ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ ಟಿಕೆಟ್ ಬಯಸಿರುವ ಬಿಬಿಎಂಪಿ ಸದಸ್ಯರ ಪಟ್ಟಿ!

|
Google Oneindia Kannada News

ಬೆಂಗಳೂರು, ಜನವರಿ 29 : ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲಾ ಪಕ್ಷಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಹಾಲಿ ಸದಸ್ಯರು ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದು, ವಿಧಾನಸೌಧ ಪ್ರವೇಶಿಸಲು ಸಜ್ಜಾಗುತ್ತಿದ್ದಾರೆ.

ವಿವಿಧ ಪಕ್ಷಗಳ ಬಿಬಿಎಂಪಿ ಸದಸ್ಯರು, ಮಾಜಿ ಸದಸ್ಯರು, ಮಾಜಿ ಮೇಯರ್‌ಗಳು ಟಿಕೆಟ್ ಪಡೆಯಲು ಪ್ರಯತ್ನ ನಡೆಸಿದ್ದಾರೆ. ಸುಮಾರು 15 ಬಿಬಿಎಂಪಿ ಸದಸ್ಯರು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದಾರೆ.

ಚಿಕ್ಕಪೇಟೆ ಬಿಜೆಪಿ ಟಿಕೆಟ್‌ಗೆ 5ಕ್ಕೂ ಹೆಚ್ಚು ಆಕಾಂಕ್ಷಿಗಳುಚಿಕ್ಕಪೇಟೆ ಬಿಜೆಪಿ ಟಿಕೆಟ್‌ಗೆ 5ಕ್ಕೂ ಹೆಚ್ಚು ಆಕಾಂಕ್ಷಿಗಳು

ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ತಮ್ಮ ಪಕ್ಷದ ನಾಯಕರ ಮನೆ ಬಾಗಿಲಿಗೆ ಹೋಗಿ ಸದಸ್ಯರು ಟಿಕೆಟ್‌ಗೆ ಬೇಡಿಕೆ ಇಡುತ್ತಿದ್ದಾರೆ. ತಮ್ಮ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರ, ಅಕ್ಕ-ಪಕ್ಕದ ವಿಧಾನಸಭಾ ಕ್ಷೇತ್ರದ ಮೇಲೆಯೂ ಬಿಬಿಎಂಪಿ ಸದಸ್ಯರ ಕಣ್ಣು ಬಿದ್ದಿದೆ. ಯಾರಿಗೆ ಟಿಕೆಟ್ ಸಿಗಲಿದೆ? ಎಂಬುದು ಪಕ್ಷದ ಹೈಕಮಾಂಡ್ ನಾಯಕರಿಗೆ ಬಿಟ್ಟ ವಿಚಾರ.

ಮಹಾಲಕ್ಷ್ಮೀ ಲೇಔಟ್ ಗೆಲ್ಲಲು ಬಿಜೆಪಿ, ಕಾಂಗ್ರೆಸ್ ಕಸರತ್ತು!ಮಹಾಲಕ್ಷ್ಮೀ ಲೇಔಟ್ ಗೆಲ್ಲಲು ಬಿಜೆಪಿ, ಕಾಂಗ್ರೆಸ್ ಕಸರತ್ತು!

ಮಾಜಿ ಮೇಯರ್ ಮಂಜುನಾಥ ರೆಡ್ಡಿ, ಕಟ್ಟೆ ಸತ್ಯನಾರಾಯಣ, ಶಾಂತ ಕುಮಾರಿ, ಜಿ.ಪದ್ಮಾವತಿ ಸೇರಿದಂತೆ ವಿವಿಧ ನಾಯಕರು ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ. ಯಾರು ಟಿಕೆಟ್ ಆಕಾಂಕ್ಷಿಗಳು ಪಟ್ಟಿ ನೋಡಿ....

ಮಾಜಿ ಮೇಯರ್ ಮಂಜುನಾಥ ರೆಡ್ಡಿ

ಮಾಜಿ ಮೇಯರ್ ಮಂಜುನಾಥ ರೆಡ್ಡಿ

ಬಿಬಿಎಂಪಿ ಮಾಜಿ ಮೇಯರ್, ಮಡಿವಾಳ ವಾರ್ಡ್ ಹಾಲಿ ಸದಸ್ಯ ಬಿ.ಎನ್.ಮಂಜುನಾಥ ರೆಡ್ಡಿ ಅವರು ವಿಧಾನಸಭೆ ಚುನಾವಣೆ ಟಿಕೆಟ್ ಆಕಾಂಕ್ಷಿ. ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಆಪ್ತರಾದ ಮಂಜುನಾಥ ರೆಡ್ಡಿ ಅವರು ಯಾವುದಾದದರೂ ಕ್ಷೇತ್ರದಿಂದ ಟಿಕೆಟ್ ಸಿಗಲಿ ಎಂದು ಕಾದಿದ್ದಾರೆ. ಆದರೆ, ರಾಮಲಿಂಗಾ ರೆಡ್ಡಿ ಅವರ ತೀರ್ಮಾನವೇ ಅಂತಿಮ ಎಂದು ಸ್ಪಷ್ಟಪಡಿಸಿದ್ದಾರೆ.

ಬಸವನಗುಡಿ ಕ್ಷೇತ್ರದ ಬಿಜೆಪಿ ಟಿಕೆಟ್

ಬಸವನಗುಡಿ ಕ್ಷೇತ್ರದ ಬಿಜೆಪಿ ಟಿಕೆಟ್

ಬಿಬಿಎಂಪಿ ಮಾಜಿ ಮೇಯರ್, ಬಸವನಗುಡಿ ವಾರ್ಡ್ ಹಾಲಿ ಸದಸ್ಯ ಬಿಜೆಪಿಯ ಕಟ್ಟೆ ಸತ್ಯನಾರಾಯಣ ಅವರು ಬಸವನಗುಡಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. ಈ ಬಗ್ಗೆ ಈಗಾಗಲೇ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಬಸವನಗುಡಿ ಕ್ಷೇತ್ರದ ಹಾಲಿ ಶಾಸಕರು ಬಿಜೆಪಿಯ ರವಿ ಸುಬ್ರಮಣ್ಯ, ಎರಡು ಬಾರಿ ಗೆದ್ದಿರುವ ಅವರಿಗೆ ಈ ಬಾರಿಯೂ ಟಿಕೆಟ್ ಸಿಗುವ ನಿರೀಕ್ಷೆ ಇದೆ.
ಕಟ್ಟೆ ಸತ್ಯನಾರಾಯಣ ಸಂದರ್ಶನ

ಜಿ.ಪದ್ಮಾವತಿ

ಜಿ.ಪದ್ಮಾವತಿ

ಬಿಬಿಎಂಪಿ ಮಾಜಿ ಮೇಯರ್, ಪ್ರಕಾಶ್ ನಗರ ವಾರ್ಡ್ ಹಾಲಿ ಸದಸ್ಯರಾದ ಜಿ.ಪದ್ಮಾವತಿ ಅವರು ರಾಜಾಜಿನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ. ರಾಜಾಜಿನಗರ ಕ್ಷೇತ್ರದ ಹಾಲಿ ಶಾಸಕರು ಬಿಜೆಪಿ ನಾಯಕ, ಮಾಜಿ ಸಚಿವ ಸುರೇಶ್ ಕುಮಾರ್.

ಶಾಂತ ಕುಮಾರಿ

ಶಾಂತ ಕುಮಾರಿ

ಬಿಬಿಎಂಪಿ ಮಾಜಿ ಮೇಯರ್, ಮಾರುತಿ ಮಂದಿರ ವಾರ್ಡ್ ಹಾಲಿ ಸದಸ್ಯರಾದ ಶಾಂತ ಕುಮಾರಿ ಅವರು ಬಿಜೆಪಿ ಟಿಕೆಟ್ ಆಕಾಂಕ್ಷಿ. ವಿಜಯನಗರ ಕ್ಷೇತ್ರದ ಟಿಕೆಟ್‌ ಬಯಸಿದ್ದಾರೆ. ಟಿಕೆಟ್ ಸಿಗುವುದೇ? ಕಾದು ನೋಡಬೇಕು.

ಇಮ್ರಾನ್ ಪಾಷಾ

ಇಮ್ರಾನ್ ಪಾಷಾ

ಚಾಮರಾಜಪೇಟೆಯಲ್ಲಿ ಜಮೀರ್ ಅಹಮದ್ ಖಾನ್ ಸೋಲಿಸಲು ಮುಂದಾಗಿರುವ ದೇವೇಗೌಡರು ಪಾದರಾಯನಪುರ ವಾರ್ಡ್ ಬಿಬಿಎಂಪಿ ಸದಸ್ಯರಾದ ಇಮ್ರಾನ್ ಪಾಷಾ ಅವರಿಗೆ ಟಿಕೆಟ್ ನೀಡಲು ಮುಂದಾಗಿದ್ದಾರೆ. ಇಮ್ರಾನ್ ಪಾಷಾ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ

ಸುಧಾಮನಗರ ವಾರ್ಡ್ ಬಿಬಿಎಂಪಿ ಸದಸ್ಯ, ಚಿಕ್ಕಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಆರ್.ವಿ.ದೇವರಾಜ್ ಪುತ್ರ ಆರ್.ವಿ.ಯುವರಾಜ್ ಅವರು ವಿಧಾನಸಭೆ ಚುನಾವಣೆ ಟಿಕೆಟ್ ಆಕಾಂಕ್ಷಿ. ಈ ಬಾರಿ ಆರ್.ವಿ.ದೇವರಾಜ್ ಬದಲು ಯುವರಾಜ್ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.

ಬಿಜೆಪಿ ಟಿಕೆಟ್ ಆಕಾಂಕ್ಷಿಗಳು

ಬಿಜೆಪಿ ಟಿಕೆಟ್ ಆಕಾಂಕ್ಷಿಗಳು

ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಬಿಜೆಪಿ ಟಿಕೆಟ್‌ಗೆ ಎಂ.ನಾಗರಾಜ್, ಎಸ್.ಹರೀಶ್ ಅವರು ಆಕಾಂಕ್ಷಿಗಳು. ಕ್ಷೇತ್ರದ ಶಾಸಕರು ಜೆಡಿಎಸ್‌ನ ಕೆ.ಗೋಪಾಲಯ್ಯ.

ಚಿಕ್ಕಪೇಟೆ ಕ್ಷೇತ್ರದ ಆಕಾಂಕ್ಷಿ

ಚಿಕ್ಕಪೇಟೆ ಕ್ಷೇತ್ರದ ಆಕಾಂಕ್ಷಿ

ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ, ಯಡಿಯೂರು ವಾರ್ಡ್ ಮಾಜಿ ಸದಸ್ಯ ಎನ್.ಆರ್.ರಮೇಶ್ ಚಿಕ್ಕಪೇಟೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ.

ಇನ್ನೂ ಹಲವು ಆಕಾಂಕ್ಷಿಗಳು

ಇನ್ನೂ ಹಲವು ಆಕಾಂಕ್ಷಿಗಳು

ಉಳಿದಂತೆ ಕಾಚರಕನಹಳ್ಳಿ ವಾರ್ಡ್ ಸದಸ್ಯರಾದ ಪದ್ಮನಾಭ ರೆಡ್ಡಿ ಅವರು ಸರ್ವಜ್ಞ ನಗರ, ಕೆ.ಆರ್.ಪುರ ವಾರ್ಡ್ ಸದಸ್ಯರಾದ ಕೆ.ಪೂರ್ಣಿಮಾ ಅವರು ಚಿತ್ರದುರ್ಗದ ಹಿರಿಯೂರು ಕ್ಷೇತ್ರ, ಗೋವಿಂದರಾಜ ನಗರದ ಉಮೇಶ್ ಶೆಟ್ಟಿ ಅವರು ಗೋವಿಂದರಾಜ ನಗರ ಕ್ಷೇತ್ರ, ಶಂಕರಮಠ ವಾರ್ಡ್‌ನ ಎಂ.ಶಿವರಾಜು ಅವರು ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು.

English summary
More than 15 Bruhat Bengaluru Mahanagara Palike (BBMP) corporators aspirants for Karnataka assembly elections 2018 ticket. Former mayor Manjunath reddy, Katte Satyanarayana, G.Padmavathi and others also in the race.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X