಅಥಣಿಯಲ್ಲಿ ಮಾಡಿದ ಭಾಷಣದ್ದೇ ಪುನರುಚ್ಛಾರ ಎಂಬಂತಿದ್ದ ಈ ಭಾಷಣದಲ್ಲಿ ಮತ್ತದೇ ಮೋದಿ ನಾಮಜಪದೊಂದಿಗೆ ಬಸವಣ್ಣನವರ ಸ್ಮರಣೆ ಯಥೇಚ್ಛವಾಗಿ ಕೇಳಿಬಂತು! ಹಳೇ ಭಾಷಣದ ಪ್ರತಿಯನ್ನೇ ಓದಿಬಿಟ್ಟರಾ ಎಂದು ಅರೆಕ್ಷಣ ಗೊಂದಲವಾಗುವ ಮಟ್ಟಿಗೆ ಅವರ ಭಾಷಣ ಮೊನ್ನೆಯ ಭಾಷಣದ ಸಾಲುಗಳನ್ನೇ ಒಳಗೊಂಡಿತ್ತು!

ಮೋದಿಗಿಂತ ಹೆಚ್ಚು ಬಸವಣ್ಣನ ನೆನೆದ ರಾಹುಲ್! ಬೆಳಗಾವಿ ಭಾಷಣದ ಮುಖ್ಯಾಂಶ ಮೋದಿಗಿಂತ ಹೆಚ್ಚು ಬಸವಣ್ಣನ ನೆನೆದ ರಾಹುಲ್! ಬೆಳಗಾವಿ ಭಾಷಣದ ಮುಖ್ಯಾಂಶ

ನರೇಂದ್ರ ಮೋದಿಯವರು ಬಸವಣ್ಣನವರ ವಚನಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಬಸವಣ್ಣನವರೇ ಹೇಳಿದ 'ನುಡಿದಂತೆ ನಡೆ' ಎಂಬ ಮಾತನ್ನು ಮಾತ್ರ ಪ್ರಧಾನಿ ನರೇಂದ್ರ ಮೋದಿಯವರು ಎಂದಿಗೂ ಪಾಲಿಸುತ್ತಿಲ್ಲ ಎಂದು ರಾಹುಲ್ ಗಾಂಧಿ ಕಿಡಿಕಾರಿದರು.

Array

ಬ್ಯಾಂಕಿನ ಮುಂದೆ ನಿಮ್ಮನ್ನು ಸಾಲು ಸಾಲಾಗಿ ನಿಲ್ಲಿಸಿದರು!

ಅಪನಗದೀಕರಣದಂಥ ನಿರ್ಧಾರ ತೆಗೆದುಕೊಂಡು ನಿಮ್ಮನ್ನೆಲ್ಲ ಬ್ಯಾಂಕಿನ ಮುಂದೆ ಸಾಲು ಸಾಲಾಗಿ ನಿಲ್ಲುವಂತೆ ಮಾಡಿದರು ಪ್ರಧಾನಿ ನರೇಮದ್ರ ಮೋದಿ. ನಿಮ್ಮೆಲ್ಲರ ಬ್ಯಾಂಕ್ ಖಾತೆಗೆ ತಲಾ 15 ಲಕ್ಷ ರೂ ಹಣ ಕೊಡುತ್ತೇನೆ ಎಂದರು? ಆದರೆ ನಿಮಗೆ ಹಣ ಕೊಡುವುದಿರಲಿ, ನಿಮ್ಮ ಕಿಸೆಯಿಂದಲೇ ಹಣ ಕಸಿದುಕೊಂಡರು ಎಂದು ರಾಹುಲ್ ಲೇವಡಿ ಮಾಡಿದರು.

ಮುಳವಾಡದಲ್ಲಿ ರಾಹುಲ್ ರಿಂದ ಮೋದಿ ಮೌನದ 'ಗುಣಗಾನ'!ಮುಳವಾಡದಲ್ಲಿ ರಾಹುಲ್ ರಿಂದ ಮೋದಿ ಮೌನದ 'ಗುಣಗಾನ'!

ಯಾರಿಗೆ ಕಾವಲುದಾರ?

ಯಾರಿಗೆ ಕಾವಲುದಾರ?

"ಪ್ರಧಾನಿ ನರೇಂದ್ರ ಮೋದಿ ಕೆಲ ಶ್ರೀಮಂತ ವರ್ಗದವರಿಗಾಗಿ ಮಾತ್ರ ಆಡಳಿತ ನಡೆಸುತ್ತಿದ್ದಾರೆ. ತಮ್ಮನ್ನು ಈ ದೇಶದ ಕಾವಲುಗಾರ ಎತ್ತಾರೆ ಮೋದಿ. ಆದರ ಅಮಿತ್ ಶಾ ಪುತ್ರ ಜಯ್ ಶಾ ಹಗರಣದ ಬಗ್ಗೆ ಈ ಕಾವಲುಗಾರ ಎಂದಾದರೂ ಮಾತನಾಡಿದ್ದಾರಾ? ನೀರವ್ ಮೋದಿ 22,000 ಕೋಟಿ ರೂ(11,000 ಕೋಟಿ ರೂ. ಎಂದು ಮಾಧ್ಯಮಗಳು ವರದಿ ಮಾಡಿವೆಯಾದರೂ, ಮೊನ್ನೆಯಿಂದ ರಾಹುಲ್ ಗಾಂಧಿ ಭಾಷಣದಲ್ಲಿ 22,000 ಕೋಟಿ ರೂ. ಎಂದೇ ಹೇಳುತ್ತಿದ್ದಾರೆ) ಕೊಳ್ಳೆ ಹೊಡೆದು ಹೋದರೂ ಈ ಕಾವಲುಗಾರ ಮಾತನಾಡಲಿಲ್ಲ. ಲಕ್ಷಾಂತರ ಮಂದಿ ಓರ್ವ ವ್ಯಕ್ತಿಯಿಂದ ಪರಿತಪಿಸುವಂತಾಗಿದೆ. ಶ್ರೀಮಂತು ತಮ್ಮ ಕಪ್ಪು ಹಣವನ್ನು ಪರಿವರ್ತಿಸಿಕೊಂಡು ಮತ್ತಷ್ಟು ಶ್ರೀಮಂತರಾಗಿದ್ದಾರೆ. ಬಡವರು ಬಡವರಾಗಿಯೇ ಉಳಿದಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಚಿತ್ರಗಳು : ವಿಜಯಪುರದಲ್ಲಿ ರಾಹುಲ್ ಪ್ರವಾಸ

ಭ್ರಷ್ಟಾಚಾರದ ಬಗ್ಗೆ ಏಕೆ ಮಾತನಾಡುತ್ತೀರಿ?

ಭ್ರಷ್ಟಾಚಾರದ ಬಗ್ಗೆ ಏಕೆ ಮಾತನಾಡುತ್ತೀರಿ?

ಕರ್ನಾಟಕ ಸರ್ಕಾರ ಭ್ರಷ್ಟ ಸರ್ಕಾರ ಎನ್ನುವ ನೈತಿಕತೆ ನಿಮಗಿದೆಯೇ? ಹಾಗಿದ್ದರೆ ನೀವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಗುಜರಾತಿನಲ್ಲಿ ಲೋಕಾಯುಕ್ತವನ್ನು ಏಕೆ ನೇಮಿಸಲಿಲ್ಲ? ನೀವು ಪ್ರಧಾನಿಯಾಗಿ ನಾಲ್ಕು ವರ್ಷವಾದರೂ ಲೋಕಪಾಲ ವಿಚಾರದಲ್ಲಿ ಯಾವ ನಿರ್ಧಾರವನ್ನೂ ಏಕೆ ತೆಗೆದುಕೊಂಡಿಲ್ಲ? ಮೊದಲದು ನೀವು ನುಡಿದಂತೆ ನಡೆಯುವುದನ್ನು ಕಲಿಯಿರಿ. ನಿಮ್ಮನ್ನು ಜನರು ಪ್ರಧಾನಿಯನ್ನಾಗಿ ಮಾಡಿದ್ದು ಕೇವಲ ಭಾಷಣ ಮಾಡುವುದಕ್ಕಲ್ಲ, ಕೆಲಸ ಮಾಡುವುದಕ್ಕೆ ಎಂದು ಛೇಡಿಸಿದರು.

ಕರ್ನಾಟಕ ಮಾದರಿ ಸರ್ಕಾರ

ಕರ್ನಾಟಕ ಮಾದರಿ ಸರ್ಕಾರ

ಕರ್ನಾಟಕ ಕಾಂಗ್ರೆಸ್ ಮಾದರಿಯಾಗಿ ಆಡಳಿತ ನಡೆಸುತ್ತಿದೆ. ಯುಪಿಎ ಸರ್ಕಾರದ ಆಡಳಿತಾವಧಿಯಲ್ಲಿ ನಾವು ಬಡವರ ಜೇಬನ್ನು ತುಂಬಿದ್ದೇವೆ. ಆದರೆ ಮೋದಿ ಮಾಡಿದ್ದೇನು? ನ್ಯಾನೋ ಕಾರ್ ಗಾಗಿ ಬಡವರ ಭೂಮಿ ನೀಡಿದರು. ಬಡವರಿಗಾಗಿ ಕಡಿಮೆ ಬೆಲೆಗೆ ನಿರ್ಮಾಣವಾಗುತ್ತಿರುವ ಕಾರು ಎಂದರು. ಆದರೆ ಆ ಕಅರನ್ನು ಯಾವುದಾದರೂ ಬಡವರ ಮನೆಯಲ್ಲಿ ಕಂಡಿದ್ದೀರಾ ಎಮದು ಅವರು ಪ್ರಶ್ನಿಸಿದರು! ಸಿದ್ದರಾಮಯ್ಯ ಸರ್ಕಾರದ ಜನಪ್ರಿಯ ಯೋಜನೆಗಳನ್ನು ನೆನಪಿಸಿದ ಅವರು, ಕಾಂಗ್ರೆಸ್ ಸರ್ಕಾರ ಏನೇ ಮಾಡಿದರೂ ಅದು ಬಡವರಿಗೆ, ರೈತರಿಗೆ, ಅಶಕ್ತರಿಗೆ, ಕಾರ್ಮಿಕರಿಗೆ ಉಪಯೋಗವಾಗುವಂಥ ಕೆಲಸ ಮಾಡುತ್ತದೆ. ಆದರೆ ಮೋದಿಯವರು ಕೇವಲ ಬಂಡವಾಳಶಾಹಿಗಳಿಗಾಗಿ ಕೆಲಸ ಮಾಡುತ್ತಾರೆ ಎಂದರು.

English summary
Karnataka Assembly elections 2018: AICC president Rahul Gandhi address a rally in Ramdurg in Belagavi as a part of his Karnataka Janashirvada rally on Feb 26th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X