'ಸರ್ಕಾರ ಅಲ್ಪ ಸಂಖ್ಯಾತರಷ್ಟೇ ಏಕೆ ಎಲ್ಲ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲಿ'
ಗದಗ: ಕರ್ನಾಟಕ ರಾಜ್ಯ ಸರ್ಕಾರ ಅಲ್ಪ ಸಂಖ್ಯಾತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿ ನಿರಂತರ ಒಲೈಕೆ ರಾಜಕಾರಣ ಮಾಡುತ್ತಲೇ ಬಂದಿದೆ. ಹಿಂದುಳಿದವರು, ಬಡವರು, ರೈತರ ಸಾಲ ಮನ್ನಾ ಎಲ್ಲರಿಗೂ ಮಾಡಬೇಕಿತ್ತು. ರಾಜ್ಯದಲ್ಲಿ ರೈತರ ಆತ್ಮಹತ್ಯೆ ಹೆಚ್ಚಾಗಿದೆ. ಆತ್ಮಹತ್ಯೆಗೆ ಸರಿಯಾಗಿ ಪರಿಹಾರ ಕೊಡುತ್ತಿಲ್ಲ. ವಿಮೆ ಹಣ ನೀಡುತ್ತಿಲ್ಲ. ರೈತರ ಬಡ್ಡಿ ಮನ್ನಾ ಸಹ ಆಗಿಲ್ಲ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಗದಗಿನಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ರಾಜ್ಯದ ಶೇಕಡಾ 80 ರಷ್ಟು ಜನರು ಸಂಕಷ್ಟದಲ್ಲಿದ್ದಾರೆ. ಜನ ವಿರೋಧಿ ನೀತಿಯನ್ನು ಈ ಸರ್ಕಾರ ಮಾಡುತ್ತಿದೆ. ಅಲ್ಪಸಂಖ್ಯಾತರ ಓಲೈಕೆ ನಿಲ್ಲಿಸಬೇಕು. ರಾಜ್ಯದ ಎಲ್ಲ ರೈತರ ಸಾಲದ ಬಡ್ಡಿ ಮನ್ನಡ ಮಾಡಬೇಕೆಂದು ಅವರು ಒತ್ತಾಯಿಸಿದರು.

ರಾಜ್ಯ ಸರ್ಕಾರ ಸ್ಥಳಿಯ ಸಂಸ್ಥೆಗಳ ಚುನಾವಣೆಗೆ ಬ್ಯಾಲೆಟ್ ಪೇಪರ್ ಬಳಸಲು ಮುಂದಾಗಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕ ಪ್ರಗತಿಪರ ರಾಜ್ಯ ಐಟಿ ಬಿಟಿ ರಾಜ್ಯ ಇದನ್ನು ಮತ್ತೆ ಪ್ರಾಚೀನತೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಚುನಾವಣಾ ಆಯೋಗ ಹ್ಯಾಕ್ ಮಾಡುವ ಬಗ್ಗೆ ತೋರಿಸಿ ಎಂದು ಕರೆದರೂ ಕಾಂಗ್ರೆಸ್ ಭಾಗವಸುತ್ತಿಲ್ಲ. ಯಾವ ಇವಿಎಂ ಚುನಾವಣೆ ಮೂಲಕ ಗೆದ್ದಿದ್ದಾರೆ ಅದನ್ನೆ ತಿರಸ್ಕಾರ ಮಾಡುತ್ತಿದ್ದಾರೆ. ಇದನ್ನು ರಾಜ್ಯದ ಜನರು ಕ್ಷಮಿಸುವುದಿಲ್ಲ. ಮೊದಲು ರಾಜಿನಾಮೆ ಕೊಟ್ಟು ಬ್ಯಾಲೆಟ್ ಪೇಪರ್ ನಲ್ಲಿ ಚುನಾವಣೆ ಎದುರಿಸಿ.
ಭಾರತದ ಚುನಾವಣೆ ಆಯೋಗದ ಪ್ರತಿನಿಧಿಗಳು ಆಫ್ರಿಕಾ ಯುರೋಪ್ ಬೇರೆ ಬೇರೆ ದೇಶಕ್ಕೆ ಹೋಗುತ್ತಾರೆ. ಅಲ್ಲಿ ಸಮಸ್ಯೆ ಇದ್ದರೆ ಅದನ್ನು ಪರಿಹರಿಸಲು ನಮ್ಮ ಚುನಾವಣೆ ಆಯೋಗದ ಅಧಿಕಾರಿಗಳು ಹೋಗುತ್ತಾರೆ ಅದರ ಬಗ್ಗೆ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.
ಪತ್ರಿಕೆಗಳಲ್ಲಿ ಮಹಾತ್ಮಾ ಗಾಂಧೀಜಿ ಕುರಿತು ಬಿಜೆಪಿ ನೀಡಿರುವ ಜಾಹೀರಾತಿನ ವಿರುದ್ಧ ಕಾಂಗ್ರೆಸ್ ಆರೋಪ ಮಾಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಜಾಹೀರಾತನ್ನು ಅವರು ನೀಡಿದ್ದಕ್ಕೆ ಏನು ಹೇಳುತ್ತಾರೆ. ಅಹಿಂಸೆಯ ಮೇಲೆ ನಂಬಿಕೆ ಇಟ್ಟಿದ್ದ ಗಾಂಧೀಜಿ ಬೇಜಾರಾಗಿದ್ದಾರೆ ಎಂದು ಹೇಳಿದರು.
ರಾಜ್ಯ ಸರ್ಕಾರ ನಾಟಕ ನಿಲ್ಲಿಸಲಿ
ನಾಯಕತ್ವ ಬದಲಾವಣೆಯ ಗೊಂದಲ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಶಾಸಕ ಯತೀಂದ್ರ ಅವರು ಯಾಕೆ ಮಾತನಾಡುತ್ತಾರೋ ಗೊತ್ತಿಲ್ಲ. ಸಿಎಂ ಹಲವಾರು ಬಾರಿ ಹೇಳಿದರೂ ಅವರ ಮಗನೇ ಸರ್ಟಿಫಿಕೆಟ್ ಕೊಡುತ್ತಿದ್ದಾರೆ. ಮಗನ ಸರ್ಟಿಫಿಕೆಟ್ ಇಟ್ಟುಕೊಂಡು ರಾಜ್ಯ ಆಳುವ ಅಗತ್ಯ ಇಲ್ಲ. ಕಾಂಗ್ರೆಸ್ ಹೈ ಕಮಾಂಡ್ ಏನು ಮಾಡುತ್ತಿದೆ. ಕೂಡಲೇ ನಾಟಕ ಬಂದ್ ಮಾಡಿ ರಾಜ್ಯದ ಅಭಿವೃದ್ಧಿ ಕಡೆ ಗಮನ ಕೊಡಿ ಇದರಿಂದ ರಾಜ್ಯದ ಜನರು ರೋಸಿ ಹೋಗಿದ್ದಾರೆ ಎಂದು ಹೇಳಿದರು.
ಗದಗನಲ್ಲಿ ಕೇಂದ್ರೀಯ ವಿದ್ಯಾಲಯ ಆರಂಭಿಸುವ ಕುರಿತು ಕೇಳಿದ ಪ್ರಶ್ನೆಗೆ ನಾನು ಮಾನವ ಸಂಪನ್ಮೂಲ ಸಚಿವರ ಜೊತೆಗೆ ಮಾತನಾಡಿದ್ದೇನೆ. ಜಾಗದ ಸಮಸ್ಯೆ ಪರಿಹರಿಸಿ ಕಳುಹಿಸಿದರೆ ಬರುವಂತಹ ಶೈಕ್ಷಣಿಕ ವರ್ಷದಲ್ಲಿ ಕೇಂದ್ರಿಯ ವಿದ್ಯಾಲಯ ಆರಂಭಿಸುವುದಾಗಿ ಹೇಳಿದ್ದಾರೆ ಎಂದರು.
ಲಕ್ಕುಂಡಿ ಯುನೆಸ್ಕೊ ಸೇರಿದರೆ ಒಳ್ಳೆಯದು
ಜಿಲ್ಲೆಯ ಲಕ್ಕುಂಡಿಯಲ್ಲಿ ಉತ್ಖನನ ನಡೆಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿ, ಉತ್ಖನನ ಈ ಹಿಂದೆ ನಡೆದಿದ್ದರಿಂದ ಪ್ರಸಿದ್ದಿಗೆ ಬಂದಿದೆ. ಈಗ ಊಹಾಪೋಹಾ ಕೇಳಿ ಬರುತ್ತಿವೆ. ಅದು ಏನಾಗುತ್ತದೆ ಗೊತ್ತಿಲ್ಲ. ಲಕ್ಕುಂಡಿಯನ್ನು ಯುನೆಸ್ಕೊ ಗೆ ಸೇರಿಸುವ ಪ್ರಯತ್ನ ಒಳ್ಳೆಯದು ಅದು ಸೇರಿದರೆ ಪ್ರವಾಸೋದ್ಯಮ ದೃಷ್ಟಿಯಿಂದ ಅನುಕೂಲ ಆಗುತ್ತದೆ ಎಂದು ತಿಳಿಸಿದರು.
ಬೆಂಗಳೂರು ಮೆಟ್ರೊ ದರ ಏರಿಕೆ ನಿರ್ಧಾರ ಹಿಂಪಡೆಯಿರಿ
ನಮ್ಮ ಮೆಟ್ರೊ ದರ ಏರಿಕೆ ಮಾಡಲು ನಿರ್ಧರಿಸಲಾಗಿದೆ. ಈ ಮೆಟ್ರೊ ದರ ಏರಿಕೆಗೂ ಕೇಂದ್ರ ಸರ್ಕಾರಕ್ಕೂ ಸಂಬಂಧ ಇಲ್ಲ ಅದು ಒಂದು ಕಂಪನಿ, ಇದರ ಎಂಡಿ ಅವರೆ ಅಂತಿಮ ತೀರ್ಮಾನ ಮಾಡುತ್ತಾರೆ. ರಾಜ್ಯ ಸರ್ಕಾರ ಹೆಚ್ಚಳ ಮಾಡಿರುವ ತೀರ್ಮಾನವನ್ನು ವಾಪಸ್ ಪಡೆಯಬೇಕು ಎಂದು ಅವರು ಆಗ್ರಹಿಸಿದರು.












Click it and Unblock the Notifications